-
ರಾಘವೇಂದ್ರ ಅಡಿಗ ಎಚ್ಚೆನ್.

ಚಂದನವನದಲ್ಲಿ ಒಳ್ಳೊಳ್ಳೆ ಸಿನಿಮಾಗಳು ಬರ್ತಾನೆ ಇರ್ತಾವೆ. ವಿಭಿನ್ನ ಕಂಟೆಂಟ್ ಗಳನ್ನೊಳಗೊಂಡ ಸಿನಿಮಾಗಳು ವೀಕ್ಷಕರ ಮುಂದೆ ತೆರೆದುಕೊಳ್ಳುತ್ತವೆ. ಅಂಥದ್ದೊಂದು ಸಿನಿಮಾ ಇದೀಗ ಗಾಂಧಿನಗರದಲ್ಲಿ ಎಲ್ಲರ ಚಿತ್ತ ಕದ್ದಿದೆ. ಅದುವೆ ಒಮೆನ್. ಹೆಸರು ಕೇಳುವುದಕ್ಕೇನೆ ವಿಭಿನ್ನವಾಗಿದೆ ಅಂತ ಅನ್ನಿಸೋದು ಸುಳ್ಳಲ್ಲ. ಕಥೆ ಕೂಡ ಅಷ್ಟೇ ವಿಭಿನ್ನವಾಗಿದೆ.

75260114-ebf7-46e8-8f00-09977740bdb5

ಮರವಂಜಿ ಪ್ರೊಡಕ್ಷನ್ಸ್‌ ಮತ್ತು ಶ್ರೀ ಅಂಗಾಳಪರಮೇಶ್ವರಿ ಮೂವಿಮೇಕರ್ಸ್‌ ಬ್ಯಾನರ್‌ನಡಿ ಅಜಯ್‌ ಕುಮಾರ್ & ವಿ ಮಿರುನಳಿನಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಒಂದು ಮನೆಯ ಸುತ್ತ ನಡೆಯುವಂತಹ ಘಟನೆ. ಭೂತ ಬಂಗಲೆಗೆ ಹೋದವರ ಸುತ್ತ ನಡೆಯುವ ಕಥೆ.

3122ca20-7f46-4644-bb05-416689f8bcf5

ನಾಯಕ ಯೂಟ್ಯೂಬರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ ಪ್ಯಾರಾನಾರ್ಮಲ್‌ ರಿಸರ್ಚರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಫೌಂಡ್‌ ಫುಟೇಜ್‌ ಸ್ಟೈಲ್‌ನಲ್ಲಿದ್ದು, ನೇರವಾಗಿ ಒಂದು ಘಟನೆಯನ್ನು ವೀಕ್ಷಿಸುತ್ತಿರುವಂತಹ ಅನುಭವವನ್ನು ಪ್ರೇಕ್ಷಕರಿಗೆ ಆಗುತ್ತದೆ. ಸಿನಿಮಾದಲ್ಲಿ ಅತ್ಯಾಧುನಿಕ ಕಂಪ್ಯೂಟರ್ ಗ್ರಾಫಿಕ್ಸ್ ಒಳಗೊಂಡಿದೆ. ಸಂಗೀತ ಮತ್ತು ಸೌಂಡ್‌ ಡಿಸೈನ್‌ ಚಿತ್ರದ ಶೈಲಿಗೆ ಅನುಗುಣವಾಗಿದ್ದು ನೋಡುವ ವೀಕ್ಷಕರಿಗೆ ರೋಮಾಂಚಕಾರಿ ಹಾಗೂ ಭಯಾನಕ ಅನುಭವವನ್ನು ನೀಡುತ್ತದೆ.

13675e0f-6880-44fe-8cff-88bf14446f6e
ವಿಬಿನ್ ಎಸ್ ಸಂತೋಷ್ ಅವರು ಕಥೆ ಬರೆದು ನಿರ್ದೇಶನ ಮಾಡಿರೋದಲ್ಲದೆ, ಸಂಕಲನ ಕೆಲಸವನ್ನು ನಿರ್ವಹಿಸಿದ್ದಾರೆ. ಅಜಯ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನೀಶ್ಮ ಶೆಟ್ಟಿ ನಾಯಕಿಯಾಗಿದ್ದಾರೆ. ಉಳಿದಂತೆ ಮೈತ್ರಿ ಜಗ್ಗಿ, ಕೀರ್ತನ ಪುಲ್ಕಿ, ರಾಘು ಕಲಾವಿದ, ಆಕಾಶ್ ಕುಲಕರ್ಣಿ ಅಭಿನಯಿಸಿದ್ದಾರೆ. ಭುವನ್‌ ಶಂಕರ್‌, ಸನ್‌ಸ್ಕಾರ್‌ ಸಂಗೀತ, ಆನ್ಶೋ ಎಸ್‌ ಸೈಮನ್ ಎಸ್ಎಫ್ಎಕ್ಸ್ ಕೆಲಸ ಮಾಡಿದ್ದಾರೆ. ಸಿನಿಮಾದ ಸೆನ್ಸಾರ್ ಮುಗಿದಿದ್ದು, ಶೀಘ್ರದಲ್ಲಿಯೇ ತೆರೆಗೆ ಬರಲಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ