ರಾಜ್ಯ ಪ್ಯಾರಾ ಈಜು ಚಾಂಪಿಯನ್ ಶಿಪ್‌ ನಲ್ಲಿ ಮೈಸೂರಿನ ಮೋಹಿತ್ ಎಸ್.ಬಿ. ಮೂರು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬೆಂಗಳೂರಿನ ವೈಟ್‌ಫೀಲ್ಡ್ ನ ದೀನ್ಸ್ ಸ್ವಿಮ್ ಅಕಾಡೆಮಿಯಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಮೋಹಿತ್ 100 ಮತ್ತು 50 ಮೀಟರ್ ಫ್ರೀ ಸ್ಟೇಲ್‌  ಹಾಗೂ 50 ಮೀಟರ್ ಬ್ಯಾಕ್‌ ಸ್ಟ್ರೋಕ್‌ ನಲ್ಲಿ ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಮೋಹಿತ್​ ಮೈಸೂರಿನ ಜೆ.ಪಿ.ನಗರದಲ್ಲಿರುವ ಜಿ.ಎಸ್.ಎ. ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಮೂಲಕ ಮುಂದಿನ ತಿಂಗಳು ಹೈದರಾಬಾದ್‌ ನಲ್ಲಿ ನಡೆಯಲಿರುವ 25ನೇ ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್ ಶಿಪ್‌ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದಿದಾರೆ.

ಮೋಹಿತ್ ಅವರ ಈ ಸಾಧನೆ ಯುವ ಪ್ಯಾರಾ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದು, ತನ್ನ ಪರಿಶ್ರಮದಿಂದ ಪ್ಯಾರಾ ಈಜು ಕ್ಷೇತ್ರದಲ್ಲಿ ಕರ್ನಾಟಕದ ಹೆಮ್ಮೆ ಹೆಚ್ಚಿಸುವ ನಿರೀಕ್ಷೆಯೊಂದಿಗೆ ಮುಂದುವರೆಯುತ್ತಿದ್ದಾರೆ.

ಅವರ ಈ ಯಶಸ್ಸು ಕೇವಲ ವೈಯಕ್ತಿಕ ಸಾಧನೆಯಾಗದೆ, ಸಮಾಜದಲ್ಲಿ ಪ್ಯಾರಾ ಕ್ರೀಡಾಪಟುಗಳು ಈಜು ಸ್ಪರ್ಧೆಯಲ್ಲಿ ಮುಂದುವರಿಯಲು ಪ್ರೇರಣೆಯಾಗಿದೆ ಎಂದು ಜಿ.ಎಸ್.ಎ. ಮುಖ್ಯ ತರಬೇತುದಾರ ಪವನ್‌ಕುಮಾರ್, ಕಿಶೋರ್‌ಕುಮಾರ್ ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ