ಸಾಮಾನ್ಯವಾಗಿ ಸೆಲೆಬ್ರೆಟಿಗಳು ತಮ್ಮ ಮಕ್ಕಳ ಫೋಟೋ ವಿಡಿಯೋಗಳನ್ನಗಳನ್ನ ಪಬ್ಲಿಕ್ನಲ್ಲಿ ತೋರಿಸಲು ಅಷ್ಟಾಗಿ ಇಷ್ಟಪಡೋದಿಲ್ಲ.. ಆದ್ರೂ ಕೆಲವರಿಗೆ ಅವರ ಮಕ್ಕಳು ನೋಡಲು ಹೇಗಿರುತ್ತಾರೆ ಎಂಬ ಕೂತೂಹವಿರುತ್ತೆ.. ಹೀಗಾಗಿ ಕದ್ದುಮುಚ್ಚಿ ಫೋಟೋಗಳನ್ನ ಕ್ಲಕ್ಕಿಸುತ್ತಾರೆ.. ಈ ಹಿಂದೇ ಆಲಿಯಾ ಭಟ್ ಅನುಷ್ಕಾ ಶಮಾ ಮಗಳ ವಿಚಾರದಲ್ಲೂ ಇದೇ ರೀತಿ ಆಗಿತ್ತು.. ಕೊನೆಗೆ ಆಲಿಯಾ ಹಾಗೂ ರಣ್ಬೀರ್ ಕಪೂರ್ ಅವರ ಮಗಳ ಫೋಟೋವನ್ನ ರಿವೀಲ್ ಮಾಡಿದ್ರು.. ಆದ್ರೆ ಅನುಷ್ಕಾ ವಿರಾಟ್ ದಂಪತಿ ಮಾತ್ರ ತಮ್ಮ ಇಬ್ಬರು ಮಕ್ಕಳ ಫೋಟೋವನ್ನ ಇನ್ನು ರಿವೀಲ್ ಮಾಡಿಲ್ಲ.. ಆದ್ರೂ ಕೆಲವೊಮ್ಮೆ ಅವ್ರ ಮಕ್ಕಳ ಫೋಟೋಗಳು ವೈರಲ್ ಆಗುತ್ತೆ.
ಯೆಸ್, ಇದೀಗ ದೀಪಿಕಾ ಪಡುಕೋಣೆ ಅವರ ಮಗಳ ವಿಚಾರದಲ್ಲು ಇದೇ ಆಗಿದೆ.. ದೀಪಿಕ ರ್ವೀರ್ ದಂಪತಿಗೆ ಮಗುವಾಗಿ ಇದೇ ಸೆಪ್ಟೆಂಬರ್ಗೆ 1 ವರ್ಷ ಆಗುತ್ತೆ.. ಆದ್ರೆ ಇನ್ನೂ ಕೂಡ ಅವರು ತಮ್ಮ ಮಗಳು ದುವಾ ಫೋಟೋವನ್ನ ಎಲ್ಲೂ ಹಂಚಿಕೊಂಡಿಲ್ಲ.. ಮಗಳ ಮುಖವನ್ನ ರಿವೀಲ್ ಮಾಡಿಲ್ಲ.. ಹಾಗಿದ್ದರೂ ಕೂಡ ಮುಂಬೈ ವಿಮಾನ ನಿಲ್ದಾಣದಲ್ಲಿ ದೀಪಿಕಾ ಮಗಳ ಫೋಟೋವನ್ನ ನೆಟ್ಟಿಗರೊಬ್ಬರು ಕಾಪ್ಚರ್ ಮಾಢಿದ್ದು, ವಿಡಿಯೋವನ್ನ ವೈರಲ್ ಮಾಡಿದ್ದಾರೆ.ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ದೀಪಿಕಾ ತಮ್ಮ ಮಗುವಿನ ಜೊತೆಗೆ ಪ್ರಯಾಣಿಸಿದ್ದಾರೆ ದೀಪಿಕಾ ಮಗುವನ್ನು ಅಪ್ಪಿಕೊಂಡು ಕುಳಿತಿದ್ದ ವೇಳೆ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ ವಿಡಿಯೋದಲ್ಲಿ ದುವಾ ಹೇಗಿದ್ದಾಳೆ ಅನ್ನೋದು ರಿವೀಲ್ ಆಗಿದೆ.ಈ ವೇಳೆ ದೀಪಿಕಾ ಆ ವ್ಯಕ್ತಿಯನ್ನು ರೆಕಾರ್ಡ್ ಮಾಡುವುದನ್ನು ನಿಲ್ಲಿಸುವಂತೆ ಕಟ್ಟುನಿಟ್ಟಾಗಿ ಹೇಳಿ ಗರಂ ಆಗಿದ್ದಾರೆ.. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇನ್ನು ದೀಪಿಕಾ ಈ ಹಿಂದೆಯೂ ಸಾಕಷ್ಟು ಬಾರಿ ತಮ್ಮ ಮಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡದಂತೆ ಪಾಪರಾಜಿಗಳನ್ನಗಳನ್ನು ವಿನಂತಿಸಿದ್ದಾರೆ. ಹೀಗಾಗಿ ಯಾವುದೇ ಪಾಪರಾಜಿಗಳು ಅವರ ಮಗಳ ಮುಖದ ಮೇಲೆ ಎಲ್ಲೂ ಫೋಕಸ್ ಮಾಡಿಲ್ಲ.. ಆದ್ರೆ ಮುಂಬೈ ವಿಮಾನ ನಿಲ್ದಾಣದಿಲ್ಲ ಒಬ್ಬ ವ್ಯಕ್ತಿ ದುವಾ ಫೋಟೋ ಸಿಕ್ರೇಟ್ ಆಗಿ ತೆಗೆದು ಸಿಕ್ಕಿಬಿದ್ದಿದ್ದಾನೆ.