– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದಲ್ಲಿ ಕಳೆದ ಅರ್ಧ ವರ್ಷ ಅಂತಹಾ ಯಾವ ಬಿಗ್ ಸಿನಿಮಾಗಳೂ ಇಲ್ಲದೆ ಕಳೆದು ಹೋಗಿದೆ. ಆದರೆ ಈಗ ಒಂದೇ ಬಾರಿಗೆ ಎರಡು ಮಹತ್ವಕಾಂಕ್ಷೆಯ ಸಿನಿಮಾಗಳು ಒಂದೇ ದಿನ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡುತ್ತ್ದೆ. ಅದೇ ಯುವ ರಾಜ್ ಕುಮಾರ್- ಸಂಜನಾ ಜೋಡಿಯ “ಎಕ್ಕ” ಹಾಗೂ ಕಿರೀಟಿ- ಶ್ರೀಲೀಲಾ ಅಭಿನಯದ “ಜೂನಿಯರ್”. ಎರಡೂ ಚಿತ್ರಗಳು ಜುಲೈ 18ಕ್ಕೆ ತೆರೆಗೆ ಬರುತ್ತಿದ್ದು ಜುಲೈ 11ರಂದು ಎರಡೂ ಚಿತ್ರಗಳ ಟ್ರೈಲರ್ ಬಿಡುಗಡೆ ಆಗಲಿದೆ.
ಈಗಾಗಲೇ ಚಿತ್ರದ ಶೀರ್ಷಿಕೆ ಗೀತೆ ಹಾಗೂ ‘ಬ್ಯಾಂಗಲ್ ಬಂಗಾರಿ …’ ಹಾಡುಗಳು ಬಿಡುಗಡೆಯಾಗಿ ಯಶಸ್ವಿಯಾಗಿರುವ ‘ಎಕ್ಕ’ ಟ್ರೈಲರ್ ಬಿಡುಗಡೆ ಬಗ್ಗೆ ಭಾರೀ ಕುತೂಹಲವಿದೆ. . ‘ಎಕ್ಕ’ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಸೇರಿ ಜಂಟಿಯಾಗಿ ಈ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಆದಿತ್ಯ, ಅತುಲ್ ಕುಲಕರ್ಣಿ, ಸಂಜನಾ ಆನಂದ್, ಸಂಪದ ಹುಲಿವಾನ ಸೇರಿ ಇಬ್ಬರು ನಾಯಕಿಯರಿದ್ದಾರೆ.
ಇದೇ ವೇಳೆ “ಜೂನಿಯರ್” ಚಿತ್ರದ ಟ್ರೈಲರ್ ಸಹ ಜುಲೈ 11ನೇ ತಾರೀಖಿನಂದು ಬಿಡುಗಡೆಗೊಳ್ಳಲಿದೆ. ಇದು ಕಿರೀಟಿ ಮೊದಲ ಚಿತ್ರವಾಗಿದ್ದು ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡೋಕೆ ತಯಾರಾಗಿದ್ದಾರೆ. ಈ ಚಿತ್ರ ಪಂಚ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಜೂನಿಯರ್ ಸಿನಿಮಾ ರಿಲೀಸ್ ಆಗಲಿದೆ. ‘ಮಾಯಾಬಜಾರ್’ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಜೂನಿಯರ್ ಸಿನಿಮಾ ತಯಾರಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿಗ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಚಿತ್ರ ಮೂಡಿ ಬಂದಿದೆ. ‘ಕ್ರೇಜಿಸ್ಟಾರ್’ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್ ಜೂನಿಯರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಿರೀಟಿಗೆ ಜೋಡಿಯಾಗಿ ನಟಿ ಶ್ರೀಲೀಲಾ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇನ್ನೂ ಹಲವು ತಾರೆಯರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಈ ಚಿತ್ರ ಕೂಡ ಜುಲೈ 18ಕ್ಕೆ ರಿಲೀಸ್ ಆಗಲಿದೆ.
ಒಟ್ಟಾರೆ ಇಷ್ಟು ದಿನ ಒಂದೊಳ್ಳೆ ಮನರಂಜನೆಗಾಗಿ ಹಪಹಪಿಸುತ್ತಿದ್ದ ಪ್ರೇಕ್ಷಕನಿಗೆ ಈಗ ಈ ತಿಂಗಳಲ್ಲಿ ಡಬಲ್ ಧಮಾಕಾ ಸಿಕ್ಕುತ್ತಿದೆ. ಕನ್ನಡ ಸಿನಿಪ್ರೇಮಿಗಳು ಈ ಎರಡು ಚಿತ್ರಗಳನ್ನು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದನ್ನು ಮುಂದೆ ಕಾದು ನೊಡಬೇಕು.