– – ರಾಘವೇಂದ್ರ ಅಡಿಗ ಎಚ್ಚೆನ್.

ಚೌಮುದ ಫಿಲಂಸ್ ಬ್ಯಾನರ್ ಅಡಿಯಲ್ಲಿ ಜಯರಾಮ್ ಸಿ ಮಾಲೂರ ನಿರ್ಮಿಸಿ ವೀರೇಶ್ ಬೊಮ್ಮಸಾಗರ ಕಥೆ ಚಿತ್ರಕಥೆ ಬರೆದು ನಿರ್ದೇಶಿಸಿರುವ ರಾಜ ರತ್ನಾಕರ ಚಿತ್ರವು ಜೂನ್ 27 ರಿಂದ ತೆರೆಗೆ ಬರಲಿದೆ. ಚಂದನ್ ರಾಜ್ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ಅಪ್ಸರಾ ನಾಯಕಿಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ, ಪತ್ರಿಕಾಗೋಷ್ಟಿ ಅದ್ದೂರಿಯಾಗಿ ನೆರವೇರಿತು. ಈ ಪತ್ರಿಕಾಗೋಷ್ಟಿಯಲ್ಲಿ ನಾಯಕ ನಟ, ನಿರ್ದೇಶಕ ಸೇರಿದಂತೆ ಚಿತ್ರ ತಂಡದ ಸದಸ್ಯರು ಪಾಲ್ಗೊಂಡು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

0c4a7987-b4f3-4e33-ac46-34f317d7777d

ಇದು ದುರಹಂಕಾರಿ, ಸೋಮಾರಿಯೊಬ್ಬನ ಕಥೆ ಅಲ್ಲದೆ ಇದು ಬೆಂಗಳುರಿನ ಮದ್ಯಮವರ್ಗದ ಜನರ ಜೀವನದ ಮೇಲೆ ಬೆಳಕು ಚೆಲ್ಲುವ ಕಥೆಯೂ ಹೌದು. ಒಬ್ಬ ಸೋಮಾರಿ ಯುವಕ ಹೇಗೆ ಬದಲಾಗುತ್ತಾನೆ? ಜೀವನ ಕಟ್ಟಿಕೊಳ್ಳುತ್ತಾನೆ ಎನ್ನುವುದನ್ನು ತೋರಿಸುವುದು ಚಿತ್ರದ ಉದ್ದೇಶ ಚಂದನ್ ರಾಜ್ ಪಕ್ಕಾ ಉಡಾಳನಾಗಿ ಕಾಣಿಸಿಕೊಂಡಿದ್ದಾರೆ. ದುಡಿಬೇಕು ಅನ್ನೋದೆಲ್ಲ ಏನಿಲ್ಲ. ದುಡ್ ಮಾಡ್ಬೇಕು ಅಷ್ಟೇ. ಅದು ಫ್ಯಾಮಿಲಿನ ಇಕ್ಕಟ್ಟಿಗೆ ಸಿಲುಕಿಸಿಯಾದರೂ ಸರಿ ಎಂಬ ಬುದ್ದಿ ಇರುವವನೇ ನಾಯಕ ನಟ.ಎಂದು ಚಿತ್ರತಂಡ ವಿವರಿಸಿದೆ.

4c09ed82-19d2-4dca-8a5a-cd8abe2976cb
ಚಿತ್ರರಂಗಕ್ಕೆ ಬಂದು 10-12 ವರ್ಷ ಆಗಿದೆ. ಆದರೆ ಇದು ನನ್ನ ಮೊದಲ ಸಿನಿಮಾ. ಎಲ್ಲರ ಮನೆಯಲ್ಲಿಯೂ ಒಬ್ಬ ಇಂತಹಾ ವ್ಯಕ್ತಿ ಇರುತ್ತಾನೆ ಆದ ಕಾರಣ ಈ ಚಿತ್ರ ಎಲ್ಲರಿಗೂ ಬೇಗನೆ ಕನೆಕ್ಟ್ ಆಗುತ್ತದೆ. ಚಿತ್ರದ ಬಿಡುಗಡೆಗೆ ಮುನ್ನವೇ ಕೆಲವು ಆಯ್ದ ಪ್ರೇಕ್ಷಕರಿಗೆ ಚಿತ್ರ ತೋರಿಸಲಾಗಿದ್ದು ಪ್ರತಿಯೊಬ್ಬರೂ ಚಿತ್ರದ ಕುರುತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಹಾಗಾಗಿ ನಮಗೆ ಈ ಚಿತ್ರ ಯಶಸ್ವಿಯಾಗಲಿದೆ ಎನ್ನುವ ಭರವಸೆ ಇದೆ ಎಂದು ನಿರ್ದೇಶಕರು ಹೇಳಿದ್ದಾರೆ.

ಚಿತ್ರದ ನಾಯಕ ನಟ ಚಂದನ್ ರಾಜ್ ಮಾತನಾಡಿ ತನ್ನ ಜೊತೆ ನಟಿಸಿದ ಪ್ರತಿಭಾವಂತ ನಟಿ, ನಾಯಕಿ ಅಪ್ಸರಾ ಕಾರಣಾಂತರದಿಂದ ನಿಧನರಾಗಿದ್ದಾರೆ ಎಂದು ಭಾವುಕರಾದರು. ಈ ರೀತಿಯ ಕಥೆ ನಂಗೆ ಸಿಕ್ಕಿರೋದು ಅದೃಷ್ಟ. ನಮ್ಮ ನೇಟಿವಿಟಿ ಕಥೆಗಳನ್ನ ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು. ಬಿಕಾಸ್ ನಾನು ಬೆಂಗಳೂರಿನ ಹುಟ್ಟಿ ಬೆಳೆದ ಕಾರಣ ಇಲ್ಲಿನ ಕಥೆಯನ್ನೇ ಮಾಡಬೇಕು ಎಂದುಕೊಂಡಿದ್ದೆವು ಅಲ್ಲದೆ ಹೊಸ ಪ್ರತಿಭೆಗಳಿಗೆ ಕನ್ನಡ ಪ್ರೇಕ್ಷಕರು ಪ್ರೋತ್ಸಾಹ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಸಿನಿಮಾದ ನಾಯಕಿಯಾಗಿ ಅಪ್ಸರಾ ಕಾಣಿಸಿಕೊಂಡಿದ್ದಾರೆ. ಆದರೆ ಅಪ್ಸರಾ ಸಿನಿಮಾ ರಿಲೀಸ್ ಗೂ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಇಡೀ ತಂಡ ಅಪ್ಸರಾ ಅವರಿಗೆ ಕಂಬನಿ ಮಿಡಿದಿದೆ. ಅಪ್ಸರಾ ಪರವಾಗಿ ಅವರ ತಂದೆ ಮಾತನಾಡಿ, ಮಗಳಿಗಿದ್ದ ಕನಸಿನ ಬಗ್ಗೆ ಹಂಚಿಕೊಂಡಿದ್ದಾರೆ.

47885560-57c0-454e-86a6-e8948ba08af3

ನಾಯಕನ ತಾಯಿ ಪಾತ್ರ ಮಾಡಿರುವ ಯಮುನಾ ಶ್ರೀನಿಧಿ ಮಾತನಾಡಿ, ವಿರೇಶ್ ಸರ್ ನಂಗೆ ವಿವರಿಸಿದ ರೀತಿಗೆ ನಾನು ಸಿನಿಮಾ ಒಪ್ಪಿಕೊಂಡೆ. ನಾನು ಸಾಕಷ್ಟು ತಾಯಿ‌ಪಾತ್ರ ಮಾಡಿದ್ದರು ಕೂಡ ಇದು ವಿಭಿನ್ನವಾಗಿದೆ. ತೆರೆ ಮೇಲೆ ನೋಡಿದಾಗ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗಲಿದೆ ಎಂದಿದ್ದಾರೆ. ಚೇತನ್ ದುರ್ಗ ಮಾತನಾಡಿ, ಇಷ್ಟು ದಿನ ಕಾಮಿಡಿಯನ್ ಆಗಿ ಮಾಡಿಕೊಂಡು ಬಂದಿದ್ದೆ. ಆದರೆ ಇದರಲ್ಲಿ ಬೇರೆಯದ್ದೇ ರೀತಿಯ ಪಾತ್ರ ಇದೆ. ನಾನು ನಾಯಕ ಒಳ್ಳೆ ಫ್ರೆಂಡ್ಸ್. ಒಂಥರ ಸೈಲೆಂಟ್ ಪಾತ್ರ ನನ್ನದು. ಪೂರ್ಣಪ್ರಮಾಣದ ಕಲಾವಿದನಾಗಿ ಗುರುತಿಸಿಕೊಳ್ಳಬೇಕು ಅಂದ್ರೆ ಪಾತ್ರಗಳು ಸಿಗಬೇಕು. ಆ ರೀತಿಯ ಪಾತ್ರ ಇಲ್ಲಿ ಸಿಕ್ಕಿದೆ.

8aa01fef-c2fe-46f4-9442-c576f5be3a49

ನಾನು ಈ ಸಿನಿಮಾ ಮಾಡುವುದಕ್ಕೆ ಕಾರಣ ಈ ಕಥೆ. ತಾಯಿ, ಮಗ, ಫ್ರೆಂಡ್, ಲವ್ವರ್ ಎಲ್ಲಾ ಪಾತ್ರದಲ್ಲೂ ಎಮೋಷನಲ್ ಇದೆ ಎಂದು ನಿರ್ಮಾಪಕ ಜಯರಾಮ್ಚಿ ಸಂತಸ ವ್ಯಕ್ತಪಡಿಸಿದ್ದಾರೆ. ತ್ರದಲ್ಲಿ ಮೂರು ಸಾಹಸ ದೃಶ್ಯಗಳು, ಮೂರು ಹಡುಗಳಿದೆ. ಸಿದ್ದು ಕೆಂಚನಹಳ್ಳಿ ಛಾಯಾಗ್ರಹಣ, ಶಾಂತಕುಮಾರ್ ಸಂಕಲನ, ವಿಕ್ರಂ ಸಾಹಸ ನಿರ್ದೇಶನ ಮಾಡಿದ್ದರೆ ಹರ್ಷವರ್ಧನ್ ರಾವ್ ಸಂಗೀತ, ವಿ. ನಾಗೇಂದ್ರ ಪ್ರಸಾದ್, ಮಂಜುನಾಥ್ ಅವರು ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ