ಜಾಗೀರ್ದಾರ್*

ಬಘೀರ ಬಳಿಕ ಶ್ರೀಮುರಳಿ ಕೈಗೆತ್ತಿಕೊಂಡಿರುವ ಸಿನಿಮಾ ಪರಾಕ್. ಯುವ ಪ್ರತಿಭೆ ಹಾಲೇಶ್ ಕೋಗುಂಡಿ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಪರಾಕ್ ಅಂಗಳಕ್ಕೆ ಖ್ಯಾತ ಸ್ಟಂಟ್ ಮಾಸ್ಟರ್ ರವಿವರ್ಮ ಎಂಟ್ರಿ‌ ಕೊಟ್ಟಿದ್ದಾರೆ.

ರವಿವರ್ಮ, ಸ್ಯಾಂಡಲ್‌ ವುಡ್‌ ಮಾತ್ರವಲ್ಲ ಬಾಲಿವುಡ್ ಸ್ಟಾರ್‌ ಹೀರೋ, ಸ್ಟಾರ್‌ ಡೈರೆಕ್ಷರ್ ಗಳಿಂದ ಸೈ ಎನಿಸಿಕೊಂಡವರು. ಸಲ್ಮಾನ್ ಖಾನ್, ಶಾರುಖ್‌ ಖಾನ್ ಸಿನಿಮಾಗಳಿಗೆ ಸಾಹಸ ಸಂಯೋಜಿಸಿ ಜನಪ್ರಿಯತೆಗಳಿಸಿರುವ ರವಿವರ್ಮ‌ ಈಗ ಶ್ರೀಮುರಳಿಗೆ ಆಕ್ಷನ್‌ ಹೇಳಿಕೊಡಲು ರೆಡಿಯಾಗಿದ್ದಾರೆ.

ಕನ್ನಡದ ರವಿವರ್ಮ, ಎಲ್ಲಾ ಭಾಷೆಯಲ್ಲೂ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.. ಬಹುತೇಕ ಸೂಪರ್ ಸ್ಟಾರ್ಗಳ ಸಿನಿಮಾಗಳಿಗೆ ರವಿವರ್ಮಾ ಸ್ಟಂಟ್ ಇರುತ್ತೆ.‌ ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಪರಾಕ್ ಚಿತ್ರಕ್ಕೆ ರವಿವರ್ಮ ಸ್ಟಂಟ್ ಕಂಪೋಸ್ ಮಾಡಲಿದ್ದಾರೆ.

ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ಪರಾಕ್ ಸಿನಿಮಾ ನಿರ್ಮಾಣವಾಗುತ್ತಿದೆ. ಚರಣ್ ರಾಜ್ ಸಂಗೀತ, ಸಂದೀಪ್ ವಲ್ಲುರಿ ಕ್ಯಾಮೆರಾ, ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ, ಇಂಚರಾ ಸುರೇಶ್ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ಪರಾಕ್‌ ಸಿನಿಮಾವು ವಿಂಟೇಜ್‌ ಸ್ಟ್ರೈಲ್‌ನಲ್ಲಿ ನಡೆಯಲಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ