ಮಳೆಗಾಲದ ಸಮಯದಲ್ಲೂ ನೀವು ಮತ್ತು ನಿಮ್ಮ ಕುಟುಂಬ ಖಂಡಿತಾ ಸ್ಟ್ರಾಂಗ್ಆಗಿರಬಲ್ಲಿರಿ. ಇದಕ್ಕಾಗಿ ಇಮ್ಯೂನಿಟಿ ಹೆಚ್ಚಿಸಿಕೊಳ್ಳುವುದು ಹೇಗೆ…..?

ಮಳೆಗಾಲ ಬಂತೆಂದ ಮೇಲೆ ಉರಿ ಬಿಸಿಲಿನ ಬೇಗೆ ಎಷ್ಟೋ ತಗ್ಗುತ್ತದೆ. ಈ ಥಂಡಿ, ತುಂತುರು ಹನಿಗಳ ನಡುವೆ ಫ್ರೆಂಡ್ಸ್ ಜೊತೆ ಜಾಲಿ ಮಾಡುತ್ತಾ ಇದ್ದುಬಿಡೋಣ ಎನಿಸುತ್ತದೆ. ಈ ಸೀಸನ್ನಿನ ಆಹಾರ ಕ್ರಮ ಮಜವಾಗಿರುತ್ತದೆ. ಈ ಸೀಸನ್‌ ನಮ್ಮ ಮನಸ್ಸಿಗೆ ಬಹಳ ಖುಷಿ ನೀಡುವಂತೆ, ಈ ಸೀಸನ್‌ ನಲ್ಲಿ ನಮ್ಮ ಇಮ್ಯೂನಿಟಿಯನ್ನು ಬೂಸ್ಟ್ ಗೊಳಿಸುವ ಅಗತ್ಯವಿದೆ. ಏಕೆಂದರೆ ಮಳೆಗಾಲದಲ್ಲಿ ಸೋಂಕು, ಫ್ರೂ, ವೈರಲ್, ಫೀವರ್‌ ಓಡೋಡಿ ಬರುತ್ತವೆ.

ಹೀಗಾಗಿ ಸ್ಟ್ರಾಂಗ್‌ ಇಮ್ಯೂನಿಟಿಯುಳ್ಳ ವ್ಯಕ್ತಿ ಮಾತ್ರವೇ ಹೆಲ್ದಿ ಲೈಫ್‌ ನಡೆಸಲು ಸಾಧ್ಯ, ಆಗ ಮಾತ್ರ ಇಂಥ ರೋಗಗಳಿಂದ ತಪ್ಪಿಸಿಕೊಳ್ಳಬಹುದು.

ಇಮ್ಯೂನಿಟಿ

ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಒದಗಿಸಿ ಕೊಡುವುದೇ ಇಮ್ಯೂನಿಟಿ. ಇದು ದೇಹದ ಆಂತರಿಕ ಸುರಕ್ಷತಾ ಕ್ರಮ ಎಂದರೂ ಸರಿ. ಇದು ಹೊರಗಿನ ಅಂಶಗಳು ನಿಮ್ಮ ದೇಹಕ್ಕೆ ರೋಗ ತರದಂತೆ ಅಡ್ಡಿಪಡಿಸುತ್ತದೆ, ನಮ್ಮ ದೇಹದೊಳಗಿನ ಸೈನಿಕರಂತೆ ನಮ್ಮನ್ನು ಕಾಪಾಡುತ್ತದೆ. ಯಾವುದೇ ವೈರಸ್‌, ಬ್ಯಾಕ್ಟೀರಿಯಾ ನಮ್ಮ ದೇಹವನ್ನು ಆಕ್ರಮಿಸಿದಾಗ, ಈ ಸಿಸ್ಟಂ ಅದರ ವಿರುದ್ಧ ಹೋರಾಡಿ ಹಿಮ್ಮೆಟ್ಟಿಸುತ್ತದೆ. ಈ ಹೋರಾಟ ಸುಲಭವಲ್ಲ, ಏಕೆಂದರೆ ಇದರಲ್ಲಿ ಅನೇಕ ಬಗೆಯ ಜೀವಕೋಶಗಳು ಸಕ್ರಿಯವಾಗಿ ಕಾರ್ಯ ನಿರತ ಆಗಬೇಕು, ಹಾಗಾದಾಗ ಮಾತ್ರ ನಮ್ಮ ಆರೋಗ್ಯ ಉಳಿಯುತ್ತದೆ.ಇಮ್ಯೂನಿಟಿಯಲ್ಲೂ ಹಲವು ಬಗೆಗಳಿವೆ…. ಆ್ಯಕ್ಟಿವ್ ಇಮ್ಯೂನಿಟಿ ಇದರಲ್ಲಿ ಪ್ರಮುಖ. ನಾವು ಬ್ಯಾಕ್ಟೀರಿಯಾ, ವೈರಸ್‌ಗಳ ಸಂಪರ್ಕಕ್ಕೆ ಬಂದ ತಕ್ಷಣ ಇದು ನಮ್ಮ ದೇಹದಲ್ಲಿ ಸಕ್ರಿಯಗೊಳ್ಳುತ್ತದೆ. ಹೀಗಾಗಿ ನಮಗೆ ಮೊದಲೇ ದೊರೆತ ಆ್ಯಂಟಿಬಾಡೀಸ್‌ಇಮ್ಯೂನ್‌ ಸೆಲ್ಸ್, ಈ ಹೊರಗಿನ ಕೀಟಾಣುಗಳನ್ನು ನಾಶ ಮಾಡುತ್ತವೆ.

ಇದರ ಇನ್ನೊಂದು ಬಗೆ ಎಂದರೆ ಪ್ಯಾಸಿವ್ ‌ಇಮ್ಯೂನಿಟಿ. ಇಲ್ಲಿ ವೈರಸ್‌ ಇತ್ಯಾದಿಗಳಿಂದ ನಮ್ಮನ್ನು ಸುರಕ್ಷಿತಗೊಳಿಸಲು ಹೊರಗಿನ ಸಹಾಯದಿಂದ ಆ್ಯಂಟಿಬಾಡೀಸ್‌ಒದಗಿಸುತ್ತವೆ. ಆದರೆ ನಮ್ಮ ದೇಹ ಹೊರಗಿನ ಅಂಶಗಳೊಂದಿಗೆ ಹೋರಾಡಬೇಕೆಂದರೆ ಈ ಆಂತರಿಕ ಭಾಗ ಗಟ್ಟಿ ಇರಬೇಕು. ಇದಕ್ಕಾಗಿ ನಾವು ಸದಾ ಪೌಷ್ಟಿಕ ಆಹಾರ, ಆರೋಗ್ಯಕರ ಅಭ್ಯಾಸಗಳಾದ ವ್ಯಾಯಾಮ, ಯೋಗ, ಜಾಗಿಂಗ್‌, ಜಿಮ್ ಪ್ರಾಕ್ಟೀಸ್‌ ಇತ್ಯಾದಿ ಅಳವಡಿಸಿಕೊಂಡಿರಬೇಕು. ಅದರಲ್ಲೂ ಈ ಮಳೆಗಾಲಕ್ಕೆ ಇದು ಅತ್ಯಗತ್ಯ!

ಈಟ್ರೈಟ್ಫುಡ್

ದೇಹದ ಹಸಿವು ತಗ್ಗಿಸಲು ಎಲ್ಲರೂ ಹೊತ್ತು ಹೊತ್ತಿಗೆ ಊಟತಿಂಡಿ ಮಾಡುತ್ತಿರುತ್ತಾರೆ. ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದರಿಂದ ನಮ್ಮ ದೇಹದ ಇಮ್ಯೂನಿಟಿ ಸಿಸ್ಟಂ ಬೂಸ್ಟ್ ಆಗಲಾರದು! ಹೀಗಾಗಿ ಸೂಕ್ತ ಪೌಷ್ಟಿಕ ಆಹಾರ ಮಾತ್ರ ಸೇವಿಸಬೇಕು. ಆಗ ಮಾತ್ರ ದೇಹಕ್ಕೆ ಅತ್ಯಗತ್ಯವಾದ ನ್ಯೂಟ್ರಿಶನ್ನಿಗೆ ಸಂಬಂಧಿಸಿದ ಆಹಾರ ನಮ್ಮ ರಕ್ತದಲ್ಲಿ ವಿಲೀನಗೊಂಡು, ಇಂಥ ಇಮ್ಯೂನಿಟಿ ಸಿಸ್ಟಂ ಚುರುಕಾಗಲು ಸಾಧ್ಯ. ಹೀಗಾಗಿ ಈ ಕೆಳಗಿನ ಅಂಶಗಳನ್ನು ನಿಮ್ಮ ಆಹಾರದಲ್ಲಿ ಅಗತ್ಯ ಅಳವಡಿಸಿಕೊಂಡು ಈ ಮಳೆಗಾಲದಲ್ಲಿ ನಿಮ್ಮ ಇಮ್ಯೂನಿಟಿ ಹೆಚ್ಚಿಸಿಕೊಳ್ಳಿ. ಇದು ನಿಮ್ಮನ್ನು ಆರೋಗ್ಯಕರವಾಗಿರಿಸಿ, ಇಡೀ ದಿನ ಚಟುವಟಿಕೆಯಿಂದ, ಲವಲವಿಕೆ ಗಳಿಸಬಹುದು.

ವಿಟಮಿನ್ಸಿಯ ರಿಚ್ಫುಡ್ಸ್

ನೀವು ನಿಮ್ಮ ಇಮ್ಯೂನಿಟಿ ಹೆಚ್ಚಿಸಿಕೊಳ್ಳಬೇಕೇ? ಮುಖ್ಯ ಈ ಮಳೆಗಾಲದಲ್ಲಿ ನಿಮ್ಮ ಆಹಾರದಲ್ಲಿ ವಿಟಮಿನ್‌ ಸಿಯ ರಿಚ್‌ ಫುಡ್ಸ್ ಅತ್ಯಧಿಕ ಇರಲಿ. ದಾಳಿಂಬೆ, ಕಿತ್ತಳೆಹಣ್ಣು, ಬಾಳೆಹಣ್ಣು, ಸೇಬು, ದ್ರಾಕ್ಷಿ, ಕಿವೀ ಫ್ರೂಟ್ಸ್, ಬ್ರೋಕ್ಲಿ, ಯೆಲ್ಲೋ ಬೆಲ್ ‌ಪೆಪರ್ಸ್‌, ಟೊಮೇಟೊ, ಪರಂಗಿಹಣ್ಣು, ಹಸಿರು ಸೊಪ್ಪು, ತಾಜಾ ಸಲಾಡ್‌ ಇತ್ಯಾದಿ ಧಾರಾಳ ಸೇವಿಸಿ. ಏಕೆಂದರೆ ಇವುಗಳಲ್ಲಿ ಪೌಷ್ಟಿಕಾಂಶ ತುಂಬಿರುತ್ತವೆ, ಜೊತೆಗೆ ಆ್ಯಂಟಿ ಆಕ್ಸಿಡೆಂಟ್ಸ್ ಸಹ! ಇವು ಬ್ಯಾಕ್ಟೀರಿಯಾ, ವೈರಸ್‌ ಗಳ ವಿರುದ್ಧ ಹೋರಾಡಲು ನೈಸರ್ಗಿಕ ಶಕ್ತಿ ತುಂಬುತ್ತವೆ, ಆಂತರಿಕವಾಗಿ ನಿಮ್ಮನ್ನು ಸದೃಢಗೊಳಿಸುತ್ತವೆ.

ಮಳೆಗಾಲದ ಮಾಮೂಲಿ ಶತ್ರುಗಳಾದ ನೆಗಡಿ, ಶೀತ, ಫ್ಲೂ ಜ್ವರ ಇತ್ಯಾದಿಗಳಿಂದ ಸುಲಭವಾಗಿ ಪಾರಾಗಬಹುದು. ನಮ್ಮ ದೇಹ ತಾನೇ ವಿಟಮಿನ್‌ ಸಿ ತಯಾರಿಸದು, ಹೀಗಾಗಿ ಆಹಾರ ಸಪ್ಲಿಮೆಂಟ್ಸ್ ರೂಪದಲ್ಲಿ ಇವನ್ನು ಸೇವಿಸುತ್ತಿರಬೇಕು.

ಗುಡ್ಇನ್ಟೇಕ್ಆಫ್ಪ್ರೋಟೀನ್

ಹೊರಗಿನ ಘಾತಕ ಘಟಕಗಳನ್ನಂತೂ ನಾವು ತಡೆಯಲಾಗದು, ಆದರೆ ನಿಮ್ಮ ಆಂತರಿಕ ದೇಹದಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ಎಷ್ಟೋ ಕಂಟ್ರೋಲ್ ಮಾಡಬಹುದು, ಇದರಿಂದ ನಿಮ್ಮ ಇಮ್ಯೂನಿಟಿ ಎಷ್ಟೋ ಪಟ್ಟು ಬೂಸ್ಟ್ ಆಗುತ್ತದೆ. ಇದರ ಹೆಚ್ಚಳಕ್ಕಾಗಿ ನೀವು ವಿಟಮಿನ್‌, ಸಿ, ಡಿ, ಬಿ‌, ‌ಇತ್ಯಾದಿ ಅಂಶಗಳನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಬೇಕು. ಒಬ್ಬ ಸರಾಸರಿ ವಯಸ್ಕ ವ್ಯಕ್ತಿಗೆ ಪ್ರತಿದಿನ ತನ್ನ ದೇಹ ತೂಕದ ಪ್ರಕಾರ, ಪ್ರತಿ ಕಿಲೋಗೆ 1 ಗ್ರಾಂ ಪ್ರೋಟೀನ್‌ ಸೇವಿಸಬೇಕು. ನೀವು 60 ಕಿಲೋ ತೂಗಿದರೆ, ನೀವು ಪ್ರತಿದಿನ 60 ಗ್ರಾಂ ಪ್ರೋಟೀನ್‌ ಸೇವಿಸಬೇಕು.

ಇದಕ್ಕಾಗಿ ನೀವು ನಿಮ್ಮ ಆಹಾರದಲ್ಲಿ ಹೆಸರುಕಾಳು, ಬೇಳೆ, ಮೊಟ್ಟೆ, ಸೋಯಾ, ಪನೀರ್‌, ಮೊಳಕೆಕಾಳು, ರಾಗಿ, ಓಟ್ಸ್, ಡ್ರೈಫ್ರೂಟ್ಸ್, ಹಾಲಿನ ಪದಾರ್ಥ ಇತ್ಯಾದಿ ಸೇವಿಸಬೇಕು. ಇದರಿಂದ ನೀವು ನಿಮ್ಮನ್ನು ಫಿಟ್‌ ಆಗಿ ಇಟ್ಟುಕೊಳ್ಳುವುದಲ್ಲದೆ, ನಿಮ್ಮ ಇಮ್ಯೂನಿಟಿ ಬೂಸ್ಟ್ಗೊಳಿಸಿ.

ಮಿನರಲ್ಸ್ ಸಹ ಅತ್ಯಗತ್ಯ

ನಿಮ್ಮ ಉತ್ತಮ ಆರೋಗ್ಯಕ್ಕಾಗಿ ವಿಟಮಿನ್ಸ್, ಪ್ರೋಟೀನ್‌ ಜೊತೆ ಮಿನರಲ್ಸ್ ಸಹ ಅಗತ್ಯ ಸೇವಿಸಬೇಕು. ಇದು ನಮ್ಮ ಮೂಳೆಗಳನ್ನು ಸಶಕ್ತಗೊಳಿಸಿ, ಮಾಂಸಖಂಡಗಳನ್ನು ರಿಪೇರಿ ಮಾಡಿ ಸದಾ ಸುಸ್ಥಿತಿಯಲ್ಲಿಡುತ್ತದೆ. ನಮ್ಮ ದೇಹದಲ್ಲಿ ಇವುಗಳ ಕೊರತೆ ಆದರೆ, ಹೊಸ ಜೀವಕೋಶಗಳು ಹುಟ್ಟಲಾರವು. ಇದರಿಂದ ನಮ್ಮ ಇಮ್ಯೂನಿಟಿ ತಂತಾನೇ ತಗ್ಗಿಹೋಗುತ್ತದೆ, ಜೊತೆಗೆ ನಮಗೆ ಬೇಗ ಸೋಂಕು ತಗುಲುವ ಸಾಧ್ಯತೆಗಳಿವೆ. ಹೀಗಾಗಿ ಈ ಮಳೆಗಾಲದಲ್ಲಿ ನಮ್ಮ ಇಮ್ಯೂನಿಟಿ ಹೆಚ್ಚಿಸಿಕೊಳ್ಳಲು, ನಮ್ಮ ಆಹಾರದಲ್ಲಿ ಅಗತ್ಯವಾಗಿ ಮಿನರಲ್ಸ್ ಸೇರಿಸಿಕೊಳ್ಳಬೇಕು.

ಇದಕ್ಕಾಗಿ ನೀವು ಕಬ್ಬಿಣಾಂಶ, ಸತು, ಮೆಗ್ನಿಶಿಯಂ, ಪೊಟ್ಯಾಶಿಯಂ, ಸೆಲೆನಿಯಂ ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಳ್ಳಿ. ಇದರಿಂದ ನಮ್ಮ ಮಾಂಸಖಂಡಗಳು ಸಶಕ್ತಗೊಂಡು, ಬುದ್ಧಿಶಕ್ತಿ ಚುರುಕಾಗಲು ಸಹಕಾರಿ. ಹೊಸ ಜೀವಕೋಶಗಳ ಅಭಿವೃದ್ಧಿಗೆ ಪೂರಕ.

ಸದಾ ಹೈಡ್ರೇಟೆಡ್ಆಗಿರಿ

ಸೀಸನ್‌ ಯಾವುದೇ ಇರಲಿ, ನಮ್ಮನ್ನು ನಾವು ಎಲ್ಲಾ ಋತುಗಳಲ್ಲೂ ಸದಾ ಹೈಡ್ರೇಟೆಡ್‌ ಆಗಿರಿಸಿಕೊಳ್ಳಬೇಕು. ಅದರಲ್ಲೂ ಈ ಮಾನ್‌ ಸೂನ್‌ ನಲ್ಲಿ, ಹೊರಗಿನ ಥಂಡಿ ವಾತಾವರಣದಿಂದ ನೀರು ಕುಡಿಯಬೇಕು ಎನಿಸದಿದ್ದರೂ, `ನೀರು’ ನಮ್ಮ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ದೇಹದ ಪ್ರತಿ ಜೀವಕೋಶಕ್ಕೂ ಧಾರಾಳ ಆಮ್ಲಜನಕ ತಲುಪಿಸಲು ಇದು ಬೇಕೇಬೇಕು. ಇದರಿಂದಾಗಿ ದೇಹ ನೈಸರ್ಗಿಕವಾಗಿ ಹೆಚ್ಚು ಸಕ್ರಿಯಗೊಳ್ಳುತ್ತದೆ.

ಇದರಿಂದಾಗಿ ದೇಹದ ಒಳಗಿನ ವಿಷಾಣುಗಳು (ಟಾಕ್ಸಿನ್‌) ಸುಲಭವಾಗಿ ಹೊರಬಂದು, ಆಂತರಿಕವಾಗಿ ದೇಹ ಶುದ್ಧಗೊಂಡು, ಇಮ್ಯೂನಿಟಿಗೆ ಇದು ಉತ್ತಮ ತಳಹದಿ ಹಾಕಿಕೊಡುತ್ತದೆ. ಹಾಗಾಗಿ ನಿಮ್ಮ ಇಮ್ಯೂನಿಟಿಗೆ ಯಾವುದೇ ಕುಪ್ರಭಾವ ಆಗುವುದಿಲ್ಲ.

ಈ ಸಿಸ್ಟಂ ಸಕ್ರಿಯಾಗಿರಲು, ನಮ್ಮ ರಕ್ತ ಸಂಚಾರ ಚುರುಕಾಗಿರಬೇಕು. ಈ ರಕ್ತ ಸಂಚಾರ ಸಲೀಸಾಗಿ ಪ್ರವಹಿಸಲು ನೀರೇ ಮೂಲಾಧಾರ. ಹೀಗಾಗಿ ಸಕಾಲಕ್ಕೆ ನಾವು ಧಾರಾಳ ನೀರು ಕುಡಿಯದಿದ್ದರೆ, ಪ್ರತಿ ಆರ್ಗನ್‌ ಸಿಸ್ಟಂಗೆ ನ್ಯೂಟ್ರಿಯೆಂಟ್‌ ಸುಲಭವಾಗಿ ತಲುಪದು. ಹೀಗಾಗಿ ನಿಮ್ಮನ್ನು ನೀವು ಸದಾ ಹೈಡ್ರೇಟೆಡ್‌ ಆಗಿರಿಸಿಕೊಳ್ಳಿ. ದೇಹವನ್ನು ಡೀಟಾಕ್ಸ್ ಗೊಳಿಸಲು, ಅಗತ್ಯವಾಗಿ ಪ್ರತಿದಿನ 9-10 ಗ್ಲಾಸ್‌ ನೀರು ಕುಡಿಯುತ್ತಿರಿ. ಮಾಮೂಲಿ ನೀರಿನ ಜೊತೆ ನಿಂಬೆ ಪಾನಕ, ಎಳನೀರು, ನೀರು ಮಜ್ಜಿಗೆ, ಹಣ್ಣಿನ ರಸ ಇತ್ಯಾದಿಗಳನ್ನೂ ಧಾರಾಳ ಸೇವಿಸಿ.

ಉತ್ತಮ ನಿದ್ದೆ

ಎಷ್ಟೋ ಜನ ತಾವು 10-12 ಗಂಟೆ ಕಾಲ ನಿದ್ರಿಸಿದ್ದರೂ, ಮಾರನೇ ದಿನ ಫ್ರೆಶ್‌ ಆಗಿ ಅನಿಸುತ್ತಿಲ್ಲ, ಯಾಕೋ ಸದಾ ಮೈಕೈ ನೋವು, ಸುಸ್ತು ಸಂಕಟ ಅಂತಿರುತ್ತಾರೆ. ಅಸಲಿಗೆ ಉತ್ತಮ ಗುಣಮಟ್ಟದ 5 ಗಂಟೆಗಳ ನಿದ್ದೆ ಎಷ್ಟೋ ಸಹಕಾರಿ. ಯಾರು ಈ ರೀತಿ ಉತ್ತಮ ಗುಣಮಟ್ಟದ ನಿದ್ದೆ ಹೊಂದಿಲ್ಲವೋ, ಅಂಥವರು ಬೇಗ ಬೇಗ ರೋಗಕ್ಕೆ ತುತ್ತಾಗುತ್ತಾರೆ. ಇಂಥವರಿಗೆ ಕೊರೋನಾ ವೇರಸ್‌ ಕಾಟ ಕಟ್ಟಿಟ್ಟ ಬುತ್ತಿ!

ನಿಮ್ಮನ್ನು ನೀವು ರೀಚಾರ್ಜ್‌ಇಮ್ಯೂನ್‌ ಗೊಳಿಸಲು, ಪ್ರತಿದಿನ ಎಲ್ಲಾ ಚಿಂತೆ ಮರೆತು 7-8 ಗಂಟೆ ಕಾಲ ನಿದ್ದೆ ಮಾಡಿ, ಇದು ನಮ್ಮ ದೇಹಕ್ಕೆ ರಕ್ಷಾ ನೆಟ್‌ ವರ್ಕ್‌ ಆಗಿದ್ದು, ಯಾವ ಸೋಂಕೂ ಕಾಡದಂತೆ ರಕ್ಷಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಚಿಂತಾಮುಕ್ತರಾಗಲು ವ್ಯಾಯಾಮ

ಶಿಸ್ತುಬದ್ಧ ವ್ಯಾಯಾಮ ನಮ್ಮನ್ನು ಕಾಡುವ ಚಿಂತೆಗಳಿಂದ ದೂರ ಇರಿಸಿ, ಮಾಂಸಖಂಡ, ಮೂಳೆಗಳನ್ನು ಸಶಕ್ತಗೊಳಿಸಲು ಬಹಳ ನೆರವಾಗುತ್ತದೆ, ಸಹಜವಾಗಿ ಇಮ್ಯೂನಿಟಿ ಸುಧಾರಿಸುತ್ತದೆ. ಇದರಿಂದ ನಮ್ಮ ರಕ್ತ ಸಂಚಾರ ಸುಲಲಿತಗೊಂಡು, ದೇಹ ತೂಕ ನಿಯಂತ್ರಣದಲ್ಲಿಡಲು ಬಹಳ ಪ್ರಯೋಜನಕಾರಿ. ಇದರಿಂದಾಗಿ ಸುಖವಾದ ನಿದ್ದೆ ಬರುತ್ತದೆ. ಹೀಗಾಗಿ ಕನಿಷ್ಠ  30-40 ನಿಮಿಷ ಶಿಸ್ತಾಗಿ ವ್ಯಾಯಾಮ ಮಾಡಿ. ಜಾಗಿಂಗ್‌, ವಾಕಿಂಗ್‌, ಸ್ಕಿಪ್ಪಿಂಗ್‌, ಜಿಮ್  ವರ್ಕ್‌ ಔಟ್‌, ಯೋಗಾಭ್ಯಾಸ ಇತ್ಯಾದಿಗಳ ಲಾಭ ಪಡೆದುಕೊಳ್ಳಿ.

ಪಾರ್ವತಿ ಭಟ್

ಒಂದಿಷ್ಟು ಕಿವಿಮಾತು

ಶವರ್ತಪ್ಪಿಸದಿರಿ : ಮಳೆಯಲ್ಲಿ ನೆಂದು ಬಂದ ಮೇಲೆ, ತಪ್ಪದೆ ಶವರ್‌ ನಡಿ ನಿಂತು ಸ್ನಾನ ಮಾಡಿ. ಮಳೆ ನೀರಲ್ಲಿ ರಾಶಿ ರಾಶಿ ಬ್ಯಾಕ್ಟೀರಿಯಾ ಇದ್ದು, ಉಗುರು, ಬಾಯಿ, ಮೂಗಿನ ಮೂಲಕ ನಮ್ಮ ದೇಹ ಸೇರುತ್ತವೆ, ರೋಗಗಳು ಆಕ್ರಮಿಸುತ್ತವೆ. ಮಳೆ ನೀರು ತಲೆ ಮೇಲೆ ಬಿದ್ದಷ್ಟೂ ದೇಹದ ಉಷ್ಣತೆ ತಗ್ಗುತ್ತದೆ, ಇದರಿಂದ ರೋಗ ತಪ್ಪದು. ಹೀಗಾಗಿ ಶವರ್‌ ನ ಬೆಚ್ಚಗಿನ ಸ್ನಾನ, ದೇಹದ ಉಷ್ಣತೆ ಸುಧಾರಿಸಿ, ರಿಲ್ಯಾಕ್ಸ್ ಆಗಲು ನೆರವಾಗುತ್ತದೆ. ಜೊತೆಗೆ ಆ್ಯಂಟಿಸೆಪ್ಟಿಕ್‌ ಸೋಪ್‌ ಬಳಸಲು ಮರೆಯದಿರಿ.

ಹಣ್ಣು ತರಕಾರಿ ಶುಚಿಗೊಳಿಸಿ ಸೇವಿಸಿ : ಯಾವ ಹಣ್ಣು ತರಕಾರಿಯೇ ಇರಲಿ, ಅವನ್ನು ಸೂಕ್ತವಾಗಿ ಹರಿವ ನೀರಡಿ ಶುದ್ಧಗೊಳಿಸದೆ ಬಳಸಿರಿ. ಇದಕ್ಕಾಗಿ ಈಗೆಲ್ಲ ರೆಡಿಮೇಡ್‌ ವೆಜ್‌ ವಾಶ್‌ ಸಲ್ಯೂಶನ್‌ ಲಭ್ಯ. 1 ಬಕೆಟ್‌ ನೀರಲ್ಲಿ ಇದನ್ನು ಕದಡಿಕೊಂಡು, ಎಲ್ಲಾ ತರಕಾರಿ ಹಣ್ಣುಗಳನ್ನೂ 2 ಗಂಟೆ ಕಾಲ ನೆನೆಯಲು ಬಿಡಿ. ಆಮೇಲೆ ನಲ್ಲಿಯ ನೀರಿನಲ್ಲಿ ತೊಳೆದು, ಒಣಗಿಸಿ, ನಂತರ ಫ್ರಿಜ್ ನಲ್ಲಿರಿಸಿ ಬಳಸಿರಿ. ಹಣ್ಣು ತರಕಾರಿಗೆ ತಗುಲು ಹಾನಿಕಾರಕ ಕೀಟಾಣುಗಳು ನಮ್ಮ ಆರೋಗ್ಯ ಹಾಳು ಮಾಡುತ್ತವೆ. ಅವಕ್ಕೆ ಹನಿಸಲಾದ ಪೆಸ್ಟಿಸೈಡ್ಸ್, ಇನ್‌ಸೆಕ್ಟಿ ಸೈಡ್ಸ್ ಗಳನ್ನು ವೆಜ್‌ ವಾಶ್‌ ನಿಂದ ತೊಲಗಿಸಿ, ನಂತರ ಬಳಸಿರಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ