ನೀವು ಸಹ ಈ ಚಳಿಗಾಲದಲ್ಲಿ ಹೊಳೆ ಹೊಳೆಯುವ, ಮೃದು, ಕೋಮಲ, ಆ್ಯಕ್ನೆಫ್ರೀ ಚರ್ಮ ಬಯಸಿದರೆ ಈ ಉಪಾಯಗಳನ್ನು ಅಗತ್ಯ ಅನುಸರಿಸಿ…….!
ನಿಮ್ಮ ಮುಖ ಸದಾ ಚಂದ್ರಮನಂತೆ ಬೆಳಗುತ್ತಿರಬೇಕೇ? ಅದರಲ್ಲಿ ಒಂದಿಷ್ಟೂ ಕಲೆಗುರುತು, ಆ್ಯಕ್ನೆ ಇಲ್ಲದೆ, ಮೃದು, ಕೋಮಲ ಹೊಳೆಯುವ ಚರ್ಮ ತಮ್ಮದಾಗಿ ಚಂದ್ರಮುಖಿ ಎನಿಸಬೇಕೆಂದು ಯಾವ ಹೆಣ್ಣು ತಾನೇ ಬಯಸುವುದಿಲ್ಲ….? ಆದರೆ ಈ ಬಯಕೆ ಎಲ್ಲರಿಗೂ ಫಲಿಸಲು ಸಾಧ್ಯವಿಲ್ಲ. ಕಾರಣ…. ನಮ್ಮ ಇಂದಿನ ಆಧುನಿಕ ಜೀವನಶೈಲಿ, ಹೊರಗಿನ ಓಡಾಟದ ಧೂಳುಮಣ್ಣು, ಪರಿಸರ ಮಾಲಿನ್ಯ…. ಹೀಗೆ ಆ್ಯಕ್ನೆ ಹೆಚ್ಚಲು ನಾನಾ ಕಾರಣಗಳಿವೆ. ಅದೇನೇ ಕಾರಣಗಳಿರಲಿ, ಆ್ಯಕ್ನೆ ಅಂತೂ ಮುಖಕ್ಕೆ ಬಲು ಕ್ಷೋಭೆ ತರುತ್ತದೆ, ಫಂಕ್ಷನ್ ಗಳಿಗೆ ಹೋದಾಗ ಮುಜುಗರ ಹೆಚ್ಚಿಸುತ್ತದೆ. ಜೊತೆಗೆ ನಮ್ಮ ಆತ್ಮವಿಶ್ವಾಸವನ್ನೂ ತಗ್ಗಿಸಿಬಿಡುತ್ತದೆ. ಹೀಗಾಗಿ ಈ ಆ್ಯಕ್ನೆಯ ನಿವಾರಣೆಗಾಗಿ ಸಕಾಲಕ್ಕೆ ಸೂಕ್ತ ಬ್ಯೂಟಿ ಪ್ರಾಡಕ್ಟ್ಸ್ ಉಪಯೋಗಿಸುವುದೇ ಸೂಕ್ತ ಉಪಾಯ. ಇದರ ಕುರಿತು ಸೌಂದರ್ಯ ತಜ್ಞೆಯರ ಸಲಹೆಗಳ ಬಗ್ಗೆ ತಿಳಿಯೋಣವೇ?
ನ್ಯೂಟ್ರೊಜೆನಾ ಆಯಿಲ್ ಫ್ರೀ ಫೇಸ್ ವಾಶ್
ಈ ಫೇಸ್ ವಾಶ್‌ಕ್ಲೆನ್ಸರ್ ಆ್ಯಕ್ನೆ ಪ್ರೋನ್ ಸ್ಕಿನ್ ಗಾಗಿ ಬಲು ಸಹಕಾರಿ. ಏಕೆಂದರೆ ಇದರಲ್ಲಿದೆ ಸ್ಯಾಲಿಸಿಲಿಕ್ ಆಮ್ಲ. ಇದು ಚರ್ಮದ ಹೊರ ಪದರವನ್ನು ನೀಟಾಗಿ ಕ್ಲೀನ್ ಮಾಡುವುದಲ್ಲದೆ, ಪೋರ್ಸ್ ನ ಆಳಕ್ಕಿಳಿದು ಸೀಬಂ ತೊಲಗಿಸುವ ಕೆಲಸ ಮಾಡುತ್ತದೆ. ಇದು ಪೋರ್ಸ್ ಕ್ಲಾಗ್ ಆಗದಂತೆಯೂ ತಡೆಯುತ್ತದೆ. ಇದರಲ್ಲಿನ ಗ್ಲೈಕಾಲಿಕ್ ಆ್ಯಸಿಡ್, ಈವೆನ್ ಸ್ಕಿನ್ ಟೋನ್ ಒದಗಿಸುವ ಕೆಲಸ ಮಾಡುತ್ತದೆ. ಜೊತೆಗಿನ ಲೈಪೊಹೈಡ್ರಾಕ್ಸಿ ಆ್ಯಸಿಡ್, ಚರ್ಮದಿಂದ ಹೆಚ್ಚುವರಿ ಜಿಡ್ಡನ್ನೂ ತೊಲಗಿಸಿ, ಕ್ಲಿಯರ್ ಸ್ಕಿನ್ ನೀಡುತ್ತದೆ.
ಈ ಫೇಸ್ ವಾಶ್ ನ ವೈಶಿಷ್ಟ್ಯತೆ ಎಂದರೆ, ಇದು ಎಲ್ಲಾ ಬಗೆಯ (ನಾರ್ಮಲ್, ಡ್ರೈ, ಆಯ್ಲಿ) ಸ್ಕಿನ್ ಗೂ ಸೂಟ್ ಆಗುತ್ತದೆ ಹಾಗೂ ಚರ್ಮವನ್ನು ಸದಾ ಹೈಡ್ರೇಟೆಡ್ ಆಗಿರಿಸಲು ಸಹಕಾರಿ.
ಕಾಯಾ ಸ್ಯಾಲಿಸಿಲಿಕ್ ಆ್ಯಸಿಡ್ ಫೇಸ್ ವಾಶ್
ಈ ಮೈಲ್ಡ್ ಕೆನ್ಸರ್ ನಿಮ್ಮ ಚರ್ಮವನ್ನು ಡೀಪ್ ಕ್ಲೀನ್ ಮಾಡುವುದಲ್ಲದೆ, ಆ್ಯಕ್ನೆಯಿಂದ ಸಂಪೂರ್ಣ ರಿಲೀಫ್ ನೀಡುತ್ತದೆ. ಇದರಲ್ಲಿನ ಸ್ಯಾಲಿಸಿಲಿಕ್ ಆ್ಯಸಿಡ್, ಚರ್ಮಕ್ಕೆ ಯಾವುದೇ ಹಾನಿ ಮಾಡದೆ, ಪೋರ್ಸ್ ನ್ನು ಡೀಪ್ ಕ್ಲೀನ್ ಮಾಡುತ್ತದೆ. ಇದರಿಂದಾಗಿ ಪೋರ್ಸ್ ನಲ್ಲಿ ಜಮೆಗೊಂಡ ಕೊಳೆ, ಧೂಳು ಮಣ್ಣು, ಆಯಿಲ್ ಇತ್ಯಾದಿ ಸುಲಭವಾಗಿ ತೊಲಗುತ್ತದೆ, ಜೊತೆಗೆ ಚರ್ಮಕ್ಕೆ ಹೆಚ್ಚಿನ ಗ್ಲೋ ನೀಡುತ್ತದೆ. ನಿಮಗೆ ಆ್ಯಕ್ನೆಫ್ರೀ ಸ್ಕಿನ್ ಬೇಕಿದ್ದರೆ, ಈ ಫೇಸ್ ವಾಶ್ ಕೆಲವೇ ವಾರಗಳಲ್ಲಿ ನಿಮ್ಮ ಚರ್ಮಕ್ಕೆ ಮ್ಯಾಜಿಕ್ ಎಫೆಕ್ಟ್ ನೀಡುತ್ತದೆ.
ಸೋಲ್ ಫ್ಲವರ್ ಗ್ರೇಪ್ ಸೀಡ್ ಆಯಿಲ್
ನೀವು ಆ್ಯಕ್ನೆಗಳ ಸಮಸ್ಯೆಯಿಂದ ಬೇಸತ್ತಿದ್ದರೆ, ಇದಕ್ಕಾಗಿ ಇಲ್ಲಸಲ್ಲದ ಬ್ಯೂಟಿ ಟ್ರೀಟ್ ಮೆಂಟ್ಸ್ ಮಾಡಿ ಸಾಕಾಗಿದ್ದರೆ, ಈ ಸೋಲ್ ಫ್ಲವರ್ ಗ್ರೇಪ್ ಸೀಡ್ ಆಯಿಲ್ ನ್ನು ನಿಮ್ಮ ಬ್ಯೂಟಿ ಕಿಟ್ ನಲ್ಲಿ ಅಗತ್ಯವಾಗಿ ಇರಿಸಿಕೊಳ್ಳಿ. ಏಕೆಂದರೆ ಇದರಲ್ಲಿ ಆ್ಯಂಟಿ ಮೈಕ್ರೋಬಿಯಲ್ ಗುಣಗಳು ಹೇರಳವಾಗಿದ್ದು, ಇದು ಆ್ಯಕ್ನೆ ಔಟ್ ಬ್ರೇಕ್ಸ್ ನ್ನು ನೀಟಾಗಿ ಟ್ರೀಟ್ ಮಾಡುತ್ತದೆ. ಏಕೆಂದರೆ ಪೋರ್ಸ್ ನಲ್ಲಿ ಬ್ಯಾಕ್ಟೀರಿಯಾ ಆಳಕ್ಕಿಳಿದರೆ, ಬ್ರೇಕ್ ಔಟ್ಸ್ ಗೆ ಕಾರಣವಾಗುತ್ತದೆ. ಹೀಗಾಗಿ ಈ ಆಯಿಲ್ ಪೋರ್ಸ್ ನ್ನು ಡೀಪ್ ಕ್ಲೀನ್ ಮಾಡಿ, ನಿಮಗೆ ಆ್ಯಕ್ನೆಯಿಂದ ರಿಲೀಫ್ ನೀಡುತ್ತದೆ.
ಇದು ನಾನ್ ಕಾಮೆಡೊಜೆನಿಕ್ ಆಗಿರುವುದರ ಜೊತೆ, ಚರ್ಮಕ್ಕೆ ಪರ್ಫೆಕ್ಟ್ ಮಾಯಿಶ್ಚರೈಸರ್ ಆಗಿಯೂ ಕೆಲಸ ನಿರ್ವಹಿಸುತ್ತದೆ,
ಜೊತೆಗೆ ಆ್ಯಕ್ನೆಗಳನ್ನೂ ಸಂಪೂರ್ಣ ನಿವಾರಿಸುತ್ತಾ, ಮುಖದಲ್ಲಿ ಯಾವುದೇ ಗುರುತು ಕಲೆ ಇಲ್ಲದಂತೆ ಮಾಡಿ ಕ್ಲಿಯರ್‌ಬ್ಯೂಟಿಫುಲ್ ಸ್ಕಿನ್ ಒದಗಿಸುತ್ತದೆ.
ದಿ ಬಾಡಿ ಶೇಪ್, ಟೀ ಟ್ರೀ ಸಲ್ಯೂಶನ್
ಟೀ ಟ್ರೀ ಆಯಿಲ್ ನಲ್ಲಿ ಆ್ಯಂಟಿ ಇನ್ ಫ್ಲಮೆಟರಿ ಆ್ಯಂಟಿಮೈಕ್ರೋಬಿಯಲ್ ಗುಣಗಳು ಅಪಾರವಾಗಿ ಅಡಗಿದ್ದು, ಆ್ಯಕ್ನೆಗೆ ಚಿಕಿತ್ಸೆ ಒದಗಿಸಿ, ಅದರಿಂದಾಗುವ ರೆಡ್ ನೆಸ್, ಉರಿ, ಊತವನ್ನೂ ಸಹ ಕಡಿಮೆ ಮಾಡುತ್ತದೆ. ಜೊತೆಗೆ ಸ್ಮೂಥ್‌ಕ್ಲಿಯರ್ ಸ್ಕಿನ್ ಒದಗಿಸುವಲ್ಲಿಯೂ ಪ್ರಧಾನ ಪಾತ್ರ ವಹಿಸುತ್ತದೆ. ಇದು ಮುಖದಲ್ಲಿನ ಅನಗತ್ಯ ಜಿಡ್ಡನ್ನು ತೊಲಗಿಸಿ, ಮುಖಕ್ಕೆ ಫ್ರೆಶ್ ಲುಕ್ ನೀಡುತ್ತದೆ. ಇದರ 1-2 ಹನಿಗಳನ್ನು ಮುಖಕ್ಕೆ ಹಚ್ಚಿ ನೀಟಾಗಿ ಮಸಾಜ್ ಮಾಡಿ. 1-2 ಹನಿಗಳನ್ನು ಮುಖಕ್ಕೆ ಹಚ್ಚಿ ನೀಟಾಗಿ ಮಸಾಜ್ ಮಾಡಿ. 1-2 ವಾರಗಳಲ್ಲೇ ಇದು ಮ್ಯಾಜಿಕ್ ಎಫೆಕ್ಟ್ ನೀಡುತ್ತದೆ. ಇದರಲ್ಲಿನ ವಿಶೇಷ ಅಂದ್ರೆ, ಇದು ಕೇವಲ ನ್ಯಾಚುರಲ್ ಘಟಕಗಳನ್ನು ಹೊಂದಿದ್ದು, ಚರ್ಮನ್ನು ಸೂಪರ್ ಹೈಡ್ರೇಟೆಡ್ ಆಗಿರಿಸುವ ಕೆಲಸವನ್ನೂ ಮಾಡುತ್ತದೆ.
ಲಾ ರೋಚೆ ಪೋಸಿ ಆ್ಯಕ್ನೆ ಫೇಸ್ ವಾಶ್
ನಿಮಗೆ ಆ್ಯಕ್ನೆ ಮತ್ತು ಕ್ಲಾಗ್ ಪೋರ್ಸ್ ನ ಸಮಸ್ಯೆ ಹೆಚ್ಚಾಗಿದ್ದರೆ, ಈ ಜೆಲ್ ಫೇಸ್ ವಾಶ್, ನಿಮ್ಮ ಚರ್ಮಕ್ಕೆ ಹೆಚ್ಚು ಎಫೆಕ್ಟಿವ್ ಆಗಿರುತ್ತದೆ. ಏಕೆಂದರೆ, ಇದರಲ್ಲಿನ 2.5% ಮೈಕ್ರೋನೈಸ್ಡ್ ಬೆನ್ ಝೈಲ್ ಪೆರಾಕ್ಸೈಡ್ ಚರ್ಮಕ್ಕೆ ಜೆಂಟಲ್ ಎಫೆಕ್ಟ್ ನೀಡುತ್ತಾ ಆ್ಯಕ್ನೆಯನ್ನು ಸಂಪೂರ್ಣ ನಿಯಂತ್ರಿಸುತ್ತದೆ. ಇದಕ್ಕೆ ಬ್ಯಾಕ್ಟೀರಿಯಾ ನಿವಾರಿಸುವ ಸಾಮರ್ಥ್ಯವಿದ್ದು, ಆ್ಯಕ್ನೆ ಉಂಟಾಗುವ ಸಾಧ್ಯತೆಯನ್ನು ಸಂಪೂರ್ಣ ನಿಯಂತ್ರಿಸುತ್ತದೆ. ಜೊತೆಗೆ ಇದರಲ್ಲಿನ ಗ್ಲಿಸರಿನ್, ಚರ್ಮದ ಆರ್ದ್ರತೆ ಹೆಚ್ಚಿಸುಲ್ಲಿ ಪೂರಕ. ಹಾಗಾಗಿ ಚರ್ಮದ ಎಲ್ಲಾ ಸಮಸ್ಯೆಗಳೂ ತಗ್ಗುತ್ತವೆ. ಆ್ಯಕ್ನೆಯಿಂದಾಗಿ ನಿಮ್ಮ ಮುಖದಲ್ಲಿ ಉರಿ ಕಾಣಿಸಿಕೊಂಡರೆ, ಇದು ಅದನ್ನು ಶಾಂತಗೊಳಿಸಿ, ಕೂಲ್ ಡೌನ್ ಮಾಡುತ್ತದೆ.
ಆ್ಯಕ್ನೆಫ್ರೀ ಸ್ಕ್ರಬ್ ಟ್ರೀಟ್ ಮೆಂಟ್
ಆಕ್ನೆಫ್ರೀ ಬ್ಲ್ಯಾಕ್ ಹೆಡ್ಸ್ ರಿಮೂವಿಂಗ್ ಸ್ಕ್ರಬ್ ನಲ್ಲಿ ಚಾರ್ ಕೋಲ್ 2% ಸ್ಯಾಲಿಸಿಲಿಕ್ ಆ್ಯಸಿಡ್ ಇದ್ದು, ಚರ್ಮವನ್ನು ಎಕ್ಸ್ ಫಾಲಿಯೇಟ್ ಮಾಡಿ, ಪೋರ್ಸ್ ನ್ನು ಅನ್ ಕ್ಲಾಗ್ ಮಾಡುವಲ್ಲಿ ಮುಂದು. ಚಾರ್ ಕೋಲ್ ನ ಆ್ಯಂಟಿಬ್ಯಾಕ್ಟೀರಿಯಲ್ ಗುಣ, ಪೋರ್ಸ್ ನಿಂದ ಬ್ಯಾಕ್ಟೀರಿಯಾ ದೂರಗೊಳಿಸಿದರೆ, ಚರ್ಮದ ಕಾಂಪ್ಲೆಕ್ಷನ್ ತಿಳಿಗೊಳಿಸುವಲ್ಲಿಯೂ ಪೂರಕ. ಇದರಲ್ಲಿನ ಸ್ಯಾಲಿಸಿಲಿಕ್ ಆ್ಯಸಿಡ್ ಚರ್ಮವನ್ನು ಮೈಲ್ಡ್ ವಿಧಾನದಿಂದ ಎಕ್ಸ್ ಫಾಲಿಯೇಟ್ ಸಹ ಮಾಡುತ್ತದೆ, ಹೀಗಾಗಿ ಆ್ಯಕ್ನೆಗೆ ಇದು ಬೆಸ್ಟ್ ಟ್ರೀಟ್ ಮೆಂಟ್ ಆಗಿದೆ.
ಸೂಪರ್ ಮಡ್ ಚಾರ್ ಕೋಲ್ ಮಾಸ್ಕ್
ಈ ಚಾರ್ ಕೋಲ್ ಮಾಸ್ಕ್ ಆ್ಯಕ್ನೆ ಸ್ಕಿನ್ ಗೆ ಬಹಳ ಪರಿಣಾಮಕಾರಿ. ಏಕೆಂದರೆ ಇದರಲ್ಲಿ ಅಬ್ ಸಾರ್ಬಿಂಗ್ ಗುಣಗಳಿದ್ದು, ಚರ್ಮದ ಆಳಕ್ಕಿಳಿದು, ಪೋರ್ಸ್ ನಿಂದ ಕೊಳೆಯನ್ನು ಹೊರಕ್ಕೆಳೆದು, ಚರ್ಮದ ನೈಸರ್ಗಿಕ ತೈಲಾಂಶವನ್ನು ಬ್ಯಾಲೆನ್ಸ್ಡ್ ಆಗಿ ಇರಿಸುತ್ತದೆ. ಇದರಲ್ಲಿನ 6 ಬಗೆಯ ಎಕ್ಸ್ ಫಾಲಿಯೇಟಿಂಗ್ ಆ್ಯಸಿಡ್ಸ್ ಮತ್ತು ಆ್ಯಕ್ಟಿವ್ ಚಾರ್ ಕೋಲ್ ನ ಕಾರಣ, ಇದು ಆ್ಯಕ್ನೆ ಮೊಡವೆಗಳನ್ನು ಸಂಪೂರ್ಣ ನಿಯಂತ್ರಿಸಿ, ಪರಿಣಾಮಕಾರಿ ಎನಿಸುತ್ತದೆ.
– ಪಿ. ವಾಣಿ
ಈ ಸಲಹೆಗಳನ್ನು ಮರೆಯದಿರಿ
ನಿಮ್ಮ ಮುಖವನ್ನು ಪ್ರತಿದಿನ ಅಗತ್ಯ 2 ಸಲ ತಣ್ಣೀರಿನಿಂದ ತೊಳೆಯಿರಿ, ಮುಖ್ಯ ಬೆವರಿದ ನಂತರ.
ಮುಖಕ್ಕೆ ಹಾರ್ಶ್ ಸ್ಕ್ರಬ್ಸ್ ಬಳಕೆ ಬೇಡ.
ಎಂದೂ ಆ್ಯಕ್ನೆ ಮೊಡವೆ ಚಿವುಟದಿರಿ. ಇದರಿಂದ ಆ ಜಾಗದಲ್ಲಿ ಕಲೆ ಉಳಿಯುವುದಲ್ಲದೆ, ಇತರ ಭಾಗಗಳಿಗೂ ಸೋಂಕು ಹರಡಬಹುದು.
ಸದಾ ನಾನ್ ಕಾಮೆಡೊಜೆನಿಕ್ ಪ್ರಾಡಕ್ಟ್ಸ್ನ್ನೇ ಬಳಸಿಕೊಳ್ಳಿ. ಏಕೆಂದರೆ ಇವು ಪೋರ್ಸ್ ನ್ನು ಕ್ಲಾಗ್ ಆಗಲು ಬಿಡುವುದಿಲ್ಲ.
ನಿಮ್ಮ ಮೇಕಪ್ ಆ್ಯಕ್ನೆ, ಕಲೆಗುರುತನ್ನು ಮರೆಮಾಚುವಂಥದ್ದೇ ಇರಬಹುದು, ನೀವು ರಾತ್ರಿ ಮಲಗುವ ಮುನ್ನಾ ಇದನ್ನು ಕಳಚದಿದ್ದರೆ, ಇದು ಪೋರ್ಸ್ ನ್ನು ಕ್ಲಾಗ್ ಮಾಡಿ. ನಿಮ್ಮ ಮುಖದ ಸ್ಥಿತಿಯನ್ನು ಇನ್ನಷ್ಟು ಕೆಡಿಸಬಹುದು. ಆದ್ದರಿಂದ ನಿಮ್ಮ ಮೇಕಪ್ ನ್ನು ಬಯೋಡರ್ಮಾದ ಸೆನ್ಸಿಬಯೋ 2 ಮಿಸಲರ್ ವಾಟರ್ ಮೇಕಪ್ ರಿಮೂವರ್ ನಿಂದ ಕ್ಲೀನ್ ಮಾಡಿ, ಏಕೆಂದರೆ ಇದು ಮೈಲ್ಡ್ ಆಗಿರುವುದರ ಜೊತೆ ಸ್ಕಿನ್ ನ್ನು ಹೈಡ್ರೇಟ್ ಆಗಿರಿಸುತ್ತದೆ.
ಆ್ಯಕ್ನೆ ಆಗುವುದು ಏಕೆ?
ಯಾವ ವಯಸ್ಸಿನಲ್ಲಾದರೂ ಮುಖದಲ್ಲಿ ಆ್ಯಕ್ನೆ ಕಾಣಿಸಿಕೊಳ್ಳಬಹುದು. ಈ ಸಮಸ್ಯೆ ಇದೀಗ ಕೇವಲ ಟೀನೇಜರ್ಸ್, ಅಡಲ್ಟ್ಸ್ ಗೆ ಮಾತ್ರ ಸೀಮಿತವಲ್ಲ. ಮುಖದಲ್ಲಿ ಅತ್ಯಧಿಕ ಸೀಬಂ ಉತ್ಪನ್ನವಾಗ ತೊಡಗಿದರೆ, ಅಂದ್ರೆ ಆಯ್ಲಿ ಸ್ಕಿನ್ ನಮ್ಮ ರೋಮರಂಧ್ರಗಳನ್ನು ಕ್ಲೋಸ್ ಮಾಡಿ, ಈ ಆ್ಯಕ್ನೆ ಮೂಡಲು ಕಾರಣವಾಗುತ್ತದೆ.
ಇದೇ ತರಹ ಸ್ಟ್ರೆಸ್, ಕೊಳಕು ಸಹ ಆ್ಯಕ್ನೆಗೆ ಕಾರಣವಾಗಬಹುದು. ಮತ್ತೊಂದು ಗಮನಾರ್ಹ ವಿಷಯ ಅಂದ್ರೆ, ಬಹಳಷ್ಟು ಹೆಂಗಸರಲ್ಲಿ ಹಾರ್ಮೋನ್ಸ್ ಮಟ್ಟ ಬಿಗಡಾಯಿಸುವ ಕಾರಣ, ಅಂದ್ರೆ ದೇಹದಲ್ಲಿ ಈಸ್ಟ್ರೋಜನ್ ಮಟ್ಟದಲ್ಲಿ ಪರಿವರ್ತನೆ ಆಗುವುದರಿಂದ ಆ್ಯಕ್ನೆ ಮೂಡಬಹುದು. ಸಕಾಲಕ್ಕೆ ಇದಕ್ಕೆ ಚಿಕಿತ್ಸೆ ತೆಗೆದುಕೊಳ್ಳಬೇಕು, ಇಲ್ಲಿ ಹೇಳಿದಂಥ ಪ್ರಾಡಕ್ಟ್ಸ್ ಮಾತ್ರ ಬಳಸುತ್ತಾ, ಮನೆ ಮಟ್ಟಿಗೆ ಅದನ್ನು ನಿವಾರಿಸಿಕೊಳ್ಳಲು ಯತ್ನಿಸಿ. ಹಾಗೂ ತಗ್ಗದಿದ್ದರೆ, ಚರ್ಮ ತಜ್ಞರನ್ನು ಭೇಟಿ ಆಗಬೇಕು.