ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಹಿರಿಯ ನಟಿಯರಾದ ಜಯಮಾಲಾ, ಮಾಳವಿಕಾ ಅವಿನಾಶ್‌ ಮತ್ತು ಶೃತಿ ಭೇಟಿಯಾಗಿದ್ದಾರೆ. ಸಿಎಂ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್​ ಅವರಿಗೆ  ‘ಕರ್ನಾಟಕ ರತ್ನ’ ನೀಡಬೇಕೆಂದು ಮನವಿ ಮಾಡಿದ್ದಾರೆ.

ನಂತರ ಮಾತನಾಡಿದ ಜಯಮಾಲಾ, ವಿಷ್ಣುವರ್ಧನ್​ ಹಾಗೂ ಬಿ.ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಕೊಡಬೇಕೆಂದು ವಿನಂತಿ ಮಾಡಿದ್ದೇವೆ. ಸರೋಜಾದೇವಿ ಅವರ ಹೆಸರನ್ನು ರಸ್ತೆಗೂ ಇಡಬೇಕೆಂದು ವಿನಂತಿಸಿದ್ದೇವೆ. ಸಿಎಂ ಕ್ಯಾಬಿನೆಟ್​ನಲ್ಲಿ ಚರ್ಚೆ ಆಗಬೇಕು ಎಂದಿದ್ದಾರೆ ಎಂದು ಹೇಳಿದರು.

ನಟಿ ಮಾಳವಿಕಾ ಅವಿನಾಶ್ ಮಾತನಾಡಿ, ಡಾ.ವಿಷ್ಣುವರ್ಧನ್ ಅವರಿಗೆ 75ನೇ ವರ್ಷದ ಸಂದರ್ಭ. ಹೀಗಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕರ್ನಾಟಕ ರತ್ನಕ್ಕೆ ಮನವಿ ಮಾಡಿದ್ದೇವೆ. ಸಾಧ್ಯವಾದರೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡ್ತೇನೆ ಎಂದು ಭರವಸೆ ನೀಡಿದ್ದಾರೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದೇ ರೀತಿ ಬಹುಭಾಷಾ ತಾರೆ ಸರೋಜಾ ದೇವಿಯವರಿಗೂ ಕರ್ನಾಟಕ ರತ್ನ ನೀಡಬೇಕೆಂದು ಮನವಿ ಮಾಡಿದ್ದೇವೆ ಎಂದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ