– ರಾಘವೇಂದ್ರ ಅಡಿಗ ಎಚ್ಚೆನ್.
ಶ್ರೀನಗರಕಿಟ್ಟಿ ಅಭಿನಯದ “ವೇಷಗಳು” ಚಿತ್ರದ ಮೊದಲ ವೇಷದ ತುಣುಕುಗಳ ಬಿಡುಗಡೆ ಆಗಿದೆ. ವೇಷಗಳು ಚಿತ್ರ ತಂಡದೊಂದಿಗೆ ಶ್ರೀನಗರ ಕಿಟ್ಟಿ.
ಹುಟ್ಟುಹಬ್ಬ ಆಚರಿಸಿಕೊಂಡರು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಂಗಭೂಮಿ, ಕಿರುತೆರೆ, ಬೆಳ್ಳಿತೆರೆ ಮೂರೂ ರಂಗದಲ್ಲೂ ಗುರುತಿಸಿಕೊಂಡ ನಟ
‘ವೇಷಗಳು’ ಚಿತ್ರದಲ್ಲಿ ಬಸಪ್ಪ, ಬಸಮ್ಮನಾಗಿ ಅಭಿನಯಿಸುತ್ತಿದ್ದಾರೆ. ಅವರ ನಟನಾ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸಲು ಹೊರಟಿದ್ದಾರೆ.
‘ಇಂತಿ ನಿನ್ನ ಪ್ರೀತಿಯ’ ಸಿನಿಮಾದಿಂದ ಸಂಜು ವೆಡ್ಸ್ ಗೀತಾ ಗೌಳಿ ವರೆಗೆ ವಿವಿಧ ಶೈಲಿಯ ಪಾತ್ರಗಳಿಂದ ಗುರುತಿಸಿಕೊಂಡಿರುವ ನಟಿ ಈಗ ಜೋಗತಿ ವೇಷದಲ್ಲಿ ಮಿಂಚಲು ತಯಾರಿ ನಡೆಸಿದ್ದಾರೆ.
ರವಿ ಬೆಳಗೆರೆ ಅವರ ಕಥೆನಯನ್ನಾದರಿಸಿದ ಈ ಚಿತ್ರಕ್ಕೆ ಕಿಶನ್ ರಾವ್ ದಳವಿ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.
ಶ್ರೀನಗರ ಕಿಟ್ಟಿ ಮತ್ತು ಭಾವನ ಬೆಳಗೆರೆ ಇಬ್ಬರೂ ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ರವಿಬೆಳಗೆರೆ ಮತ್ತು ಲಲಿತಾ ಬೆಳಗೆರೆ ಅವರ ಆಶೀರ್ವಾದ ಈ ಸಿನಿಮಾ ತಂಡದ ಮೇಲಿದೆ. ಗ್ರೀನ್ ಟ್ರೀ ಸ್ಟುಡಿಯೋಸ್ ಅವರ ನಿರ್ಮಾಣ ಚಿತ್ರಕ್ಕಿದೆ.
ವೇಷಗಳು ಚಿತ್ರಕ್ಕೆ ವಿದ್ವಾನ್ ಕೌಶಿಕ್ ಸಂಗೀತವಿದೆ. ರಾಜ್ ಗುರು, ಸೌಜನ್ಯದತ್ತರಾಜು ಅವರ ಸಂಭಾಷಣೆ ಇದೆ. ಅದೇನೆ ಇರಲಿ ಶ್ರೀನಗರ ಕಿಟ್ಟಿ ಹೊಸ ವೇಷದೊಂದಿಗೆ ಎಂಟ್ರಿಯಾಗ್ತಾ ಇದ್ದಾರೆ. ಅವರ ಹೊಸ ವೇಷಗಳು ಜನಮನ ಗೆಲ್ಲಲಿ. ರಂಗಪ್ರತಿಭೆಗಳ ಅನಾವರಣವೂ ಈ ಸಿನಿಮಾ ಮೂಲಕ ಆಗುತ್ತಿದೆ ಅನ್ನೋದು ವಿಶೇಷ.