ಸಿನಿಮಾಗಳಲ್ಲಿ ನಟನೆಯ ವಿಷಯವಿರಲಿ ಅಥವಾ ಧಾರ್ಮಿಕ ಕಂದಾಚಾರವೇ ಇರಲಿ, ಸಾರಾ ಸದಾ FBನ ಟ್ರೋಲಿಗರ ನಿಶಾನೆಗೆ ಗುರಿಯಾಗುತ್ತಾಳೆ. ಸಾರಾ ಈ ಕುರಿತು ಏನು ಹೇಳ ಬಯಸುತ್ತಾಳೆ…..?
1995ರಲ್ಲಿ ಪಟೌಡಿ ಪರಿವಾರದಲ್ಲಿ ಹುಟ್ಟಿದ ಸಾರಾ ಅಲಿ ಖಾನ್, ಹಿರಿಯ ಸ್ಟಾರ್ಸ್ ಅಮೃತಾ ಸಿಂಗ್ ಹಾಗೂ ಸೈಫ್ ಅಲಿ ಖಾನ್ ರ ಮಗಳು. ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ, ರಾಜ್ಯಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಈಕೆ, 2018ರಲ್ಲಿ ಬಾಲಿವುಡ್ ಗೆ ಕಾಲಿರಿಸಿ, ನಾಯಕ ಸುಶಾಂತ್ ಸಿಂಗ್ ನ ರೊಮ್ಯಾಂಟಿಕ್ `ಕೇದಾರ್ ನಾಥ್’ ಚಿತ್ರದಲ್ಲಿ ಮಿಂಚಿದಳು. ಇದಾದ ನಂತರ ಇವಳು ಆ್ಯಕ್ಷನ್ ಕಾಮಿಡಿ `ಸಿಂಬಾ’ ಚಿತ್ರದಲ್ಲಿ ನಟಿಸಿದಳು. ಅಂತಾರಾಷ್ಟ್ರೀಯ ಪತ್ರಿಕೆ `ಪೇಬರ್ಸ್ ಇಂಡಿಯಾ’ದಲ್ಲಿ ಪ್ರಕಟಗೊಂಡಂತೆ 2019ರ 100 ಸೆಲೆಬ್ರಿಟೀಸ್ ಗಳ ಪಟ್ಟಿಯಲ್ಲಿ ಸಾರಾಳ ಹೆಸರೂ ಇತ್ತು. ಇದಾದ ನಂತರ ಈಕೆ ಆನಂದರಾಯರ `ಅತರಂಗೀ ರೇ’ನಲ್ಲಿ ಕಾಣಿಸಿಕೊಂಡಳು. ಇತ್ತೀಚೆಗೆ ಬಿಡುಗಡೆಯಾದ ಈಕೆಯ `ಝರಾ ಹಟ್ ಕೇ ಝರಾ ಬಚ್ ಕೇ’ ಭಾರಿ ಸುದ್ದಿ ಮಾಡುತ್ತಿದೆ, ಇಲ್ಲಿ ಇವಳ ಹೀರೋ, ಕತ್ರೀನಾ ಕೈಫ್ ಳ ಪತಿ ವಿಕ್ಕಿ ಕೌಶ್.
ನಟನೆಯ ಕೆರಿಯರ್ ರ ತನ್ನ ಮೊದಲ `ಕೇದಾರ್ ನಾಥ್’ ಚಿತ್ರದಲ್ಲಿ ಸಾರಾ, ಅಪ್ಪಟ ಸಂಪ್ರದಾಯಸ್ಥ ಹಿಂದೂ ಮನೆತನದ ಹುಡುಗಿಯಾಗಿ ನಟಿಸಿದ್ದಳು. ಮುಂದೆ ಅವಳು ಒಬ್ಬ ಮುಸ್ಲಿಂ ಕೂಲಿಕಾರ ತರುಣನನ್ನು ಪ್ರೇಮಿಸುವ ಕಥೆಯದು. ಇದರಲ್ಲಿ ಇವಳ ಸಹನಟ ಸುಶಾಂತ್ ಸಿಂಗ್, ಇವಳ ಹಿಂದಿ ಉಚ್ಚಾರಣೆಯ ಸುಧಾರಣೆಯ ಜವಾಬ್ದಾರಿ ವಹಿಸಿದ್ದ.
ಈ ಚಿತ್ರದ ಜೊತೆ ಜೊತೆಯಲ್ಲೇ ಸಾರಾ ರೋಹಿತ್ ಶೆಟ್ಟಿಯವರ, ರಣವೀರ್ ಸಿಂಗ್ ನಾಯಕನಾಗಿದ್ದ `ಸಿಂಬಾ’ ಆ್ಯಕ್ಷನ್ ಚಿತ್ರದಲ್ಲಿ ನಟಿಸಿ ಸೈ ಎನಿಸಿದ್ದಳು. ಆಗಾಗ `ಕೇದಾರ್ ನಾಥ್’ ಚಿತ್ರದಿಂದ ಬ್ರೇಕ್ ಪಡೆದು `ಸಿಂಬಾ’ ಚಿತ್ರದ ಶೂಟಿಂಗ್ ಗೆ ಹಾಜರಾಗುತ್ತಿದ್ದಳು. ಈ ಕಾರಣದಿಂದ ಮೊದಲ ಚಿತ್ರಗಳಲ್ಲೇ ಇವಳು ವಿವಾದ ಎದುರಿಸಬೇಕಾಯಿತು. ಆದರೆ ಇವಳ ಪುಣ್ಯ, ಎರಡೂ ಚಿತ್ರ ಗೆದ್ದು, ಇವಳ ಗ್ಲಾಮರ್ ಹೊಗಳಿಕೆಗೆ ಪಾತ್ರವಾಯಿತು. ಇವಳ ಪ್ರತಿಭೆಗೆ ಮನ್ನಣೆ ದೊರಕುವಂತಾಯಿತು.
ಇದಾದ ನಂತರ ಇವಳು ಮತ್ತೊಂದು ರೊಮ್ಯಾಂಟಿಕ್ `ಲವ್ ಆಜ್ ಕಲ್’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜೊತೆ ನಟಿಸಿದಳು. ಈ ಚಿತ್ರದ ದೆಸೆಯಿಂದಾಗಿ ಇವಳು ಕಾರ್ತಿಕ್ ಜೊತೆ ಡೇಟಿಂಗ್ ನಡೆಸುತ್ತಿದ್ದಾಳೆ ಎಂದೆಲ್ಲ ವದಂತಿ ಹರಡಿತು. ಆದರೆ ಇವರಿಬ್ಬರೂ ಇದನ್ನು ಹೌದು ಎಂದು ಒಪ್ಪಿಕೊಳ್ಳಲಿಲ್ಲ. ಏನೋ ಆಗಿ ಅದು ಬ್ರೇಕ್ ಅಪ್ ಆಯ್ತಂತೆ ಎಂಬ ಅಂತೆ ಕಂತೆ ಸುದ್ದಿಗಳೂ ಹರಡಿದವು. ಈ ಚಿತ್ರದಲ್ಲಿ ಇವಳ ಪಾತ್ರ ತುಸು ಕಾಂಪ್ಲಿಕೇಟೆಡ್ ಆಗಿತ್ತು ಎಂದೇ ಹೇಳಬೇಕು. ಇದರಲ್ಲಿ ಇವಳು ಸೋತಿದ್ದಳೆಂದೇ ವಿಮರ್ಶಕರು ಕಟುವಾಗಿ ಟೀಕಿಸಿದ್ದರು. 2020ರಲ್ಲಿ ಇವಳು ವರುಣ್ ಧವನ್ ಜೊತೆ `ಕೂಲಿ ನಂ.1′ ಹಾಸ್ಯ ಪ್ರಧಾನ ಚಿತ್ರದಲ್ಲಿ ನಟಿಸಿ, ಹಳೆಯ ಆಪಾದನೆಗಳಿಂದ ಪಾರಾದಳು.
ಆದರೆ FB ಟ್ರೋಲಿಗರು ಸುಮ್ಮನಿದ್ದಾರೆಯೇ? ಇವಳ ಬಗ್ಗೆ ಬೇಕಾದಷ್ಟು ಆಡಿಕೊಂಡರು. ಮುಂದೆ 2021ರಲ್ಲಿ ಆನಂದರಾಯರ `ಅತರಂಗಿ ರೇ’ ಚಿತ್ರದಲ್ಲಿ ಅಕ್ಷಯ್ ಧನುಷ್ ರಂಥ ಘಟಾನುಘಟಿಗಳ ಎದುರು ಸಮರ್ಥವಾಗಿ ತನ್ನ ಪ್ರತಿಭೆ ಪ್ರದರ್ಶಿಸಬೇಕಾಯಿತು. ಮಾನಸಿಕ ಸ್ವಾಸ್ಥ್ಯ ಸರಿ ಇಲ್ಲದ, ಅರೆ ಹುಚ್ಚಿಯ ಕ್ಲಿಷ್ಟಕರ ಪಾತ್ರವದು. ಈ ಚಿತ್ರ ಥಿಯೇಟರ್ ಗಳ ಬದಲು OTTಯ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಯ್ತು. ಮುಂದೆ 2023ರಲ್ಲಿ ಅದೇ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಪವನ್‌ಕೃಪಾನಿ ನಿರ್ದೇಶನದ `ಗ್ಯಾಸ್ ಲೈಟರ್’ ಚಿತ್ರದಲ್ಲಿ, ಗ್ಲಾಮರಸ್ ಪಾತ್ರಕ್ಕೆ ಬದಲಾಗಿ, ಸದಾ ವೀಲ್ ಚೇರ್ ಗೆ ಅಂಟಿರುವ ಕುಂಟಿಯ ಪಾತ್ರ ವಹಿಸಿದಳು. ಇಲ್ಲಿ ಇವಳಿಗಾಗಿ ಆ್ಯಕ್ಷನ್ ದೃಶ್ಯಗಳೂ ಇದ್ದ.
ಈ ಚಿತ್ರದಿಂದ ಇವಳ ಫ್ಯಾನ್ಸ್ ಹೆಚ್ಚಿನ ಭರವಸೆ ಹೊಂದಿದರು. ಇದಾದ ಮೇಲೆ ಇತ್ತೀಚೆಗೆ ಬಿಡುಗಡೆಯಾದ, ಲಕ್ಷ್ಮಣ್ ಉತ್ತೇಕರ್ ನಿರ್ದೇಶನದ `ಝರಾ ಹಟ್ ಕೇ….’ ಚಿತ್ರದಲ್ಲಿ ನಟಿಸಿದಳು. ಪ್ರತಿಭಾವಂತ ನಟ ವಿಕ್ಕಿ ಕೌಶ್ ಇಲ್ಲಿ ಇವಳ ನಾಯಕನಾಗಿದ್ದ. ನಿರ್ದೇಶಕರು ಇಡೀ ಚಿತ್ರದ ಕೇಂದ್ರ ವಸ್ತುವಾಗಿ ಇವಳ ಪಾತ್ರವಾದ ನಾಯಕಿ ಸೌಮ್ಯಾಳನ್ನೇ ಗುರಿಯಾಗಿಸಿಕೊಂಡಿದ್ದರು. ಆದರೆ ಇಲ್ಲೂ ಸಾರಾ ನಿರಾಸೆ ತಂದಳು. ಸೀರೆಯುಟ್ಟು, ಹಣೆಗಿಟ್ಟುಕೊಂಡು, ದಕ್ಷಿಣದ ನಟಿಯರಂತೆ ಹೂ ಮುಡಿದು ಗಂಭೀರವಾಗಿ ಮೊದಲಾರ್ಧದಲ್ಲಿ ನಟಿಸಲು ಯತ್ನಿಸಿದ್ದ ಸಾರಾ, ವಿರಾಮದ ನಂತರ ಅನಗತ್ಯ ಅವತಾರಗಳಲ್ಲಿ ಪ್ರೇಕ್ಷಕರ ಮೂಡ್ ಕೆಡಿಸಿದಳೆಂದೇ ಹೇಳಬೇಕು.
ಕೈ ಕೊಟ್ಟ ನಟನೆ
ಬಾಲಿವುಡ್ ನ ಎಷ್ಟೋ ಮಂದಿ ಇವಳ ಮೇಲೆ ಹೊರಿಸುವ ಆರೋಪ ಎಂದರೆ, ಇವಳ ಪ್ರತಿಭೆಯಿಂದ ಅವಕಾಶ ಸಿಗುತ್ತಿಲ್ಲ, ಸೈಫ್ ಅಲಿ ಮಗಳು ಎಂಬುದಕ್ಕಾಗಿ ನಿರ್ಮಾಪಕರು ಮಣೆ ಹಾಕಿ, ಆದರಿಸುತ್ತಾರೆ.
ಇದೆಲ್ಲದರ ನಡುವೆ ಇವಳಿಗೆ ಅವಕಾಶಗಳಿಗೇನೂ ಬರವಿಲ್ಲ. ಹೋಮೀ ಅದ್ ಜಾನಿಯಾರ `ಮರ್ಡರ್ ಮುಬಾರಕ್,’ ನಲ್ಲಿ ವಿಭಿನ್ನ ಪಾತ್ರ, `ಏ ತನ್ ಮೇರೇ ತನ್’ ಬಯೋಪಿಕ್ ಚಿತ್ರದಲ್ಲಿ ಸ್ವತಂತ್ರ ಸೇನಾನಿ ಉಷಾ ಮೆಹ್ತಾರ ರೀಲ್ ಪ್ರತಿನಿಧಿ ಆಗಿದ್ದಾಳೆ. ಇವೆರಡೂ OTTಯಲ್ಲಿ ಸ್ಟ್ರೀಮ್ ಆಗಲಿವೆ.
ಪ್ರೊಫೆಶನಲ್ ನಟಿ ಏಕಾಗುತ್ತಿಲ್ಲ?
ತನ್ನ ಜಿಪುಣಾಗ್ರೇಸರ ಬುದ್ಧಿಯಿಂದಾಗಿ ಸಾರಾ ನಟನೆಯ ತರಬೇತಿಯನ್ನೂ ಎಲ್ಲೂ ಪಡೆಯಲಿಲ್ಲ ಎಂದು ವಿಮರ್ಶಕರು ಕಟುವಾಗಿ ಟೀಕಿಸುತ್ತಾರೆ. ಇಷ್ಟು ಸಾಲದೆಂಬಂತೆ ಈಕೆ ಇತ್ತೀಚೆಗೆ ಅಬೂಧಾಬಿಗೆ ಹೋಗಿದ್ದಾಗ, ತಾನು ಅಲ್ಲೇನು ಮಾಡಿದ್ದೆ ಎಂದು ಒಂದು ಆನ್ ಲೈನ್ ವಿಡಿಯೋ ಸಂದರ್ಶನದಲ್ಲಿ ಘನವಾಗಿ ಹೇಳಿಕೊಂಡಿದ್ದಾಳೆ. ನಡೆದದ್ದಿಷ್ಟೆ, ತನ್ನ ಹೊಸ `ಝರಾ ಹಟ್ ಕೇ….’ ಚಿತ್ರದ ಪ್ರಮೋಶನ್ ಗಾಗಿ ಈಕೆ `ಅವಾರ್ಡ್ಸ್ 2023′ ಸಮಾರಂಭಕ್ಕಾಗಿ ಒಂದು ದಿನದ ಮಟ್ಟಿಗೆ ಅಬುಧಾಬಿಗೆ ಹೋಗಬೇಕಾಗಿ ಬಂತು.
ಅಲ್ಲಿ ಅವಳು ಇಡೀ ಚಿತ್ರ ತಂಡದ ಜೊತೆಗೆ ಒಂದು ದಿನದ ಮಟ್ಟಿಗೆ ತಂಗಬೇಕಾಯಿತು. ತನ್ನ ಜಿಪುಣತನದಿಂದಾಗಿ, ಮುಂಬೈ ದೆಹಲಿಯ ಆಪ್ತರನ್ನು ಸಂಪರ್ಕಿಸುವಾಗೆಲ್ಲ, ಇಂಟರ್ ನ್ಯಾಷನಲ್ ರೋಮಿಂಗ್ ಗಾಗಿ ಖರ್ಚು ಮಾಡದೆ, ತನ್ನ ಹೇರ್ ಡ್ರೆಸ್ಸರ್ ಳ ಹಾಟ್ ಸ್ಪಾಟ್ ಬಳಸಿಕೊಂಡಳಂತೆ!
ಸಾರಾಳ ಸಂಬಂಧಗಳು
`ಲವ್ ಆಜ್ ಕಲ್’ ಚಿತ್ರದಲ್ಲಿ ನಾಯಕ ನಟ ಕಾರ್ತಿಕ್ ಜೊತೆ ಬಹಿರಂಗ ಡೇಟಿಂಗ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ, ಇವಳು ಅದನ್ನು ಹೌದು ಎಂದು ಒಪ್ಪಿಕೊಳ್ಳಲಿಲ್ಲ. ಇವಳನ್ನು ನೋಡಿ ಕಾರ್ತಿಕ್ ಸಹ ಹಾಗೇ ಮಾಡಿದ. ತಮ್ಮಿಬ್ಬರ ಸಂಬಂಧಕ್ಕೆ ಪುಷ್ಟಿಯೂ ನೀಡಲಿಲ್ಲ, ಖಂಡಿಸಲೂ ಇಲ್ಲ! ಮುಂದೆ ಈ ಚಿತ್ರದ ನಿರ್ಮಾಪಕ ಕರಣ್ ಜೌಹರ್, ಒಂದು ಸಂದರ್ಶನದಲ್ಲಿ ಇವರಿಬ್ಬರ ತಥಾಕಥಿತ ಸಂಬಂಧ ಬ್ರೇಕಪ್ ಆಯ್ತೆಂದೂ ಸಾರಿದ. ಇದಾದ ಮೇಲೆ ಇವಳು ಭಾರತೀಯ ಕ್ರಿಕೆಟರ್ ಶುಭಮನ್ ಗಿಲ್ ಜೊತೆ ಊರು ಸುತ್ತುತ್ತಿದ್ದಾಳೆ ಎಂಬ ವದಂತಿಗಳಿದ್ದವು. ಹಿಂದಿನ ಸಂಬಂಧದಂತೆಯೇ ಇಲ್ಲೂ ಇಬ್ಬರೂ ಅದನ್ನು ನಿಜ ಅಥವಾ ಸುಳ್ಳು ಎಂದು ಹೇಳಲೇ ಇಲ್ಲ!
ಕಲಿತಿದ್ದು ಏನು?
“ಇದೆಲ್ಲದರಿಂದ ನಾನು ಮುಖ್ಯವಾಗಿ ಕಲಿತಿದ್ದು ಅಂದ್ರೆ, ಜೀವನದಲ್ಲಿ ಏರಿಳಿತ ಎಂಬುದು ಸಹಜ. ನೀವು ನಿಮ್ಮ ಕೆಳಮಟ್ಟದ ಹಂತದಲ್ಲಿದ್ದಾಗ, ಹೇಗಾದರೂ ಎದ್ದು ನಿಂತು ಸಾಧಿಸಬೇಕು. ಜೋರಾಗಿ ಓಡಾಡಿ ಗೆಲ್ಲಲೇಬೇಕು. ಆದರೆ ಇಲ್ಲೇನಾದರೂ ನಾವು ಆತ್ಮವಿಶ್ವಾಸ ಕಳೆದುಕೊಂಡಿದ್ದೇವೆ ಎಂದು ಹೊರ ಪ್ರಪಂಚಕ್ಕೆ ಗೊತ್ತಾದರೆ, ನಿಮ್ಮಂಥ ಮೂರ್ಖರು ಯಾರೂ ಇಲ್ಲ! ಆದ್ದರಿಂದ ಯಾರೋ ಏನೋ ಹೇಳಿದರು ಎಂದು ಬಾಲಿವುಡ್ ಕೆರಿಯರ್ ನಲ್ಲಿ ಏನೂ ವ್ಯತ್ಯಾಸ ಆಗಿಹೋಗುವುದಿಲ್ಲ. ನಮಗೆ ಸರಿ ಎನಿಸಿದ್ದನ್ನು ನಿರ್ಭಯವಾಗಿ ಮುಂದುವರಿಸಬೇಕು. ಈ ಕುರಿತಾಗಿ ನನಗಾವ ಪಶ್ಚಾತ್ತಾಪವೂ ಇಲ್ಲ!” ಎಂದು ಈ ವದಂತಿಗಳನ್ನು ಖಂಡಿಸುತ್ತಾಳೆ ಸಾರಾ.
– ಪ್ರತಿನಿಧಿ