ನಮ್ಮ ಹೃದಯವನ್ನು ಸದಾ ಆರೋಗ್ಯಕರ ಸುಸ್ಥಿತಿಯಲ್ಲಿ ಇರಿಸುವಂಥ 5 ಬಗೆಯ ಅಡುಗೆ ಎಣ್ಣೆಗಳ ಬಗ್ಗೆ ಸಂಪೂರ್ಣ ವಿವರ ತಿಳಿಯೋಣವೇ….?
ನಾವು ಅಡುಗೆ ಎಣ್ಣೆ ಕೊಳ್ಳಲು ಹೋದಾಗೆಲ್ಲ ಅದರ ಬೆಲೆ ಬಗ್ಗೆ ಬಹಳ ಚಿಂತಿಸುತ್ತೇವೆ. ಯಾವುದು ಇರುವುದರಲ್ಲಿ ಅಗ್ಗವೋ ಅದನ್ನೇ ಕೊಳ್ಳುತ್ತೇವೆ. ಇದು ನಮ್ಮ ಆರೋಗ್ಯಕ್ಕೆ ಎಷ್ಟು ಪೂರಕ ಎಂದು ನಾವು ಚಿಂತಿಸುವುದೇ ಇಲ್ಲ. ಆದರೆ ಎಣ್ಣೆಯ ಗುಣ ನಮ್ಮ ಆರೋಗ್ಯ ಮತ್ತು ಹೃದಯಕ್ಕೆ ನೇರ ಸಂಬಂಧಿಸಿದೆ. ಹೀಗಾಗಿ ಕುಕಿಂಗ್ ಆಯಿಲ್ ಆರಿಸುವಾಗ ನಾವು ಬಹಳ ಜಾಗೃತರಾಗಿರಬೇಕು. ಆಗ ಮಾತ್ರ ನಿಮ್ಮ ಅಡುಗೆ ರುಚಿ ಆಗಿರುವುದಲ್ಲದೆ, ಹೃದ್ರೋಗ ಕಾಡದೆ ನೆಮ್ಮದಿಯಾಗಿ ಇರಬಹುದು.
ನಮ್ಮ ದೇಶದಲ್ಲಿ ಪ್ರತಿ ವರ್ಷ 12 ಲಕ್ಷಕ್ಕೂ ಹೆಚ್ಚು ಯುವಜನರು ಹಾರ್ಟ್ ಅಟ್ಯಾಕ್ ನಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಹೀಗಾಗಿ ಅದರ ಮೂಲ ತಿಳಿದು ನಾವು ಮೊದಲೇ ಎಚ್ಚೆತ್ತುಕೊಳ್ಳುವುದು ಲೇಸು.
ಹಾಗಾದರೆ ಯಾವ ಬಗೆಯ ಅಡುಗೆ ಎಣ್ಣೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಯೋಣವೇ?
ಸ್ಯಾಚುರೇಟೆಡ್ / ಅನ್ ಸ್ಯಾಚುರೇಟೆಡ್ ಎಣ್ಣೆ
ಆಧುನಿಕ ಸಂಶೋಧನೆಗಳ ಪ್ರಕಾರ, ನಾವು ನಮ್ಮ ಹೃದಯವನ್ನು ಆರೋಗ್ಯಕರವಾಗಿ ಇರಿಸ ಬಯಸಿದರೆ, ನಾವು ಕೇವಲ ಅನ್ ಸ್ಯಾಚುರೇಟೆಡ್ ಫ್ಯಾಟ್ ಆಯಿಲ್ ಮಾತ್ರ ಸೇವಿಸಬೇಕು. ಇದನ್ನೇ ಪಾಲಿ ಅನ್ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಮಾನೋ ಅನ್ ಸ್ಯಾಚುರೇಟೆಡ್ ಎಂದೂ ಹೇಳುತ್ತಾರೆ. ರೂಂ ಟೆಂಪರೇಚರ್ ನಲ್ಲಿ ಇದು ದ್ರವ ರೂಪದಲ್ಲಿರುತ್ತದೆ. ಒಮೇಗಾ-3 ಫ್ಯಾಟಿ ಆ್ಯಸಿಡ್ಸ್ (ಮೂಲತಃ ಇದು ಅನ್ ಸ್ಯಾಚುರೇಟೆಡ್ ಫ್ಯಾಟ್) ನಮ್ಮ ಆರೋಗ್ಯಕ್ಕೆ ಹೆಚ್ಚು ಪೂರಕ. ಇದು ನಮಗೆ ಸ್ಟ್ರೋಕ್, ಹಾರ್ಟ್ ಅಟ್ಯಾಕ್ ಆಗದಂತೆ ತಡೆಯುತ್ತದೆ. ಜೊತೆಗೆ ಇದು ನಮ್ಮ ರಕ್ತದಲ್ಲಿನ ಟ್ರೈಗ್ಲಿಸಿರೈಡ್ಸ್ ನ ಮಟ್ಟವನ್ನು ಎಷ್ಟೋ ತಗ್ಗಿಸುತ್ತದೆ.
ಜೊತೆಗೆ ನಾವು ನಮ್ಮ ದೇಹದಲ್ಲಿ ಬ್ಯಾಡ್ ಕೊಲೆಸ್ಟ್ರಾಲ್ ಮಟ್ಟವನ್ನು ಆದಷ್ಟು ತಗ್ಗಿಸಿ, ಗುಡ್ ಕೊಲೆಸ್ಟ್ರಾಲ್ ನ್ನು ಹೆಚ್ಚಿಸಬೇಕಾಗಿದೆ. ಜೊತೆಗೆ ಇದು ನಮ್ಮ BPಯನ್ನು ನಿಯಂತ್ರಿಸಿ, ರಕ್ತನಾಳ ಹೆಪ್ಪುಗಟ್ಟದಂತೆ (ಗರಣೆ ಕಟ್ಟದಂತೆ) ತಡೆಯುತ್ತದೆ. ಅದೇ ಇನ್ನೊಂದು ಕಡೆ ನೋಡಿದರೆ, ಸ್ಯಾಚುರೇಟೆಡ್ ಫ್ಯಾಟ್ಸ್ (ಬ್ಯಾಡ್ ಫ್ಲಾಟ್ಸ್)ನ್ನು ನಾವು ಆದಷ್ಟು ಕಡಿಮೆ ಸೇವಿಸಬೇಕು. ಅನಿವಾರ್ಯವಾಗಿ ಸೇವಿಸಬೇಕಾದಲ್ಲಿ ಅತಿ ಕಡಿಮೆ ಪ್ರಮಾಣ ಸೇವಿಸಬೇಕು. ಏಕೆಂದರೆ ಇದು ನಮ್ಮ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ.
ಸಾಮಾನ್ಯವಾಗಿ ಇವು ದ್ರರೂಪದಲ್ಲಿರದೆ ಘನ ರೂಪದಲ್ಲಿರುತ್ತದೆ. ಅದರಲ್ಲೂ ಆರ್ಟಿಫಿಶಿಯ್ ಟ್ರಾನ್ಸ್ ಫ್ಯಾಟ್ಸ್ ಬಳಿಯಂತೂ ಸುಳಿಯಲೇ ಬಾರದು. ಏಕೆಂದರೆ ಇದು ನಮ್ಮ ದೇಹದ ಸ್ಥೂಲತೆ ಹೆಚ್ಚಿಸಿ ನಮಗೆ ಸ್ಟ್ರೋಕ್ಸ್, ಅಟ್ಯಾಕ್ಸ್, ಕ್ಯಾನ್ಸರ್ ಗಳ ಕೊಡುಗೆ ನೀಡುತ್ತವೆ.
ಮುಖ್ಯ ಮಾಹಿತಿ
ನಿಮ್ಮ ದೇಹಕ್ಕೆ ಪ್ರತಿ ದಿನ 2000 ಕ್ಯಾಲೋರಿಗಳ ಅಗತ್ಯವಿದ್ದರೆ, ಅದರಲ್ಲಿ 20-25% ಕ್ಯಾಲೋರಿಗಳನ್ನು ಮಾತ್ರ ಫ್ಯಾಟ್ ನಿಂದ ಪಡೆಯಬೇಕು. ಇದು ಆದಷ್ಟೂ ಅನ್ ಸ್ಯಾಚುರೇಟೆಡ್ ಫ್ಯಾಟ್ ಮಾತ್ರ ಆಗಿರುವಂತೆ ನೋಡಿಕೊಳ್ಳಬೇಕು. ಬಾಯಿ ರುಚಿಗಾಗಿ ಸ್ಯಾಚುರೇಟೆಡ್ ಫ್ಯಾಟ್ ಬೇಕಿದ್ದರೆ ಅದು 56% ಮಾತ್ರ ಆಗಿರಬೇಕು.
ಆರೋಗ್ಯಕರ ಅಡುಗೆ ಎಣ್ಣೆ
ಆಲಿವ್ ಆಯಿಲ್ : ಆಹಾರ ತಜ್ಞರ ಪ್ರಕಾರ ಈ ಎಣ್ಣೆ ನಮ್ಮ ಆರೋಗ್ಯಕ್ಕೆ ಭಾರಿ ಲಾಭಕರ. ಹೀಗಾಗಿ ನೀವು ನಿಶ್ಚಿಂತರಾಗಿ ಇದನ್ನು ಅಡುಗೆಗೆ ಬಳಸಬಹುದು. ಅಸಲಿಗೆ ಇದು ಮಾನೋ ಅನ್ ಸ್ಯಾಚುರೇಟೆಡ್ ಆಯಿಲ್ ಆಗಿದೆ. ಇದರಲ್ಲಿನ ಆಲಿಕ್ ಆ್ಯಸಿಡ್ ದೇಹದಲ್ಲಿ ಊತ, ಕ್ಯಾನ್ಸರ್, ಹೃದ್ರೋಗಗಳಿಂದ ನಮ್ಮನ್ನು ದೂರ ಇರಿಸುತ್ತದೆ. ಇದರಲ್ಲಿ ಧಾರಾಳ ಆ್ಯಂಟಿ ಆಕ್ಸಿಡೆಂಟ್ಸ್ ಅಡಗಿದ್ದು, ನಿಮ್ಮ ಬ್ಲಡ್ ಕೊಲೆಸ್ಟ್ಟಾಸ್ ನ್ನು ಆಕ್ಸಿಡೇಶನ್ ನಿಂದ ರಕ್ಷಿಸಿ ಹೃದ್ರೋಗಗಳ ಅಪಾಯವನ್ನು ಎಷ್ಟೋ ಪಟ್ಟು ತಗ್ಗಿಸುತ್ತದೆ.
ಲಕ್ವಾ ಅಥವಾ ಸ್ಟ್ರೋಕ್ ನಿಂದ (ಪಾರ್ಶ್ವವಾಯು) ಸಾವು ಒಂದು ಮಾಮೂಲಿ ವಿಷಯ. ಒಂದು ರಿಸರ್ಚ್ ನಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ಜನರನ್ನು ಇದಕ್ಕಾಗಿ ಪರೀಕ್ಷಿಸಲಾಯಿತು. ಇದರಲ್ಲಿ ಯಾರು ಆಲಿವ್ ಆಯಿಲ್ ಬಳಸಿದ್ದರೋ ಅವರಿಗೆಂದೂ ಸ್ಟ್ರೋಕ್, ಹಾರ್ಟ್ ಅಟ್ಯಾಕ್ ಕಾಟ ಇರಲೇ ಇಲ್ಲ. ಇದರಲ್ಲಿನ ಉತ್ತಮ ಗುಣಗಳು ಕ್ಯಾನ್ಸರ್ ಬರದಂತೆಯೂ ತಡೆಯುತ್ತದೆ. ಹೀಗಾಗಿ ಇನ್ನು ಮುಂದೆ ಅಡುಗೆಗೆ ಹೆಚ್ಚಾಗಿ ಆಲಿವ್ ಎಣ್ಣೆ ಬಳಸಲು ಮರೆಯದಿರಿ.
ಕೆನೋಲಾ ಆಯಿಲ್ : ನೀವು ಹೃದ್ರೋಗ ಅಥವಾ ಕೊಲೆಸ್ಟ್ರಾಲ್ ರೋಗಗಳಿಂದ ನರಳುತ್ತಿದ್ದರೆ, ಇದು ಬರಬಾರದೆಂದು ಬಯಸಿದರೆ, ಕೆನೋಲಾ ಆಯಿಲ್ ಬಳಸುವುದು ಬಲು ಉತ್ತಮ. ಇದರಲ್ಲಿ ಹೇರಳ ಗುಡ್ ಫ್ಯಾಟ್ಸ್ ಅಡಗಿದ್ದು, ವಿಟಮಿನ್ ಒಳಗೊಂಡು ಕೊಲೆಸ್ಟ್ರಾಲ್ ಫ್ರೀ ಆಗಿದೆ. ಇದರಲ್ಲಿ ಅನ್ ಸ್ಯಾಚುರೇಟೆಡ್ ಫ್ಯಾಟ್ಸ್ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಒಮೇಗಾ-3 ಫ್ಯಾಟಿ ಆ್ಯಸಿಡ್ಸ್, ಅಲ್ಫಾ ಅಮೋವೇನಿಕ್ ಆ್ಯಸಿಡ್ಸ್ ಸಹ ಇವೆ. ಇದು ನಿಮ್ಮ BP, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ, ಹೃದಯದ ಖಾಸಾ ಆರೋಗ್ಯ ಗಮನಿಸುತ್ತದೆ.
ಎಷ್ಟೋ ಆರೋಗ್ಯ ಸಂಸ್ಥೆಗಳು ಕೆನೋಲಾ ಆಯಿಲ್ ನ್ನು ಹಾರ್ಟ್ ಸ್ಮಾರ್ಟ್ ಆಯಿಲ್ ಎಂದು ಬಣ್ಣಿಸಿವೆ. ಏಕೆಂದರೆ ಇದರಲ್ಲಿ 0% ಟ್ರಾನ್ಸ್ ಫ್ಯಾಟ್, ಹೈ ಲೆವೆಲ್ ಮಾನೋ ಅನ್ ಸ್ಯಾಚುರೇಟೆಡ್ ಫ್ಯಾಟ್ಸ್ ಇವೆ. ಇದು ನಿಮ್ಮನ್ನು BP, ಹೃದ್ರೋಗ, ಶುಗರ್ ಕಾಯಿಲೆಗಳಿಂದ ದೂರ ಇಡುತ್ತದೆ.
ಆವಕ್ಯಾಡೋ ಆಯಿಲ್ : ಬೆಣ್ಣೆ ಹಣ್ಣು ಎಂದೂ ಜನಪ್ರಿಯ ಆಗಿರುವ ಇದರಲ್ಲಿ ಬಹಳಷ್ಟು ಮಾನೋ ಅನ್ ಸ್ಯಾಚುರೇಟೆಡ್ ಫ್ಯಾಟ್ ಇದ್ದು, ಹೆಲ್ದಿ ಎನಿಸಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಇರುವುದರಿಂದ ಬ್ಯಾಡ್ ಕೊಲೆಸ್ಟ್ರಾಲ್ ನ್ನು ತಗ್ಗಿಸುವಲ್ಲಿ ಮುಂದು, ಹಾಗೇ ಗುಡ್ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. 70% ಆವಕ್ಯಾಡೋ ಆಯಿಲ್ ನಲ್ಲಿ ಹೃದಯದ ಆರೋಗ್ಯ ಗಮನಿಸಿಕೊಳ್ಳುವ ಆಲಿಕ್ ಆ್ಯಸಿಡ್ ಇದೆ. ಕೊಲೆಸ್ಟ್ರಾಲ್ ಲೆವೆಲ್ ಸಾಮಾನ್ಯ ಆಗುವುದರಿಂದ, ಹೃದಯ ಸದಾ ಸಕ್ರಿಯವಾಗಿರುತ್ತದೆ.
ಈ ಆಯಿಲ್ ನ ಇನ್ನೊಂದು ವೈಶಿಷ್ಟ್ಯ ಎಂದರೆ, ಇದರಲ್ಲಿ ಸಾಕಷ್ಟು ಮಾನೋ ಅನ್ ಸ್ಯಾಚುರೇಟೆಡ್ ಫ್ಯಾಟ್ ಇದೆ. ಇದು ಪೋಷಕಾಂಶಗಳನ್ನು ಸೂಕ್ತವಾಗಿ ರಕ್ತದಲ್ಲಿ ವಿಲೀನಗೊಳಿಸಲು ನೆರವಾಗುತ್ತದೆ. ಜೊತೆಗೆ ಇದರಲ್ಲಿನ ಪಾಲಿಫಿನೋಲಿಸ್ ಎಂಬ ಆ್ಯಂಟಿ ಆಕ್ಸಿಡೆಂಟ್, ಫ್ರೀ ರಾಡಿಕ್ಸ್ ನಿಂದ ನಮ್ಮ ದೇಹವನ್ನು ಕಾಪಾಡುತ್ತದೆ. ಇದು ಕೇವಲ ಹೃದಯಕ್ಕೆ ಮಾತ್ರವಲ್ಲದೆ ನಿಮ್ಮ ಇಡೀ ದೇಹಾರೋಗ್ಯಕ್ಕೂ ಅತ್ಯಂತ ಪೂರಕ.
ಸನ್ ಫ್ಲವರ್ ಆಯಿಲ್ : ಮೇಲಿನ ತುಸು ದುಬಾರಿ. ಆದರೆ ನಮ್ಮ ಈ ಸೂರ್ಯಕಾಂತಿ ಎಣ್ಣೆ ಹಾಗಲ್ಲ, ಮಧ್ಯಮ ವರ್ಗಕ್ಕೆ ಎಟುಕುವಂಥದ್ದು. ಇದರಲ್ಲಿ 80% ಅನ್ ಸ್ಯಾಚುರೇಟೆಡ್ ಫ್ಯಾಟ್ಸ್ ಇದ್ದು, ಹೃದಯಕ್ಕೆ ಹೆಚ್ಚು ಪೂರಕ ಎನ್ನಲಾಗಿದೆ. ಇದರಲ್ಲಿ ಸ್ಯಾಚುರೇಟೆಡ್ ಫ್ಯಾಟ್ಸ್ ಇಲ್ಲ. ಹೀಗಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚದಂತೆ ನಿಯಂತ್ರಿಸುತ್ತದೆ. ಸ್ಯಾಚುರೇಟೆಡ್ ಫ್ಯಾಟ್ಸ್ ಗೆ ಪೈಪೋಟಿಯಾಗಿ ನಮ್ಮ ದೇಹಕ್ಕೆ ತಕ್ಷಣ ಶಕ್ತಿ ತುಂಬುತ್ತದೆ. ಇದರಲ್ಲಿನ ಆ್ಯಂಟಿ ಆಕ್ಸಿಂಡೆಂಟ್ಸ್ ಇಮ್ಯೂನ್ ಸಿಸ್ಟಮ್ ನ್ನು ಸಶಕ್ತಗೊಳಿಸುತ್ತದೆ. ಇದರಿಂದ ವೈರಸ್, ಬ್ಯಾಕ್ಟೀರಿಯಾಗಳು ನಿಮಗೆ ಕೆಡುಕು ಮಾಡಲಾರವು. ಇದರ ಪ್ರೋಟೀನ್, ನಮ್ಮ ಟಿಶ್ಯೂಸ್ ನ್ನು ರಿಪೇರಿ ಮಾಡಲು ಪೂರಕ.
ಸೀಸಮ್ ಆಯಿಲ್ : ಇದು ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ತುಂಬಿದ್ದು ವಿಟಮಿನ್, ಫೀಟೋಸ್ಟೆರಾಲ್ಸ್, ನೆಸ್ ಮೂವ್, ಸೆಸ್ ಮಿನಾಲ್ ನ ಗುಣಗಳು ಅಡಗಿವೆ. ಇದು ನಿಮಗೆ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡಲು ಸಹಕಾರಿ. ಇದರಲ್ಲಿ ಬ್ಯಾಲೆನ್ಸ್ ಲೆವೆಲ್ ನಲ್ಲಿ ಒಮೇಗಾ-3, ಒಮೇಗಾ-6, ಒಮೇಗಾ-9 ಫ್ಯಾಟಿ ಆ್ಯಸಿಡ್ಸ್ ಇವೆ. ಇವು ಹೃದ್ರೋಗ ಹೆಚ್ಚದಂತೆ ತಡೆಯುತ್ತವೆ.
ಇದು ಹೈ ಕೊಲೆಸ್ಟ್ರಾಲ್ ಲೆವೆಲ್ ನ್ನು ತಗ್ಗಿಸಿ, ಹೃದ್ರೋಗದ ಅಪಾಯಗಳು ಕಾಡದಂತೆ ರಕ್ಷಿಸುತ್ತವೆ. ಇದರಲ್ಲಿನ 41% ಪಾಲಿ ಅನ್ ಸ್ಯಾಚುರೇಟೆಡ್ ಫ್ಯಾಟ್ಸ್ ಇವೆ. ಹೀಗಾಗಿ ಇದು ಹಾರ್ಟ್ ಸ್ಮಾರ್ಟ್ ಎನಿಸಿದೆ. ಇದರಲ್ಲಿ ಮೆಗ್ನೀಶಿಯಂ ಧಾರಾಳ ಇದ್ದು, BP ನಿಯಂತ್ರಿಸಲು ಬಲು ಸಹಕಾರಿ.
– ಪ್ರಿಯಾಂಕಾ ರಾವ್