ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತೊಮ್ಮೆ ಪೋಡಿಯಂ ಏರುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ತಮ್ಮ ಅಮೋಘ ಫಾರ್ಮ್ನ್ನು ಮುಂದುವರೆಸಿದ್ದಾರೆ. ಪ್ಯಾರೀಸ್ ಡ್ಯಾಮಂಡ್ ಲೀಗ್ನಲ್ಲಿ ಸ್ವರ್ಣ ಸಾಧನೆ ಮಾಡಿದ್ದರು. ಇದೇ ಸಾಧನೆಯನ್ನು ನೀರಜ್ ಗೋಲ್ಡನ್ ಸ್ಪೈಕ್ ಮೀಟ್ 2025ನಲ್ಲೂ ಮುಂದುವರೆಸಿದ್ದಾರೆ. ಕೇವಲ ನಾಲ್ಕು ದಿನಗಳ ಅಂತರದಲ್ಲಿ 2 ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ನೀರಕ್ ಚೋಪ್ರಾ ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಭಾಗವಹಿಸಿ ಅಮೋಘ ಸಾಧನೆ ಮಾಡಿದ್ದಾರೆ. ಈ ಸ್ಪರ್ಧೆಯು ವಿಶ್ವ ಅಥ್ಲೆಟಿಕ್ಸ್ ಸಬ್ ಕಾಂಟಿನೆಂಟಲ್ ಟೂರ್ನ ಪಂದ್ಯಾವಳಿಯಾಗಿದ್ದು, ಇದರಲ್ಲಿ 9 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಟೂರ್ನಿಯಲ್ಲಿ ನೀರಜ್ ಮೊಟ್ಟ ಮೊದಲ ಬಾರಿಗೆ ಅಂಗಳಕ್ಕೆ ಇಳಿದಿದ್ದರು. ತಾವು ಆಡಿದ ಮೊದಲ ಪ್ರಯತ್ನದಲ್ಲಿ ನೀರಜ್ ಚಿನ್ನದ ಸಾಧನೆ ಮಾಡಿದ್ದಾರೆ. ಪ್ಯಾರೀಸ್ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ನೀರಜ್ ಜಾವೆಲಿನ್ನ್ನು 85.29 ಮೀಟರ್ ದೂರ ಎಸೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.ನೀರಜ್ ಚೋಪ್ರಾ ಕಳೆದ ಎರಡು ಋತುಗಳಲ್ಲಿ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಅವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ಈಗ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕೋಚ್ 27 ವರ್ಷದ ನೀರಜ್ ಚೋಪ್ರಾ ಈ ಋತುವಿನಲ್ಲಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ.
ನೀರಜ್ ಸಾಧನೆ ಗೋಲ್ಡನ್ ಸ್ಪೈಕ್ ಮೀಟ್ನಲ್ಲಿ ನೀರಜ್ ಬಂಗಾರದ ಸಾಧನೆಯನ್ನು ಮಾಡಿದ್ದಾರೆ. ಇನ್ನು ರಷ್ಯಾದ ಡೌ ಸ್ಮಿತ್ 84.12 ಮೀಟರ್ ಜಾವೆಲಿನ್ ಎಸೆದು ಬೆಳ್ಳಿ ಪಡೆದಿದ್ದಾರೆ. ಜರ್ಮನಿಯ ಆಂಡರ್ಸನ್ ಪೀಟರ್ಸ್ 83.63 ದೂರ ಎಸೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ನೀರಜ್ ಚೋಪ್ರಾ ಪ್ರಸಕ್ತ ವರ್ಷದ ಆರಂಭದಲ್ಲಿ ನಡೆದಿದ್ದ ದೋಹಾ ಡೈಮಂಡ್ ಲೀಗ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಅಲ್ಲದೆ ತಮ್ಮ ಕನಸಿನ 90 ಮೀಟರ್ ಮಾರ್ಕ್ನ್ನು ದಾಟಿ ಸಾಧನೆ ಮಾಡಿದ್ದರು. ಪ್ಯಾರೀಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ಪೋಡಿಯಂ ಫಿನಿಶ್ ಮಾಡಿದ್ದ ನೀರಜ್, ತನ್ನ ಇದೇ ಅಮೋಘ ಲಯವನ್ನು ಮುಂದುವರೆಸಿದ್ದಾರೆ. ಪರಿಣಾ, ಪ್ಯಾರಿಸ್ ಡೈಮಂಡ್ ಲೀಗ್ ಮತ್ತು ಗೋಲ್ಡನ್ ಸ್ಪೈಕ್ ಮೀಟ್ ಪ್ರಶಸ್ತಿ ಗೆದ್ದಿದ್ದಾರೆ.