ನಿಮ್ಮ ಬಿಝಿ ಶೆಡ್ಯೂಲ್ ಮಧ್ಯೆ ಹಬ್ಬಗಳಿಗಾಗಿ ಮನೆ ಕ್ಲೀನಿಂಗ್ ಮತ್ತಿತರ ಕಷ್ಟದ ಕೆಲಸಗಳನ್ನು ಸುಲಭಗೊಳಿಸಲೆಂದೇ ಬಂದಿರುವ ಈ ನವೀನ ಗೃಹೋಪಕರಣ ಬಳಸಿ, ನಿಮಗಾಗಿ ಒಂದಿಷ್ಟು ಫ್ರೀ ಟೈಂ ಮಾಡಿಕೊಳ್ಳಬಾರದೇಕೆ.....?
ಇತ್ತೀಚೆಗೆ ಎಲ್ಲೆಲ್ಲೂ ಮಲ್ಟಿ ಟಾಸ್ಕಿಂಗ್ ಝಮಾನಾ. ಎರಡೇ ಕಂಗಳಿದ್ದರೂ 1-2 ಕೈಗಳಿವೆ ಎಂಬಂತೆ ಬೇಗ ಬೇಗ ಕೆಲಸ ಮಾಡಿಕೊಂಡರೆ ಮಾತ್ರ ಉದ್ಯೋಗಸ್ಥ ವನಿತೆ ತನ್ನ ಮನೆ, ಆಫೀಸ್, ಮಕ್ಕಳು, ಸಂಸಾರ ಎಲ್ಲವನ್ನೂ ಏಕಕಾಲಕ್ಕೆ ಸಲೀಸಾಗಿ ನಿಭಾಯಿಸಲು ಸಾಧ್ಯ. ಈ ಮಧ್ಯೆ ಹಬ್ಬಗಳು ಬಂದುಬಿಟ್ಟರೆ ಅದಕ್ಕಾಗಿ ಮನೆಯ ವಿಶೇಷ ಕ್ಲೀನಿಂಗ್ ಕಡೆ ಗಮನ ಕೊಡಬೇಕಾದುದೂ ಅತ್ಯಗತ್ಯ. ಹೀಗಾದಾಗ ಆಕೆ ಇತ್ತೀಚೆಗೆ ಬಂದಿರುವ ನವನವೀನ ಗೃಹೋಪಕರಣಗಳನ್ನು ಬಳಸಿಕೊಂಡು ಈ ಸ್ಪೆಷಲ್ ಕ್ಲೀನಿಂಗ್ ಈಝಿ ಮಾಡಿಕೊಳ್ಳುವುದೇ ಸ್ಮಾರ್ಟ್ ನೆಸ್!
ನಿಮ್ಮ ಮನೆಯ ದೊಡ್ಡ, ಸಣ್ಣಪುಟ್ಟ ಕೆಲಸಗಳೇನೇ ಇರಲಿ, ಎಲ್ಲದಕ್ಕೂ ಈ ಗೃಹೋಪಕರಣಗಳು ಮಲ್ಟಿ ಟಾಸ್ಕಿಂಗ್ ನಿಭಾಯಿಸಲು ಪೂರಕ. ಕ್ಯಾಲುಕ್ಯುಲೇಶನ್ಸ್, ವೆಂಟಿಲೇಶನ್ಸ್, ಹೈಜೀನ್, ಕಿಚನ್ ವರ್ಕ್..... ಮಾತ್ರವಲ್ಲ, ಮನೆಯ ಯಾವ ಕೆಲಸವನ್ನೇ ಆಗಲಿ, ಈ ಹೊಸ ಹೋಮ್ ಅಪ್ಲೈಯನ್ಸಸ್ ಬೇಗ ಬೇಗ ಮಾಡಿ ಪೂರೈಸುತ್ತವೆ. ನಿಮ್ಮ ಮನೆಯ ಅಗತ್ಯಕ್ಕೆ ತಕ್ಕಂತೆ ಈ ಗೃಹೋಪಕರಣಗಳನ್ನು ಕಸ್ಟಮೈಸ್ಡ್ ಮಾಡಿಕೊಳ್ಳಿ. ಅವನ್ನು ಬಳಸಿಕೊಳ್ಳುತ್ತಾ, ಸುಲಭವಾಗಿ ನಿಮ್ಮ ಎಲ್ಲಾ ಕಷ್ಟದ ಮನೆಗೆಲಸಗಳನ್ನೂ ಹಾಯಾಗಿ ಮುಗಿಸಿಕೊಳ್ಳಿ.
ವ್ಯಾಕ್ಯೂಂ ಕ್ಲೀನರ್
ನೀವು ನಿಮ್ಮ ಮನೆಯನ್ನು ಎಷ್ಟೇ ಉತ್ತಮವಾಗಿ ರಿನೋವೇಟ್ ಮಾಡಿರಲಿ, ಅದಕ್ಕೆ ಮಾಡ್ ಲುಕ್ಸ ನೀಡಿರಲಿ, ಮನೆಯ ಎಲ್ಲಾ ವಸ್ತುಗಳೂ ಒಪ್ಪ ಓರಣವಾಗಿ, 100% ಧೂಳುರಹಿತ ಇರದಿದ್ದರೆ ಅದು ಸುಂದರವಾಗಿ ಕಾಣಿಸದು. ಆದರೆ ಇಂದಿನ ಓಡುಯುಗದಲ್ಲಿ ನಮ್ಮ ಬಳಿ ಎಲ್ಲವನ್ನೂ ಮತ್ತೆ ಮತ್ತೆ ಕ್ಲೀನ್ ಮಾಡುತ್ತಾ ಕೂರಲು ಖಂಡಿತಾ ಸಮಯಾವಕಾಶ ಇರುವುದಿಲ್ಲ. ಹೀಗಾಗಿ ಸೋಫಾ ಕಾರ್ಪೆಟ್ ಗಳ ಮೂಲೆ ಮೂಲೆಯನ್ನು ಅತಿ ಪರ್ಫೆಕ್ಟ್ ಆಗಿ ಕ್ಲೀನಾಗಿಸುವುದು ಕಷ್ಟಸಾಧ್ಯ!
ಹೀಗಾಗಿಯೇ ವ್ಯಾಕ್ಯೂಂ ಕ್ಲೀನರ್ ಮನೆಯ ಮೂಲೆ ಮೂಲೆಯಲ್ಲಿನ ಸಣ್ಣಪುಟ್ಟ ಧೂಳನ್ನೂ ಇನ್ನಿಲ್ಲದಂತೆ ಕ್ಲೀನ್ ಮಾಡುತ್ತದೆ. ಕ್ಲೀನಿಂಗ್ ಜೊತೆಗೆ ಇಡೀ ಮನೆಯನ್ನು ಕೆಲವೇ ನಿಮಿಷಗಳಲ್ಲಿ ಹೊಳೆ ಹೊಳೆಯುತ್ತಿರುವಂತೆ ಮಾಡಬಲ್ಲದು. ಇಂದಿನ ಆಧುನಿಕ ಮಾರುಕಟ್ಟೆಯಲ್ಲಿ ನಿಮಗೆ ಬಹು ವಿಧದ ವ್ಯಾಕ್ಯೂಂ ಕ್ಲೀನರ್ ಗಳು ಲಭ್ಯ. ಇವಕ್ಕೆ ಎಲ್ಲಾ ಬಗೆಯ ಕ್ಲೀನಿಂಗ್ ಮೋಡ್ ಅಟ್ಯಾಚ್ ಮೆಂಟ್ ಇರುತ್ತವೆ. ಗಾಳಿಯಲ್ಲಿ ಬೆರೆತ ಡಸ್ಟ್ ನ್ನು ತೆಗೆಯುವುದಲ್ಲದೆ, ನಮ್ಮ ಪೊರಕೆ ತಲುಪಲಾಗದ ಮೂಲೆ ಮೂಲೆಯಲ್ಲೂ ಇರುವ ಧೂಳಿನ ಕಣಗಳನ್ನೂ ಸೆಳೆದುಕೊಳ್ಳಬಲ್ಲದು. ಇದು ಎಲ್ಲವನ್ನೂ ತನ್ನಲ್ಲಿನ ಡಸ್ಟ್ ಬಿನ್ ಗೆ ತುರುಕಿಕೊಂಡು, ನಿಮ್ಮ ಮನೆಗೆ ಹೊಚ್ಚ ಹೊಳಪು ನೀಡಬಲ್ಲದು. ಈಗ ಮನೆ ಕ್ಲೀನಿಂಗ್ ಬಲು ಈಝಿ! ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಮ್ಮ ಬಜೆಟ್ ನಲ್ಲಿ ವ್ಯಾಕ್ಯೂಂ ಕ್ಲೀನರ್ ಕೊಳ್ಳಬಹುದು. ನೀವು ತುಸು ಬೆಟರ್ ವ್ಯಾಕ್ಯೂಂ ಕ್ಲೀನರ್ ಬಯಸಿದರೆ, ರೋಬೋಟಿಕ್ ವ್ಯಾಕ್ಯೂಂ ಕ್ಲೀನರ್ ಕೊಳ್ಳಿರಿ. ಇದನ್ನು ನೀವು ರಿಮೋಟ್ ಅಥವಾ ಅಲೆಕ್ಸಾದಿಂದ ಕಂಟ್ರೋಲ್ ಮಾಡಬಹುದು. ಇದು ಡಸ್ಟ್ ತೆಗೆಯುವುದಲ್ಲದೆ, ಮನೆ ಒರೆಸುವ ಕೆಲಸವನ್ನೂ ಮಾಡಿ ಮುಗಿಸುತ್ತದೆ! ನಿಮ್ಮ ಬೆಸ್ಟ್ ಹೆಲ್ಪರ್ ಆಗಿ ಇದು ನಿಮಗೆ ಸೇವೆ ಸಲ್ಲಿಸುತ್ತದೆ.





