ಬಾಲಿವುಡ್ ನಟಿ ಆಲಿಯಾ ಭಟ್ ಅವರು ಗಣೇಶನ ಬಗ್ಗೆ ಅಪಾರ ನಂಬಿಕೆ. ಹಾಗಾಗಿಯೇ ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ಗಣಪನ ವಿಗ್ರಹವೊಂದು ಅವರ ಮನೆ ಸೇರಲಿದೆ.
ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಆಲಿಯಾ ಭಟ್ ಅವರಿಗಾಗಿ ಗಣೇಶನ ಮೂರ್ತಿಯನ್ನು ಕೆತ್ತಿದ್ದಾರೆ. ನಾಲ್ಕು ಅಡಿ ಗಣಪ, ಮೂರಡಿ ಪೀಠವುಳ್ಳ ವಿಗ್ರಹ ಅದಾಗಿದ್ದು, ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ಕೆತ್ತನೆ ಮಾಡಲಾಗಿದೆ. ಆರು ತಿಂಗಳಿಂದ ನಿರಂತರ ಕೆತ್ತನೆ ಕಾರ್ಯ ನಡೆಯುತ್ತಿದೆ. ಸೆಪ್ಟೆಂಬರ್ 17 ರಂದು ಆಲಿಯಾ ಭಟ್ ಕುಟುಂಬಸ್ಥರಿಂದ ಪೂಜೆ ನೆರವೇರಿಸಿದ್ದಾರೆ. ಇಂದು ಈ ವಿಗ್ರಹ ಮುಂಬೈಗೆ ತೆರಳಲಿದೆ.
ಗಣಪ ಮೂರ್ತಿ ಮಾಡಿಕೊಡುವಂತೆ ಆಲಿಯಾ ಭಟ್ ಮನವಿ ಮಾಡಿದ್ದರು. ಈ ಬಗ್ಗೆ ನಮ್ಮನ್ನು ಮುಂಬೈಗೆ ಕರೆಸಿಕೊಂಡು ಮಾತನಾಡಿದ್ದರು. ನಾವು ಮನೆಯ ಸ್ಥಳ ಎಲ್ಲವನ್ನೂ ಗಮನಿಸಿ ಬಂದಿದ್ದೆ. ಆ ಮನೆಗೆ ಹೊಂದಿಕೊಳ್ಳುವಂತೆ ಗಣಪನ ಕೆತ್ತನೆ ಮಾಡಲಾಗಿದೆ ಎಂದು ಅರುಣ್ ಯೋಗಿರಾಜ್ ಹೇಳಿದ್ದಾರೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





