ಕೈಯಿಂದ ಹೆಣೆದ ಸ್ವೆಟರ್, ಶಾಲು, ಕ್ಯಾಪ್ ಇವು ಕೇವಲ ಚಳಿಯನ್ನಷ್ಟೇ ಓಡಿಸುವುದಿಲ್ಲ. ಹಲವು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನೂ ಸಹ ದೂರ ಓಡಿಸುತ್ತವೆ…..
2020ರಲ್ಲಿ ಶೇ.80ರಷ್ಟು ಭಾರತೀಯರು ಕೆಲಸ, ಆರೋಗ್ಯ ಹಾಗೂ ಇತರೆ ಆರ್ಥಿಕ ಕಾರಣಗಳಿಂದ ಒತ್ತಡಕ್ಕೆ ಸಿಲುಕಿದ್ದವರು ಎಂದು ಸಮೀಕ್ಷೆಯೊಂದರ ಅಂಕಿಅಂಶದಿಂದ ಗೊತ್ತಾಗಿತ್ತು. ಆ ಕಾರಣಗಳಿಂದಷ್ಟೇ ಅಲ್ಲ, ನಾವು ಪ್ರತಿದಿನ ಬೇರೆ ಕೆಲವು ಕಾರಣಗಳಿಂದ ಒತ್ತಡಕ್ಕೆ ತುತ್ತಾಗುತ್ತಿರುತ್ತೇವೆ. ಅದರಿಂದ ಹೊರಬರಲು ಆ್ಯಂಟಿ ಸ್ಟ್ರೆಸ್ ಸಂಗತಿಗಳ ಬಗ್ಗೆ ಯೋಚಿಸುವುದು ಅನಿವಾರ್ಯವಾಗಿದೆ. ಏಕೆಂದರೆ ನಾವು ಖುಷಿಯಿಂದಿರಬೇಕಿದೆ. ಪ್ರೊಡಕ್ಟಿವ್ ಯೋಚನೆಯ ಬಗ್ಗೆ ತರ್ಕಿಸಬೇಕಿವೆ ನಮ್ಮನ್ನು ನಾವು ಸ್ಟ್ರೆಸ್ ನಿಂದ ಹೊರತರಬೇಕಿದೆ.
ಇಂತಹ ಸ್ಥಿತಿಯಲ್ಲಿ ಹೆಣಿಗೆ ಒತ್ತಡದಿಂದ ಹೊರಬರಲು ಅತ್ಯಂತ ಉಪಯುಕ್ತ ಉಪಾಯವಾಗಿದೆ. ಹೆಣಿಗೆಯ ಕುರಿತಂತೆ ಕೆಲವರು ಹೇಳುವುದೇನೆಂದರೆ, ನಾವು ಇದರಿಂದ ಸುಸ್ತಿಗೊಳಗಾಗಿ. ಆಲಸಿಯಾಗುತ್ತೇವೆ. ಆದರೆ ನಿಮಗೆ ಒಂದು ವಿಷಯ ಗೊತ್ತಾ, ಹೆಣಿಗೆಯಿಂದ ನೀವು ಕ್ರಿಯಾಶೀಲರಾಗಿರುತ್ತೀರಿ. ಯಾವುದೇ ಒಂದು ವಿಷಯದ ಬಗ್ಗೆ ನಿಮ್ಮ ಗಮನವನ್ನು ಕೇಂದ್ರೀಕರಿಸುತ್ತೀರಿ. ರಿಲ್ಯಾಕ್ಸ್ ಮೂಡ್ ನಲ್ಲಿ ಇರುತ್ತೀರಿ. ನೆಗೆಟಿವ್ ವಿಚಾರಗಳಿಂದ ದೂರ ಇರುತ್ತೀರಿ. ಇದು ನಮ್ಮ ಮೆದುಳಿಗೆ `ಸ್ಟ್ರೆಸ್ ಬಸ್ಟರ್’ನ ಹಾಗೆ ಕೆಲಸ ಮಾಡುತ್ತದೆ ಎಂದು ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಹೆಣಿಗೆಯಿಂದ ಏನೇನು ಲಾಭಗಳಿವೆ ಎನ್ನುವುದನ್ನು ತಿಳಿದುಕೊಳ್ಳಿ.
ಮೆಡಿಟೇಶನ್ ನ ಹಾಗೆ…..
ಯಾವ ರೀತಿ ಮೆಡಿಟೇಶನ್ ಅಥವಾ ಧ್ಯಾನ ನಿಮ್ಮ ಮನಸ್ಸನ್ನು ಶಾಂತಗೊಳಿಸಿ, ನಿಮ್ಮ ಗಮನವನ್ನು ಕೇಂದ್ರೀಕೃತಗೊಳಿಸುವ ಕೆಲಸ ಮಾಡುತ್ತದೋ ಅದೇ ರೀತಿ ಹೆಣಿಗೆ ಕೂಡ ನಿಮ್ಮನ್ನು ಗುರಿಯತ್ತ ಕೇಂದ್ರೀಕರಿಸಿ, ನಿಮ್ಮನ್ನು ಒತ್ತಡದಿಂದ ದೂರಗೊಳಿಸುತ್ತದೆ.
ಅನೇಕ ಶೋಧಗಳಿಂದ ಸಾಬೀತಾದ ಸಂಗತಿಯೆಂದರೆ, ಹೆಣಿಗೆಯ ಕೆಲಸ ಯಾರನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆಂದರೆ, ಅವರು ಬಹುಬೇಗ ಉತ್ಸಾಹಿತರಾಗುತ್ತಾರೆ. ಒತ್ತಡಕ್ಕೆ ಸಿಲುಕುತ್ತಾರೆ ಹಾಗೂ ಚಿಕ್ಕ ಪುಟ್ಟ ಸಂಗತಿಗಳಿಂದ ಟೆನ್ಷನ್ ಗೆ ಒಳಗಾಗುತ್ತಾರೆ. ಇದು ಅವರನ್ನು ಮಾನಸಿಕವಾಗಿ ಆರೋಗ್ಯದಿಂದಿಡಲು ನೆರವಾಗುತ್ತದೆ.
ನೀವು ಟೆನ್ಷನ್ ಗೊಳಗಾದಾಗ ಕೈಕಾಲು ಅಲ್ಲಾಡಿಸುತ್ತೀರಿ, ಇಲ್ಲಿ ನೋವಿನಿಂದ ನರಳುತ್ತಿರಬಹುದು. ನಿಮ್ಮಲ್ಲಿ ಕೆಲವರಿಗೆ ಈ ಸಂವೇದನೆಗಳ ಅನುಭವ ಮಾಡಿಕೊಂಡಿರಬಹುದು ಅಥವಾ ಇಂಥದೇ ಕೆಲವು ಹೋಲಿಕೆಯಾಗುವ ಲಕ್ಷಣಗಳು ಗೋಚರಿಸಿರಬಹುದು. ಗೊತ್ತಿದ್ದೋ ಗೊತ್ತಿಲ್ಲದೆಯೋ, ನಮ್ಮ ಮೆದುಳು ಈ ರೀತಿಯ ಆಗುಹೋಗುಗಳಲ್ಲಿ ಸೇರ್ಪಡೆಗೊಂಡು, ನಮಗೆ ತೊಂದರೆ ಕೊಡುವ ಭಾವನೆಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅದೇ ರೀತಿ ನಾವು ಹೆಣಿಗೆಯ ಮುಖಾಂತರ, ಒಂದೇ ಸಂಗತಿಯನ್ನು ಮೇಲಿಂದ ಮೇಲೆ ಪುನರಾವರ್ತಿಸುತ್ತಿದ್ದರೆ, ನಮ್ಮ ಮೆದುಳಿನಲ್ಲಿ `ಹ್ಯಾಪಿ ಹಾರ್ಮೋನ್ಸ್’ ಸಕ್ರಿಯಗೊಂಡು ನಮ್ಮನ್ನು ರಿಲ್ಯಾಕ್ಸ್ ಗೊಳಿಸುವುದರ ಜೊತೆ ಜೊತೆಗೆ ನಮ್ಮನ್ನು ಖುಷಿಯಿಂದಿಡುವ ಕೆಲಸ ಮಾಡುತ್ತದೆ.
ಹೆಣಿಗೆ ಒಂದು ರೀತಿಯಲ್ಲಿ ಮೆಡಿಟೇಶನ್ ನಂತೆ. ಏಕೆಂದರೆ ಯಾವ ರೀತಿ ನೀವು ಧ್ಯಾನದ ಸಂದರ್ಭದಲ್ಲಿ ನಿಮ್ಮ ಸಂಪೂರ್ಣ ಗಮನವನ್ನು ಉಸಿರಾಟದ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸುತ್ತೀರೊ, ಅದೇ ರೀತಿ ಹೆಣಿಗೆಯ ಸಂದರ್ಭದಲ್ಲೂ ನೀವು ನಿಮ್ಮ ಹೆಚ್ಚಿನ ಕೆಲಸವನ್ನು ಕೈಗಳ ಮೇಲೆ ಕೇಂದ್ರೀಕೃತಗೊಳಿಸುತ್ತೀರಿ.
ಉತ್ಪಾದಕತೆಯ ಕೆಲಸ
ಆಲಸ್ಯದಿಂದಿರುವುದು ಹಾಗೂ ಕೆಲಸ ಮಾಡದೇ ಇರುವ ಕಾರಣದಿಂದ ನಾವು ಕ್ರಮೇಣ ಒತ್ತಡದ ಕಪಿಮುಷ್ಟಿಗೆ ಸಿಲುಕುತ್ತೇವೆ. ಇದು ಒತ್ತಡದ ಒಂದು ಪ್ರಮುಖ ಲಕ್ಷಣವಾಗಿದೆ.
ಆದರೆ ನಾವು ಯಾವಾಗ ಹೆಣಿಗೆಯ ಮುಖಾಂತರ ಒಂದೇ ಕೆಲಸವನ್ನು ಮೇಲಿಂದ ಮೇಲೆ ಪುನರಾವರ್ತಿಸಿದಾಗ, ನಮಗೆ ಒಳ್ಳೆಯ ಅನುಭವ ಉಂಟಾಗುವುದರ ಜೊತೆ ಜೊತೆಗೆ ನಾವಿಂದು ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ಅನಿಸಲಾರಂಭಿಸುತ್ತದೆ. ಆ ಬಗ್ಗೆ ನೀವು ಪೂರ್ವ ಕಲ್ಪನೆ ಕೂಡ ಮಾಡಿಕೊಂಡಿರುವುದಿಲ್ಲ. ಇದರ ಮತ್ತೊಂದು ವಿಶೇಷತೆಯೆಂದರೆ, ನೀವು ಹೆಣಿಗೆಯ ಕೆಲಸ ಮಾಡುತ್ತಲೇ ಬೇರೆ ಕೆಲವು ಕೆಲಸಗಳನ್ನು ಕೂಡ ಮಾಡಬಹುದು. ನೀವು ನೆಟ್ ಫ್ಲಿಕ್ಸ್ ಅಥವಾ ಟಿ.ವಿಯಲ್ಲಿ ನಿಮ್ಮ ಮೆಚ್ಚಿನ ಸಿನಿಮಾ ಅಥವಾ ಕಾರ್ಯಕ್ರಮ ವೀಕ್ಷಿಸಬಹುದು. ಅಂದರೆ ಏಕಕಾಲಕ್ಕೆ ಎರಡು ಕೆಲಸ ಮಾಡಬಹುದು.
ದುಶ್ಚಟಗಳಿಂದ ದೂರ ಇಡುತ್ತದೆ
ಯಾವಾಗಲೂ ಒತ್ತಡದಲ್ಲಿ ಇರುವುದರಿಂದ ನಿಮ್ಮ ಮಾನಸಿಕ ಆರೋಗ್ಯ ಹದೆಗಡುವುದರ ಜೊತೆ ಜೊತೆಗೆ ಬೇರೆ ಕೆಲವು ಸಮಸ್ಯೆಗಳೂ ಹೆಚ್ಚುತ್ತವೆ. ಅಂದರೆ ಗಂಭೀರ ಖಿನ್ನತೆ, ಹೆಚ್ಚು ತಿನ್ನುವ ಅಭ್ಯಾಸ, ಅನರೆಕ್ಸಿಯಾ ಮುಂತಾದವು ನಿಮ್ಮ ತೊಂದರೆಗಳನ್ನು ಹೆಚ್ಚಿಸಬಹುದು. ಆದರೆ ಹೆಣಿಗೆ ಒಂದು ಸಾಮಾನ್ಯ ಆಗುಹೋಗು ಆಗಿದ್ದರೂ ಕೂಡ ಇದು ಇತರೆ ಸಾಮಾನ್ಯ ವಿಕಾರಗಳ ವಿರುದ್ಧ ಹೋರಾಡಲು ನಿಮ್ಮನ್ನು ಸನ್ನದ್ಧುಗೊಳಿಸುತ್ತದೆ.
ಆರೋಗ್ಯಕರ ಲಾಭಗಳು
ಯಾರು ಹೃದಯಕ್ಕೆ ಸಂಬಂಧಪಟ್ಟ ರೋಗ ಅಥವಾ ಇತರೆ ಸಮಸ್ಯೆಗಳು ಅಂದರೆ ಪೋಸ್ಟ್ ಟ್ರಾಮೆಟಿಕ್ ಸ್ಟ್ರೆಸ್ ಡಿಸಾರ್ಡರ್, ಅತಿಯಾದ ಒತ್ತಡ, ಕ್ರಾನಿಕ್ ಪೇನ್ ಮುಂತಾದ ಸಮಸ್ಯೆಗಳಿಂದ ಗ್ರಸ್ತರಾಗಿರುತ್ತಾರೊ, ಅವರಿಗೆ ತಮ್ಮ ಜೀವನದಿಂದ ಒತ್ತಡಮುಕ್ತರಾಗಿರಲು ಅವರು ಕೆಲವು ಚಟುವಟಿಕೆಗಳಲ್ಲಿ ತೊಡಗಿರಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಹೆಣಿಗೆ ಕೂಡ ಎಂತಹ ಒಂದು ಚಟುವಟಿಕೆಯೆಂದರೆ, ಇಂತಹ ಸ್ಥಿತಿಯಲ್ಲಿ ಥೆರಪಿಸ್ಟ್ ಕೂಡ ಅದನ್ನು ಮಾಡಲು ಸಲಹೆ ನೀಡುತ್ತಾರೆ.
ಹೀಗಾಗಿ ಯಾವುದೇ ಹಿಂಜರಿಕೆಯಿಲ್ಲದೆ, ನೀವು ಹೆಣಿಗೆಯನ್ನು ನಿಮ್ಮ ದೈನಂದಿನ ಜೀವನದ ಒಂದು ಭಾಗವಾಗಿಸಿಕೊಳ್ಳಿ ಹಾಗೂ ನಿಮ್ಮ ಜೀವನವನ್ನು ಒತ್ತಡರಹಿತಗೊಳಿಸಿಕೊಳ್ಳಿ.
– ಅಂಜಲಿ





