ಸ್ಯಾಂಡಲ್​ವುಡ್​ ನಟ ಶ್ರೀನಗರ ಕಿಟ್ಟಿಇದೇ ಮೊದಲ ಬಾರಿಗೆ ಡಿಫರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದ್ದು, ಶ್ರೀನಗರ ಕಿಟ್ಟಿ  ಮುಂದಿನ ಸಿನಿಮಾಗೆ ಫ್ಯಾನ್ಸ್ ಬಹಳ ಎಕ್ಸೈಟ್​ ಆಗಿದ್ದಾರೆ.

ʻಸಂಜು ವೆಡ್ಸ್‌ ಗೀತಾ 2’ ಸಿನಿಮಾ ಇತ್ತೀಚೆಗೆ ಯಶಸ್ವಿಯಾಗಿದ್ದು, ಶ್ರೀನಗರ ಕಿಟ್ಟಿ ತಮ್ಮ ಮುಂದಿನ ʻವೇಷಗಳುʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

ಶ್ರೀನಗರ ಕಿಟ್ಟಿಯವರ ಹುಟ್ಟುಹಬ್ಬದಂದು ʻವೇಷಗಳುʼ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಗ್ರೀನ್‌ ಟ್ರೀ ಸ್ಟುಡಿಯೋಸ್‌ನಿಂದ ರಿಲೀಸ್‌ ಆಗಿರುವ ಪೋಸ್ಟರ್‌ನಲ್ಲಿ ದ್ವಿಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರೆ. ರವಿ ಬೆಳಗೆರೆ ಅವರು ಜೋಗತಿಯರ ಜೀವನದ ಆಗು ಹೋಗುಗಳ ಬಗ್ಗೆ ಬರೆದಿರುವ ವೇಷಗಳು ಎಂಬ ಸಣ್ಣ ಕಥೆಯನ್ನಾಧರಿಸಿ ಅದೇ ಹೆಸರಿನಲ್ಲಿ ಈ ಸಿನಿಮಾ ತಯಾರಾಗುತ್ತಿದೆ.

ಭಾವನಾ ಬೆಳಗೆರೆ ಹಾಗೂ ಶ್ರೀನಗರ ಕಿಟ್ಟಿ ಅರ್ಪಿಸುವ ‘ವೇಷಗಳು’ ಸಿನಿಮಾದ ಟೈಟಲ್ ಟೀಸರ್ ರಿಲೀಸ್​ ಮಾಡಲಾಗಿದೆ.

ರಿಲೀಸ್​ ಆಗಿರುವ ಟೀಸರ್​ನಲ್ಲಿ ನಟ ಶ್ರೀನಗರ ಕಿಟ್ಟಿ ಅವರು ಬಸಪ್ಪ ಹಾಗೂ ಬಸಮ್ಮ ಜೋಗತಿಯಾಗಿ ಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರವಿ ಬೆಳಗೆರೆ ಅವರ ಒಟ್ಟಾರೆ ಕಥೆಗಳು ಕೃತಿಯಲ್ಲಿರುವ ಜೋಗತಿಯರ ಜೀವನದ ಸತ್ಯ, ಸುಖ ದುಃಖಗಳ ಬಗೆಗಿನ “ವೇಷಗಳು” ಎಂಬ ಸಣ್ಣ ಕಥೆ ಸಿನಿಮಾ ರೂಪದಲ್ಲಿ ಬರುತ್ತಿದೆ.

ಶ್ರೀನಗರ ಕಿಟ್ಟಿ ಈ ಸಿನಿಮಾದಲ್ಲಿ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕಲಾತ್ಮಕ ಚಿತ್ರದಂತೆ ಕಂಡರೂ, ಕಮರ್ಷಿಯಲ್ ಅಂಶಗಳ ಸೇರ್ಪಡೆಯಿಂದ ಮನರಂಜೆಯ ದೃಷ್ಟಿಯಲ್ಲೂ ಗಮನ ಸೆಳೆಯುತ್ತದೆ ಎಂದಿದ್ದಾರೆ ನಿರ್ದೇಶಕ ಕಿಶನ್​ ರಾವ್ ದಳವಿ.

ಈ ಚಿತ್ತದಲ್ಲಿ ಜೋಗತಿಯರ ಬಗ್ಗೆ ಹಾಗೂ ಅವರ ಜೀವನಶೈಲಿಯ ಬಗ್ಗೆ ಹೇಳಲಾಗುತ್ತದೆ. ಶ್ರೀನಗರ ಕಿಟ್ಟಿ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಅವರನ್ನು ಭೇಟಿಯಾಗಿ ಜೋಗತಿಯರ ನಡೆನುಡಿಯ ಬಗ್ಗೆ ಸಾಕಷ್ಟು ಮಾಹಿತಿ ಪಡೆದು ತಮ್ಮ ಪಾತ್ರಕ್ಕೆ ಸಿದ್ಧತೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಬಸಪ್ಪ ಪಾತ್ರವೇ ಬಹುತೇಕ ಆವರಿಸಿಕೊಂಡಿದ್ದು, ಇದರಂತೆ ಇತರ ಎಲ್ಲಾ ವೇಷಗಳು ಸರ್​ಪ್ರೈಸ್ ನೀಡಲಿವೆ ಎಂದಿದ್ದಾರೆ ನಿರ್ದೇಶಕರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ