ಶರತ್ ಚಂದ್ರ.

ಕನ್ನಡ ಚಿತ್ರದಲ್ಲಿ ನಟಿಸಿರುವ ಒಂದಷ್ಟು ನಾಯಕಿಯರು ಪರಭಾಷಾ ಚಿತ್ರಗಳಲ್ಲಿ ನಟಿಸುತ್ತಿರುವುದು ಹೊಸತೇನಲ್ಲ. ಕನ್ನಡ ಚಿತ್ರಗಳಲ್ಲಿ ವೃತ್ತಿ ಜೀವನ ಆರಂಭಿಸಿದ ಕನ್ನಡ ಮೂಲದ ನಟಿಯರಾದ ರಶ್ಮಿಕಾ ಮಂದಣ್ಣ, ಆಶಿಕಾ ರಂಗನಾಥ್, ಶ್ರೀನಿಧಿ ಶೆಟ್ಟಿ, ರುಕ್ಮಿಣಿ ವಸಂತ್ ಮುಂತಾದ ನಟಿಯರು ಈಗಾಗಲೇ ಪರಭಾಷೆ ಚಿತ್ರಗಳಲ್ಲಿ ಅಭಿನಯಿಸಿ ಯಶಸ್ವಿಯಾಗಿದ್ದಾರೆ.

ಕನ್ನಡದಲ್ಲಿ ಟೋಬಿ, ಸಪ್ತಸಾಗರದ ಆಚೆ ಎಲ್ಲೋ ಸೈಡ್ ಬಿ, ಬ್ಲಿಂಕ್ ಮುಂತಾದ ಚಿತ್ರಗಳ ಮೂಲಕ ಪ್ರೇಕ್ಷಕ ರ ಮತ್ತು ಸಿನಿ ವಿಮರ್ಶಕರ ಮೆಚ್ಚುಗೆ ಪಡೆದಂತಹ ನಟಿ ಚೈತ್ರ ಜೆ ಆಚಾರ್ ಕೂಡ ಪರಭಾಷೆಗೆ ಎಂಟ್ರಿ ಕೊಟ್ಟಿದ್ದಾರೆ.

1000595433

ತಮಿಳಿನ ಹಿರಿಯ ನಟ ಶರತ್ ಕುಮಾರ್ ಹಾಗೂ ಸಿದ್ದಾರ್ಥ್ ನಟಿಸಿರುವ ತಮಿಳು ಚಿತ್ರ 3 BHK ಈಗಾಗಲೇ ಬಿಡುಗಡೆಯಾಗಿದ್ದು ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಸ್ವಂತ ಮನೆ ಕಟ್ಟಬೇಕೆಂದು ಕನಸು ಕಾಣುವ ಫ್ಯಾಮಿಲಿ ಯ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಸಹಜ ಸುಂದರಿ ಚೈತ್ರ ಆಚಾರ್ ಗೆ ಅವರ ಇಮೇಜ್ ಗೆ ತಕ್ಕಂತಹ ಪಾತ್ರ ಸಿಕ್ಕಿದೆ. ತಮಿಳಿನಲ್ಲಿ ಹೆಚ್ಚಾಗಿ ಹಳ್ಳಿ ಸೊಗಡಿರುವ ಚಿತ್ರಗಳು ಹೆಚ್ಚಾಗಿ ನಿರ್ಮಾಣವಾಗುತ್ತಿರುವುದರಿಂದ, ಈ ಚಿತ್ರದ ನಂತರ ಚೈತ್ರ ಆಚಾರ್ ರವರಿಗೆ ಒಂದಷ್ಟು ಅವಕಾಶಗಳು ಲಭಿಸುವ ಸಾಧ್ಯತೆ ಇದೆ.

1000595435

ಕನ್ನಡದಲ್ಲಿ ಕೂಡ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಾರ್ನಮಿ ಎಂಬ ಚಿತ್ರದಲ್ಲಿ ನಡೆಸುತ್ತಿದ್ದಾರೆ. ಮೂಲತ  ಗಾಯಕಿ ಆಗಿರುವ ಚೈತ್ರ ಅವರು ಹಾಡಿರುವ  ಗರುಡಗಮನ ವ್ರಷಭ ವಾಹನ ಚಿತ್ರದ’ ಸೋಜುಗಾದ ಸೂಜಿ ಮಲ್ಲಿಗೆ’ ಹಾಡು ಸಾಕಷ್ಟು ಜನರ ಮನ ಸೆಳೆದಿತ್ತು.

1000595420

ಒಟ್ಟಿನಲ್ಲಿ ಒಂದಷ್ಟು ಒಳ್ಳೆಯ ಪಾತ್ರಗಳನ್ನು ಮಾಡುತ್ತಿರುವ ಚೈತ್ರ ಆಚಾರ್ ಕನ್ನಡದ ಜೊತೆಗೆ ಪರಭಾಷೆಗಳಲ್ಲಿ ಕೂಡ ಅಭಿನಯಿಸುವುದರ ಮೂಲಕ ಫುಲ್ ಬಿಜಿಯಾಗಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ