ಬಾಲಿವುಡ್ ಸ್ಟಾರ್ ಜೋಡಿ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಬಾಲಿವುಡ್ ತಾರಾ ದಂಪತಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
2021ರ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ತಾರಾ ದಂಪತಿ ಇತ್ತೀಚೆಗೆ ಬೇಬಿ ಶೋವರ್ ಫೋಟೋಗಳನ್ನ ಹಂಚಿಕೊಂಡು ಸಿಹಿ ಸುದ್ದಿ ನೀಡಿದ್ದರು. ಇದೀಗ ಗಂಡು ಮಗುವನ್ನ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಇಂದು ಕತ್ರಿನಾ ಕೈಫ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಕತ್ರಿನಾ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ತಂದೆ – ತಾಯಿ ಆದ ಖುಷಿ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಮಗುವಿಗಾಗಿ ಹರಕೆ ಹೊತ್ತು ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ್ದರು.
ವಿಕ್ಕಿ ಕೌಶಾಲ್ ಹಾಗೂ ಕತ್ರಿನಾ ಕೈಫ್ ಈ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ನವೆಂಬರ್ 7 ಈ ಸುದ್ದಿ ಹಂಚಿಕೊಂಡಿದ್ದು, ಬಾಲಿವುಡ್‌ನ ಆಪ್ತರಾದ ಪ್ರಿಯಾಂಕ ಚೋಪ್ರಾ, ಕರಿನಾ ಕಪೂರ್, ಶ್ರೇಯ ಘೋಷಾಲ್ ಹಾಗೂ ಕತ್ರಿನಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ವಿಕ್ಕಿ ಹಾಗೂ ಕತ್ರಿನಾಗೆ ಶುಭ ಹಾರೈಸುತ್ತಿದ್ದಾರೆ.
ಮದುವೆ ಬಳಿಕ ಚಿತ್ರೋದ್ಯಮದಿಂದ ಬ್ರೇಕ್ ತೆಗೆದುಕೊಂಡಿದ್ದ ಕತ್ರಿನಾ, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.





