ಸಾಮಗ್ರಿ : 1 ಸಣ್ಣ ಕಲ್ಲಂಗಡಿ ಹಣ್ಣಿನ ಹೋಳು, ಒಂದಿಷ್ಟು ಹೆಚ್ಚಿದ ಪುದೀನಾ, ರುಚಿಗೆ ತಕ್ಕಷ್ಟು ಸಕ್ಕರೆ, ನಿಂಬೆರಸ, ಪುಡಿ ಐಸ್‌.

ವಿಧಾನ : ಮಿಕ್ಸಿಯಲ್ಲಿ ಪುದೀನಾ, (ಬೀಜ ತೆಗೆದ) ಕಲ್ಲಂಗಡಿ ಹಣ್ಣಿನ ಹೋಳು ಹಾಕಿ ನುಣ್ಣಗೆ ತಿರುವಿಕೊಳ್ಳಿ. ಇದಕ್ಕೆ ಸಕ್ಕರೆ, ನಿಂಬೆರಸ ಬೆರೆಸಿ ಮತ್ತೊಮ್ಮೆ ಚಲಾಯಿಸಿ. ಇದನ್ನು ಗ್ಲಾಸುಗಳಿಗೆ ಸುರಿದು, ಮೇಲೆ ಐಸ್‌ ಹಾಕಿ, ಇಲ್ಲಿರುವಂತೆ ಅಲಂಕರಿಸಿ ತಣ್ಣಗೆ ಸವಿಯಲು ಕೊಡಿ.

Cookry-1

ಬೇಲದ ಹಣ್ಣಿನ ಶರಬತ್ತು

ಸಾಮಗ್ರಿ : 2 ಬೇಲದ ಹಣ್ಣು, ರುಚಿಗೆ ತಕ್ಕಷ್ಟು ಬೆಲ್ಲದ ಪುಡಿ, ಚಿಟಕಿ ಉಪ್ಪು, ಏಲಕ್ಕಿ ಪುಡಿ, ಪಚ್ಚ ಕರ್ಪೂರ, ಐಸ್‌ ಕ್ಯೂಬ್ಸ್, ತುಸು ಪುದೀನಾ.

ವಿಧಾನ : ಮೊದಲು ಬೇಲದ ಹಣ್ಣು ಜಜ್ಜಿ, ಅದರ ತಿರುಳನ್ನು ನೀರಿಗೆ ಹಾಕಿ ಚೆನ್ನಾಗಿ ಕಿವುಚಿ, ಸೋಸಿಕೊಂಡು ಚರಟ ಬೇರ್ಪಡಿಸಿ. ನಂತರ ಬೆಲ್ಲದ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಕರಗಿಸಿಕೊಂಡು ಸೋಸಿ, ಅದನ್ನು ಬೇಲದ ಹಣ್ಣಿನ ರಸಕ್ಕೆ ಬೆರೆಸಿಕೊಳ್ಳಿ. ಇದಕ್ಕೆ ಉಳಿದೆಲ್ಲ ಪದಾರ್ಥ ಹಾಕಿ ಚೆನ್ನಾಗಿ ಕದಡಿಕೊಂಡು, ಗ್ಲಾಸುಗಳಿಗೆ ತುಂಬಿಸಿ, ಒಂದಿಷ್ಟು ಹೆಚ್ಚಿದ ಪುದೀನಾ ಹಾಕಿ, ಐಸ್‌ ಕ್ಯೂಬ್ಸ್ ಜೊತೆ ತಣ್ಣಗೆ ಸವಿಯಲು ಕೊಡಿ.

Cookry-3

ಲೆಮನ್ಮಿಂಟ್ಐಸ್ಡ್ ಟೀ

ಸಾಮಗ್ರಿ : 2 ದೊಡ್ಡ ಗಾತ್ರದ ನಿಂಬೆಹಣ್ಣು, ತುಸು ಪುದೀನಾ, ರುಚಿಗೆ ತಕ್ಕಷ್ಟು ಸಕ್ಕರೆ, ಟೀ ಡಿಕಾಕ್ಷನ್‌, ಅಗತ್ಯವಿದ್ದಷ್ಟು ತಣ್ಣೀರು, ಐಸ್‌ ಕ್ಯೂಬ್ಸ್.

ವಿಧಾನ : ಮೊದಲು 2 ಕಪ್‌ ನೀರು ಬಿಸಿ ಮಾಡಿ. ಇದಕ್ಕೆ ಟೀ ಪುಡಿ, ಪುದೀನಾ ಎಲೆ ಹಾಕಿ ಚೆನ್ನಾಗಿ ಮರಳಿಸಿ. ನಂತರ ಮಂದ ಉರಿ ಮಾಡಿ, 2 ನಿಮಿಷ ಬಿಟ್ಟು ಕೆಳಗಿಳಿಸಿ. ತುಸು ಆರಿದ ನಂತರ, ಚೆನ್ನಾಗಿ ಸೋಸಿಕೊಂಡು, ಅದಕ್ಕೆ ನಿಂಬೆರಸ, ಸಕ್ಕರೆ ಹಾಕಿ ಚೆನ್ನಾಗಿ ಕರಗುವಂತೆ ಮಾಡಿ. ನಂತರ ಇದನ್ನು 2-3 ಗ್ಲಾಸುಗಳಿಗೆ ತುಂಬಿಸಿ, ಮೇಲೆ ಐಸ್‌ ಕ್ಯೂಬ್ಸ್ ಹಾಕಿ, ಫ್ರೆಶ್‌ ಪುದೀನಾ (ಮಿಂಟ್‌) ಬೆರೆಸಿ, ತಣ್ಣಗೆ ಸವಿಯಲು ಕೊಡಿ.

Cookry-4

ಕೂಲ್ ಆರೆಂಜ್ಡಿಲೈಟ್

ಸಾಮಗ್ರಿ : 1 ಲೀ. ಕೆನೆಭರಿತ ಗಟ್ಟಿ ಹಾಲು, 1 ಕಪ್‌ ಕಿತ್ತಳೆ ಹಣ್ಣಿನ ಜೂಸ್‌, ಒಂದಿಷ್ಟು ತುಂಡರಿಸಿದ ಬಾದಾಮಿ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಟೂಟಿಪ್ರಟಿ ಚೂರು, ಚಿಟಕಿ ಏಲಕ್ಕಿ ಪುಡಿ, ರುಚಿಗೆ ತಕ್ಕಷ್ಟು ಸಕ್ಕರೆ, ಗಾರ್ನಿಶ್‌ ಗಾಗಿ ಕಿತ್ತಳೆ ಹಣ್ಣಿನ ಸಿಪ್ಪೆ.

ವಿಧಾನ : ಹಾಲು ಕಾಯಿಸಿ ಅದು ಕುದಿಯ ತೊಡಗಿದಂತೆ ಸಕ್ಕರೆ, ಏಲಕ್ಕಿ, ಡ್ರೈ ಫ್ರೂಟ್ಸ್ ಹಾಕಿ, ಮಂದ ಉರಿಯಲ್ಲಿ ಹಾಲು ಅರ್ಧ ಭಾಗ ಹಿಂಗುವಂತೆ ಮಾಡಿ. ಕೆಳಗಿಳಿಸಿ ಚೆನ್ನಾಗಿ ಆರಿದ ನಂತರ ಮಿಕ್ಸಿಗೆ ಹಾಕಿ ಗ್ರೈಂಡ್‌ ಮಾಡಿ. ಇದನ್ನು ಗ್ಲಾಸುಗಳಿಗೆ ಬಗ್ಗಿಸಿ, ಆರೆಂಜ್‌ ಜೂಸ್‌ ಬೆರೆಸಿ, ಟೂಟಿಪ್ರಟಿ ತೇಲಿಬಿಟ್ಟು, ಈ ಗ್ಲಾಸುಗಳನ್ನು 1-2 ಗಂಟೆ ಕಾಲ ಫ್ರಿಜ್‌ ನಲ್ಲಿರಿಸಿ. ನಂತರ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

Cookry-5

ಸ್ಟ್ರಾಬೆರಿ ರೋಸ್ಲೆಮೋನೇಡ್

ಸಾಮಗ್ರಿ : 4-5 ಸ್ಟ್ರಾಬೆರಿ, ಅರ್ಧ ಕಪ್‌ ಸ್ಟ್ರಾಬೆರಿ ಸ್ಕ್ವಾಶ್‌, ರುಚಿಗೆ ತಕ್ಕಷ್ಟು ನಿಂಬೆ ರಸ, ಜೇನುತುಪ್ಪ, ಸಕ್ಕರೆ, ಗುಲಾಬಿ ಜಲ, ರೋಸ್‌ ಸ್ಕ್ವಾಶ್‌, ಪುದೀನಾ ಎಲೆ, ಐಸ್‌ ಕ್ಯೂಬ್ಸ್.

ವಿಧಾನ : ಅರ್ಧ ಲೀ. ಫ್ರಿಜ್‌ ನೀರಿಗೆ ಸಕ್ಕರೆ, ಜೇನುತುಪ್ಪ, ಗುಲಾಬಿ ಜಲ, ನಿಂಬೆ ರಸ ಬೆರೆಸಿ ಚೆನ್ನಾಗಿ ಕದಡಿಕೊಳ್ಳಿ. ಇದನ್ನು ತುಸು ಮಿಕ್ಸಿಗೆ ಹಾಕಿ, ಹೆಚ್ಚಿದ ಸ್ಟ್ರಾಬೆರಿ ಸೇರಿಸಿ ಪೇಸ್ಟ್ ಮಾಡಿ. ಅದನ್ನು ಸೋಸಿಕೊಂಡು, ನಿಂಬೆ ಮಿಶ್ರಣಕ್ಕೆ ಬೆರೆಸಿರಿ. ನಂತರ ಇದಕ್ಕೆ ಸ್ಟ್ರಾಬೆರಿ/ರೋಸ್‌ ಸ್ಕ್ವಾಶ್‌ ಬೆರೆಸಿ ಚೆನ್ನಾಗಿ ಕದಡಿಕೊಂಡು, ಗ್ಲಾಸುಗಳಿಗೆ ತುಂಬಿಸಿ ಮೇಲೆ ಪುದೀನಾ, ಐಸ್‌ ಕ್ಯೂಬ್ಸ್ ತೇಲಿಬಿಟ್ಟು ಸವಿಯಲು ಕೊಡಿ.

MENTEYA-VADE-01

ಕಡಲೆಬೇಳೆ ವಡೆ

ಸಾಮಗ್ರಿ : 1 ಕಪ್‌ ಕಡಲೆಬೇಳೆ, 2 ಈರುಳ್ಳಿ, 5 ಹಸಿಮೆಣಸಿನಕಾಯಿ, ಕರಿಬೇವು, ಕೊ.ಸೊಪ್ಪು, 1 ಚೂರು ಶುಂಠಿ, ಸಬ್ಬಸ್ಸಿಗೆ ಸೊಪ್ಪು ಅರ್ಧ ಕಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ವಿಧಾನ : ಕಡಲೆಬೇಳೆಯನ್ನು 2 ತಾಸು ನೆನೆ ಹಾಕಿ. ಆನಂತರ ನೀರು ಸೋಸಿಕೊಂಡು ಅದನ್ನು ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಕೊ.ಪ್ಪು, ಕರಿಬೇವು, ಸಬ್ಬಸ್ಸಿಗೆ ಸೊಪ್ಪು, ಹಸಿಮೆಣಸಿನಕಾಯಿ, ಶುಂಠಿ ತುರಿ ಮತ್ತು ಉಪ್ಪು ಎಲ್ಲವನ್ನೂ ಹಾಕಿ ಕಲಸಿ ಇಟ್ಟುಕೊಳ್ಳಿ. ಅಂಗೈಗೆ ಎಣ್ಣೆ ಸವರಿಕೊಂಡು ಮಿಶ್ರಣದ ಉಂಡೆಯನ್ನು ತಟ್ಟಿ ಎಣ್ಣೆಯಲ್ಲಿ ಕರಿಯಿರಿ. ಗರಿ ಗರಿ ಇರುವಾಗಲೇ ಸವಿಯಲು ಕೊಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ