– ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ಗೆ ವೀಕ್ಷಕರಿಗೆ ರಾತ್ರೋ ರಾತ್ರಿ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ನಡೀಯುತ್ತಿದ್ದ ಬಿಗ್​ ಡ್ರಾಮಾಕ್ಕೆ ಬ್ರೇಕ್​ ಬಿದ್ದಿದೆ. ಜಾಲಿವುಡ್​​​ ಸ್ಟುಡಿಯೋ ಬೀಗ ತೆರೆಯಲು ಸೂಚಿಸಿದ ಡಿಸಿಎಂ ಡಿಕೆಶಿ ಸೂಚಿಸಿದ್ದಾರೆ. ಜಾಲಿವುಡ್​​ ಸ್ಟುಡಿಯೋ ಬೀಗ ತೆಗೆಯುವಂತೆ  ಡಿಸಿಎಂ ಡಿಕೆಶಿ ಸೂಚನೆ ನೀಡುತ್ತಿದ್ದಂತೆ, ನಟ ಕಿಚ್ಚ ಸುದೀಪ್​​ ಟ್ವೀಟ್​ ಮಾಡಿ ಡಿಸಿಎಂ ಡಿಕೆಶಿಗೆ ಧನ್ಯವಾದ ತಿಳಿಸಿದ್ದಾರೆ.

bigg-boss-kannada-1 (1)

ನಮ್ಮ ಬೆಂಬಲಕ್ಕೆ ನಿಂತಿದ್ದಕ್ಕೆ ಡಿ.ಕೆ ಶಿವಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇನೆ, ಬಿಗ್​ಬಾಸ್​​​ ಕನ್ನಡ ಈ ಗೊಂದಲದ ಭಾಗವಾಗಿರಲಿಲ್ಲ, ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ ಡಿಸಿಎಂ ಅವರನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ, ಜೊತೆಗೆ ನಲ್ಪಾಡ್​ ಅವರ ಪ್ರಯತ್ನಗಳಿಗೆ ಧನ್ಯವಾದಗಳು. – ಎಂದು ಸುದೀಪ್ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಬಿಗ್​ಬಾಸ್​​ ಮನೆ ನಿನ್ನೆ ರಾತ್ರಿಯೇ ಓಪನ್​ ಆಗಿದ್ದು, 17 ಸ್ಪರ್ಧಿಗಳು ಬಿಗ್​ ಬಾಸ್​​ ಮನೆಗೆ ಪ್ರವೇಶಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ, ಬಿಗ್​ಬಾಸ್​ ಮನೆಯ ಬಿಗ್​ ಡ್ರಾಮಾಕ್ಕೆ ಕೊನೆಗೂ ಬ್ರೇಕ್​ ಬಿದಿದ್ದ, ವೀಕ್ಷಕರಂತು ಫುಲ್​ ಖುಷ್​ ಆಗಿದ್ದಾರೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ