– ರಾಘವೇಂದ್ರ ಅಡಿಗ ಎಚ್ಚೆನ್.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತುಂಬಾನೆ ಸಿಂಪಲ್ ಆಗಿದ್ದಾರೆ. ರಾಜ್ ಪುತ್ರ ಅನ್ನುವ ಅಹಂ ಇಲ್ವೇ ಇಲ್ಲ. ಎಲ್ಲಿ ಬೇಕಾದ್ರೂ ಕುಳಿತು ಬಿಡ್ತಾರೆ. ಸ್ನೇಹಿರು ಅಂದ್ರೆ ಪ್ರಾಣ ನೋಡಿ. ಆ ರೀತಿಯ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಹಾಗೆ ಇದ್ದಾರೆ. ತುಂಬಾನೆ ಸರಳ ವ್ಯಕ್ತಿತ್ವದ ವ್ಯಕ್ತಿನೇ ಆಗಿದ್ದಾರೆ. ಹಾಗಾಗಿಯೇ ಈ ಜೋಡಿ ಸೂಪರ್ ಅನಿಸುತ್ತದೆ. ಸಿಂಪಲ್ ಅನಿಸುತ್ತದೆ. ಇವರ ಸರಳತೆಗೆ ಸಾಕ್ಷಿ ಅನ್ನುವ ಹಾಗೆ ಚೆನ್ನೈ ರೈಲ್ವೆ ಸ್ಟೇಷನ್‌ಗೆ ಹೋಗಿದ್ದಾರೆ. ಅಲ್ಲಿ ಆಗಮಿಸಿದ್ದ ಸ್ನೇಹಿತರನ್ನ ಅಷ್ಟೆ ಪ್ರೀತಿಯಿಂದಲೇ ಸ್ವಾಗತಿಸಿದ್ದಾರೆ. ಆ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಶಿವರಾಜ್‌ಕುಮಾರ್ ಅವರಿಗೆ ಚೆನ್ನೈಯಲ್ಲೂ ಸ್ನೇಹಿತರಿದ್ದಾರೆ. ಆ ಸ್ನೇಹವನ್ನ ಹಾಗೆ ಉಳಿಸಿಕೊಂಡಿದ್ದಾರೆ. ಶಿವಣ್ಣನ ಸ್ನೇಹಿತರು ಆಗಾಗ ಬೆಂಗಳೂರಿಗೆ ಬರೋದು ಇದೆ. ಅದೇ ರೀತಿಯೇ ಇವರೂ ಚೆನ್ನೈಗೆ ಹೋಗೋದು ಇದೆ. ಹಾಗೆ ಚೆನ್ನೈಗೆ ಹೋದಾಗಿನ ಒಂದು ವಿಡಿಯೋ ಸದ್ಯ ಎಲ್ಲೆಡೆ ಶೇರ್ ಆಗುತ್ತಿದೆ. ಒಂದು ವಿಡಿಯೋದಲ್ಲಿ ಶಿವರಾಜ್ ಕುಮಾರ್ ಇದ್ದಾರೆ. ಗೀತಾ ಶಿವರಾಜ್‌ಕುಮಾರ್ ಇದ್ದಾರೆ. ಊರಿಂದ ಬಂದ ಸ್ನೇಹಿತರನ್ನ ಅಷ್ಟೆ ಪ್ರೀತಿಯಿಂದಲೇ ಸ್ವಾಗತಿಸಿದ್ದಾರೆ. ರೈಲ್ವೆ ಬರೋದನ್ನೆ ಕಾಯ್ತಾ ಇದ್ದರು. ಆಗಲೇ ಸ್ನೇಹಿತರು ಗೀತಾ ಮತ್ತು ಶಿವರಾಜ್‌ಕುಮಾರ್ ಇದ್ದ ಕಡೆಗೆ ಬಂದು ಖುಷಿಯನ್ನ ವ್ಯಕ್ತಪಡಿಸಿದರು.

ಚೆನ್ನೈ ರೈಲ್ವೆ ಸ್ಟೇಷನ್ ಅಲ್ಲಿ ಸ್ನೇಹಿತರನ್ನ ಕಂಡು ಶಿವರಾಜ್ ಕುಮಾರ್ ತುಂಬಾನೆ ಖುಷಿ ಆಗಿದ್ದಾರೆ. ಆ ಖುಷಿಗೆ ಪಾರವೇ ಇಲ್ಲ. ಅದನ್ನ ವಿಡಿಯೋ ನೋಡಿದ್ರೇನೆ ತಿಳಿಯುತ್ತದೆ. ಆ ರೀತಿಯ ಈ ಒಂದು ಕ್ಷಣದಲ್ಲಿ ದೊಡ್ಮನೆಯ ದೊರೆ ಶಿವರಾಜ್‌ಕುಮಾರ್ ಎಷ್ಟು ಸಿಂಪಲ್ ಅನ್ನೋದು ತಿಳಿಯುತ್ತದೆ.





