ನವ ವಧು ಬೇರೆ ಬೇರೆ ತರಹದ ಇನ್ನರ್ ವೇರ್ ಆರಿಸಬೇಕಾದ ಅಗತ್ಯವೇನೆಂದು ತಿಳಿಯೋಣವೇ.....?
ಪರ್ಫೆಕ್ಟ್ ಆಗಿ ಕಾಣಿಸಿಕೊಳ್ಳಲು ಹುಡುಗಿಯರು ಬಾಹ್ಯ ಡ್ರೆಸೆಸ್ ಗಳ ಕುರಿತು ಬಹಳ ಎಚ್ಚರಿಕೆ ವಹಿಸುತ್ತಾರೆ. ಆದರೆ ಇನ್ನರ್ ವೇರ್ ಕುರಿತು ಇಷ್ಟು ಜಾಗೃತಿ ವಹಿಸುವುದಿಲ್ಲ. ಅದೂ ಅಷ್ಟೇ ಮುಖ್ಯ ಎಂಬುದನ್ನು ನಿರ್ಲಕ್ಷಿಸಬಾರದು. ಸಾಮಾನ್ಯವಾಗಿ ನವ ವಧು ಸಹ ಎಲ್ಲಾ ಒಂದೇ ಬಗೆಯ ಪ್ಯಾಂಟಿ ಆರಿಸುತ್ತಾಳೆ. ಇಂಥ ಹೊಂದದ ಇನ್ನರ್ ವೇರ್ ಗಳಿಂದಾಗಿ ಅವಳು ಅತ್ಯುತ್ತಮ ಬ್ರೈಡಲ್ ವೇರ್ ನಲ್ಲೂ ಅನ್ ಕಂಫರ್ಟೆಬಲ್ ಎನಿಸುತ್ತಾಳೆ. ಹೀಗಾಗಿ ಅವಳು ಬೇರೆ ಬೇರೆ ಪ್ಯಾಂಟಿ ಆರಿಸಬೇಕಾಗುತ್ತದೆ. ಆಗ ಕಂಫರ್ಟ್ ಪರ್ಫೆಕ್ಷನ್ ಸಹಜವಾಗಿ ಸಿಗುತ್ತದೆ.
ಬ್ರೀಫ್ ಪ್ಯಾಂಟಿ : ಇದು ಗುಪ್ತಾಂಗಗಳಿಗೆ ಪೂರಾ ಕವರೇಜ್ ನೀಡುತ್ತದೆ. ಇದರ ಎಲಾಸ್ಟಿಸಿಟಿ, ಹೊಕ್ಕಳು ಸೊಂಟವನ್ನು ಕವರ್ ಮಾಡುತ್ತದೆ. ಮುಟ್ಟಾದಾಗ ಇಂಥದ್ದೇ ಪ್ಯಾಂಟಿ ಧರಿಸಬೇಕು. ಆ ದಿನಗಳಲ್ಲಿ ಹೆಚ್ಚು ಓಡಾಟ, ಸಪೋರ್ಟ್ ಬೇಕಿದ್ದರೆ, ಇಂಥ ಪ್ಯಾಂಟಿ ಬೆಸ್ಟ್. ಇದರಲ್ಲಿ ಪ್ಯಾಡ್ ಅತ್ಯುತ್ತಮವಾಗಿ ಕೂರುತ್ತದೆ, ಹೀಗಾಗಿ ಬಟ್ಟೆ ಗಲೀಜಾಗುವ ಪ್ರಶ್ನೆ ಇಲ್ಲ. ಈ ಪ್ಯಾಂಟಿಯನ್ನು ಹೈ ವೆಯ್ಸ್ಟ್ ಜೀನ್ಸ್ ಜೊತೆ ಧರಿಸಬಹುದು, ಆದರೆ ಲೋ ವೆಯ್ಸ್ಟ್ ಜೀನ್ಸ್ ಬೇಡ. ಏಕೆಂದರೆ ಹಿಂಭಾಗದಿಂದ ಪ್ಯಾಂಟಿ ಕಾಣುವ ಸಂಭವವಿದೆ.
ಹೈ ಕಟ್ ಬ್ರೀಫ್ ಪ್ಯಾಂಟಿ : ಇದನ್ನು ಲೋ ರೈಸ್ ಜೀನ್ಸ್ ಜೊತೆ ಧರಿಸಬಹುದು. ಇದರ ಎಲಾಸ್ಟಿಕ್, ಹೊಕ್ಕಳು ಸೊಂಟಕ್ಕಿಂತ ಒಂದೂವರೆ ಇಂಚು ಕೆಳಗೇ ಇರುತ್ತದೆ. ಇದು ಹೆಚ್ಚು ಕಡಿಮೆ ಬ್ರೀಫ್ ಪ್ಯಾಂಟಿಯಷ್ಟೇ ಆರಾಮದಾಯಕ ಎನಿಸುತ್ತದೆ. ಆದರೆ ಇದರ ಕವರೇಜ್ ಅದಕ್ಕಿಂತ ಕಡಿಮೆ.
ಬಾಯ್ ಶಾರ್ಟ್ಸ್ ಪ್ಯಾಂಟಿ : ಇದು ಹುಡುಗರ ಬಾಕ್ಸರ್ ಬ್ರೀಫ್ ತರಹ ಇರುತ್ತದೆ. ಇದರ ಎಲಾಸ್ಟಿಕ್ ಸೊಂಟಕ್ಕಿಂತ ತುಸು ಕೆಳಗೆ ಹಿಪ್ಸ್ ಲೈನ್ ಬಳಿ ಬರುತ್ತದೆ. ಇದರ ಲೆಗ್ ಹೋಲ್ಸ್ ನಿತಂಬಗಳವರೆಗೆ ಬರುತ್ತದೆ. ನೋಡಲು ಇದು ಬಹಳ ಸಣ್ಣ ಶಾರ್ಟ್ಸ್ ಅನಿಸುತ್ತದೆ. ಇದನ್ನು ನಿಮ್ಮಿಷ್ಟದ ಟೈಟ್ ಡ್ರೆಸ್ ಜೊತೆ ಧರಿಸಿರಿ. ಇದನ್ನು ಟೈಟ್ ಡ್ರೆಸ್ ಗಿಂತ ತುಸು ಕೆಳಗೆ ಸರಿಸಿ ಧರಿಸುವುದರಿಂದ, ಪ್ಯಾಂಟಿ ಶೇಪ್ ಗೋಚರಿಸದು.
ಬಿಕಿನಿ : ಇದನ್ನು ಹುಡುಗಿಯರು ದಿನ ಧರಿಸುತ್ತಾರೆ. ಇದು ಬಹಳ ಕಡಿಮೆ ಕವರೇಜ್ ನೀಡುತ್ತದೆ. ಇದನ್ನು ಮುಟ್ಟಿನ ದಿನಗಳಲ್ಲಿ ಧರಿಸಲೇ ಬೇಡಿ, ಹಾಗೆಯೇ ಟೈಟ್ ಡ್ರೆಸ್ ನೊಂದಿಗೂ ಸಹ. ಮುಟ್ಟಿನ ದಿನಗಳಲ್ಲಿ ಧರಿಸಿದಾಗ, ಸೋಂಕು ಹರಡುವ ಸಾಧ್ಯತೆ ಹೆಚ್ಚು. ಅಗತ್ಯಕ್ಕಿಂತ ಹೆಚ್ಚು ಟೈಟ್ ಡ್ರೆಸ್ ಧರಿಸ ಬಯಸಿದರೆ, ಇದನ್ನು ಕೊಳ್ಳಲೇ ಬೇಡಿ.
ಟಾಂಗಾ ಪ್ಯಾಂಟಿ : ಇದು ಕೇವಲ ಗುಪ್ತಾಂಗಗಳನ್ನು ಮಾತ್ರ ಕವರ್ ಮಾಡುತ್ತದೆ. ಇದರ ಸೈಡ್ ಕಟ್ ಬಲು ಡೀಪ್ ಎನಿಸುತ್ತದೆ. ಇದು ಸೊಂಟದಿಂದ ಹಿಪ್ ಬೋನ್ಸ್ ವರೆಗೂ ಕವರ್ ಮಾಡುತ್ತದೆ. ನೀವು ಧರಿಸಿದ ಪ್ಯಾಂಟಿನ ಹಿಂಭಾಗದಿಂದ, ಪ್ಯಾಂಟಿಯ ಶೇಪ್ ಕಾಣಿಸಬಾರದೆಂದು ನೀವು ಬಯಸಿದರೆ, ನೀವು ಇದನ್ನು ಟೈಟ್ ಸ್ಕರ್ಟ್, ಪ್ಯಾಂಟ್ ಅಥವಾ ಇತರ ತುಸು ಟೈಟ್ ಡ್ರೆಸ್ ಜೊತೆಗೆ ಧರಿಸಬಹುದು. ನಿಮಗೆ ಸೋಂಕು ಅಥವಾ ರಾಶೆಸ್ ಕಾಡುತ್ತಿದ್ದರೆ ಇದನ್ನು ಬಳಸಲೇಬೇಡಿ.