ನೀವು ಚೊಚ್ಚಲ ತಾಯಿಯಾಗಿದ್ದು, ನಿಮಗೆ ಮಗುವಿನ ಪೋಷಣೆಯ ಚಿಂತೆ ಕಾಡುತ್ತಿದ್ದರೆ, ಮಾಹಿತಿ ನಿಮಗೆ ಬಹಳ ಉಪಯುಕ್ತ ಆಗುತ್ತದೆ…..!

ಚಿತ್ರಾ ಮುದ್ದಾದ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದಳು. ಅವಳ ಕುಟುಂಬದವರಿಗಂತೂ ಜೀವನದ ಅತ್ಯದ್ಭುತ ಖುಷಿಯೇ ದೊರಕಿದಂತೆ ಅನಿಸಿತು. ಆ ಖುಷಿಯೇ ಹಾಗೆ. ಆ ಖುಷಿಯನ್ನು ನಾವು ಜಗತ್ತಿನ ಮತ್ತಾವುದೇ ಖುಷಿಗೂ ಹೋಲಿಸಲು ಆಗದು.  ಕುಟುಂಬದ ಪ್ರತಿಯೊಬ್ಬರೂ ಆ ಮಗುವಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ, ಅದು ಸದಾ ನಗುತ್ತಾ ಇರಬೇಕೆಂದು ಅಪೇಕ್ಷೆಪಟ್ಟರು.

ಆದರೆ ಚಿತ್ರಾಳ ಮಗು ನಗು ಬದಲು ಸ್ವಲ್ಪ ಸ್ವಲ್ಪ ಹೊತ್ತಿಗೆ ಅಳುತ್ತಾ ಇರುತ್ತಿತ್ತು. ಈ ಕಾರಣದಿಂದ ಅದಕ್ಕೆ ನಿದ್ರೆ ಕೂಡ ಪೂರ್ತಿ ಆಗುತ್ತಿರಲಿಲ್ಲ. ಆ ಮಗು ಅಳಲು ಏನು ಕಾರಣ, ಏನು ಸಮಸ್ಯೆ ಎನ್ನುವುದು ಯಾರೊಬ್ಬರಿಗೂ ಗೊತ್ತಾಗುತ್ತಿರಲಿಲ್ಲ.

ಅದೊಂದು ದಿನ ಚಿತ್ರಾಳ ಗೆಳತಿ ಸೀಮಾ ಮನೆಗೆ ಬಂದಳು, ಗೆಳತಿಯ ಮುಂದೆ ಮಗು ಅಳುತ್ತಿರುವ ಬಗ್ಗೆ ಹೇಳಿದಳು. ಸೀಮಾ ಆ ಮುಂಚೆಯೇ ಅಂತಹ ಸಮಸ್ಯೆಯನ್ನು ಎದುರಿಸಿದ್ದಳು. ಹೀಗಾಗಿ ಅವಳಿಗೆ ಮಗು ಏಕೆ ಅಳುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿಯಿತು.

“ನೀನು ಈ ಮಗುವಿಗೆ ಸರಿಯಾಗಿ ಹಾಲನ್ನಾದರೂ ಕುಡಿಸುತ್ತಿರುವೆಯೊ ಇಲ್ಲವೋ?” ಎಂದು ಕೇಳಿದಳು. ಆಗ ಚಿತ್ರಾ ಸ್ವಲ್ಪ ಸಂಕೋಚದಿಂದಲೇ, “ಹೌದು, ಆದರೆ ನನಗಾಗುತ್ತಿರುವ ಸಮಸ್ಯೆ ಏನೆಂದರೆ, ಸ್ತನಗಳಲ್ಲಿ ಹಾಲು ತುಂಬಿರುವ ಕಾರಣದಿಂದ ಅವು ಭಾರವಾಗಿ ಹಾಲು ಹಾಗೆಯೇ ಸ್ರವಿಸುತ್ತಾ ಇರುತ್ತದೆ. ಆ ಕಾರಣದಿಂದ ನೋವುಂಟಾಗಿ ನನಗೆ ಹಾಲು ಕುಡಿಸಲು ಸಮಸ್ಯೆ ಆಗುತ್ತಿದೆ. ಮಗುವಿಗೆ ಹೊಟ್ಟೆ ತುಂಬ ಹಾಲು ಸಿಗುತ್ತಿಲ್ಲ ಅನಿಸುತ್ತಿದೆ,” ಎಂದು ಹೇಳಿದಳು.

“ಅದೇ ಕಾರಣದಿಂದ ನಿನ್ನ ಮಗು ಬಿಟ್ಟು ಬಿಟ್ಟು ಅಳುತ್ತಿರುತ್ತದೆ. ಹೊಟ್ಟೆ ತುಂಬದೇ ಇರುವ ಕಾರಣದಿಂದ ಸರಿಯಾಗಿ ನಿದ್ರಿಸಲು ಆಗುತ್ತಿಲ್ಲ,” ಎಂದು ಸೀಮಾ ಹೇಳಿದಳು.

ಆಗ ಸೀಮಾ ಚಿತ್ರಾಳಿಗೆ ಬ್ರೆಸ್ಟ್ ಪಂಪ್‌ ಬಗ್ಗೆ ತಿಳಿಸಿ, ಅದು ನಿನ್ನ ಸಮಸ್ಯೆಯನ್ನು ಬಗೆಹರಿಸುತ್ತದೆ. ಹೇಗೆಂದರೆ, ಆ ಪಂಪ್‌ ನ ಸಹಾಯದಿಂದ ನೀನು ನಿನ್ನ ಸ್ತನಗಳಲ್ಲಿ ತುಂಬಿರುವ ಹಾಲನ್ನು ತೆಗೆದು ಸಂಗ್ರಹಿಸಿ ಇಡಬಹುದು. ಅದರಿಂದ ನಿನ್ನ ಸ್ತನಗಳಲ್ಲಿ ನೋವು ಇರದು ಹಾಗೂ ಮಗುವಿನ ಹೊಟ್ಟೆಯೂ ತುಂಬುತ್ತದೆ,” ಎಂದು ಹೇಳಿದಳು.

ಸೀಮಾ ಹೇಳಿದ ವಿಷಯ ಕೇಳಿ ಚಿತ್ರಾಳಿಗೆ ಖುಷಿಯಾಯಿತು. ತನ್ನ ಮಗು ಹಸಿವಿನಿಂದ ಅಳುವುದನ್ನು ಅವಳಿಗೆ ನೋಡಲು ಆಗುತ್ತಿರಲಿಲ್ಲ.

Main-Image

ಬ್ರೆಸ್ಟ್ ಪಂಪ್ವರದಾನ

ಹೊಸದಾಗಿ ತಾಯಂದಿರಾಗುತ್ತಿದ್ದಂತೆ ಅವರ ಜೀವನವೇ ಬದಲಾಗಿಬಿಡುತ್ತದೆ. ತನಗಾಗಿ ಸಮಯ ಮೀಸಲಿಡಲು ಆಗುವುದಿಲ್ಲ. ಸಂಗಾತಿಗೂ ಟೈಮ್ ಕೊಡಲು ಆಗುವುದಿಲ್ಲ. ಅವಳಿಗೆ ಸದಾ ಮಗುವಿನ ಚಿಂತೆಯೇ ಕಾಡುತ್ತಿರುತ್ತದೆ. ಇಂತಹದರಲ್ಲಿ ಬ್ರೆಸ್ಟ್ ಪಂಪ್‌ ಹಾಲು ಕುಡಿಸುವ ಕೆಲಸವನ್ನು ಸುಲಭಗೊಳಿಸುತ್ತದೆ. ಅದರ ಮುಖಾಂತರ ತನಗಾಗಿಯೂ ಸಮಯ ಮೀಸಲಿಟ್ಟುಕೊಳ್ಳಬಹುದು. ಹಾಗಾಗಿ ಅದು ಒಂದು ವರದಾನವಿದ್ದಂತೆ.

ಅದರ ಲಾಭವೇನು?

ಬ್ರೆಸ್ಟ್ ಪಂಪ್‌ ನ್ನು ಹೇಗೆ ರೂಪಿಸಲಾಗಿದೆ ಎಂದರೆ, ಅದು ತಾಯಿಯ ಎದೆಹಾಲಿನ ಒಂದೊಂದು ಹನಿಯನ್ನೂ ಬಾಟಲ್ ನಲ್ಲಿ ಸಂಗ್ರಹಿಸುವ ಕೆಲಸ ಮಾಡುತ್ತದೆ.

ಅದು ತಾಯಿ ಹಾಗೂ ಮಗು ಇಬ್ಬರಿಗೂ ಸುರಕ್ಷಿತವಾಗಿದೆ. ಏಕೆಂದರೆ ಅದರಲ್ಲಿನ ಬಿಡಿಭಾಗಗಳು ಹೆಲ್ದಿ ಆಗಿವೆ.

ತನ್ನ 2 ಹಂತದ ಎಕ್ಸ್ ಪ್ರೆಶನ್‌ ಟೆಕ್ನಾಲಜಿ ಮತ್ತು ಡಬಲ್ ಪಂಪಿಂಗ್‌ ನ ಸೌಲಭ್ಯದ ಕಾರಣದಿಂದ ಅದು ಕಡಿಮೆ ಸಮಯದಲ್ಲಿ ಹೆಚ್ಚು ಹಾಲು ತೆಗೆಯಲು ಸಮರ್ಥವಾಗಿದೆ.

ಬ್ರೆಸ್ಟ್ ಪಂಪ್‌ ನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಎಂದರೆ, ಮಾಮ್ಸ್ ಅದನ್ನು ಟೋಟಲ್ ಬ್ಯಾಕ್‌ ಪ್ಯಾಕ್‌ ನಲ್ಲಿ ಸುಲಭವಾಗಿ ತೆಗೆದುಕೊಂಡು ಹೋಗಬಹುದು.

ವ್ಯಾಕ್ಯೂಮ್ ಅಡ್ಜಸ್ಟ್ ಮೆಂಟ್‌ ನ ಕಾರಣದಿಂದ ಅದು ಅತ್ಯಂತ ಕಂಫರ್ಟಬಲ್ ಆಗಿದೆ.

ಬ್ರೆಸ್ಟ್ ಪಂಪ್ಆಯ್ಕೆ ಹೇಗಿರಬೇಕು?

ನಿಮಗೆ ಮಾರುಕಟ್ಟೆಯಲ್ಲಿ ಬಗೆಬಗೆಯ ಬ್ರೆಸ್ಟ್ ಪಂಪ್‌ ಗಳು ಲಭಿಸುತ್ತವೆ. ಆದರೆ ಬ್ರೆಸ್ಟ್ ಪಂಪ್‌ ನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ನೀವು ಗುಣಮಟ್ಟದ ಬಗ್ಗೆ ಹೊಂದಾಣಿಕೆ ಮಾಡಿಕೊಳ್ಳಲೇ ಬೇಡಿ. ಏಕೆಂದರೆ ಅದು ಮಗುವಿನ ಪೋಷಣೆ ಹಾಗೂ ಆರೋಗ್ಯವನ್ನು ಅವಲಂಬಿಸಿದೆ. ಇಂತಹದರಲ್ಲಿ ಮೆಟಲ್ ನ ಬ್ರೆಸ್ಟ್ ಪಂಪ್‌ ಗಳು ಉತ್ಕೃಷ್ಟವಾಗಿದೆ. ಅದನ್ನು ತಾಯಿ ಹಾಗೂ ಮಗುವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಮ್ಯಾನ್ಯುಯೆಲ್ ಮತ್ತು ಎಲೆಕ್ಟ್ರಿಕ್‌ ಲಭ್ಯ. ಸಿಂಗಲ್ ಮತ್ತು ಡಬಲ್ ಪಂಪ್ಸ್ ನ ಸೌಲಭ್ಯ ನೀಡಲಾಗಿದೆ. ನಿಮಗೆ ಅದನ್ನು ದಿನ ಬಳಸಬೇಕಿದ್ದರೆ, ನೀವು ಅದನ್ನು ಡಬಲ್ ಪಂಪ್‌, ಫ್ರಿ ಸ್ಟೈಲ್ ‌ನ್ನು ಬಳಸಬಹುದು. ಅಮ್ಮನ ಸೌಲಭ್ಯಕ್ಕೆಂದು ಅದರ ಜೊತೆ ಐಸ್‌ ಪ್ಯಾಕ್‌, ಕೂಲರ್‌ ಬ್ಯಾಗ್ಸ್ ಮತ್ತು ಬ್ರೆಸ್ಟ್ ಮಿಲ್ಕ್ ನ್ನು ಸಂಗ್ರಹಿಸುವ ಬಾಟಲ್ ನ ಸೌಲಭ್ಯವನ್ನು ಕೊಡಲಾಗಿದೆ. ನೀವು ಮ್ಯಾಕ್ಸಿಫ್ಲೆಕ್ಸ್ ಬ್ರೆಸ್ಟ್ ಪಂಪ್‌ ನ್ನು ಕೂಡ ಆಯ್ಕೆ ಮಾಡಬಹುದು. ಏಕೆಂದರೆ ಅದು ಅತ್ಯಂತ ಸೌಲಭ್ಯದಾಯಕ.

ನೀವು ಎಂದಾದರೊಮ್ಮೆ ಅದನ್ನು ಬಳಸುವಿರಾದರೆ, ನೀವು ಸ್ವಿಂಗ್‌ ಸಿಂಪಲ್ ಬ್ರೆಸ್ಟ್ ಪಂಪ್‌ ಆಯ್ಕೆ ಮಾಡುವುದು ಉತ್ತಮ. ಅದರಿಂದ ನಿಮ್ಮ ಅನುಪಸ್ಥಿತಿಯಲ್ಲೂ ನಿಮ್ಮ ಮಗುವಿಗೆ ಹಾಲು ದೊರಕುತ್ತಿರುತ್ತದೆ. ಅದರಿಂದ ನೀವು ಟೆನ್ಶನ್‌ ಫ್ರೀ ಆಗಿರಬಹುದು.

ಸೂಕ್ತ ಬ್ರೆಸ್ಟ್ ಪಂಪ್‌ ನ್ನು ಆಯ್ಕೆ ಮಾಡಿ ನೀವು ಚಿಂತಾಮುಕ್ತರಾಗಿ ಹಾಗೂ ಮಗುವಿಗೆ ಸೂಕ್ತ ಪೋಷಣೆಯನ್ನೂ ಕೊಡಬಹುದು. ಏಕೆಂದರೆ ಮಗುವಿಗೆ ತಾಯಿಯ ಹಾಲೇ ಸಂಪೂರ್ಣ ಆಹಾರ ಮತ್ತು ರೋಗ ನಿರೋಧಕ ಶಕ್ತಿ ನೀಡುವುದಾಗಿದೆ.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ