ಈ ಹಿಂದೆ ತೆರೆಕಂಡ  ನಾನು ಮತ್ತು ಗುಂಡ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಸೆಳೆದಿತ್ತು.

ಇದೀಗ ಆ ಚಿತ್ರದ ಮುಂದುವರೆದ ಭಾಗವಾಗಿ ನಾನು ಮತ್ತು ಗುಂಡ-2 ತಯಾರಾಗಿದ್ದು. ‘ಈ ಶುಕ್ರವಾರ ( ಸೆ.5) ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಹಿಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ  ರಘುಹಾಸನ್ ಅವರೇ ಈ ಚಿತ್ರದ ಕಥೆ, ಚಿತ್ರಕಥೆ ಬರೆದು  ನಿರ್ದೇಶಿಸಿದ್ದು , ನಿರ್ಮಾಣದ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ.  ಈ ಚಿತ್ರದಲ್ಲಿ ರಾಕೇಶ್ ಆಡಿಗ, ರಚನಾ ಇಂದರ್ ನಾಯಕ ನಾಯಕಿಯಾಗ ನಟಿಸಿದ್ದಾರೆ.

1000665088

ಆರ್‌ಪಿ. ಪಟ್ನಾಯಕ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದುರುವ ಈ ಚಿತ್ರದ  ಹಾಡುಗಳು ಈಗಾಗಲೇ  ಪ್ರೇಕ್ಷಕರ ಮನ ಗೆದ್ದಿವೆ.

ಸೆನ್ಸಾರ್‌ ಮಂಡಳಿ   ಚಿತ್ರಕ್ಕೆ ಯಾವುದೇ ಕಟ್ ಸೂಚಿಸದೆ ‘ಯು/ಎ’ ಕೊಟ್ಟಿದೆ, ಶಂಕರ ನಿಧನನಾದ ಮೇಲೆ ಆತನ ಮಗನಿಂದ ಕಥೆ ಕಂಟಿನ್ಯೂ ಆಗುತ್ತದೆ. ರಾಕೇಶ್ ಅಡಿಗ ಶಂಕರನ ಮಗನಾಗಿ ನಟಿಸಿದ್ದು, ಆತನಿಗೆ ನಾಯಿಯೇ ಪ್ರಪಂಚ. ಸೋಷಿಯಲ್ ಕನ್‌ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ  ಚಿತ್ರದಲ್ಲಿದೆ

1000665086

ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು, ಬೆಂಗಳುರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

1000665092

ಸಿಂಬು ಜೊತೆ ಬಂಟಿ ಎಂಬ ನಾಯಿಯ ಜತೆ ಬಾಲನಟ ಜೀವನ್ ಕೂಡ. ಈ ಚಿತ್ರದಲ್ಲಿ ನಟಿಸಿದ್ದಾನೆ.

1000665090

ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ  ರಘು ಹಾಸನ್ ಅವರೇ ನಿರ್ಮಿಸಿರುವ  ನಾನು ಮತ್ತು ಗುಂಡ-2 ಚಿತ್ರಕ್ಕೆ ಆರ್.ಪಿ. ಪಟ್ನಾಯಕ್  ಅವರ ಸಂಗೀತ ಸಂಯೋಜನೆ, ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತ, ತನ್ವಿಕ್ ಅವರ ಛಾಯಾಗ್ರಹಣವಿದೆ. ಚಿತ್ರದ ಸಂಭಾಷಣೆ ಹಾಗೂ ಸಾಹಿತ್ಯವನ್ನು ರೋಹಿತ್ ರಮನ್ ರಚಿಸಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ