ಶರತ್ ಚಂದ್ರ

ಕನ್ನಡದಲ್ಲಿ ಊರಿಗೊಬ್ಲು ಪದ್ಮಾವತಿ ಹೇಗೋ ಪುಷ್ಪವತಿ ಕೂಡ ಒಬ್ಬಳೇ. ಹೌದು 2023ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ ‘ಬಿಡುಗಡೆಯಾದಾಗ ಎಲ್ಲಾ ಕಡೆ ಈ ಪುಷ್ಪವತಿಯದ್ದೇ ಹವಾ. ಚಿತ್ರದಲ್ಲಿ ಬರುವ ಒಂದು ಹಾಡಿಗೆ ಕ್ರೇಜ್ ಎಷ್ಟಿತ್ತೆಂದರೆ ಆ ಹಾಡು ಬಂದ ಮೇಲೆ ನಿಮಿಕಾ ರತ್ನಾಕರ್ ಅವರನ್ನು ಜನ ಪುಷ್ಪವತಿ ಎಂದು ಕರೆಯಲು ಆರಂಭಿಸಿದ್ದರು.

1000617279

ಎರಡು ವರ್ಷ ಚಿತ್ರರಂಗದ ಚಟುವಟಿಕೆಯಿಂದ ದೂರವಿದ್ದ ನಿಮಿಕಾ ಇತ್ತೀಚಿಗೆ ಒಂದಷ್ಟು ಚಿತ್ರಗಳನ್ನು ಮಾಡುವುದರ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

1000617291

ನಿನ್ನೆ MMB ಲೆಗೆಸಿಯಲ್ಲಿ ನಡೆದ ಕಿರುತೆರೆ ಮತ್ತು ಬಿಗ್ ಬಾಸ್ ಖ್ಯಾತಿಯ, ಪ್ರೇಮ ಬರಹ ಮೂಲಕ ಬೆಳ್ಳಿ ಪರದೆಯಲ್ಲೂ ಮಿಂಚಿದ ನಾಯಕ ಚಂದನ್ ಕುಮಾರ್ ನಿರ್ದೇಶನದ ಮೊದಲ ಚಿತ್ರ Flirt ಚಿತ್ರದ ಕಿಚ್ಚ ಸುದೀಪ್ ಹಾಡಿರುವ friendship anthem ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ನಿಮಿಕಾ ಭಾಗವಹಿಸಿದ್ದರು.

1000617293

ಕನ್ನಡ ದ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ತ್ರಿಶೂಲಂ ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದೂ, ನಿಮಿಕಾ, ಓಂ ಪ್ರಕಾಶ್ ರಾವ್ ಅವರ ಫಿನಿಕ್ಸ್ ಚಿತ್ರದಲ್ಲಿ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ.

ಓಂ ಪ್ರಕಾಶ್ ರಾವ್ ಅವರ 50 ನೇ ಚಿತ್ರ ಗೆರಿಲ್ಲ ವಾರ್ ಚಿತ್ರದಲ್ಲಿ ಕೂಡ ನಾಯಕಿ ಯಾಗಿ ಅಭಿನಯಿಸುತ್ತಿದ್ದಾರೆ.

1000617274

ಮಂಗಳೂರು ಮೂಲದ ಕರವಾಳಿ ಬೆಡಗಿ ಇಂಜಿನಿಯರಿಂಗ್ ಪದವಿ ಪಡೆದು,ಮಿಸ್ ಸೂಪರ್ ಟ್ಯಾಲೆಂಟ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಿಮಿಕಾ ಒಬ್ಬ ಉತ್ತಮ ಗಾಯಕಿ ಕೂಡ.

ಮಾಡೆಲಿಂಗ್ ಕ್ಷೇತ್ರ ದಲ್ಲಿ ಕೂಡ ಬ್ಯುಸಿ ಯಾಗಿರುವ ನಿಮಿಕಾ ಸಧ್ಯ ಕ್ಕೆ Flirt ಚಿತ್ರದ ಬಿಡುಗಡೆಗೆ ಕಾಯುತ್ತಿದ್ದು,  ಮುಂದೆ ಇನ್ನಷ್ಟು ಚಿತ್ರಗಳಲ್ಲಿ ಅಭಿನಯಿಸಿ ಚಿತ್ರ ಪ್ರೇಮಿಗಳನ್ನು

ರಂಜಿಸಲಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ