ಶರತ್ ಚಂದ್ರ

ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಸ ಕ್ರಿಯವಾಗಿರುವ ಶಿಲ್ಪಾ ಶ್ರೀನಿವಾಸ್ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಉಪೇಂದ್ರ,ಪ್ರೇಮ ರವೀನಾ ತಂಡನ್ ನಟಿಸಿರುವ ಉಪೇಂದ್ರ ಅವರೇ ನಿರ್ದೇಶಿಸಿದ ಬ್ಲಾಕ್ ಬಸ್ಟರ್ ಸಿನಿಮಾ ‘ಉಪೇಂದ್ರ’ ಚಿತ್ರದಿಂದ ಹಿಡಿದು, ಉಪ್ಪಿ ಅವರೇ ನಟಿಸಿರುವ ಕಲ್ಪನಾ 2, ಶಿವಣ್ಣ ಅವರ ವಾಲ್ಮೀಕಿ, ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ವಿಷ್ಣುವರ್ಧನ್ ನಟಿಸಿರುವ ‘ಪರ್ವ ‘ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿ ಕನ್ನಡ ಚಿತ್ರರಂಗ ಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. 800ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿ ಅನುಭವ ಇರುವ ಶಿಲ್ಪಾ ಶ್ರೀನಿವಾಸ್ ಈಗ ಅವರದೇ ಹೆಸರಿರುವ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸುವುದರ ಮೂಲಕ ಬಣ್ಣ ಹಚ್ಚಲಿದ್ದಾರೆ.

ಸಿನಿಮಾ ರಂಗವನ್ನು ತನ್ನ ತಾಯಿಯಂತೆ ಪೂಜಿಸುವ, ಕಲಾಮಾತೆ ಎಂದು ಕರೆದು ಆರಾಧಿಸುವ ಒಂದಷ್ಟು ಜನ ನಮ್ಮಲ್ಲಿದ್ದರೆ, ಇನ್ನೊಂದಷ್ಟು ಜನ

ಶೋಕಿಗಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಚಿತ್ರರಂಗದ ಹೆಸರು ಹಾಳು ಮಾಡುತ್ತಿದ್ದಾರೆ. ಇದನ್ನು ಮಟ್ಟ ಹಾಕಲು ಕಲಾಮಾತೆಯ ನಿಜವಾದ ಆರಾದಕ ಏನೆಲ್ಲಾ ಮಾಡುತ್ತಾನೆ ಎಂಬ ಕಥಾ ಹಂದರವನ್ನು ಒಳಗೊಂಡ ಸ್ನೇಹಾಲಯಂ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ‘ಶಿಲ್ಪಾ ಶ್ರೀನಿವಾಸ್ “ಎಂಬ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಜುಲೈ 14 ರಂದು ಸೆಟ್ಟೇರಲಿದೆ.

1000596565

ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿರುವ ಕನ್ನಡ ಚಿತ್ರ ‘ಮುಗಿಲ ಮಲ್ಲಿಗೆ ‘ ಚಿತ್ರದ ನಿರ್ದೇಶಕ ಹಾಗೂ ತೆಲುಗಿನಲ್ಲಿ ರುದ್ರಾಕ್ಷಿಪುರಂ, ಆಗಸ್ಟ್ 6 ರಾತ್ರಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಅನುಭವ ಇರುವ ಆರ್. ಕೆ. ಗಾಂಧಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಚಿತ್ರದ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಾಯಕಿಯಾಗಿ ಸ್ವಾತಿ ಲಿಂಗರಾಜ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ಒಂದಷ್ಟು ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸ್ವಾತಿ ಒಂದು ವಿಭಿನ್ನ ಪಾತ್ರ ದಲ್ಲಿ ನಟಿಸುತ್ತಿದ್ದಾರೆ.

1000596605

ಉಳಿದಂತೆ ಕಿಶೋರ್ ಕಾಸರಗೋಡು, ಪ್ರಿಯಾಂಕಾ, ಶೋಭರಾಜ್, ಸಿ. ಟಿ. ಜಯರಾಮ್ ,ಹೊಸ ಕೋಟೆ ಶಿವರಾಮ್,ಲೋಕೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಆರ್. ಕೆ ಗಾಂಧಿ ಅವರ ಈ ಹಿಂದಿನ ಚಿತ್ರಗಳಲ್ಲಿ ನಟಿಸಿ, ಬೆಂಬಲವಾಗಿ ನಿಂತಿದ್ದ ಡಾ. ಥ್ರಿಲ್ಲರ್ ಮಂಜು, ಈ ಚಿತ್ರದಲ್ಲಿ ಸಾಹಸ ಸಂಯೋಜನೆ ಮಾಡಲಿದ್ದಾರೆ.

1000596582

ಇತ್ತೀಚಿನ ದಿನಗಳಲ್ಲಿ ಗಾಯಕನಾಗಿ,ಚಿತ್ರ ಸಾಹಿತಿಯಾಗಿ ಹಾಗೂ ಸಂಗೀತ ನಿರ್ದೇಶಕನಾಗಿ ಕೂಡ ಬೇಡಿಕೆಯಲ್ಲಿರುವ ಯುವ ಪ್ರತಿಭೆ ಅನಿರುದ್ದ್ ಶಾಸ್ತ್ರಿ ಚಿತ್ರಕ್ಕೆ ಸಂಗೀತ ನೀಡಿದ್ದು ಅನಿರುದ್ದ್ ಮತ್ತು ಪ್ರತಾಪ್ ಭಟ್ ಹಾಡುಗಳನ್ನು ಬರೆದಿದ್ದಾರೆ.

ಪ್ರಮೋದ್ ಭಾರತೀಯ ಛಾಯಾಗ್ರಹಣ ,ವಿನಯ್ ಜೆ. ಆಲೂರ್ ಸಂಕಲನ,ಮೋಹನ್ ಕುಮಾರ್ ಪ್ರಸಾದನ ಮಲ್ಲಿಕಾರ್ಜುನ ಅವರ ಕಲಾ ನಿರ್ದೇಶನ, ಕಪಿಲ್.ಎಂ. ಶ್ರೀನಿವಾಸ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ