ಯುದ್ದಕಾಂಡ ಚಿತ್ರದ ಯಶಸ್ಸಿನ ನಂತರ ನಟ, ನಿರ್ಮಾಪಕ ಕೃಷ್ಣ ಅಜಯ್ ರಾವ್ ಅವರು ಇದೀಗ ಮತ್ತೊಂದು ಇಂಟರೆಸ್ಟಿಂಗ್ ಕ್ಯಾರೆಕ್ಟರ್ ಮೂಲಕ ಸಿನಿ ರಸಿಕರ ಮುಂದೆ ಬರುತ್ತಿದ್ದಾರೆ. ಇದುವರೆಗೂ ಲವರ್ ಬಾಯ್, ಆಕ್ಷನ್ ಹೀರೋ, ಭಗ್ನ ಪ್ರೇಮಿಯಾಗಿ ತೆರೆಮೇಲೆ ಕಾಣಿಸಿಕೊಂಡಿದ್ದ ಅಜಯ್ ರಾವ್ ಅವರು ವಿಭಿನ್ನವಾದ ರಗಡ್ ಗೆಟಪ್ ಮೂಲಕ ನೋಡುಗರ ಗಮನ ಸೆಳೆಯುತ್ತಿದ್ದಾರೆ.

1000572056

ಬೋಳು ತಲೆಯಲ್ಲಿ, ಅರ್ಧ ಕೂಲಿಂಗ್ ಗ್ಲಾಸ್ ಹಾಕಿ ವಿಲನ್ ಗಳಿಗೆ ಸಿಂಹಸ್ವಪ್ನ ಎನ್ನುವಂತೆ ಕಾಣಿಸಿಕೊಂಡಿದ್ದಾರೆ. ನನ್ ಮಗಳೇ ಹೀರೋಯಿನ್ ಖ್ಯಾತಿಯ ನಿರ್ದೇಶಕ ಎಸ್.ಕೆ.ಬಾಹುಬಲಿ ಅವರು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಪಿಕೆ ಪ್ರೊಡಕ್ಷನ್ಸ್ ಮೂಲಕ ಕಿರಣ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಿದ್ದು, ಸುಜ್ಞಾನ್ ಅವರು ಕ್ಯಾಮೆರಾ ವರ್ಕ್ ನಿಭಾಯಿಸುತ್ತಿದ್ದಾರೆ.

1000572058

ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಸಮಾರಂಭ ದಿ.21ರ ಶನಿವಾರ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆರವೇರುತ್ತಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ