ಪತ್ನಿ : ಏನ್ರಿ…. ಈ ಸಲ ಬೇಸಿಗೆ ರಜೆಯಲ್ಲಿ ಎಲ್ಲಿಗೆ ಹೋಗೋಣ ಅಂತೀರಿ?

ಪತಿ : ಸಾಗುತ ದೂರ ದೂರ… ಮೇಲೇರು ಬಾರಾ ಬಾರಾ…. ನಾವಾಗುವ ಚಂದಿರ ತಾರಾ…

ಪತ್ನಿ : ಬಡ್ಕೊಂಡ್ರು ನಿಮ್ಮ ಬುದ್ಧಿಗೇ! ಮಕ್ಕಳೂ ಜೊತೇಲಿ ಬರ್ತಿದ್ದಾರೆ ಅಂತ ನೆನಪಿರಲಿ!

 

ಬಹಳ ದಿನಗಳಿಂದ ಕಾಯಿಲೆಯಲ್ಲಿ ನರಳುತ್ತಿದ್ದ ಪತ್ನಿ ಪತಿಯ ಬಳಿ, “ನಾನು ಸತ್ತ ಮೇಲೆ ನೀವು ಒಂಟಿಯಾಗಿ ಉಳಿಯಬಾರದು ಬೇರೆ ಮದುವೆ ಮಾಡಿಕೊಳ್ಳಿ. ಆದರೆ ನನ್ನ ಸಮಾಧಿ ಒಣಗುವವರೆಗಾದರೂ ಕಾಯುತ್ತೇನೆ ಎಂದು ನನಗೆ ಭಾಷೆ ಕೊಡಿ,” ಎಂದು ಕೇಳಿದಳು.

ಪತಿ ಆಗಲೆಂದು ಭಾಷೆ ಕೊಟ್ಟ. ಆಕೆ ಸತ್ತು ಹೋದಳು. ಅವನು ಪ್ರತಿ ದಿನ ಸಮಾಧಿ ಬಳಿ ಹೋಗಿ ಅಳುತ್ತಿದ್ದ. ಒಮ್ಮೆ ಸಮಾಧಿಯ ಬಳಿ ಕುಳಿತು ಈ ಮಣ್ಣು ಯಾವಾಗ ಒಣಗುತ್ತದೆ ಎಂದು ಯೋಚಿಸುತ್ತಿದ್ದ. ಆಗ ಅವನ ಮಗ ಒಂದು ಬಕೆಟ್‌ ನೀರಿನೊಂದಿಗೆ ಅಲ್ಲಿಗೆ ಬಂದು ಸಮಾಧಿಗೆ ನೀರು ಹಾಕಲಾರಂಭಿಸಿದ. ಇದನ್ನು ಕಂಡು ಅವನ ತಂದೆ ಏನೋ ಮಾಡುತ್ತಿರುವೆ ಎಂದು ಕೇಳಿದ್ದಕ್ಕೆ, “ಅಮ್ಮ ಸಾಯುವ ಮೊದಲು ತನ್ನ ಸಮಾಧಿ ಒಣಗದಂತೆ ಯಾವಾಗಲೂ ನೀರು ಹಾಕುತ್ತಿರಬೇಕೆಂದು ಭಾಷೆ ತೆಗೆದುಕೊಂಡಿದ್ದಾಳೆ,” ಎಂದು ಹೇಳಿದ.

ಪತಿ ಬೇಸ್ತು ಬಿದ್ದು ಮೂರ್ಛೆ ಹೋದ.

 

ಪತಿ : ಡಾರ್ಲಿಂಗ್‌, ನಾನು ನಿನ್ನನ್ನು ಎಷ್ಟು ಲವ್ ಮಾಡ್ತೀನಿ ಗೊತ್ತಾ? ನಿನಗಾಗಿ ಏನು ಬೇಕಾದರೂ ಮಾಡಬಲ್ಲೆ!

ಪತ್ನಿ : ಹೌದೇ? ಎಲ್ಲಿ…. ಹಾಗಾದರೆ ಭುಜಂಗಾಸನದಿಂದ ಶೀರ್ಷಾನಸದರೆಗೆ ಚೂರೂ ತಪ್ಪಿಲ್ಲದೆ ಎಲ್ಲಾ ಆಸನ ಮಾಡಿ ತೋರಿಸಿ!

 

ಟೀಚರ್‌ : ಕಿಟ್ಟಿ, ಮಾನವರಿಗೂ ಮೊಬೈಲ್‌ ಗೂ ಇರುವ ವ್ಯತ್ಯಾಸವೇನು?

ಕಿಟ್ಟಿ : ಬ್ಯಾಲೆನ್ಸ್ ಸರಿ ಇರದಿದ್ದರೆ ಮಾನವರು ಕಾಲು ಎತ್ತಿಟ್ಟು ನಡೆಯಲಾಗದು. ಆದರೆ ಬ್ಯಾಲೆನ್ಸ್ ಇಲ್ಲದಿದ್ದರೆ ಮೊಬೈಲ್ ‌ನಿಂದ ಕಾಲ್ ‌ಹೇಗೆ ಹೋದೀತು…?

 

ಪತ್ನಿ : ಅದು ಸರಿ, ನಿಮ್ಮ ಶರ್ಟ್‌ ನಲ್ಲಿ ಒಂದೂ ಕೂದಲು ಕಾಣಿಸೋದೇ ಇಲ್ಲವಲ್ಲ…? ಅದು ಹೇಗೆ?

ಪತಿ : ಅದಕ್ಕೆ…. ಏನು ಮಾಡಬೇಕು ಅಂತೀಯಾ?

ಪತ್ನಿ : ಈ ಸ್ಮಾರ್ಟ್‌ ನೆಸ್‌ ನಿಮ್ಮದಲ್ಲ, ಯಾವ ಮಿಟಕಲಾಡಿ ಇದನ್ನು ನಿಮಗೆ ಕಲಿಸಿದಳು ಅಂತ!!??

 

ಗರ್ಲ್ ಫ್ರೆಂಡ್‌ : ಹಾಯ್‌ ಡಿಯರ್‌, ನೀನು ನನಗಾಗಿ ಹುಲಿಯ ಬೇಟೆ ಆಡಬಲ್ಲೆಯಾ?

ಬಾಯ್ಫ್ರೆಂಡ್‌ : ಇದೆಷ್ಟರ ಮಹಾ ಕೆಲಸ? ಚಿಟಿಕೆ… ಚಿಟಿಕೆ ಹೊಡೆಯೋಷ್ಟರಲ್ಲಿ ಮುಗಿಸಿ ಬಿಡುವೆ! ಇದರ ಬದಲು ಬೇರೇನಾದರೂ ಕೇಳಬಾರದೇ ಡಾರ್ಲಿಂಗ್‌……?

ಗರ್ಲ್ ಫ್ರೆಂಡ್‌ : ಹೌದಾ…. ಹಾಗಾದರೆ ನಿನ್ನ  FB  ‌ಅಕೌಂಟ್‌ ನ ಪಾಸ್‌ ವರ್ಡ್‌ ಕೊಡು, ಸಾಕು.

ಬಾಯ್ಫ್ರೆಂಡ್‌ : ಅಯ್ಯೋ! ಇದರ ಬದಲು ಆ ಹೆಬ್ಬುಲಿ ಎಲ್ಲಿದೆ ಅಂತ ಹೇಳು. ಇದಕ್ಕಿಂತ ಅದನ್ನು ಬೇಟೆಯಾಡುವುದೇ ಎಷ್ಟೋ ಮೇಲು!

 

ಪ್ರೇಯಸಿ (ಬಿಕ್ಕಳಿಸುತ್ತಾ ಅಳುತ್ತಾ) : ಮತ್ತೆ… ಮತ್ತೆ… ನನ್ನ ಗಂಡನಿಗೆ ನಮ್ಮಿಬ್ಬರ ಅಫೇರ್‌ ಬಗ್ಗೆ ಗೊತ್ತಾಗಿಬಿಟ್ಟಿದೆ. ಈಗೇನು ಮಾಡೋದು?

ಪ್ರಿಯತಮ : ಅಷ್ಟೇ ತಾನೇ! ಆತನಿಗೆ ನನ್ನ ಹೆಂಡತಿಯ ಪರಿಚಯ ಮಾಡಿಸಿಕೊಡೋದು!

 

ಪ್ರಕಾಶ್‌ : ಅದು ಸರಿ ಕಣಯ್ಯ, ರಾತ್ರಿ 10 ಗಂಟೆ ಆದರೂ ನೀನು ಆನ್‌ ಲೈನ್‌ ಗೆ ಬರೋದೇ ಇಲ್ವಲ್ಲ….? ಏನು ನಿನ್ನ ಕಥೆ?

ಸತೀಶ್‌ : ರಾಶಿ ಪಾತ್ರೆ ತೊಳೆದು ಕೈ ಒರೆಸಿ ಬರುವಷ್ಟರಲ್ಲಿ 11 ಗಂಟೆ ಆಗಿಹೋಗುತ್ತೆ ಬಿಡು!

ಕಿಟ್ಟಿ ರಾತ್ರಿ 10 ಗಂಟೆಗೆ ದೌಡಾಯಿಸುತ್ತಾ ಮೆಡಿಕಲ್ ಸ್ಟೋರ್‌ ಗೆ ನುಗ್ಗಿದ. ಅವರು ಕೊಟ್ಟ ಔಷಧಿ ಕೊಂಡು ಹಣ ಕೊಟ್ಟ. ಆತ ಚಿಲ್ಲರೆ ಎಣಿಸಿ ಕೊಟ್ಟಾಗ ಕಿಟ್ಟಿ ಕೆರಳುವುದೇ?

ಕಿಟ್ಟಿ : ಅಲ್ಲ ಕಣಯ್ಯ, ಚಿಲ್ಲರೆ ಮಾತ್ರ ಕೊಟ್ಟಿದ್ದೀಯಲ್ಲ, ಸಕ್ಕರೆ ಪ್ಯಾಕೆಟ್‌ ನಿಮ್ಮ ತಾತಾ ಕೊಡ್ತಾನೇನು?

ಅಂಗಡಿಯವನು : ಸಕ್ಕರೆ ಕೊಡೋಕೆ ಇದೇನು ಕಿರಾಣಿ ಅಂಗಡಿಯೇ…..?

ಕಿಟ್ಟಿ : ಮತ್ತೆ ನೋಡಿಲ್ಲಿ…. ಇದರ ಮೇಲೆ ಶುಗರ್‌ ಫ್ರೀ ಅಂತ ಹಾಕಿದೆ!

 

ಡಾಕ್ಟರ್‌ : ವಯಸ್ಸಿಗೆ ಬಂದ ನಿಮ್ಮ ಮಗ ಈ ಪಾಟಿ ಹಣ್ಣುಗಾಯಿ ನೀರುಗಾಯಿ ಆಗಿದ್ದಾನಲ್ಲ… ಯಾರು ಹೀಗೆ ಹೊಡೆದು ಸಾಯಿಸಿದರು?

ವೆಂಕಯ್ಯ : ಅದು ಹಾಗೇನಲ್ಲ…. ಡಾಕ್ಟರ್‌, ನಮ್ಮ ಮೆಟ್ರೋ ನೇರಳೇ ಲೈನ್‌ ಇದೆಯಲ್ಲ, ಬೆಳಗ್ಗೆ 10 ಗಂಟೆಗೆ ಮೆಜೆಸ್ಟಿಕ್‌ ನಲ್ಲಿ ಹತ್ತಿ ಬೈಯ್ಯಪ್ಪನಹಳ್ಳಿಯಲ್ಲಿ ಇಳಿದು ಹೊರಗೆ ಬಂದಿದ್ದಾನೆ ಅಷ್ಟೆ!

 

ಗೋಪಿ : ಅರೇ ಅಂಜಲಿ…. ದಿನಾ ಮೆಟ್ರೋನಲ್ಲಿ ಮೀಟ್‌ ಮಾಡ್ತಾ ಇರ್ತೀನಿ, ನಿನಗೆ ನನ್ನ ಗುರುತು ಸಿಗಲಿಲ್ಲವೇ?

ಅಂಜಲಿ : ಇಲ್ಲವಲ್ಲ….? ಯಾರು ನೀನು?

ಗೋಪಿ : ಅದೇ, ನಿನ್ನೆಯೂ ಎಂ.ಜಿ. ರೋಡ್‌ ಸ್ಟೇಷನ್‌ ನಲ್ಲಿ ಇಳಿಯುವಾಗ ನಿನ್ನನ್ನು ಇದೇ ಮಾತನ್ನು ಕೇಳಿದ್ದೆನಲ್ಲ, ಅವನೇ ನಾನು…..!

 

ಜಪಾನೀ ವ್ಯಕ್ತಿ : ಅವರು ಯಾರೋ ಈ ಕೆಲಸ ಮಾಡಬಹುದು ಅಂದ್ರೆ, ನಾನೂ ಸಹ ಖಂಡಿತಾ ಆ ಕೆಲಸ ಮಾಡಬಲ್ಲೆ! ಅಕಸ್ಮಾತ್‌ ಬೇರೆ ಯಾರಿಂದಲೂ ಆ ಕೆಲಸ ಮಾಡಲು ಆಗುತ್ತಿಲ್ಲ ಅಂದ್ರೆ ಆಗಲೂ ನಾನು ಅದನ್ನು ಮಾಡಿ ತೋರಿಸಬಲ್ಲೆ!

ನಮ್ಮವರು : ಅವರು ಯಾರೋ ಈ ಕೆಲಸ ಮಾಡಬಹುದು ಅಂದ್ರೆ, ನಾನು ಯಾಕ್ರಿ ಆ ಕೆಲಸ ಮಾಡಲಿ? ಬೇರೆ ಯಾರಿಗೂ ಆ ಕೆಲಸ ಮಾಡಲು ಆಗುತ್ತಿಲ್ಲ ಅಂದ್ರೆ ನನ್ನಿಂದ ಸಾಧ್ಯ ಅಂತ ಹೇಗೆ ಅಂದುಕೊಂಡ್ರಿ?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ