ರಾಘವೇಂದ್ರ ಅಡಿಗ ಎಚ್ಚೆನ್.

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಬ್ಯುಸಿಯಾಗಿರುವ ನಿರೂಪಕ ಕಿಚ್ಚ ಸುದೀಪ್‌  ಅಭಿಮಾನಿಗಳಿಗೆ ಬಹುದೊಡ್ಡ ಗಿಫ್ಟ್‌ ಸಿಕ್ಕಿದೆ. ಸುದೀಪ್‌ ಅವರ ಮುಂಬರುವ ʼಮಾರ್ಕ್‌ʼ ಚಿತ್ರದ ಮೊದಲ ಹಾಡು ʼಸೈಕೋ ಸೈತಾನ್‌ʼ ) ಹೊರಬಿದ್ದಿದೆ. ಅಜನೀಶ್‌ ಬಿ. ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದ್ದು, ಟ್ಯೂನ್‌ಗೆ ಸಿನಿಪ್ರಿಯರು ಮನಸೋತಿದ್ದಾರೆ. ಸದ್ಯ ʼಕಾಂತಾರ: ಚಾಪ್ಟರ್‌ 1′ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಮತ್ತೊಂದು ಹಿಟ್‌ ನೀಡುವ ಸೂಚನೆ ನೀಡಿದ್ದಾರೆ. ಕ್ಯಾಚಿ ಟ್ಯೂನ್‌, ಗಮನ ಸೆಳೆಯುವ ಸಾಹಿತ್ಯ ʼಸೈಕೋ ಸೈತಾನ್‌ʼ ಹಾಡಿನ ಹೈಲೈಟ್‌.

psycho

ಕನ್ನಡ ಮತ್ತು ತಮಿಳಿನಲ್ಲಿ ಹಾಡು ಹೊರಬಂದಿದೆ. ಕನ್ನಡದಲ್ಲಿ ವಿಜಯ್‌ ಪ್ರಕಾಶ್‌, ಅಜನೀಶ್‌ ಲೋಕನಾಥ್‌ ಮತ್ತು ಅನಿರುದ್ಧ್‌ ಶಾಸ್ತ್ರಿ ಧ್ವನಿ ನೀಡಿದ್ದು, ಅನೂಪ್‌ ಭಂಡಾರಿ ಸಾಹಿತ್ಯವಿದೆ. ಜುಲೈಯಲ್ಲಿ ʼಕೆ 47ʼ (K 47) ಎನ್ನುವ ತಾತ್ಕಾಲಿಕ ಟೈಟಲ್‌ ಇಟ್ಟು ಶೂಟಿಂಗ್‌ ಆರಂಭಿಸಿದ್ದ ಚಿತ್ರತಂಡ ಇದಕ್ಕೆ ʼಮಾರ್ಕ್‌ʼ ಎನ್ನುವ ಶೀರ್ಷಿಕೆಯನ್ನು ಫೈನಲ್‌ ಮಾಡಿ ಸೆಪ್ಟೆಂಬರ್‌ 1ರಂದು ಟೀಸರ್‌ ರಿಲೀಸ್‌ ಮಾಡಿತ್ತು. ಇದೀಗ ಮೊದಲ ಹಾಡು ರಿಲೀಸ್‌ ಆಗಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ವರ್ಷ ತೆರೆಕಂಡ ʼಮ್ಯಾಕ್ಸ್‌ʼ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ವಿಜಯ್‌ ಕಾರ್ತಿಕೇಯ ಅವರೇ ʼಮಾರ್ಕ್‌ʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ʼಮಾರ್ಕ್‌ʼ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ನಲ್ಲಿ ಸುದೀಪ್‌ ಮತ್ತೊಮ್ಮೆ ಪವರ್‌ಫುಲ್‌ ಪಾತ್ರದಲ್ಲಿ ಮಿಂಚಿದ್ದಾರೆ. ಅಜಯ್‌ ಮಾರ್ಕಾಂಡೆ ಆಲಿಯಾಸ್‌ ಮಾರ್ಕ್‌ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು, ಇದು ಕೂಡ ʼಮ್ಯಾಕ್ಸ್‌ʼನಂತೆ ಭರ್ಜರಿ ಆ್ಯಕ್ಷನ್‌ ಚಿತ್ರ ಎನ್ನುವ ಸೂಚನೆ ಟೀಸರ್‌ನಲ್ಲೇ ಸಿಕ್ಕಿದೆ.
ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್‌ ಮತ್ತು ಕಿಚ್ಚ ಕ್ರಿಯೇಷನ್ಸ್‌ ಬ್ಯಾನರ್‌ಗಳು ಜತೆಯಾಗಿ ನಿರ್ಮಿಸುತ್ತಿದ್ದು, ಅರ್ಜುನ್‌ ತ್ಯಾಗರಾಜನ್‌ ಮತ್ತು ಸೆಂಥಿಲ್‌ ತ್ಯಾಗರಾಜನ್‌ ಬಂಡವಾಳ ಹೂಡಿದ್ದಾರೆ. ಛಾಯಾಗ್ರಾಹಕರಾಗಿ ಶೇಖರ್‌ ಚಂದ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಚಿತ್ರದ ಬಹುತೇಕ ಭಾಗದ ಶೂಟಿಂಗ್‌ ಪೂರ್ಣಗೊಂಡಿದ್ದು, ಡಿಸೆಂಬರ್‌ 25ರಂದು ತೆರೆಗೆ ಬರಲಿದೆ. ವಿಶೇಷ ಎಂದರೆ ʼಮ್ಯಾಕ್ಸ್‌ʼ 2024ರ ಡಿಸೆಂಬರ್‌ 25ರಂದು ತೆರೆಗೆ ಬಂದಿತ್ತು. ಇದೀಗ ʼಮಾರ್ಕ್‌ʼ ಕೂಡ ಡಿಸೆಂಬರ್‌ 25ರಂದೇ ರಿಲೀಸ್‌ ಆಗುತ್ತಿದ್ದು, ಮತ್ತೊಮ್ಮೆ ಹಿಟ್‌ ರಿಪೀಟ್‌ ಆಗುತ್ತ ಎನ್ನುವುದನ್ನು ಕಾದು ನೋಡಬೇಕಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ