ದಿಲ್ಲಿಯ ಕೆಂಪುಕೋಟೆಯ ಎದುರಲ್ಲೇ ಸಂಭವಿಸಿದ ಕಾರ್‌ ಬಾಂಬ್‌ ಸ್ಫೋಟದ ಉಗ್ರ ಕೃತ್ಯದಲ್ಲಿ ಇಲ್ಲಿಯವರೆಗೂ 12 ಮಂದಿ ಸಾವನ್ನಪ್ಪಿದ್ದಾರೆ. ಇವರುಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿಗಳು ಹೊರಬಿದ್ದಿವೆ. ಘಟನೆಯ ದಿನ 8 ಮಂದಿ ಸಾವಿಗೀಡಾಗಿದ್ದರೆ, ನಂತರ ಚಿಕಿತ್ಸೆ ಫಲಕಾರಿಯಾಗದೆ 4 ಮಂದಿ ಮೃತಪಟ್ಟಿದ್ದರು.

ಈ ನಡುವೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಂಬ್‌ ಬ್ಲಾಸ್ಟ್‌ನ ತೀವ್ರತೆ ಎಷ್ಟಿತ್ತು ಎಂದರೆ, ಹೆಚ್ಚಿನವರ ದೇಹದ ಯಾವ ಭಾಗಗಳು ಕೂಡ ಪತ್ತೆಯಾಗಿಲ್ಲ. ಡಿಎನ್‌ಎ ಮ್ಯಾಚಿಂಗ್‌ ಮೂಲಕ ಸಂತ್ರಸ್ಥರ ಗುರುತನ್ನು ಪತ್ತೆ ಮಾಡುವ ಕೆಲಸ ನಡೆಯುತ್ತಿದೆ.ಬಾಂಬ್‌ ಸ್ಫೋಟದ ತೀವ್ರತೆಗೆ ಸಾವು ಕಂಡ ವ್ಯಕ್ತಿಗಳ ಕಿವಿಪದರ, ಶ್ವಾಸಕೋಶ ಹಾಗೂ ಕರುಳುಗಳು ಗುರುತೇ ಸಿಗದಷ್ಟು ಸಂಪೂರ್ಣವಾಗಿ ಛಿದ್ರಛಿದ್ರವಾಗಿದೆ. ದೇಹದ ಬಹುತೇಕ ಎಲ್ಲಾ ಮೂಳೆಗಳು ಮುರಿದುಹೋಗಿದ್ದು, ತಲೆಯ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಆಘಾತಕ್ಕೆ ಒಳಗಾಗಿದ್ದ ವ್ಯಕ್ತಿಗಳ ದೇಹ ಹತ್ತಿರದ ಗೋಡೆಗೆ ಹಾಗೂ ರಸ್ತೆಗೆ ಭಾರೀ ವೇಗದಲ್ಲಿ ಅಪ್ಪಳಿದೆ ಎಂಬುದನ್ನು ಸ್ಫೋಟದ ತೀವ್ರತೆ ತೋರಿಸುತ್ತದೆ.  ತೀವ್ರ ಗಾಯ, ಅತಿಯಾದ ರಕ್ತಸ್ರಾವದಿಂದ ಈ ಸಾವುಗಳು ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜೈಶ್ಚೀಫ್ಅಜರ್ಮಸೂದ್ಸಹೋದರಿ ಜೊತೆ ಸಂಪರ್ಕದಲ್ಲಿದ್ದ ಡಾ.ಶಾಹೀನ್

ಡಾ. ಶಾಹೀನ್ ಸಯೀದ್‌ಳನ್ನು ಜೈಶ್‌ನ ವೈಟ್-ಕಾಲರ್ ಭಯೋತ್ಪಾದನಾ ಮಾಡ್ಯೂಲ್‌ನಲ್ಲಿ ಪ್ರಮುಖ ಕೊಂಡಿ ಎಂದು ಪರಿಗಣಿಸಲಾಗಿದೆ. ಈಕೆ ಜೈಶ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ಜೊತೆ ನೇರ ಸಂಪರ್ಕದಲ್ಲಿದ್ದಳು ಮತ್ತು ಭಯೋತ್ಪಾದಕ ಸಂಘಟನೆಯ ಮಹಿಳಾ ವಿಭಾಗವಾದ ಜಮಾತ್-ಉಲ್-ಮೊಮಿನಾತ್‌ನೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.ಅಕ್ಟೋಬರ್ 2025 ರಲ್ಲಿ ಆಪರೇಷನ್ ಸಿಂಧೂರ್ ನಲ್ಲಿ ತನ್ನ ಪತಿಯ ಸಾವಿಗೆ ಸೇಡು ತೀರಿಸಿಕೊಳ್ಳಲು ಸಾದಿಯಾ ಈ ವಿಭಾಗವನ್ನು ರಚಿಸಿದ್ದಳು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದ ಡಾ. ಶಾಹೀನ್​ಳನ್ನು ಬಂಧಿಸಿ ಶ್ರೀನಗರಕ್ಕೆ ಕರೆದೊಯ್ದ ಬಳಿಕ ಅಲ್ಲಿ ಆಕೆಯನ್ನು ಕಾನೂನುಬದ್ಧವಾಗಿ ಬಂಧಿಸಲಾಗಿದೆ.

ಶಾಹೀನ್ 1996-2001 ಬ್ಯಾಚ್‌ನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾಳೆ ಮತ್ತು ಅಲಹಾಬಾದ್ ವೈದ್ಯಕೀಯ ಕಾಲೇಜಿನಿಂದ ಔಷಧಶಾಸ್ತ್ರದಲ್ಲಿ ಎಂಡಿ ಪದವಿ ಪಡೆದಿದ್ದಾಳೆ. 2006 ರಿಂದ 2013 ರವರೆಗೆ ಏಳು ವರ್ಷಗಳ ಕಾಲ ಕಾನ್ಪುರ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾಳೆ. ಈಕೆ ಯುಪಿಪಿಎಸ್‌ಸಿ ಮೂಲಕ ಆಯ್ಕೆಯಾಗಿದ್ದಳು.

ಆ ನಂತರ ಆಕೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಕಾಲೇಜು ನೋಟಿಸ್‌ಗಳಿಗೆ ಪ್ರತಿಕ್ರಿಯಿಸಲು ವಿಫಲವಾದ ಕಾರಣ ಆಕೆಯನ್ನು 2021 ರಲ್ಲಿ ವಜಾಗೊಳಿಸಲಾಗಿತ್ತು. ನಂತರ ಆಕೆ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಳು. ಅಲ್ಲಿ ಈಕೆ ಡಾ. ಮುಜಮ್ಮಿಲ್ ಸಂಪರ್ಕಕ್ಕೆ ಬಂದಿದ್ದಳು ಎನ್ನಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ