ಈಗಿನ ಕಾಲವೇ ಹೀಗೇ : ಮಿಸ್ ಕಂಟೆಸ್ಟ್ ಗಳ ಒಂದು ರೂಪ ಎಂದರೆ ಮಿಸ್ ನ್ಯಾಷನಲ್ ಅಚೀವ್ ಮೆಂಟ್! ಅಮೆರಿಕಾದ ಇಂಥ ಪ್ರಸಕ್ತ ಮಿಸ್ ಅಂದ್ರೆ ಎರಿಕಾ ನೋಪ್ರಾಳ ಪ್ರಕಾರ, ಯಂಗ್ ವಿಮನ್ ತನ್ನ ಹೆಚ್ಚಿನ ಸಮಯವನ್ನು ಸೋಶಿಯಲ್ ಮೀಡಿಯಾಗೆ ನೀಡುತ್ತಾಳೆ. ಅವಳಿಗೆ ತನ್ನ ದೇಹದ ಕುರಿತಾಗಿ ತಲೆಬಾಲವಿಲ್ಲದ ಸಂದೇಹ ಮೂಡುತ್ತದೆ. ಅವಳು ಅದಕ್ಕಾಗಿ ಬಗೆಬಗೆಯ ಚಿಕಿತ್ಸೆಗೆ ಮೊರೆ ಹೋಗುತ್ತಾಳೆ, ಇದರಿಂದ ಅವಳ ದೇಹ, ಮನಶ್ಶಾಂತಿ ಎರಡೂ ಹಾಳಾಗುತ್ತದೆ. ಈಕೆಯ ಮಾತುಗಳೇನೋ ಸರಿ, ಆದರೆ ಈಗಿನ ಕಾಲವೇ ಹಾಗಿದೆ, ಏನು ಮಾಡುವುದು?
ಮಾರ್ಕೆಟ್ ನ ಫಂಡಾ : ವೆಡ್ಡಿಂಗ್ ಬಿಸ್ ನೆಸ್ ಇದೀಗ ದಿನೇದಿನೇ ಹೆಚ್ಚು ಅಭಿವೃದ್ಧಿ ಹೊಂದುತ್ತಿದೆ. ಆದರೆ ಬಹುತೇಕರು ಲಿವ್ ಇನ್ ಬಯಸುತ್ತಾರೆ ಎಂಬುದು ಬೇರೆ ವಿಷಯ. ಹೀಗೆ ಅದ್ಧೂರಿಯಾಗಿ ಮದುವೆ ಆಗಿ, ಕೆಲವು ವರ್ಷ ಜೊತೆಗಿದ್ದ ನಂತರ, ಬೇರೆ ಆಗಬೇಕು ಅನ್ನುವ ತಮಾಷೆಯ ಹುನ್ನಾರ ಇಬ್ಬರಿಗೂ ಬರುತ್ತದೆ. ಹೀಗೆ ಬರುಬರುತ್ತಾ ಒಂದು ತಮಾಷೆ ಪ್ರಸಂಗ ಆಗುತ್ತಿದೆ. ಹಿಂದಿನದನ್ನು ಬಿಟ್ಟರು ಹೊಸತನ್ನು ತಗುಲಿ ಹಾಕಿಕೊಳ್ಳುತ್ತಾ, ಇಂಥ ವೆಡ್ಡಿಂಗ್ ಬಿಸ್ ನೆಸ್ ಚಮಕಾಯಿಸಲು ಮತ್ತೆ ಮತ್ತೆ ಅವಕಾಶ ಕೊಡುತ್ತಿದ್ದಾರೆ. ಪಾಶ್ಚಾತ್ಯರಲ್ಲಂತೂ ವೆಡ್ಡಿಂಗ್ ಡ್ರೆಸ್ ಹಲವು ಲಕ್ಷಗಳನ್ನೂ ಮೀರಿಸುತ್ತದೆ. ಇಲ್ಲಿ ಸೂಜೀ ಟರ್ನರ್ ಳ ವೈಟ್ ಟೆರೂಸೋ ಇತ್ತೀಚೆಗೆ ಬಲು ಚರ್ಚೆಯಲ್ಲಿತ್ತು. ಬರೀ ಲಿವ್ ಇನ್ ಗೆ ಅಂಟಿಕೊಂಡರೆ ಇಂಥ ಮೋಜು ಮಸ್ತಿ ಎಲ್ಲಿಂದ ಬರಬೇಕು?

ಭವಿಷ್ಯದ ಚಿಂತೆ : ನಮ್ಮಲ್ಲಿ ಶಾಲೆಗಳ ಮಿಡ್ ಡೇ ಮೀಲ್ಸ್ ಕುರಿತು ಬಹಳ ಹುಯಿಲೆಬ್ಬಿಸಲಾಗುತ್ತದೆ. ಹೀಗೆ ಆಹಾರ ಕೊಟ್ಟು ಮಕ್ಕಳ ಹೆತ್ತರವನ್ನು ಸೋಮಾರಿಗಳಾಗಿಸುತ್ತಿದ್ದಾರೆ ಎಂದು ದೂರಲಾಗುತ್ತದೆ. ಆದರೆ ಅಮೆರಿಕಾದಂಥ ಅತಿ ಶ್ರೀಮಂತ ದೇಶಗಳಲ್ಲೂ 3 ಕೋಟಿ ಮಕ್ಕಳಿಗೆ ಊಟ-ತಿಂಡಿ ಎರಡೂ ಒದಗಿಸಲಾಗುತ್ತದೆ, ಆ ಮಕ್ಕಳಿಗೆ ಅಪೌಷ್ಟಿಕತೆ ಆಗಬಾರದೆಂಬುದೇ ಉದ್ದೇಶ. ಇದೀಗ ಬೇಸಿಗೆ ರಜೆ ಬಂತೆಂದು, ಮಕ್ಕಳಿಗೆ ಆಯಾ ಜಾಗದಲ್ಲೇ ಮನೆ ಬಳಿ ಉಚಿತ ಪೌಷ್ಟಿಕ ಆಹಾರ ಒದಗಿಸುವ ಬಗ್ಗೆ ಸರ್ಕಾರ ಕಾರ್ಯಗತವಾಗಿದೆ. ನಮ್ಮಲ್ಲಿ ಎಲ್ಲವನ್ನೂ ಪಾಪಪುಣ್ಯದ ಲೆಕ್ಕಾಚಾರಕ್ಕೆ ಥಳಕು ಹಾಕಿದರೆ, ಅಮೆರಿಕಾದಲ್ಲಿ ಇಂಥ ಅದೃಷ್ಟದ ಬಗ್ಗೆ ನಮ್ಮಲ್ಲಿರುವಷ್ಟು ಹೆಚ್ಚು ನಂಬಿಕೆ ಇಲ್ಲ.

ಭೇದಭಾವ ಮುಗಿಯಲಿ : ಆ್ಯಪ್ರೇ ಅಮೆರಿಕನ್ ಅಂದ್ರೆ ಅಮೆರಿಕಾದ ಕರಿಯರು, ಅಲ್ಲೀಗ ಬಹುತೇಕ ಸರಿಸಮ ಆಗಿದ್ದಾರೆ. ಹೀಗಾಗಿ ಅಲ್ಲಿನ 47% ಕರಿಯರು, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಭೇದಭಾವ ಕಂಡುಬರುತ್ತಿಲ್ಲ ಎನ್ನುತ್ತಾರೆ. ಆದರೆ…. ಇನ್ನಷ್ಟು ಕರಿ ಮಂದಿಯೇ ವೈದ್ಯರಾಗಲಿ ಎಂಬುದು ಇವರಾಸೆ. ಆಗ ಅವರಿಗೆ ತಮ್ಮವರು ಎಂಬ ಆಪ್ತತೆ ಹೆಚ್ಚು ದೊರಕಲಿದೆ. ಶೈನೆ, ಶೈಲಿ, ಕಾರ್ಲೆ, ಮಲೈಕಾ… ಎಲ್ಲರೂ ಅಲ್ಲಿನ ಆಸ್ಪತ್ರೆಯ ಗೋಲ್ಡ್ ಸ್ಟಾಂಡರ್ಡ್ ನಿಂದ ಬಲು ಖುಷಿಗೊಂಡಿದ್ದಾರೆ. ನಮ್ಮಲ್ಲಂತೂ ಸರ್ಕಾರಿ ಆಸ್ಪತ್ರೆಯ ಸಹವಾಸವೇ ಬೇಡ ಎಂಬಂತಾಗಿದೆ. ಇರುವುದರಲ್ಲಿಯೂ ದಲಿತರು, ಅಲ್ಪಸಂಖ್ಯಾತರತ್ತ ತೋರಲಾಗುವ ವ್ಯವಹಾರದ ಬಗ್ಗೆ ಮಾತನಾಡದಿರುವುದೇ ಮೇಲು.

ಚೆಲುವೆಯನ್ನು ನೋಡುವುದೋ ಅವಳ ಟ್ಯಾಟೂವನ್ನೋ? : ಟ್ಯಾಟೂ ಕೇವಲ ಫ್ಯಾಷನ್ ಅಲ್ಲ, ಇದು ಹಣ ಗಳಿಸುವ ಒಂದು ಬಿಸ್ ನೆಸ್ ಸಹ! ಹೀಗಾಗಿ ಇದನ್ನು ಸಪೋರ್ಟ್ ಮಾಡಲು ಅನೇಕ ಸ್ಟಂಟ್ ಗಳಿವೆ. `ಇಂಕಲ್ಡ್’ ಶಬ್ದ ಎಲ್ಲೆಲ್ಲೂ ಕೇಳಿಬರುತ್ತದೆ! ಅಂದ್ರೆ ಟ್ಯಾಟೂ ಮಾಡಿಸಲಾಗಿದೆ ಅಂತ, ಅದೂ ಬಣ್ಣ ಬಣ್ಣದಲ್ಲಿ. ವಿದೇಶೀ ಪತ್ರಿಕೆಯೊಂದು ಈ ಕುರಿತು ಸ್ಪರ್ಧೆ ನಡೆಸಿ ಶೂಟ್‌ಟ್ರಾವೆಲ್ ಸಹ ಭಾಗವಹಿಸುವಂತೆ ಮಾಡಿತು. ಹಿರಿಯರಿಗೆ ಟ್ಯಾಟೂ ಏನೇ ಅನಿಸಲಿ, ಯುವಜನತೆಗೆ ಇದಂತೂ ಪರ್ಸನಾಲ್ಟಿ ಸ್ಟೇಟ್ ಮೆಂಟೇ ಸರಿ!

ಚರ್ಮದ ಬಣ್ಣವಲ್ಲ ಚಾರ್ಮ್ ನೋಡಿ : ಈಕೆ ಕರಿಯ ಬಾಲೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ, ಆದರೆ ಸೌಂದರ್ಯದ ದೃಷ್ಟಿಯಿಂದ ಇವಳು ಬಿಳಿಯರನ್ನೂ ಮೀರಿಸಿದ್ದಾಳೆ. ಆದರೆ ನಮ್ಮಲ್ಲಿ ಈಗಲೂ ಬಿಳಿ ಬಣ್ಣಕ್ಕೆ ಮಣೆ ಹಾಕುವುದರಿಂದ, ಶ್ಯಾಮಲವರ್ಣಿಯರು ಹಿಂಜರಿಯುವುದು ತಪ್ಪಲಿಲ್ಲ.

ಬಿಸ್ ನೆಸ್ ಸ್ಟಾಂಡರ್ಡ್ ಆಗಿರಲೆಂದು : ಕೋವಿಡ್ ಗೆ ಮುಂಚೆ ದೆಹಲಿಯ ಕನಾಟ್ ಪ್ಲೇಸ್ ನ ಅಂಗಡಿಯವರೆಲ್ಲ ಸೇರಿ, ಮ್ಯೂಸಿಕ್‌ಫೆಸ್ಟಿವಲ್ ಕಾರ್ಯಕ್ರಮ ಹಮ್ಮಿಕೊಂಡು ರಸಸಂಜೆಯ ಮನರಂಜನೆ ಒದಗಿಸುತ್ತಿದ್ದರು, ಆಗ ಏರಿಯಾದ ಪುಟ್ ಫಾತ್ ತಾನಾಗಿ ಹೆಚ್ಚುತ್ತಿತು. ಆಗ ಇದು ಯಶಸ್ವಿ ಎನಿಸಿತ್ತು, ಆದರೆ ಕೊರೋನಾದಿಂದಾಗಿ ಈ ಅಂಗಡಿಯವರ ಧೈರ್ಯ ಕುಸಿಯಿತು. ಅಮೆರಿಕಾ, ಯೂರೋಪ್ ನ ಮಾರ್ಕೆಟ್ ಗಳಲ್ಲಿ ಈಗಲೂ ಇಂಥ ಮ್ಯೂಸಿಕ್ ಫೆಸ್ಟಿವಲ್ ನ ಟ್ರೆಂಡ್ ಇದ್ದೇ ಇದೆ. ಶಿಕಾಗೋದಲ್ಲಿ ಈ ಸಲದ ತಯಾರಿ ಶುರುವಾಗಿದೆ. ಈ ಕಾರ್ಯಕ್ರಮಗಳ ಯಶಸ್ಸು ಅದರ ಜನಪ್ರಿಯತೆ ಈ ಫೋಟೋಗಳಿಂದಲೇ ತಿಳಿಯುತ್ತದೆ!





