ಜಾಗೀರ್ದಾರ್*
ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಂಸ್ ಲಾಂಛನದಲ್ಲಿ ಈ ಹಿಂದೆ “ಪದವಿ ಪೂರ್ವ”ಚಿತ್ರವನ್ನು ನಿರ್ಮಿಸಿದ್ದ ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಅವರು ನಿರ್ಮಿಸಿರುವ, ಅಮೋಲ್ ಪಾಟೀಲ್ ನಿರ್ದೇಶನದ ಹಾಗೂ “ಪದವಿಪೂರ್ವ” ಖ್ಯಾತಿಯ ಪೃಥ್ವಿ ಶಾಮನೂರು ನಾಯಕನಾಗಿ ನಟಿಸಿರುವ “ಉಡಾಳ” ಚಿತ್ರದ “ಹೊಡಿ ಶ್ಯಾವಿಗ್ಯಾಗ ಮಜ್ಗಿ” ಹಾಡು ಇತ್ತೀಚೆಗಷ್ಟೇ “ಸರಿಗಮ” ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿತ್ತು. ಯೋಗರಾಜ್ ಭಟ್ ಅವರು ಬರೆದು ಚೇತನ್ ಡ್ಯಾವಿ ಸಂಗೀತ ನೀಡಿರುವ ಈ ಹಾಡನ್ನು ಮಾಳು ನಿಪ್ನಾಳ್ ಹಾಗೂ ಸೃಷ್ಟಿ ಶಾಮನೂರ್ ಹಾಡಿದ್ದಾರೆ.

ಹಾಡು ಬಿಡುಗಡೆಯಾದ ಕ್ಷಣದಿಂದಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಈ ಹಾಡಿಗೆ ರೀಲ್ಸ್ ಮಾಡುತ್ತಿರುವವರ ಸಂಖ್ಯೆ ಕೂಡ

ಅಧಿಕವಾಗಿದೆ. ಈಗ ಈ ಹಾಡು “ಜಿಯೋ ಸಾವನ್” ಚಾನಲ್ ನಲ್ಲಿ ಇಡೀ ಭಾರತದಲ್ಲೇ ಎರಡನೇ ಸ್ಥಾನದಲ್ಲಿದೆ, ಇನ್ನು ಈ ಚಿತ್ರದ ಎರಡನೇ ಹಾಡು ಶೀಘ್ರದಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ಬಿಡುಗಡೆಯಾಗಿರುವ ಮೊದಲ ಹಾಡು ಹಾಗೂ ಟೀಸರ್ ನಿಂದಲೇ ಎಲ್ಲರ ಗಮನ ಸೆಳೆದಿರುವ “ಉಡಾಳ” ಚಿತ್ರ ನವೆಂಬರ್ 14 ರಂದು ತೆರೆಗೆ ಬರಲಿದೆ.





