ನಿಮ್ಮ ಬಿಝಿ ಶೆಡ್ಯೂಲ್ ಮಧ್ಯೆ ಹಬ್ಬಗಳಿಗಾಗಿ ಮನೆ ಕ್ಲೀನಿಂಗ್ಮತ್ತಿತರ ಕಷ್ಟದ ಕೆಲಸಗಳನ್ನು ಸುಲಭಗೊಳಿಸಲೆಂದೇ ಬಂದಿರುವ ನವೀನ ಗೃಹೋಪಕರಣ ಬಳಸಿ, ನಿಮಗಾಗಿ ಒಂದಿಷ್ಟು ಫ್ರೀ ಟೈಂ ಮಾಡಿಕೊಳ್ಳಬಾರದೇಕೆ…..?

ಇತ್ತೀಚೆಗೆ ಎಲ್ಲೆಲ್ಲೂ ಮಲ್ಟಿ ಟಾಸ್ಕಿಂಗ್‌ ಝಮಾನಾ. ಎರಡೇ ಕಂಗಳಿದ್ದರೂ 1-2 ಕೈಗಳಿವೆ ಎಂಬಂತೆ ಬೇಗ ಬೇಗ ಕೆಲಸ ಮಾಡಿಕೊಂಡರೆ ಮಾತ್ರ ಉದ್ಯೋಗಸ್ಥ ವನಿತೆ ತನ್ನ ಮನೆ, ಆಫೀಸ್‌, ಮಕ್ಕಳು, ಸಂಸಾರ ಎಲ್ಲವನ್ನೂ ಏಕಕಾಲಕ್ಕೆ ಸಲೀಸಾಗಿ ನಿಭಾಯಿಸಲು ಸಾಧ್ಯ. ಈ ಮಧ್ಯೆ ಹಬ್ಬಗಳು ಬಂದುಬಿಟ್ಟರೆ ಅದಕ್ಕಾಗಿ ಮನೆಯ ವಿಶೇಷ ಕ್ಲೀನಿಂಗ್‌ ಕಡೆ ಗಮನ ಕೊಡಬೇಕಾದುದೂ ಅತ್ಯಗತ್ಯ. ಹೀಗಾದಾಗ ಆಕೆ ಇತ್ತೀಚೆಗೆ ಬಂದಿರುವ ನವನವೀನ ಗೃಹೋಪಕರಣಗಳನ್ನು ಬಳಸಿಕೊಂಡು ಈ ಸ್ಪೆಷಲ್ ಕ್ಲೀನಿಂಗ್‌ ಈಝಿ ಮಾಡಿಕೊಳ್ಳುವುದೇ ಸ್ಮಾರ್ಟ್‌ ನೆಸ್‌!

ನಿಮ್ಮ ಮನೆಯ ದೊಡ್ಡ, ಸಣ್ಣಪುಟ್ಟ ಕೆಲಸಗಳೇನೇ ಇರಲಿ, ಎಲ್ಲದಕ್ಕೂ ಈ ಗೃಹೋಪಕರಣಗಳು ಮಲ್ಟಿ ಟಾಸ್ಕಿಂಗ್‌ ನಿಭಾಯಿಸಲು ಪೂರಕ. ಕ್ಯಾಲುಕ್ಯುಲೇಶನ್ಸ್, ವೆಂಟಿಲೇಶನ್ಸ್, ಹೈಜೀನ್‌, ಕಿಚನ್‌ ವರ್ಕ್‌….. ಮಾತ್ರವಲ್ಲ, ಮನೆಯ ಯಾವ ಕೆಲಸವನ್ನೇ ಆಗಲಿ, ಈ ಹೊಸ ಹೋಮ್ ಅಪ್ಲೈಯನ್ಸಸ್‌ ಬೇಗ ಬೇಗ ಮಾಡಿ ಪೂರೈಸುತ್ತವೆ. ನಿಮ್ಮ ಮನೆಯ ಅಗತ್ಯಕ್ಕೆ ತಕ್ಕಂತೆ ಈ ಗೃಹೋಪಕರಣಗಳನ್ನು ಕಸ್ಟಮೈಸ್ಡ್ ಮಾಡಿಕೊಳ್ಳಿ. ಅವನ್ನು ಬಳಸಿಕೊಳ್ಳುತ್ತಾ, ಸುಲಭವಾಗಿ ನಿಮ್ಮ ಎಲ್ಲಾ ಕಷ್ಟದ ಮನೆಗೆಲಸಗಳನ್ನೂ ಹಾಯಾಗಿ ಮುಗಿಸಿಕೊಳ್ಳಿ.

ವ್ಯಾಕ್ಯೂಂ ಕ್ಲೀನರ್

ನೀವು ನಿಮ್ಮ ಮನೆಯನ್ನು ಎಷ್ಟೇ ಉತ್ತಮವಾಗಿ ರಿನೋವೇಟ್‌ ಮಾಡಿರಲಿ, ಅದಕ್ಕೆ ಮಾಡ್‌ ಲುಕ್ಸ ನೀಡಿರಲಿ, ಮನೆಯ ಎಲ್ಲಾ ವಸ್ತುಗಳೂ ಒಪ್ಪ ಓರಣವಾಗಿ, 100% ಧೂಳುರಹಿತ ಇರದಿದ್ದರೆ ಅದು ಸುಂದರವಾಗಿ ಕಾಣಿಸದು. ಆದರೆ ಇಂದಿನ ಓಡುಯುಗದಲ್ಲಿ ನಮ್ಮ ಬಳಿ ಎಲ್ಲವನ್ನೂ ಮತ್ತೆ ಮತ್ತೆ ಕ್ಲೀನ್‌ ಮಾಡುತ್ತಾ ಕೂರಲು ಖಂಡಿತಾ ಸಮಯಾವಕಾಶ ಇರುವುದಿಲ್ಲ. ಹೀಗಾಗಿ ಸೋಫಾ ಕಾರ್ಪೆಟ್‌ ಗಳ ಮೂಲೆ ಮೂಲೆಯನ್ನು ಅತಿ ಪರ್ಫೆಕ್ಟ್ ಆಗಿ ಕ್ಲೀನಾಗಿಸುವುದು ಕಷ್ಟಸಾಧ್ಯ!

ಹೀಗಾಗಿಯೇ ವ್ಯಾಕ್ಯೂಂ ಕ್ಲೀನರ್‌ ಮನೆಯ ಮೂಲೆ ಮೂಲೆಯಲ್ಲಿನ ಸಣ್ಣಪುಟ್ಟ ಧೂಳನ್ನೂ ಇನ್ನಿಲ್ಲದಂತೆ ಕ್ಲೀನ್‌ ಮಾಡುತ್ತದೆ. ಕ್ಲೀನಿಂಗ್‌ ಜೊತೆಗೆ ಇಡೀ ಮನೆಯನ್ನು ಕೆಲವೇ ನಿಮಿಷಗಳಲ್ಲಿ ಹೊಳೆ ಹೊಳೆಯುತ್ತಿರುವಂತೆ ಮಾಡಬಲ್ಲದು. ಇಂದಿನ ಆಧುನಿಕ ಮಾರುಕಟ್ಟೆಯಲ್ಲಿ ನಿಮಗೆ ಬಹು ವಿಧದ ವ್ಯಾಕ್ಯೂಂ ಕ್ಲೀನರ್ ಗಳು ಲಭ್ಯ. ಇವಕ್ಕೆ ಎಲ್ಲಾ ಬಗೆಯ ಕ್ಲೀನಿಂಗ್‌ ಮೋಡ್‌ ಅಟ್ಯಾಚ್ ಮೆಂಟ್‌ ಇರುತ್ತವೆ. ಗಾಳಿಯಲ್ಲಿ ಬೆರೆತ ಡಸ್ಟ್ ನ್ನು ತೆಗೆಯುವುದಲ್ಲದೆ, ನಮ್ಮ ಪೊರಕೆ ತಲುಪಲಾಗದ ಮೂಲೆ ಮೂಲೆಯಲ್ಲೂ ಇರುವ ಧೂಳಿನ ಕಣಗಳನ್ನೂ ಸೆಳೆದುಕೊಳ್ಳಬಲ್ಲದು. ಇದು ಎಲ್ಲವನ್ನೂ ತನ್ನಲ್ಲಿನ ಡಸ್ಟ್ ಬಿನ್‌ ಗೆ ತುರುಕಿಕೊಂಡು, ನಿಮ್ಮ ಮನೆಗೆ ಹೊಚ್ಚ ಹೊಳಪು ನೀಡಬಲ್ಲದು. ಈಗ ಮನೆ ಕ್ಲೀನಿಂಗ್‌ ಬಲು ಈಝಿ! ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಮ್ಮ ಬಜೆಟ್‌ ನಲ್ಲಿ ವ್ಯಾಕ್ಯೂಂ ಕ್ಲೀನರ್ ಕೊಳ್ಳಬಹುದು. ನೀವು ತುಸು ಬೆಟರ್‌ ವ್ಯಾಕ್ಯೂಂ ಕ್ಲೀನರ್ ಬಯಸಿದರೆ, ರೋಬೋಟಿಕ್‌ ವ್ಯಾಕ್ಯೂಂ ಕ್ಲೀನರ್ ಕೊಳ್ಳಿರಿ. ಇದನ್ನು ನೀವು ರಿಮೋಟ್‌ ಅಥವಾ ಅಲೆಕ್ಸಾದಿಂದ ಕಂಟ್ರೋಲ್ ಮಾಡಬಹುದು. ಇದು ಡಸ್ಟ್ ತೆಗೆಯುವುದಲ್ಲದೆ, ಮನೆ ಒರೆಸುವ ಕೆಲಸವನ್ನೂ ಮಾಡಿ ಮುಗಿಸುತ್ತದೆ! ನಿಮ್ಮ ಬೆಸ್ಟ್ ಹೆಲ್ಪರ್‌ ಆಗಿ ಇದು ನಿಮಗೆ ಸೇವೆ ಸಲ್ಲಿಸುತ್ತದೆ.

Microwave

ಮೈಕ್ರೋವೇವ್

ನೀವು ಹೊರಗಿನಿಂದ ದುಡಿದು ಸಾಕಾಗಿ ಮನೆಗೆ ಬಂದಿರುತ್ತೀರಿ, ಬೇಗ ಬೇಗ ಗ್ಯಾಸ್‌ ಒಲೆಯಲ್ಲಿ ಅಡುಗೆ ಮಾಡಬೇಕಿದೆ, ಎಂದಾಗ ಮಂಡೆ ಬಿಸಿ ಆಗದೆ ಇರದು. ಆದರೆ ನಿಮ್ಮ ಕಿಚನ್‌ ನಲ್ಲಿ ಲೇಟೆಸ್ಟ್ ಮೈಕ್ರೋವೇವ್ ‌ಓವನ್‌ ಇದ್ದರೆ, ಹಾಯಾಗಿ ನಿಮಗೆ ಬೇಕಾದ ಡಿಶ್‌ ನ್ನು ಕೆಲವೇ ನಿಮಿಷಗಳಲ್ಲಿ ಅದರಲ್ಲಿ ತಯಾರಿಸುವುದು ಅಥವಾ ಬಿಸಿ ಮಾಡುವುದು ಇತ್ಯಾದಿ ಮಾಡಿಕೊಳ್ಳಬಹುದು. ಹೈಸ್ಕೂಲ್ ಮಕ್ಕಳೂ ಸಹ ಇದನ್ನು ಸುಲಭವಾಗಿ ಬಳಸುತ್ತಾರೆ.

ಇದಕ್ಕಾಗಿ ನಿಮಗೆ ಮಾರ್ಕೆಟ್‌ ನಲ್ಲಿ ಸೋಲೋ, ಕನ್ವೆಕ್ಷನ್‌ ಇತ್ಯಾದಿ ನಾನಾ ಬಗೆಯ ಮೈಕ್ರೋವೇವ್ ‌ಓವನ್‌ ಲಭ್ಯ. ನಿಮ್ಮ ಅವಶ್ಯಕತೆ, ಬಜೆಟ್‌ ಗೆ ತಕ್ಕಂತೆ ಆರಿಸಿಕೊಳ್ಳಿ. ಇದರಿಂದ ಅಪಾರ ಸಮಯದ ಉಳಿತಾಯ ಗ್ಯಾರಂಟಿ. ಜೊತೆಗೆ ಅಡುಗೆಮನೆಗೆ ಹೊಸ ಮಾಡ್‌ ಲುಕ್‌ ಬರುತ್ತದೆ. ಇದರಿಂದ ಕೇಕ್‌, ಕುಕೀಸ್‌ ಹಾಗೂ ಇನ್ನಿತರ ಡಿಶೆಸ್‌ ಸುಲಭವಾಗಿ ತಯಾರಾಗುತ್ತದೆ. ಇದರಿಂದ ನಿಮಿಷಗಳಲ್ಲಿ ನಿಮ್ಮ ಅಡುಗೆಮನೆ ಕೆಲಸ ಹಗುರವಾಗುತ್ತದೆ.

Dishwasher

ಡಿಶ್ವಾಶರ್

ನಿಮಗೆ ಪಾತ್ರೆ ತೊಳೆಯಲು ಸಮಯವಿಲ್ಲ, ಕೆಲಸದವಳ ಕಿರಿಕಿರಿ ತಪ್ಪಿದ್ದಲ್ಲ ಎನಿಸಿದಾಗ ನೀವು ಈ ಡಿಶ್‌ ವಾಶರ್‌ (ಪಾತ್ರೆ ತೊಳೆಯುವ ಸಾಧನ) ಬಳಸಬಹುದು. ಇದು ಖಂಡಿತಾ ನಿಮ್ಮ ಬಜೆಟ್‌ ನಲ್ಲಿ ವರ್ಕ್‌ ಔಟ್‌ ಆಗುತ್ತದೆ. ಇದು ನಿಮ್ಮ ಎಷ್ಟೋ ಕಷ್ಟ ಕಳೆದು, ಸಮಯ ಉಳಿಸುತ್ತದೆ. ಈಗಂತೂ ನಿಮಗೆ ಮಾರ್ಕೆಟ್‌ ನಲ್ಲಿ ಹಲವು ಬಗೆಯ ಅಡ್ವಾನ್ಸ್ಡ್ ಡಿಶ್ ವಾಶರ್ ಲಭ್ಯವಿವೆ. ಇದು ಕನಿಷ್ಠ ನೀರಿನಲ್ಲಿ ಗರಿಷ್ಠ ಪಾತ್ರೆಗಳನ್ನು ಬೇಗನೆ ಕ್ಲೀನ್‌ ಮಾಡಬಲ್ಲದು, ಎಂಥ ಬಗೆಯ ಪಾತ್ರೆಯಾದರೂ ಸರಿ. ತುಸು ದುಬಾರಿಯಾದ ಡಿಶ್ ವಾಶರ್ ಅತಿ ಜಿಡ್ಡಿನ ಅಂಶವನ್ನೂ ತೆಗೆದು, ಪಾತ್ರೆ ಹೊಳೆಯುವಂತೆ ಮಾಡಬಲ್ಲದು. ಅದಕ್ಕೆ ಡಿಸ್‌ ಪ್ಲೇ, ಓವರ್‌ ಪ್ಲೇ, ಲೀಕೇಜ್‌ ಪ್ರೊಟೆಕ್ಷನ್‌, ಹೀಟರ್‌ ಪ್ರೊಟೆಕ್ಷನ್‌ ಇತ್ಯಾದಿ ಇರುತ್ತವೆ. ಇದರ ಚೈಲ್ಡ್ ಲಾಕ್‌ ಫೆಸಿಲಿಟಿ ಇದನ್ನು ಮತ್ತಷ್ಟು ಸ್ಪೆಷಲ್ ಮಾಡುತ್ತದೆ. ಕೆಲವಲ್ಲಂತೂ UV ಟೆಕ್ನಾಲಜಿಯೂ ಉಂಟು. ಅದು ಪಾತ್ರಗಳಲ್ಲಿನ ವೈರಸ್‌, ಬ್ಯಾಕ್ಟೀರಿಯಾಗಳನ್ನೂ ಇನ್ನಿಲ್ಲದಂತೆ ಮಾಡಬಲ್ಲದು, ನಿಮ್ಮ ಆರೋಗ್ಯ ಲಕಲಕಿಸುವಂತೆ ಇಡಬಲ್ಲದು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಇದನ್ನು ಆರಿಸಿಕೊಳ್ಳಿ. ಇದನ್ನು ಯಾವಾಗ ಬೇಕಾದರೂ ನಿಮ್ಮ ಇಷ್ಟದಂತೆ ಬಳಸಿಕೊಳ್ಳಬಹುದು.

ಆಟೊಮೆಟಿಕ್ವಾಷಿಂಗ್ಮೆಶೀನ್

ಇಂದಿನ ಬಿಡುವಿಲ್ಲದ ದಿನಗಳಲ್ಲಿ ಕಲ್ಲು ಬಂಡೆ ಬಳಿ ನಿಂತು ಬಟ್ಟೆ ಒಗೆಯಲು ಯಾರಿಗೆ ಪುರಸತ್ತಿದೆ? ಇಂದಿನ ಲೈಫ್‌ ಸ್ಟೈಲ್ ‌ಹಾಗಿದೆ. ಇದಕ್ಕೆ ಹೆಚ್ಚು ಸಮಯ, ಸುಸ್ತು ತಪ್ಪದು. ಅದರಲ್ಲೂ ಹೆವಿ ಬೆಡ್‌ ಶೀಟ್ಸ್ ಒಗೆಯುವುದು ಸುಮ್ಮನಾಯಿತೇ? ಇಂದಿನ ಆಧುನಿಕ ಟೆಕ್ನಾಲಜಿ ನಿಮ್ಮ ಈ ಕಷ್ಟ ಕಳೆದು ಸುಲಭವಾಗಿ ಬಟ್ಟೆ ಒಗೆದು ಕೊಡುತ್ತದೆ, ಡ್ರೈಯರ್‌ ನೆರವಿನಿಂದ 50% ತೇವಾಂಶ ಹೋಗಿರುತ್ತದೆ. ಹೀಗಾಗಿ ಆಟೋಮೆಟಿಕ್‌ ವಾಷಿಂಗ್‌ ಮೆಶೀನ್‌ ಇಂದು ಅನಿವಾರ್ಯ ಆಗಿಹೋಗಿದೆ.

ಮೇಲಿನ ಓವರ್‌ ಟ್ಯಾಂಕ್‌ ಗೆ ಕನೆಕ್ಷನ್‌ ಇರುವುದರಿಂದ ಇದಕ್ಕೆ ನೀವು ಬಟ್ಟೆ, ಸೋಪಿನ ಪುಡಿ, ಸುಗಂಧಕ್ಕೆ ಬೇಕಾದ್ದು ಬೆರೆಸಿದರೆ ಆಯ್ತು, ಮಿಕ್ಕೆಲ್ಲವನ್ನೂ ಅದೇ ಮಾಡಿಕೊಳ್ಳುತ್ತದೆ. ಅದರ ಹೊಟ್ಟೆ ಬಿರಿಯುವಂತೆ ಬಟ್ಟೆ ತುರುಕದೆ, ಹಿತಮಿತವಾಗಿ ಬಳಸಿಕೊಳ್ಳಿ. ಸೆಮಿ ಆಟೋಮೆಟಿಕ್‌ ಆದರೆ, ನೀವೇ ಆಗಾಗ ನೀರು ತುಂಬಿಸಬೇಕಾಗುತ್ತದೆ, ಪ್ರತ್ಯೇಕವಾಗಿ ಡ್ರೈಯರ್‌ ಗೆ ಬಟ್ಟೆ ರವಾನಿಸ ಬೇಕಾಗುತ್ತದೆ.

ಹ್ಯಾಂಡ್ಬ್ಲೆಂಡರ್

ಅಡುಗೆಮನೆ ಕೆಲಸ ಕೆಲವೇ ನಿಮಿಷಗಳಲ್ಲಿ ಮುಗಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ನೀವು ಕಿಚನ್‌ ಗೆ ಬೇಕಾದ ಲೇಟೆಸ್ಟ್ ಗ್ಯಾಜೆಟ್ಸ್ ಕೊಂಡುತಂದು ಬಳಸಬೇಕಷ್ಟೆ. ಇಂಥದ್ದರಲ್ಲಿ ಹ್ಯಾಂಡ್‌ ಬ್ಲೆಂಡರ್‌ ನಿಮಗೆ ಬಹಳ ನೆರವಾಗುತ್ತದೆ. ಇದರಿಂದ ನೀವು ಬೇರೆ ಬೇರೆ ವಸ್ತುಗಳನ್ನು ಸುಲಭವಾಗಿ ಬೆರೆಸಬಹುದು, ಅಷ್ಟು ಮಾತ್ರವಲ್ಲ, ಚಟ್ನಿ, ಮಸಾಲೆ ಮಿಶ್ರಣ ಅರೆಯಲು, ಮೊಸರು ಕಡೆಯಲು, ಪ್ಯೂರಿ, ಸ್ಮೂದಿ ತಯಾರಿಸಲಿಕ್ಕೂ ಸಹಕಾರಿ.

ಇದರಲ್ಲಿ ಎಲ್ಲಾ ಸಾಮಗ್ರಿ ಚೆನ್ನಾಗಿ ಫಿಟ್‌ ಆಗುತ್ತದೆ. ಇದಕ್ಕೆ ಹೆಚ್ಚಿನ ಎಫರ್ಟ್ಸ್ ಹಾಕದೆ, ಕಷ್ಟಪಡದೆ, ಸುಲಭವಾಗಿ ನೀವು ಬೇಕಾದ್ದನ್ನು ಗ್ರೈಂಡ್‌ ಮಾಡಬಹುದು. ನೀವು ಇದುವರೆಗೂ ನಿಮ್ಮ ಕಿಚನ್‌ ನಲ್ಲಿ ಕೈಗಳಿಂದಲೇ ಎಲ್ಲವನ್ನೂ ಬೆರೆಸುವುದು, ಮಿಕ್ಸ್ ಮಾಡೋದು, ಬೀಟಿಂಗ್‌ ಇತ್ಯಾದಿ ಮಾಡುತ್ತಿದ್ದರೆ, ಮುಖ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಬಿಡುವಿಲ್ಲದ ಕೆಲಸದ ನಡುವೆ ಇದನ್ನು ಬಳಸಿ ನಿಮ್ಮ ಕೆಲಸಗಳನ್ನು ಹಗುರವಾಗಿಸಿಕೊಳ್ಳಿ. ಇದು ನಿಮ್ಮ ಕಿಚನ್‌ ಗೆ ಸ್ಮಾರ್ಟ್‌ ಲುಕ್‌ ನೀಡುತ್ತದೆ.

ಮಲ್ಟಿ ಪರ್ಪಸ್ಫುಡ್ಪ್ರೊಸೆಸರ್

ಫುಡ್‌ ಪ್ರೊಸೆಸರ್‌ ವಾಸ್ತವದಲ್ಲಿ ಅತಿ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದರ ನೆರವಿನಿಂದ ನೀವು ಚಪಾತಿ, ಪೂರಿಗಳಿಗೆ ಸುಲಭವಾಗಿ ಹಿಟ್ಟು ಕಲಸಿ, ನಾದಿಕೊಳ್ಳಬಹುದು. ಜೊತೆಗೆ ತರಕಾರಿ ಹೆಚ್ಚಿಕೊಳ್ಳುವುದು, ಚಟ್ನಿ ಮಸಾಲೆ ಗ್ರೈಂಡಿಂಗ್‌, ಜೂಸ್‌ತಯಾರಿ ಇತ್ಯಾದಿ ಕೆಲಸಗಳೆಲ್ಲ ಕೆಲವೇ ನಿಮಿಷಗಳಲ್ಲಿ ಆಗಿಹೋಗುತ್ತದೆ. ಆಗ ನೀವು ಫ್ರೀಯಾಗಿ ಹಬ್ಬಕ್ಕೆ ಬಂದ ಅತಿಥಿಗಳ ಜೊತೆ ಕಾಲ ಕಳೆಯಬಹುದು. ಇದು ಮಿಕ್ಸರ್‌ ಗ್ರೈಂಡರ್‌ ಗಿಂತ ತುಸು ದುಬಾರಿ ಎಂಬುದೇನೋ ನಿಜ, ಆದರೆ ಇದರಿಂದ ಆಗುವ ಸಹಾಯ ಮಿಕ್ಸಿಗಿಂತ 10 ಪಟ್ಟು ಹೆಚ್ಚು! ಇದಕ್ಕೆ ಒಮ್ಮೆ ಅಡ್ಜಸ್ಟ್ ಆಗಿಬಿಟ್ಟರೆ ನಿಮ್ಮ ಎಲ್ಲಾ ಕೆಲಸ ಸಲೀಸು. ಈ ಸಲದ ನವರಾತ್ರಿ ಹಬ್ಬಕ್ಕೆ ಎಲ್ಲಾ 10 ದಿನಗಳೂ ನೀವು ಫಾಸ್ಟ್ ಆಗಿ ಅಡುಗೆ ಕೆಲಸ ಮುಗಿಸಿ, ಗೊಂಬೆಗಳ ಜೊತೆ ಅತಿಥಿಗಳ ಮಧ್ಯೆ ಹೆಚ್ಚಿನ ಸಮಯ ಕಳೆಯಲು, ಕೂಡಲೇ ಈ ಗೃಹೋಪಕರಣಗಳನ್ನು ಖರೀದಿಸಿ. ಹ್ಯಾಪಿ ನವರಾತ್ರಿ!

ಎಂ. ದೀಪಿಕಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ