– ರಾಘವೇಂದ್ರ ಅಡಿಗ ಎಚ್ಚೆನ್.

ದರ್ಶನ್‍ ಬಿಡುಗಡೆಯಾಗಿ ಬರಲಿ ಎಂದು ದಿನಾ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ
ಜೀವನದಲ್ಲಿ ತಪ್ಪುಗಳಾಗುತ್ತವೆ, ಕ್ಷಮೆ ಎನ್ನುವುದು ಇದ್ದೇ ಇದೆ, ಅವರು ಖಂಡಿತಾ ಹೊರಬರುತ್ತಾರೆ ಎಂಬ ನಂಬಿಕೆ ಇದೆ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ‘ರಕ್ತ ಕಾಶ್ಮೀರ’ ಚಿತ್ರದ ಟ್ರೇಲರ್‍ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಎಸ್‍.ವಿ. ರಾಜೇಂದ್ರ ಸಿಂಗ್ ಬಾಬು ಮಾತನಾಡಿದರು.
ಇನ್ನು ರಿಷಭ್‍ ಶೆಟ್ಟಿ ಅವರನ್ನು ನಿಜವಾಗಿ ಬಹಳ ಮೆಚ್ಚಿಕೊಳ್ಳುತ್ತೇನೆ; ಅವರಿಗೆ ಕನ್ನಡ ಚಿತ್ರರಂಗದ ಪರವಾಗಿ ಧನ್ಯವಾದ ಹೇಳುತ್ತೇನೆ … 800 ಕೋಟಿ ರೂ. ಗಳಿಕೆ ಮಾಡುವ ಚಿತ್ರ ಮಾಡೋದು ಸುಲಭವಲ್ಲ; ನಟನೆ ಜೊತೆಗೆ ನಿರ್ದೇಶನ ಸಹ ಮಾಡಿರುವುದು ದೊಡ್ಡ ವಿಷಯ … ಕನ್ನಡ ಚಿತ್ರರಂಗಕ್ಕೆ multi starrer ಚಿತ್ರಗಳು ಬೇಕು; ಅಂತ ಚಿತ್ರಗಳು ಬಂದರೆ ನಿರ್ಮಾಪಕರಿಗೆ ದೊಡ್ಡ ಚಿತ್ರಗಳನ್ನು ಮಾಡುವುದಕ್ಕೆ ಧೈರ್ಯ ಬರುತ್ತದೆ. ಎಂದು ಅವರು ಹೇಳಿದರು.

FB_IMG_1761825830280

ಇದೇ ವೇಳೆ ರಾಜ್ಯದ ಚಿತ್ರಮಂದಿರಗಳ ಸಮಸ್ಯೆ ಬಗ್ಗೆ ಮಾತನಾಡಿದ ರಾಜೇಂದ್ರ ಸಿಂಗ್ ಬಾಬು ಇಂದಿರಾನಗರ, ಕೋರಮಂಗಲದಲ್ಲಿ ಚಿತ್ರಮಂದಿರಗಳು ಎಲ್ಲಿವೆ? ಬೆಂಗಳೂರಲ್ಲಿ 15-20 ಕಡೆ ಚಿತ್ರಮಂದಿರಗಳೇ ಇಲ್ಲ … ನಾವು ಜನರನ್ನು ಚಿತ್ರಮಂದಿರಗಳಿಂದ ದೂರ ಮಾಡುತ್ತಿದ್ದೇವೆ; ಅದಕ್ಕೆ ಜನತಾ ಚಿತ್ರಮಂದಿರಗಳು ಬಹಳ ಮುಖ್ಯ …  ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾ ಚಿತ್ರಮಂದಿರಗಳಿಗೆ 50 ಲಕ್ಷ ಸಬ್ಸಿಡಿ ಕೊಟ್ಟಿದ್ದರೂ ಅಧಿಕಾರಿಗಳು ಕೊಕ್ಕೆ ಹಾಕುತ್ತಾರೆ. ಎಂದು ಬೇಸರ ವ್ಯಕ್ತಪಡಿಸಿದರು.
ರಕ್ತ ಕಾಶ್ಮೀರ ಚಿತ್ರ ಸೆನ್ಸಾರ್ ಹಂತದಲ್ಲಿ ಇದ್ದು ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ