ಟ್ರೆಡಿಶನಲ್ ಉಡುಗೆಗಳನ್ನು ಹೆಚ್ಚಾಗಿ ಇಷ್ಟಪಡುವ ನಟಿ ವಿದ್ಯಾಬಾಲನ್ ಹೇಳುತ್ತಾಳೆ, ನನಗೆ ಜುಮಕಿ ಎಷ್ಟು ಇಷ್ಟ ಅಂದ್ರೆ, ಒಡವೆ ಖರೀದಿಸುವಾಗೆಲ್ಲ ಅದರಲ್ಲಿ 1 ಸೆಟ್ ಜುಮಕಿ ಇರಲೇಬೇಕು! ಮುಂಬೈ ಲೋಕಲ್ ಟ್ರೇನಲ್ಲಿ ಸಿಗುವ 5-10 ರೂ.ಗಳ ಅತಿ ಅಗ್ಗದ ಜುಮಕಿಯನ್ನೂ ಬಿಡುವುದಿಲ್ಲವಂತೆ! ಈಕೆಗೆ ಸಾಂಪ್ರದಾಯಿಕ ಒಡವೆಗಳು ಅಂದ್ರೆ ಪಂಚಪ್ರಾಣ.
ಸೋನಂ ಕಪೂರ್ ಸದಾ ತನ್ನ ಸ್ಟೈಲ್ ಗೆ ತಕ್ಕಂತೆ ಒಡವೆಗಳ ವಿಷಯದಲ್ಲಿ ಏನಾದರೊಂದು ಹೊಸ ಪ್ರಯೋಗ ಮಾಡುತ್ತಿರುತ್ತಾಳೆ. ಅವಳ ಈ ಹೊಸ ಲುಕ್ಸ್ ಎಲ್ಲರಿಗೂ ಮೆಚ್ಚುಗೆ. ಈಕೆಗೂ ಒಡವೆಗಳ ಬಗ್ಗೆ ಬಹಳ ಆಸಕ್ತಿ. ಅಗ್ಗ ಅಥವಾ ದುಬಾರಿ ಒಡವೆ ಇರಲಿ, ತನ್ನ ಹೊಸ ಡ್ರೆಸ್ ಗೆ ಹೊಂದುವಂಥದ್ದನ್ನೇ ಧರಿಸುತ್ತಾಳೆ. ಇವಳ ಪ್ರಕಾರ, ಡ್ರೆಸ್ ಟ್ರೆಡಿಶನಲ್ ಯಾ ವೆಸ್ಟರ್ನ್ ಆಗಿರಲಿ, ಒಡವೆಗಳಂತೂ ಎಲ್ಲದ್ದಕ್ಕೂ ಬೇಕೇ ಬೇಕು.
ನಟಿ ದೀಪಿಕಾ ಪಡುಕೋಣೆಗೆ ಬಲು ಟ್ರೆಂಡಿ ಎನಿಸುವ ಒಡವೆಗಳನ್ನೇ ಧರಿಸುವ ಹುಚ್ಚು. ಈಕೆಗೆ ಉದ್ದನೇ, ತೂಗಾಡುವ ಕಿವಿಯೋಲೆ, ರಿಂಗ್ಸ್, ಲೋಲಾಕು ಅಂದ್ರೆ ಇಷ್ಟ. ತನ್ನ ಉದ್ದಕ್ಕಿರುವ ಮುಖದ ಆಕಾರಕ್ಕೆ ಅದೇ ಸರಿ ಅಂತಾಳೆ.
ಈ ಕುರಿತಾಗಿ ಜ್ಯೂವೆಲರಿ ಎಕ್ಸ್ ಪರ್ಟ್ಸ್ ಏನು ಹೇಳುತ್ತಾರೆ? ಮುಖ ಪ್ರತಿ ವ್ಯಕ್ತಿಯ ವ್ಯಕ್ತಿತ್ವದ ಕನ್ನಡಿ. ಸರಿಯಾದ ಆಭರಣದ ಆಯ್ಕೆ, ಪ್ರತಿ ಹೆಣ್ಣಿನ ಸೌಂದರ್ಯವನ್ನು ಎಷ್ಟೋ ಪಟ್ಟು ಹೆಚ್ಚಿಸುತ್ತದೆ. ಹೀಗಾಗಿ ಭಾರಿ ಒಡವೆಗಳಿಗಿಂತ ಹೆಚ್ಚಾಗಿ ಎಲಿಗೆಂಟ್ ಲುಕ್ಸ್ ವುಳ್ಳ ಒಡವೆಗಳೇ ಇಂದಿನ ಆಧುನಿಕ ತರುಣಿಯರ ಮೊದಲ ಆಯ್ಕೆ, ಇದುವೇ ಇಂದಿನ ಟ್ರೆಂಡ್.
ಹೀಗಾಗಿ ಆಭರಣಗಳ ಅಂಗಡಿ ತಡಕಾಡುವ ಹೆಂಗಸರು, ಅಲ್ಲಿನ ನಿಲುಗನ್ನಡಿಯಲ್ಲಿ ಮೊದಲು ತಮ್ಮ ಮುಖದ ಆಕಾರವನ್ನು ಸರಿಯಾಗಿ ಗಮನಿಸಿಕೊಂಡು, ಅದಕ್ಕೆ ಅನುರೂಪವಾಗಿಯೇ ಒಡವೆ ಖರೀದಿಸಬೇಕು. ಇಷ್ಟು ಮಾತ್ರವಲ್ಲ, ಮುಖಕ್ಕೆ ತಕ್ಕಂತೆ ಒಡವೆ ಆರಿಸದಿದ್ದರೆ, ಇಡೀ ಮುಖದ ಸೌಂದರ್ಯ ಪೇಲವ ಎನಿಸುತ್ತದೆ. ಇದಕ್ಕಾಗಿ ಯಾರು ಎಂಥ ಒಡವೆ ಆರಿಸಬೇಕು ಎಂದು ಗಮನಿಸಿ :
ಓವಲ್ ಫೇಸ್
ಇಂಥ ಮುಖದ ಪ್ಲಸ್ ಪಾಯಿಂಟ್ ಅಂದ್ರೆ ಇಂಥ ಹೆಂಗಸರು, ಯಾವುದೇ ಉದ್ದನೆಯ ಆಭರಣ ಅಥವಾ ಸ್ಟೈಲಿಶ್ ನೆಕ್ ಲೇಸ್ ಧರಿಸಬಹುದು. ಇದೇ ತರಹ ಓವಲ್ ಯಾ ಟಿಯರ್ ಡ್ರಾಪ್ ಡಿಸೈನಿನ ರೌಂಡ್ ನೆಕ್ ಲೇಸ್, ಇಂಥ ಮುಖಕ್ಕೆ ಅಚ್ಚುಕಟ್ಟಾಗಿ ಒಪ್ಪುತ್ತದೆ. ಹಾಗೆಯೇ ಜ್ಯಾಮಿಟ್ರಿಕಲ್ ಪೆಂಡೆಂಟ್ ಜೊತೆ ಶಾರ್ಟ್ ನೆಕ್ ಲೇಸ್ ಮಿನಿಮಲಿಸ್ಟಿಕ್ ಲುಕ್ಸ್ ಗೆ ಹೆಚ್ಚು ಹೊಂದುತ್ತದೆ. ಲುಕ್ಸ್ ನ್ನು ಪರ್ಫೆಕ್ಟ್ ಗೊಳಿಸಲು ಸ್ಟಡೆಡ್ ಯಾ ವೈಡ್ ಇಯರ್ ರಿಂಗ್ಸ್ ನ ಮ್ಯಾಚಿಂಗ್ ಸರಿಹೋಗುತ್ತದೆ.
ಲಾಂಗ್ ಫೇಸ್
ಇಂಥ ಮುಖವುಳ್ಳವರಿಗೆ ಹಣೆಯಿಂದ ಗಲ್ಲದವರೆಗಿನ ಅಳತೆ ತುಸು ಉದ್ದ ಇರುತ್ತದೆ. ಇದರಿಂದಾಗಿ ಇವರು ಓವಲ್ ಫೇಸ್ ನವರಿಗಿಂತ ಭಿನ್ನ ಆಗುತ್ತಾರೆ. ಇಂಥವರಿಗಾಗಿ ಒಂದು ಸರಳ ಉಪಾಯ ಎಂದರೆ, ಮುಖದ ಆಕಾರವನ್ನು ಇನ್ನಷ್ಟು ಲಾಂಗ್ ಆಗಿಸದಂಥ ಆಭರಣವನ್ನೇ ಆರಿಸಬೇಕು. ಇದು ಮುಖದ ಅಗಲದ ಕಡೆಗೆ ಹೆಚ್ಚಿನ ಒತ್ತು ನೀಡುತ್ತದೆ. ಅಗಲದ ಮುಖಕ್ಕೆ ಒತ್ತು ಕೊಡಲಿಕ್ಕಾಗಿ, ಕುತ್ತಿಗೆ ಬಳಿ ತುಸು ಉದ್ದದ ಚಂಕಿಯರ್ ನೆಕ್ ಫೇಸ್ ನ್ನು ಆರಿಸುಲಪದೇ ಸೂಕ್ತ.
ಇಂಥ ಮುಖಕ್ಕಾಗಿ ಫುಲ್ ಚೋಕರ್ ಸೆಟ್ ಸಹ ಒಂದು ಉತ್ತಮ ಆಯ್ಕೆ. ಇದಲ್ಲದೆ ಶ್ಯಾಂಡ್ ಬಿಯರ್‌ಇಯರ್ ರಿಂಗ್ಸ್ ಲುಕ್ಸ್ ನ್ನು ಕಂಪ್ಲೀಟ್ ಗೊಳಿಸಲು ಪರ್ಫೆಕ್ಟ್ ಆಗಿದೆ. ಪ್ಲೇರ್ ಡಿಸೈನ್ ಸಹ ಇಂಥ ಮುಖದವರಿಗೆ ಅತ್ಯುತ್ತಮ ಆಯ್ಕೆ ಎನ್ನಬಹುದು.
ಹಾರ್ಟ್ ಶೇಪ್ ಫೇಸ್
ಇಂಥ ಮುಖ ಸಾಮಾನ್ಯವಾಗಿ ಶಾರ್ಟರ್, ಪಾಯಿಂಟೆಡ್ ಚಿನ್ ಹೊಂದಿರುತ್ತದೆ. ಮುಖದ ಮೇಲ್ಭಾಗದ ಅರ್ಧ ಭಾಗ ಅಗಲವಾಗಿರುತ್ತದೆ. ಇಂಥವರಿಗಾಗಿ ಯಾವುದೇ ಬಗೆಯ ಆಭರಣ ಆರಿಸುವಾಗಲೂ, ಹಣೆಯ ಅಗಲದ ಭಾಗವನ್ನು ಇನ್ನಷ್ಟು ಅಗಲವಾಗಿ ತೋರಿಸದಂಥ ಒಡವೆಯನ್ನೇ ಆರಿಸಬೇಕು. ಅದು ವೈಡರ್ ಜಾಲೈನ್ ಇಂಪ್ರೆಶನ್ ಉಂಟು ಮಾಡುವ ನೆಕ್ ಪೀಸ್, ಅದಕ್ಕೆ ಮ್ಯಾಚಿಂಗ್ ಇಯರ್ ರಿಂಗ್ಸ್ ಆರಿಸಬೇಕು.
ಇದರಲ್ಲಿ ಲಾಂಗ್, ಶೇಪಿನ ನೆಕ್ ಲೇಸ್ ಗಲ್ಲವನ್ನು ಹೈಲೈಟ್ ಮಾಡುತ್ತದೆ. ಹೀಗಾಗಿ ಲಾಂಗ್ ನೆಕ್ ಪೀಸ್ ಬದಲು ಶಾರ್ಟ್ ನೆಕ್ ಲೇಸ್, ಕರ್ವ್ ರೌಂಡ್ಸ್, ಕುತ್ತಿಗೆಯ ಎಲ್ಲಾ ಕಡೆ ಕಂಪ್ಲೀಟ್ ಲುಕ್ ನೀಡುತ್ತದೆ. ಹಾಗೆಯೇ ಹಣೆಯ ಅಗಲ ಭಾಗವನ್ನು ಬ್ಯಾಲೆನ್ಸ್ ಗೊಳಿಸುವಲ್ಲಿಯೂ ಸಹಾಯಕ. ಲೇಯರ್ಡ್ ನೆಕ್ ಲೇಸ್ ಸಹ ಇಂಥವರಿಗೆ ಒಂದು ಉತ್ತಮ ಆಯ್ಕೆ. ನೀವು ಪೆಂಡೆಂಟ್ ಕೊಳ್ಳಲು ಉತ್ಸುಕರಾಗಿದ್ದರೆ ಒಂದು ಅಡ್ಜೆಸ್ಟೆಬಲ್ ಚೇನ್ ಜೊತೆ ಇದನ್ನು ಆರಿಸಿ, ಆಗ ಬೇಕಾದಂತೆ ಕುತ್ತಿಗೆಯಲ್ಲಿ ಇದನ್ನು ಚಿಕ್ಕದಾಗಿ ತೋರಿಸಬಹುದು. ಇಷ್ಟು ಮಾತ್ರವಲ್ಲದೆ, ಟಿಯರ್ ಡ್ರಾಪ್ ಇಯರ್ ರಿಂಗ್ಸ್ ಸಹ ನಿಶ್ಚಿತ ರೂಪದಲ್ಲಿ, ನಿಮ್ಮ ಲುಕ್ಸ್ ಸುಧಾರಿಸುತ್ತದೆ.
ರೌಂಡ್ ಫೇಸ್
ಓವಲ್ ಫೇಸ್ ಗೆ ಹೋಲಿಸಿದಾಗ ಇದು ಒಂದು ವಿಶಿಷ್ಟ ಅನುಪಾತದಲ್ಲಿ ಇರುತ್ತದೆ, ರೌಂಡ್ ಫೋರ್ ಹೆಡ್ ಮತ್ತು ಜಾಸೈನ್ ಮುಖದ ಸೌಂದರ್ಯ ಹೆಚ್ಚಿಸುತ್ತದೆ. ಶಾರ್ಪ್ ಸ್ಟೋನ್ ಜ್ಯೂವೆಲರಿ ನಿಮ್ಮ ಮುಖದ ಶಾರ್ಪ್ ನೆಸ್ ಹೆಚ್ಚಿಸುತ್ತದೆ. ಲಾಂಗ್ ಪೆಂಡೆಂಟ್‌ನೆಕ್ ಲೇಸ್, ಕಾಲರ್ ಬೋನ್ ಕೆಳಗಿನ ಶೇಪ್ ಗೆ ಒತ್ತು ನೀಡುತ್ತವೆ. ಇದು ಇಂಥ ಮುಖಕ್ಕೆ ಹೆಚ್ಚು ಪೂರಕ. ರೌಂಡ್ ಫೇಸ್ ನವರು ಚಂಕಿಯರ್‌ಚೋಕರ್ ನೆಕ್ ಲೇಸ್ ಧರಿಸಲು ಹೋಗಬಾರದು. ಮುಖಕ್ಕೆ ತಕ್ಕಂತೆ ಇವರು ಕಾಂಟ್ರಾಸ್ಟ್ ಗಾಗಿ ಚೌಕ, ಆಯತಾಕಾರದ ನೆಕ್ ಲೇಸ್ ಆರಿಸುವುದೇ ಸರಿ.
ಚೌಕಾಕಾರದ ಮುಖ
ಇಂಥವರ ಮುಖದಲ್ಲಿನ ಹಣೆ, ಕೆನ್ನೆ, ಜಾಲೈನ್ ಸಮಾನ ಅಗಲ ಆಗಿರುತ್ತವೆ. ಹಣೆಯಿಂದ ಹಿಡಿದು ಗಲ್ಲದವರೆಗಿನ ಉದ್ದಳತೆ ಸಹ ಅದರ ಅಗಲದಷ್ಟೇ ಇರುತ್ತದೆ. ಇಂಥ ಸ್ಕ್ವೇರ್ ಫೇಸ್ ನವರಿಗೆ ಸ್ಟೋನ್ಸ್ ಜ್ಯೂವೆಲರಿ ಬಲು ಸೂಕ್ತ. ಏಕೆಂದರೆ ಇದು ಮುಖದ ಶಾರ್ಪ್ ತುದಿಗಳನ್ನು ತಗ್ಗಿಸುವಂತೆ ತೋರಿಸುತ್ತವೆ. ಇಂಥವರು ಶಾರ್ಪ್ ಜ್ಯಾಮಿಟ್ರಿಕಲ್ ಡಿಸೈನಿನ ಆಭರಣ ಧರಿಸಲೇಬಾರದು, ಏಕೆಂದರೆ ಅದು ಇಂಥವರ ಮುಖದ ಸ್ಕ್ವೇರ್ ಶೇಪ್ ತಗ್ಗಿಸುವ ಬದಲು, ಅವರಿಗೆ ಶಾರ್ಪ್ ನೆಸ್ ಹೆಚ್ಚಿಸುತ್ತದೆ. ಟ್ಯಾಪ್ ನಂಥ ಆಕರ್ಷಕ ಕಾಂಪೊನೆಂಟ್ ಜೊತೆ, ಲಾಂಗ್ ವರ್ಟಿಕಲ್ ನೆಕ್ ಲೇಸ್, ಸ್ಕ್ವೇರ್‌ಫೇಸ್ ಗೆ ಅತ್ಯುತ್ತಮ ಆಯ್ಕೆ ಎನಿಸುತ್ತದೆ. ಲಾಂಗ್‌ನೆಕ್ ಲೇಸ್ ಆರಿಸುವುದರಿಂದ, ಮುಖ ಇನ್ನಷ್ಟು ಉದ್ದಕ್ಕೆ ಕಾಣಿಸೀತು, ಅತ್ಯಧಿಕ ಸಾಫ್ಟ್ ಎನಿಸಬಹುದು. ಇಂಥವರಿಗೆ ಲಾಂಗ್ ಇಯರ್ ರಿಂಗ್ಸ್ ಸೂಕ್ತ.
ಪಿಯರ್ ಶೇಪ್ಡ್ ಫೇಸ್
ಇದರಲ್ಲಿ ನೀವು ಅಗಲದ ಗಲ್ಲ, ನ್ಯಾರೋ ಹಣೆ ಗಮನಿಸಬಹುದು. ಯಾವ ಆಭರಣ ಜಾಲೈನ್‌ಚೀಕ್ ಬೋನ್ಸ್ ನ ಸಮಾನ ಅನುಪಾತದಲ್ಲಿ ಬ್ಯಾಲೆನ್ಸ್ ಮಾಡಬಲ್ಲದೋ, ಅದರ ಅಗಲವನ್ನು ತಗ್ಗಿಸಿರುವಂತೆ ತೋರಿಸಬಲ್ಲದೋ, ಅಂಥದ್ದೇ ಆಭರಣ ಆರಿಸಬೇಕು. ಮಿಕ್ಸ್ಡ್ ಲಾಂಗ್ ಚೇನ್, ನೆಕ್ ಲೇಸ್ ಹಾಗೂ ಪೆಂಡೆಂಟ್ ಗಳ ಆಯ್ಕೆ ಇಂಥವರಿಗೆ ಬಹಳ ಚೆನ್ನಾಗಿ ಒಪ್ಪುತ್ತದೆ.
ಮೇಲಿನ ಸಲಹೆಗಳನ್ನು ಅನುಸರಿಸಿ, ಆಯಾ ಆಕಾರದ ಮುಖದವರು ಅಂಥದೇ ಒಡವೆ ಆರಿಸಿಕೊಂಡರೆ, ಎಲ್ಲಾ ಕಡೆ ಮಿಂಚುತ್ತಿರಬಹುದು!
– ಪ್ರತಿನಿಧಿ