ಶರತ್ ಚಂದ್ರ

ಶಿವರಾಜ್ ಕುಮಾರ್ ನಟಿಸುತ್ತಿರುವ 135 ನೇ ಚಿತ್ರದ ಮುಹೂರ್ತ ಸರಳವಾಗಿ ಮೈಸೂರು ಚಾಮುಂಡಿ ಬೆಟ್ಟದಲ್ಲಿರುವ ನಂದಿಯ ಸಮ್ಮುಖದಲ್ಲಿ ನಡೆದಿದೆ.

ಅಂಡಮಾನ್, ಕವಚ ಚಿತ್ರಗಳ ನಂತರ ತಂದೆ ಮತ್ತು ಮಗಳ ಬಾಂಧವ್ಯವುಳ್ಳ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ.

1000646631

ಅಂದ ಹಾಗೆ ಈ ಚಿತ್ರದ ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ಆಯ್ಕೆಯಾಗಿದ್ದಾರೆ. ಹಿಂದೆ ಶಿವಣ್ಣ ನಟಿಸಿದ್ದ ಮಾಸ್ ಲೀಡರ್ ಚಿತ್ರದಲ್ಲಿ ಸಣ್ಣ ಪಾತ್ರ ಒಂದರಲ್ಲಿ ಅಭಿನಯಿಸಿ ಶಿವಣ್ಣನ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದ ಶರ್ಮಿಳಾ ‘ಡ್ಯಾಡ್ ‘ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಸಿಕ್ಕಿದೆ.

1000646636

ಶರ್ಮಿಳಾ ಮಾಂಡ್ರೆ 2007 ರಲ್ಲಿ ಸಜನಿ ಎಂಬ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಕನ್ನಡದಲ್ಲಿ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅನುಭವವಿರುವ ಶರ್ಮಿಳಾ ಅವರಿಗೆ ಈ ಚಿತ್ರದಲ್ಲಿ ಒಂದು ಒಳ್ಳೆ ಪಾತ್ರ ಸಿಕ್ಕಿದೆ.

1000646638

ಸಿನಿಮಾದ ಬಗ್ಗೆ ಹೆಚ್ಚಿನ ವಿವರಗಳನ್ನು ಬಿಟ್ಟು ಕೊಡದ ಚಿತ್ರತಂಡ, ಒಟ್ಟಿನಲ್ಲಿ ಇದು ತಂದೆಯ ಭಾವನಾತ್ಮಕ ಸಂಬಂಧಗಳ ಕುರಿತಾದ ಚಿತ್ರ ಎಂದಷ್ಟೇ ಹೇಳಿಕೊಂಡಿದೆ. ಶರ್ಮಿಳ ಅವರ ಪಾತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಅನಾವರಣ ಗೊಳ್ಳಲಿದೆ.

1000646640

ಕೃಷ್ಣ, ಈ ಬಂಧನ, ನವಗ್ರಹ, ಕರಿ ಚಿರತೆ ಗಾಳಿಪಟ 2 ಮುಂತಾದ ಚಿತ್ರಗಳಲ್ಲಿ ಶರ್ಮಿಳಾ ಗಮನ ಸೆಳೆದಿದ್ದು ಗ್ರಾಮರ್ ಮತ್ತು ಹಳ್ಳಿಯ ಹುಡುಗಿಯ ಪಾತ್ರ ಹೀಗೆ ಎಲ್ಲ ಪಾತ್ರಗಳಿಗೆ ಒಪ್ಪುವ ಕಲಾವಿದೆ ಶರ್ಮಿಳಾ ಮಾಂಡ್ರೆ.

ಇತ್ತೀಚೆಗೆ ಯಾವುದೇ ಹೊಸ ಪಾತ್ರಗಳನ್ನು ಒಪ್ಪಿಕೊಳ್ಳದೆ, ಡ್ಯಾಡ್ ಚಿತ್ರವನ್ನು ಒಪ್ಪಿ ಕೊಂಡಿರುವುದನ್ನು ನೋಡಿದರೆ ಪಾತ್ರದಲ್ಲಿ ಏನೋ ವಿಶೇಷತೆ ಇರಬಹುದು ಅನಿಸುತ್ತದೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ