ರಾಘವೇಂದ್ರ ಅಡಿಗ ಎಚ್ಚೆನ್.

ಸಾಹಸ ಸಿಂಹ, ಅಭಿಮಾನಿಗಳ ಪ್ರೀತಿಯ ಯಜಮಾನ್ರು ಡಾ.ವಿಷ್ಣುವರ್ಧನ್‌ ಮೊಮ್ಮಗ ಸಿನಿರಂಗ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ವಿಷ್ಣುವರ್ಧನ್ ಮೊಮ್ಮಗ ಜೇಷ್ಠವರ್ಧನ್ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ಬರಲು ರೆಡಿಯಾಗಿದ್ದಾರೆ.

FB_IMG_1753841399072

‘ನಾಗರಹಾವು’ ಸಿನಿಮಾ ಮೂಲಕ ಸ್ಟಾರ್‌ ಹೀರೋ ಆದವರು ವಿಷ್ಣು. ಚಿತ್ರರಂಗದಲ್ಲಿ ತಮ್ಮದೇ ಹೆಜ್ಜೆ ಗುರುತುಗಳನ್ನು ಸೃಷ್ಟಿಸಿರುವವರು ಯಜಮಾನ್ರು. ದಾದಾ ಪ್ರೀತಿಸಿ ನಟಿ ಭಾರತಿ ವಿಷ್ಣುವರ್ಧನ್‌ ಅವರನ್ನು ವರಿಸಿದ್ದರು. ವಿಷ್ಣುವರ್ಧನ್ ದತ್ತುಪುತ್ರಿ ಕೀರ್ತಿ ಅವರು ನಟ ಅನಿರುದ್ಧ್ ಜತ್ಕರ್ ಕೈ ಹಿಡಿದಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು. ಅವರ ಮಗನೇ ಜೇಷ್ಠವರ್ಧನ್. ಇದೀಗ ಜೇಷ್ಠವರ್ಧನ್ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ.

FB_IMG_1753841394379

ಜೇಷ್ಠವರ್ಧನ್ ರಕ್ತದಲ್ಲಿಯೇ ಸಿನಿಮಾ ಇದೆ. ತಾತಾ-ಅಜ್ಜಿ-ತಂದೆಯಂತೆ ತಾನು ಇಂಡಸ್ಟ್ರೀಯಲ್ಲಿ ಹೆಸರು ಗಳಿಸಬೇಕು ಎಂಬ ಕನಸಿದೆ. ಅದಕ್ಕಾಗಿ ಜೇಷ್ಠವರ್ಧನ್ ಆಕ್ಟಿಂಗ್‌, ಡ್ಯಾನ್ಸಿಂಗ್‌ನಲ್ಲಿ ಪಳಗಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಪದವಿ ಪಡೆದಿರುವ ಅವರೀಗ ಸಿನಿಮಾದತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ಜೇಷ್ಠವರ್ಧನ್ ಸ್ಪೆಷಲ್ ಫೋಟೊಶೂಟ್ ಮಾಡಿಸಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

FB_IMG_1753841396671

“ಎಲ್ಲರ ಆಶೀರ್ವಾದ, ಹಾರೈಕೆ ಇದ್ದರೆ ಜೇಷ್ಠ ಚಿತ್ರರಂಗಕ್ಕೆ ಬರ್ತಾನೆ” ಎಂದು ಅನಿರುದ್ಧ್ ಪ್ರತಿಕ್ರಿಯಿಸಿದ್ದಾರೆ. ಮೀಡಿಯಾ ಅಂಡ್ ಮಾಸ್ ಕಮ್ಯೂನಿಕೇಷನ್‌ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾನೆ. ಮೊದಲಿನಿಂದಲೂ ಡ್ಯಾನ್ಸ್ ಅಭ್ಯಾಸ ಮಾಡುತ್ತಿದ್ದಾನೆ. ಇತ್ತೀಚೆಗೆ ತಮಿಳುನಾಡಿನ ಆದಿಶಕ್ತಿ ಥಿಯೇಟರ್‌ನಲ್ಲಿ ವರ್ಕ್‌ಶಾಪ್ ಮುಗಿಸಿದ್ದಾರೆ.ಈ ವರ್ಷದ ಕೊನೆ ಅಥವಾ ಮುಂದಿನ ವರ್ಷ ದಾದಾ ಮೊಮ್ಮಗ ನಟನೆಯ ಸಿನಿಮಾ ಶುರುವಾಗುವ ಸಾಧ್ಯತೆಯಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ