`ಮದುವೆಯ ಬಂಧಅನುರಾಗದ ಅನುಬಂಧ…..’ ಇಡೀ ಜೀವಮಾನದ ಮರೆಯಲಾಗದ ಸುವರ್ಣ ದಿನದಂದು ಯಾವ ರೀತಿ ಮನೆಮಂದಿಯೆಲ್ಲ ಉಟ್ಟು ತೊಟ್ಟು ಸಂಭ್ರಮಿಸಬಹುದು ಅಲ್ಲವೇ?

ನವ ವಧು ಮಾತ್ರ ಮದುವೆ ಮನೆಯ ಕೇಂದ್ರಬಿಂದು ಅಂತಲ್ಲ, ಜೊತೆಗಿನವರು ಸಹ ಈ ತರಹದ ಲೈಟ್‌ ವೆಯ್ಟ್ ಸೀರೆಗಳ ಅತ್ಯಾಕರ್ಷಕ ಕಲೆಕ್ಷನ್‌ ನಿಂದ ಬೀಗಬಹುದು. ವಿವಿಧ ಬಗೆಯ ಟೆಕ್ಸ್ ಟೈಲ್ ಕರಕುಶಲತೆಯ ಸಂಯೋಜನೆಯಿಂದ ತಯಾರಿಸಲಾದ ಈ ಬಗೆಬಗೆಯ ಬಣ್ಣ ಬಣ್ಣದ ಸೀರೆಗಳು, ಎಲ್ಲಾ ಮದುವೆ ಸೀಸನ್‌ ಗೂ ಹೇಳಿ ಮಾಡಿಸಿದಂತಿವೆ.

ನವ ವಧುವಿನ ಈ ಸೀರೆಯಂತೂ ಸಂಪ್ರದಾಯ ಹಾಗೂ ಆಧುನಿಕತೆಗಳ ಸುಪರ್ಬ್‌ ಸಂಗಮ ಎನಿಸಿದೆ. ಇದನ್ನು ಕಾಂಜೀವರಂನ ಕ್ಲಾಸಿಕ್‌ ಪ್ಲೇರ್‌ ನೆಟ್‌ ಹಾಗೂ ಸಮಕಾಲೀನ ಕೋರಲ್ ಬಣ್ಣದಲ್ಲಿ ರೂಪಿಸಲಾಗಿದೆ. ಇದರ ಮೆಜೆಂತಾ, ಪರ್ಪಲ್ ಬಾರ್ಡರ್‌ ಹಾಗೂ ಪೀಕಾಕ್‌ ಡಿಸೈನ್‌ ಇದನ್ನು ಭವ್ಯವಾಗಿಸಿದೆ! ಪರಂಪರೆ ಹಾಗೂ ಆಧುನಿಕತೆಯ ಎರಡೂ ಭಾಗಗಳನ್ನು ಮೇಳೈಸಿ ಮುನ್ನಡೆ ಎಂದಿನ ಅತ್ಯಾಧುನಿಕ ನವ ವಧುವಿಗೆ ಇಂಥ ಸೀರೆಗಳು ಚೆನ್ನಾಗಿ ಒಪ್ಪುತ್ತವೆ.

Tanara-Fashion2

ಆಂಬ್ರೆ ಬಣ್ಣಗಳು ಹಾಗೂ ಜರ್ದೋಜಿ ಕಸೂತಿಯಿಂದ, ಬ್ರೀಝ್ ಆರ್ಗೆಂಝಾದಲ್ಲಿ ಡಿಸೈನ್‌ ಗೊಳಿಸಲಾದ ಹಳದಿ ಒಡಲಿನ ಲೈಟ್ ವೆಯ್ಟ್ ಸೀರೆಯಲ್ಲಿ ಹಿರಿ ಸೊಸೆ ಮಿಂಚುತ್ತಿದ್ದಾಳೆ. ಕಿರಿ ಸೊಸೆಯಾಗಿ ಆ ಮನೆಗೆ ಬಂದ ನವ ವಧು, ಬಟರ್‌ ಯೆಲ್ಲೋ ಕಾಂಜೀವರಂ ಸಿಲ್ಕ್ ಸೀರೆಯುಟ್ಟು ಸಂಭ್ರಮಿಸುತ್ತಿದ್ದಾಳೆ! ಅದರಲ್ಲಿ ಪೇಸ್ಟಲ್ ಬಣ್ಣಗಳಿಂದ ಮೀನಾಕಾರಿ ಸ್ಕೇವರ್‌ ನೆಟ್‌ ನಿಂದ ರೂಪಿಸಲಾದ ಡಿಸೈನ್‌ ಅತ್ಯಾಕರ್ಷಕವಾಗಿದೆ. ಹಳದಿ ಹಾಗೂ ಗುಲಾಬಿ ಕಿತ್ತಳೆಯ ಡಬಲ್ ಬಾರ್ಡರ್‌ ಇವಳ ಸೀರೆಯನ್ನು ಅತ್ಯಾಕರ್ಷಕ ಮಾಸ್ಟರ್‌ ಪೀಸ್‌ ಆಗಿಸಿದೆ. ಕೇವಲ 25 ದಿನಗಳಲ್ಲಿ ಹಸ್ತಗಳಲ್ಲೇ ನೇಯ್ದು ರೂಪುಗೊಂಡ ಈ ಸೀರೆಯ ಸೊಬಗನ್ನು ಉಟ್ಟುಕೊಂಡೇ ನೋಡಬೇಕು!

ಗೋಲ್ಡನ್‌ ಯೆಲ್ಲೇ ಕ್ರೇಪ್‌ ನಿಂದ ರೂಪುಗೊಂಡ ಈ ಕಾಂಜೀವರಂ ಸಿಲ್ಕ್ ಸೀರೆ, ತನ್ನ ಪೀಕಾಕ್‌ ಡಿಸೈನ್‌ ನಿಂದ ಕಣ್ಮನ ತುಂಬಿಸುತ್ತಿದೆ. ಜೊತೆಗಿನ ಕೋಮ್ ಕಲರ್‌ ಕಾಂಬಿನೇಶನ್‌ ನಿಂದಾಗಿ, ವಸಂತ ಋತುವಿನ ಧಾರೆಯ ಮುಹೂರ್ತಗಳಿಗೆ ಹೇಳಿ ಮಾಡಿಸಿದಂತಿರುತ್ತದೆ. ಈ ಸೀರೆಯ ಸ್ಪೆಷಾಲಿಟಿ ಇರುವುದೇ ಇದರ ಆಲ್ ಓವರ್‌ ಮ್ಯಾಟ್‌ ವೀಲ್ ‌ಎಫೆಕ್ಟ್ ನಲ್ಲಿ. ಮುಂಜಿ, ಮದುವೆಯಂಥ ಯಾವುದೇ ಶುಭ ಸಮಾರಂಭಗಳಿಗೆ ಹೆಚ್ಚಿನ ಕಳೆಗಟ್ಟುತ್ತದೆ. ಅದ್ಭುತ ಕರಕುಶಲ ಕಲೆ ಇದರ ಪ್ಲಸ್‌ ಪಾಯಿಂಟ್‌.

Tanara-Fashion3

ಪ್ಲೇನ್‌ ಹಳದಿ ಒಡಲಿನ ಈ ಬೆಂಗಾಲ್ ಸಿಲ್ಕ್ ಸೀರೆ ತನ್ನ ಕಾಂಧಾ ಕಸೂತಿ, ಹೊಳೆಯುವ ಸೀಕ್ವೆನ್ಸ್, ಕೈಗಳ ಪೇಂಟಿಂಗ್‌ ನಿಂದ ಇದನ್ನು ರೂಪಿಸಲಾಗಿದೆ. ಇದು ಬೇಸಿಗೆಯ ಸೀಸನ್ನಿನ ಶುಭ ಸಮಾರಂಭಗಳಿಗೆ ಹೆಚ್ಚು ಪೂರಕ. ಈ ವೈಟ್‌ ವೆಯ್ಟ್ ಸೀರೆಯನ್ನು ಸುಲಭವಾಗಿ ಉಡಬಹುದಾಗಿದೆ. ಈ ಆಧುನಿಕ ಬೀಗಿತ್ತಿಯರು ಈ ರೀತಿ ತಮ್ಮ ಅಚ್ಟುಮೆಚ್ಚಿನ ಆಯ್ಕೆಯ ಸೀರೆಗಳೊಂದಿಗೆ ಮಕ್ಕಳ ಮದುವೆಯಲ್ಲಿ ಮಿಂಚುತ್ತಿದ್ದಾರೆ!

ದಟ್ಟ ನೀಲಿ ಬಣ್ಣದ ಅತ್ಯಾಕರ್ಷಕ ಶೇಡ್ಸ್ ನ ಕ್ರೇಪ್‌ ಫ್ಯಾಬ್ರಿಕ್ಸ್ ನಲ್ಲಿ ರೂಪುಗೊಂಡ ಈ ಪೀಕಾಕ್‌ ಡಿಸೈನಿನ ಸೀರೆ, ಅತ್ಯುತ್ತಮ ಚಿತ್ರಗಳ ವಿನ್ಯಾಸ, ಕಸೂತಿಯಿಂದಾಗಿ ರಿಚ್‌ ಗ್ರಾಂಡ್‌ ಲುಕ್ಸ್ ಪಡೆದಿದ್ದರೆ, ನವ ವಧುವಿನ ಅತ್ತೆ ಉಟ್ಟಂಥ ಲೈಟ್‌ ಬಾಟಲ್ ಗ್ರೀನ್ ಸೀರೆ, ಅದರಲ್ಲಿ ಬುಟ್ಟಾ ಡಿಸೈನ್‌, ಗೋಲ್ಡನ್‌ ಬಾರ್ಡರ್‌ ನಿಂದಾಗಿ ನಿಗಿನಿಗಿ ಹೊಳೆಯುತ್ತಿದೆ. ಹೀಗಾಗಿ ಈ ಮದುವೆ ಸಮಾರಂಭಕ್ಕಾಗಿ ಮನೆ ಮಂದಿಯೆಲ್ಲಾ ಕಾಂಜೀವರಂ ಸಿಲ್ಕ್ ಸೀರೆಗಳಲ್ಲಿ ಭವ್ಯವಾಗಿ ಮಿಂಚುತ್ತಿದ್ದಾರೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ