ಬಿಗ್ ಬಾಸ್… ಈ ಬಾರಿಯ ಥೀಮ್ ಯಾವುದು? ಮೊದಲ ಪ್ರೋಮೋದಲ್ಲೇ ಥೀಮ್ ಅನಾವರಣವಾಗುತ್ತೋ ಇಲ್ವೋ ಕಾದು ನೋಡ್ಬೇಕು. ಬಿಗ್ ಬಾಸ್ ಲೋಗೋ ಪ್ರೋಮೊ ನೋಡಿರೋರಿಗೆ ಶೀಘ್ರದಲ್ಲೇ ಅಧಿಕೃತ ಪ್ರೋಮೊ ಕಣ್ತುಂಬಿಕೊಳ್ಳೋ ಘಳಿಗೆ ಹತ್ತಿರದಲ್ಲಿದೆ.
ಸುದೀಪ್ ಹುಟ್ಟುಹಬ್ಬಕ್ಕೆ ಬಿಗ್ ಬಾಸ್ ಪ್ರೋಮೊ ರಿಲೀಸ್ ಆಗಲಿದೆ ಎಂಬ ಟಾಕ್ ಶುರುವಾಗಿದೆ. ಸೆಪ್ಟೆಂಬರ್ 2 ರಂದು ಕಿಚ್ಚನ ಫ್ಯಾನ್ಸ್ ಗೆ ಡಬಲ್ ಧಮಾಕ.. ಒಂದು ಬಿಗ್ ಬಾಸ್ ಪ್ರೋಮೊ ರಿಲೀಸ್ ಆದ್ರೆ ಇನ್ನೊಂದು ವಿಷ್ಣುವರ್ಧನ್ ಸ್ಮಾರಕ್ಕಾಗಿ ಹೋರಾಡಿದ ಫ್ಯಾನ್ಸ್ ಗೆ ವಿಷ್ಣುವರ್ಧನ್ ಪ್ರತಿಮೆ ಬ್ಲೂ ಪ್ರಿಂಟ್ ಸಿಗಲಿದೆ.ಬಿಗ್ ಬಾಸ್ ಶುರುವಾಗೋ ಮೊದಲೇ ಯಾರ್ಯಾರು ಈ ಬಾರಿ ಬಿಬಿಕೆ ಮನೆಗೆ ಹೋಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಅದ್ರಲ್ಲೂ ಪ್ರತಿ ಬಾರಿ ಕಂಟ್ರೋವರ್ಸಿಯ ಸುಳಿಯಲ್ಲಿ ಸಿಕ್ಕವರಿಗೆ ಅವಕಾಶ ಸಿಗ್ತಿದೆ. ಹಾಗೆಯೇ ಈ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಕಂಟ್ರೋವರ್ಸಿ ಸ್ಟಾರ್ ಆಗಿರೋರು ಯಾರು ಅಂದ್ರೆ ಯಶ್ ತಾಯಿ ಪುಷ್ಪ, ಮಡೆನೂರು ಮನು ಹಾಗು ಸಮೀರ್ ಎಂ ಡಿ.
ಬಿಗ್ ಬಾಸ್ 12 ಗೆ ಈ ತ್ರಿಮೂರ್ತಿಗಳು ಹೋದ್ರೆ ಹೇಗೆ ಅನ್ನೋ ಟಾಕ್ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಈ ಮೂವರಲ್ಲಿ ಒಬ್ರು ಬಿಬಿಕೆ ಮನೆ ಹೋದ್ರು ಪ್ಲಸ್ ಪಾಯಿಂಟ್ ಆಗಲಿದೆ. ನಿರ್ಮಾಪಕಿ ಪುಷ್ಪ ಈಗಾಗಲೇ ಮಾತಿನಿಂದಲೇ ತಮ್ಮ ಸಿನಿಮಾ ಪ್ರಚಾರ ಮಾಡಿ ಹಾಲ್ ಚಲ್ ಎಬ್ಬಿಸಿದ್ದಾರೆ.. ಹಾಗೆ ಕಾಂಟ್ರೋವರ್ಸಿನೂ ಮೈ ಮೇಲೆ ಎಳೆದುಕೊಂಡಿದ್ದಾರೆ. ಜನರಿಗೆ ಪುಷ್ಪಮ್ಮ ಮಾತಿನ ಮೇಲೆ ಹೆಚ್ಚು ಗಮನ ಏನು ಮಾತಾಡ್ತಾರೊ..ಇವರ ಹೇಳಿಕೆಯಿಂದ ಯಾರಿಗೆ ಏನು ಗ್ರಹಚಾರ ಕಾದಿದೆಯೋ ಅಂತಾಲೆ ಯೋಚಿಸುತ್ತಾರೆ.
ಇನ್ನು ರೀಸೆಂಟ್ ಕಾಂಟ್ರವರ್ಸಿ ಮೂಲಕ ಸೌಂಡ್ ಮಾಡಿದ್ದ ಮಡೆನೂರು ಮನು ಈ ಸೀಸನ್ ಗೆ ಎಂಟ್ರಿ ಕೊಟ್ರು ಆಶ್ಚರ್ಯ ಇಲ್ಲ ಎನ್ನಲಾಗುತ್ತಿದೆ. ಹಾಗೇನಾದ್ರೂ ಮನು ಬಿಬಿಕೆ ಮನೆಗೆ ಹೋದ್ರೆ ಅವರಿಗೆ ಪ್ಲಸ್ ಪಾಯಿಂಟ್ ಆಗೋದು ಪಕ್ಕಾ. ಜೊತೆಗೆ ಖ್ಯಾತ ಯುಟ್ಯೂಬರ್ ಹಾಗೂ ಇತ್ತೀಚೆಗೆ ತಮ್ಮ ವಿಡಿಯೋಗಳ ಮೂಲಕ ಸಂಚಲನ ಸೃಷ್ಟಿಸಿದ್ದ ಸಮೀರ್ ಅವರು ಬಿಗ್ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.