ರಾಕಿಂಗ್​ ಸ್ಟಾರ್​ ಯಶ್​ ಹಾಗೂ ನಟಿ ರಾಧಿಕಾ ಪಂಡಿತ್ ಸ್ಯಾಂಡಲ್​ವುಡ್​ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಮಾದರಿ ದಂಪತಿಯಾಗಿ ಕಾಣಿಸಿಕೊಂಡವರು. ಒಟ್ಟಿಗೆ ವೃತ್ತಿಜೀವನ ಆರಂಭಿಸಿದ ಜೋಡಿ, ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. ಈ ಜೋಡಿಗೆ ಇಬ್ಬರು ಮಕ್ಕಳಿದ್ದು, ಕಿರಿಪುತ್ರ ಯಥರ್ವ್ ಆರನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ.ಒಂದು ಸಮಯ ಕನ್ನಡ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದ ನಟಿ ರಾಧಿಕಾ ಪಂಡಿತ್ ಮದುವೆ, ಮಕ್ಕಳ ಬಳಿಕ​​ ಸಿನಿಮಾಗಳಿಂದ ದೂರ ಉಳಿದರು. ಸದಾ ಸೋಷಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ರಾಧಿಕಾ, ಆಗಾಗ್ಗೆ ತಮ್ಮ ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಅದರಂತೆ ಇಂದು ಮಗನ ಜನ್ಮದಿನದ ಹಿನ್ನೆಲೆ ಸುಂದರ ಕ್ಷಣಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಮಗನ ಎರಡು ಸಿಂಗಲ್​ ಫೋಟೋ ಮತ್ತು ಮಗನೊಂದಿಗಿನ ತಮ್ಮ ಫೋಟೋ ಶೇರ್ ಮಾಡಿರುವ ರಾಧಿಕಾ ಪಂಡಿತ್​, ನನ್ನ ಪುಟ್ಟ ಮಗನಿಗೆ ಇಂದು ಆರು ವರ್ಷ ತುಂಬಿದೆ. ನಿನ್ನ ಬೆಚ್ಚಗಿನ ಅಪ್ಪುಗೆ, ನಗು ಮತ್ತು ಸಂತೋಷ ನಮ್ಮ ಜೀವನವನ್ನು ಬೆಳಗಿಸಿದೆ. ಕೀಪ್​ ಶೈನಿಂಗ್​ ಬೇಬಿ. ಹ್ಯಾಪಿ ಬರ್ತ್​​​ಡೇ ಯಥರ್ವ್​​​​ ಎಂದು ಬರೆದುಕೊಂಡಿದ್ದಾರೆ. ಈ ಮೂರು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.ನೆಟ್ಟಿಗರು ಮತ್ತು ಅಭಿಮಾನಿಗಳು ಪೋಸ್ಟ್​​ಗೆ ಪ್ರತಿಕ್ರಿಯಿಸುತ್ತಿದ್ದು, ನಮ್ಮ ಅತ್ತಿಗೆ, ಯಶ್​ ಬಾಸ್​ ಅನ್ನೋ ಕಾಮೆಂಟ್ಸ್​ ಹೇರಳವಾಗಿವೆ. ಜೂನಿಯರ್​ ಯಶ್​ ಬಾಸ್​ ಅಂತಾ ಒಬ್ಬರು ಕಾಮೆಂಟ್​ ಮಾಡಿದ್ದರೆ, ಹ್ಯಾಪಿ ಬರ್ತ್​​ಡೇ ಲಿಟಲ್​ ರಾಕಿ ಎಂದು ಕಾಮೆಂಟ್​ ಮಾಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ