– ರಾಘವೇಂದ್ರ ಅಡಿಗ ಎಚ್ಚೆನ್.
ನಿರೂಪಕಿ ಅನುಶ್ರೀ ಇಂದು ಅದ್ಧೂರಿಯಾಗಿ ಹಸೆಮಣೆ ಏರಲಿದ್ದಾರೆ. ಇದಕ್ಕೂ ಮುನ್ನ ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅನುಶ್ರೀ ಅವರು ರೋಶನ್ ಎನ್ನುವವರ ಜೊತೆ ಮದುವೆ ಆಗುತ್ತಿದ್ದಾರೆ. ಗೌರಿ ಗಣೇಶ ಚತುರ್ಥಿಯಂದು ಅನುಶ್ರೀ ಹಾಗೂ ರೋಶನ್ ಅವರ ಅರಿಷಿಣ ಶಾಸ್ತ್ರದ ಕಾರ್ಯಕ್ರಮ ನಡೆದಿದೆ. ಸಂಗೀತ್, ಮೆಹೆಂದಿ ಎಲ್ಲವನ್ನು ಬಹಳ ಖಾಸಗಿಯಾಗಿ ಮಾಡಿಕೊಳ್ಳಲಾಗಿದೆ.
37 ವರ್ಷದ ಅನುಶ್ರೀ ಅವರು ಉದ್ಯಮಿ ರೋಶನ್ ಎನ್ನುವವರನ್ನು ಮದುವೆ ಆಗುತ್ತಿದ್ದಾರೆ. ಇವರು ಡಾ ರಾಜ್‌ಕುಮಾರ್ ಕುಟುಂಬದ ಸಂಬಂಧಿಕರು ಎಂದು ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ಸ್ವತಃ ಅನುಶ್ರೀ ಅವರೇ ಮಾಹಿತಿ ಕೊಡಬೇಕಿದೆ.
ಒಂದು ತಿಂಗಳ ಹಿಂದೆ ಅನುಶ್ರೀ ಹಾಗೂ ರೋಶನ್ ಮದುವೆ ಆಗುವ ವಿಷಯ ರಿವೀಲ್ ಆಗಿತ್ತು. ಆದರೆ ಈ ಬಗ್ಗೆ ಅವರು ರಿಯಾಕ್ಷನ್ ಕೊಟ್ಟಿರಲಿಲ್ಲ. ಇನ್ನು ‘ಮಹಾನಟಿ ಸೀಸನ್ 2’ ಶೋನಲ್ಲಿ ನಿರ್ದೇಶಕ ತರುಣ್ ಸುಧೀರ್, ಸೋನಲ್ ಮೊಂಥೆರೋ ಕೂಡ ಸಾಕಷ್ಟು ಬಾರಿ ಅನುಶ್ರೀಗೆ ಶೀಘ್ರದಲ್ಲಿ ಮದುವೆ ಆಗಲಿದೆ ಎಂದು ಸುಳಿವು ಕೊಟ್ಟಿದ್ದರು. ಬೆಂಗಳೂರಿನಲ್ಲಿ ಆಗಸ್ಟ್ 28ರಂದು ಅನುಶ್ರೀ ಹಾಗೂ ರೋಶನ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ.