– ರಾಘವೇಂದ್ರ ಅಡಿಗ ಎಚ್ಚೆನ್

ಆರ್.ಎಸ್.ಪಿ ಫಿಲಂ ಪ್ರೊಡಕ್ಷನ್ಸ್ ಮತ್ತು ‘ಲೋಕೂರ್ ಫಿಲಂಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ, ಹಾಲೇಶ್ ನಟನೆ ಮತ್ತು ನಿರ್ದೇಶನದ ಚಿತ್ರ‘ರತ್ನಾಪುರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಪತ್ರಿಕಾಗೋಷ್ಠಿ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋ ದಲ್ಲಿ ನೆರವೇರಿತು.

FB_IMG_1754647328839

ರತ್ನಾಪುರ ಚಿತ್ರದ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಸಿರಿ ಮ್ಯೂಸಿಕ್ ಅವರ ಸಹಯೋಗ ದೊಂದಿಗೆ ಜರುಗಿದ್ದು ಈ ಕಾರ್ಯಕ್ರಮದಲ್ಲಿ ರತ್ನಾಪುರ ಚಿತ್ರದ ನಿರ್ಮಾಪಕರು ರವಿಅಣ್ಣ ಪೂಜಾರಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷರು  ಪ್ರವೀಣ ಶೆಟ್ಟರ ಅವರು ಹಾಗೂ ರತ್ನಾಪುರ ಚಿತ್ರದ ಡೈರೆಕ್ಟರ್ ಹಾಲೇಶ್ ಲೋಕುರ್ ಸೇರಿದಂತೆ  ಇನ್ನಿತರರು ಭಾಗಿಯಾಗಿದ್ದರು.

FB_IMG_1754647310000

ಚಿತ್ರ ಉತ್ತರ ಕರ್ನಾಟಕದ ಜಾನಪದ ಆಚರಣೆ ಭಂಡಾರ ಉತ್ಸವ ಕುರಿತು ಕಥೆ ಹೊಂದಿದ್ದು ಬಹುತೇಕ ಸಿನಿಮಾವನ್ನು ಲಾಟೀನು, ದೊಂದಿ ಬೆಳಕಿನಲ್ಲಿ ಚಿತ್ರೀಕರಣ ಮಾಡಲಾಗಿದೆ.
ಸಂಗೀತ ನಿರ್ದೇಶಕ ಪ್ರಸನ್ನ ಭೋಜಶೆಟ್ಟರ್ ಇದರ ಸಂಗೀತ ನಿರ್ದೇಶಕ ಆಗಿದ್ದು ಹಾಡುಗಳು ಇಂಪಾಗಿ ಕೇಳುವಂತಿದೆ.

FB_IMG_1754647319561

ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಚಿತ್ರಕ್ಕೆ ಶುಭ ಹಾರೈಸಿದರು  ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ಈ ಸಂದರ್ಭದಲ್ಲಿ ಹೇಳಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ