`ದಿ ಯೆಲ್ಲೋ ಕಾಯಿನ್‌ ಕಮ್ಯುನಿಕೇಶನ್ಸ್’ನ ಸಂಸ್ಥಾಪಕಿ ಹಾಗೂ ನಿರ್ದೇಶಕಿ ಗೀತಾ ಸಿಂಗ್‌ ರ ಜನನ, ಉತ್ತರಾಖಂಡ ರಾಜ್ಯದ ಸಣ್ಣ ಹಳ್ಳಿಯ ಮಧ್ಯಮ ವರ್ಗದಲ್ಲಾಯಿತು. ಅವರ ಊರಿನಲ್ಲಿ ಹೆಣ್ಣುಮಕ್ಕಳಿಗೆ 15ಕ್ಕೆ ಮೊದಲೆ ಮದುವೆ ಆಗಿಹೋಗುತ್ತಿತ್ತು. ಆ ರೀತಿ ಅವರು ಉಚ್ಚ ಶಿಕ್ಷಣ ಪಡೆಯಲು ಆಗುತ್ತಿರಲಿಲ್ಲ. ಇವರ ತಂದೆ ಮಾತ್ರ, ಮಗಳು ಡಾಕ್ಟರ್‌ ಯಾ ಎಂಜಿನಿಯರ್ ಆಗಬೇಕೆಂದು ಬಯಸಿದರು. ಹೀಗೆ ಗೀತಾ ದೆಹಲಿಗೆ ಬಂದು ಉನ್ನತ ಶಿಕ್ಷಣ ಪಡೆದರು. ನಂತರ ಆರಂಭದಲ್ಲಿ ವಿಭಿನ್ನ ಮೀಡಿಯಾ ಸಂಸ್ಥೆಗಳಲ್ಲಿ ದುಡಿದರು. ಈ ರೀತಿ ಆಕೆ ಕಾರ್ಪೊರೇಟ್‌ ಕ್ಷೇತ್ರದಲ್ಲಿ ಒಂದು ಮುಖ್ಯ ಗುರಿ ತಲುಪಲು ಬಯಸಿದರು. ಆಕೆ ಮುಂದೆ ಬೆಳೆಯುತ್ತಾ, ದೆಹಲಿಯಲ್ಲಿ ಒಂದು ಸುವ್ಯವಸ್ಥಿತ ಪಿ ಬ್ರಾಂಡಿಂಗ್‌ ಏಜೆನ್ಸಿ ಸ್ಥಾಪಿಸಿದರು. ಈ ಕಂಪನಿಯಲ್ಲಿ ಈಗ 50ಕ್ಕಿಂತಲೂ ಅಧಿಕ ಮಂದಿ ದುಡಿಯುತ್ತಿದ್ದಾರೆ. ಅದರಲ್ಲಿ ಹೆಚ್ಚಿನ ಪಾಲು ಹೆಂಗಸರಿದ್ದಾರೆ.

2012ರಲ್ಲಿ ಈಕೆ ತಮ್ಮ ಕಂಪನಿ ಆರಂಭಿಸಿದರು. ನಂತರ 2014ರಲ್ಲಿ ಇದನ್ನು ಪ್ರೈ.ಲಿ. ಕಂಪನಿಯಾಗಿ ಮಾರ್ಪಡಿಸಲು ಸಾಧ್ಯವಾಯಿತು. ಇಲ್ಲಿ ಲಕ್ಷಾಂತರದಷ್ಟು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬ್ರಾಂಡ್ಸ್ ಗೆ ಕೆಲಸ ಆಗುತ್ತಿದೆ. ಇಂದು ಈ ಕಂಪನಿಗೆ ದೇಶ ಒಂದು ವಿಶಿಷ್ಟ ಐಡೆಂಟಿಟ ನೀಡಿದೆ. ಈಕೆಗೆ 2018ರಲ್ಲಿ ಪಬ್ಲಿಕ್‌ ರಿಲೇಶನ್‌ ಇಂಡಸ್ಟ್ರಿಯಲ್ಲಿ `ವುಮೆನ್‌ ಎಂಟರ್‌ಪ್ರಿನರ್‌ ಆಫ್‌ ದಿ ಇಯರ್‌’ ಪ್ರಶಸ್ತಿ ಲಭಿಸಿತು.

ನೀವು ಫೀಲ್ಡ್ ಗೆ ಬಂದಿದ್ದು ಹೇಗೆ? ಎಲ್ಲಿಂದ ಪ್ರೇರಣೆ ಸಿಕ್ಕಿತು?

ನಾನು ನನ್ನ ಕೆರಿಯರ್‌ ಆರಂಭಿಸಿದ್ದು ಒಬ್ಬ ಪತ್ರಕರ್ತೆಯಾಗಿ. ಹಲವು ಹೆಸರಾಂತ ಮೀಡಿಯಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು ಅದ್ಭುತ ಅನುಭವ! ಆದರೆ ಅಲ್ಲಿದ್ದರೂ ನಾನು ಕಾರ್ಪೊರೇಟ್‌ ಜಗತ್ತಿನಿಂದ ಬಹಳ ಆಕರ್ಷಿಸಲ್ಪಟ್ಟಿದ್ದೆ. ಅದರಲ್ಲೂ ವಿಶೇಷವಾಗಿ ಕಿರಣ್‌ ಮಜುಮ್‌ ದಾರ್‌ ಶಾ, ಇಂದ್ರಾ ನೂಯಿಯರಂಥ ಭಾರತೀಯ ಮಹಿಳಾ ಬಿಸ್‌ ನೆಸ್‌ ಲೀಡರ್ಸ್‌ ಗಳ ಪ್ರೇರಣಾದಾಯಕ ಜೀವನ ನನಗೆ ಬಲು ಹುಮ್ಮಸ್ಸು ತುಂಬಿತು. ಇಚ್ಛಾಶಕ್ತಿ, ನಿರಂತರ ಪ್ರಯಾಸಗಳಿಂದ ನಮ್ಮ ಕನಸನ್ನು ಸಾಕಾರಗೊಳಿಸಬಹುದು ಎಂಬುದು ಸ್ಪಷ್ಟವಾಯಿತು. ಜೊತೆಗೆ ನಾನು ಗಂಡುಹೆಣ್ಣು ಇಬ್ಬರಿಗೂ ಸಮಾನ ವಿಕಾಸಕ್ಕೆ ಅಕಾಶವಿರುವಂಥ ಒಂದು ಉತ್ತಮ ಉದ್ಯಮ ಸ್ಥಾಪಿಸಲು ಬಯಸಿದೆ. ನನ್ನ ಈ ಕನಸು ಕಮ್ಯುನಿಕೇಶನ್ಸ್ ನಿಂದಾಗಿ ಪರಿಪೂರ್ಣ ಆಯ್ತು. ಇಲ್ಲಿ ಹೆಂಗಸರಿಗೆ ಸರ್ವೋಚ್ಚ ಸುರಕ್ಷತೆ ನೀಡಲಾಗುತ್ತದೆ. ಅಲ್ಲಿ ಅವರು ತಮ್ಮ ಸಂಪೂರ್ಣ ಪ್ರತಿಭೆ ತೋರಿಸಲು ಅವಕಾಶವಿದೆ.

ಫೀಲ್ಡ್ ನಲ್ಲಿ ವಿಶೇಷವಾಗಿ ಹೆಂಗಸರು ಹೇಗೆ ಪ್ರಗತಿ ಕಾಣಲು ಸಾಧ್ಯ? ಅವರಿಗೆ ಎಂತೆಂಥ ಸವಾಲು ಎದುರಿಸಬೇಕಾಗುತ್ತದೆ?

ನನ್ನ ಅಭಿಪ್ರಾಯದಲ್ಲಿ ಸುಶಿಕ್ಷಿತ ಮಹಿಳೆಯರಿಗೆ ಇದಕ್ಕಿಂತ ಬೇರೊಂದು ಉತ್ತಮ ಫೀಲ್ಡ್ ಇಲ್ಲ ಎಂದೇ ಭಾವಿಸುತ್ತೇನೆ, ಏಕೆಂದರೆ ಇದು ಮಲ್ಟಿಟಾಸ್ಕಿಂಗ್‌ ಫೀಲ್ಡ್. ವಿಭಿನ್ನ ಕೆಲಸಗಳನ್ನು ಒಟ್ಟೊಟ್ಟಿಗೆ ಮ್ಯಾನೇಜ್‌ ಮಾಡುವುದನ್ನು ಹೆಂಗಸರು ಚೆನ್ನಾಗಿಯೇ ಅರಿತಿರುತ್ತಾರೆ. ಮಹಿಳೆ ವಾಸ್ತವಿಕವಾಗಿ ಅತಿ ಶಿಸ್ತು, ಸಂಘಟಿತ ಮನೋಭಾವ, ಕಷ್ಟಸಹಿಷ್ಣು ಆಗಿರುತ್ತಾಳೆ. ಅವಳ ಈ ಪ್ಲಸ್ ಪಾಯಿಂಟ್ಸ್ ಅವಳ ಡಿಗ್ನಿಫೈಡ್‌ ವ್ಯವಹಾರ, ಪರಮ ಸಹನೆಯಿಂದಾಗಿ ದೊರಕುತ್ತದೆ. ಇದು ಒಬ್ಬ ಯಶಸ್ವಿ ಬಿಸ್‌ ನೆಸ್‌ ವುಮನ್‌ ಳ ಪರಿಪೂರ್ಣ ವ್ಯಕ್ತಿತ್ವಕ್ಕೆ ಬೇಕೇ ಬೇಕು. ಕಮ್ಯುನಿಕೇಶನ್‌ ಇಂಡಸ್ಟ್ರಿಯಲ್ಲಿ ಈ ಎಲ್ಲಾ ಗುಣಗಳು ಯಾರಲ್ಲಿ ಅಡಗಿದೆಯೋ ಅವರು ಮಾತ್ರವೇ ಯಶಸ್ವಿ ಆಗಬಲ್ಲರು. ಪಿ, ಬ್ರಾಂಡಿಂಗ್‌, ಸೋಶಿಯಲ್ ಮೀಡಿಯಾಗಳಲ್ಲಿ ಹೆಂಗಸರು ಸಾಕಷ್ಟು ಮುಂದಾಳತ್ವ ವಹಿಸಿ ಮುನ್ನುಗಬಲ್ಲರು. ಪ್ರೊಫೆಶನ್‌ ಕ್ವಾಲಿಫಿಕೇಶನ್ಸ್ ಅಂದ್ರೆ ಮಾಸ್‌ ಕಮ್ಯುನಿಕೇಶನ್‌, ಮೀಡಿಯಾ, ಪತ್ರಿಕೋದ್ಯಮಗಳಲ್ಲಿ ಡಿಗ್ರಿ ಯಾ ಪ್ರೊಫೆಶನಲ್ ಡಿಗ್ರಿ ಯಾ ಅಡ್ವರ್ಟೈಸಿಂಗ್‌ಮಾರ್ಕೆಟಿಂಗ್‌ ನಲ್ಲಿ ಸರ್ಟಿಫಿಕೇಟ್‌ ಹೊಂದಿರಬೇಕಾದ್ದು ಅನಿವಾರ್ಯ. ಆಗ ಮಾತ್ರ ಇಲ್ಲಿ ಯಶಸ್ಸು ಕಾಣಲು ಸಾಧ್ಯ, ಇಂಡಸ್ಟ್ರಿಯನ್ನು ಸರಿಯಾಗಿ ಗುರುತಿಸಿ ಅರ್ಥೈಸಿಕೊಳ್ಳಲು ಸುಲಭ. ಪ್ರೊಫೆಶನ್‌ ಸಕ್ಸಸ್‌ ಗೆ ಇದು ಬೇಕೇ ಬೇಕು. ಏನೇ ಇರಲಿ, ಅವರು ಕೆಲವು ಸವಾಲುಗಳನ್ನಂತೂ ಎದುರಿಸಲೇಬೇಕು. ಏಕೆಂದರೆ ಈ ಫೀಲ್ಡ್ ನಲ್ಲಿ ಹಗಲೂ ರಾತ್ರಿ ಕೆಲಸ ಮಾಡುತ್ತಿರಬೇಕು. ಇದು ಪುರುಷ ಪ್ರಧಾನ ಸಮಾಜವಾದ್ದರಿಂದ, ಹೆಣ್ಣು ತನ್ನ ಜಾಬ್‌ ಜೊತೆ ಮನೆಯನ್ನೂ ಸಂಭಾಳಿಸಬೇಕಾಗುತ್ತದೆ.

ಒಬ್ಬ ಬಿಸ್ನೆಸ್ವುಮನ್ಆಗಲು ಹೆಣ್ಣು ಯಾವ ವಿಶಿಷ್ಟ ಗುಣಗಳನ್ನು ಹೊಂದಿರಬೇಕು?

ನನ್ನ ಪ್ರಕಾರ ಪ್ರತಿಯೊಬ್ಬ ಹೆಣ್ಣಲ್ಲೂ ಮೊದಲೇ ಒಬ್ಬ ಹಿಡನ್‌ ಬಿಸ್‌ ನೆಸ್‌ ವುಮನ್‌ ಇರುತ್ತಾಳೆ! ಆಕೆ ಇಲ್ಲಿ ಮುಖ್ಯ ಗುರುತಿಸಬೇಕಾದದ್ದು ಅಂದ್ರೆ, ಪ್ರಕೃತಿ ತನಗೆ ಅತ್ಯಮೂಲ್ಯ ಸ್ಕಿಲ್ಸ್ ‌ನೀಡಿದೆ, ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡರೆ, ಬಿಸ್‌ ನೆಸ್‌ ವರ್ಲ್ಡ್ ನಲ್ಲಿ ಅವಳು ಯಶಸ್ವಿ ಆಗುವುದನ್ನು ಯಾರೂ ತಡೆಯಲಾರರು. ತನ್ನ ಮನೆಯ ಬಜೆಟ್‌ ನ್ನು ಕುಶಲವಾಗಿ ರೂಪಿಸಬಲ್ಲ ಗೃಹಿಣಿ, ಅದೇ ಚಾಕಚಕ್ಯತೆಯನ್ನು ಬಿಸ್‌ ನೆಸ್‌ ನಲ್ಲಿ ಪ್ರದರ್ಶಿಸಿ ಮಹತ್ವಪೂರ್ಣ ಆರ್ಥಿಕ ನಿರ್ಣಯ ಕೈಗೊಳ್ಳಬಲ್ಲಳು. ಅತಿ ಸೀಮಿತ ಆದಾಯದಲ್ಲೇ ಬಜೆಟ್‌ ರೂಪಿಸಿ, ಉಳಿತಾಯ ಸಹ ಮಾಡಬಲ್ಲಳು. ಒಂದು ಕಂಪನಿಯ ಆರ್ಥಿಕ ಸ್ಥಿತಿಗತಿಯನ್ನು ಹೆಣ್ಣು ಎಷ್ಟು ಮಹತ್ವಪೂರ್ಣವಾಗಿ ತೂಗಿಸಬಲ್ಲಳು ಎಂಬುದಕ್ಕೆ ಇದೇ ಸಾಕ್ಷಿ. ಇದನ್ನು ಮಹಾನ್‌ ಉದ್ಯಮಿಗಳಾದ ಇಂದ್ರಾ ನೂಯಿ, ಸಾವಿತ್ರಿ ಜಿಂದಾಲ್‌, ರಾಧಿಕಾ ಗುಪ್ತ ಇತ್ಯಾದಿ ಅನೇಕ ಹೆಂಗಸರು ತಮ್ಮ ಉದ್ಯಮಗಳನ್ನು ವಿಶ್ವಾದ್ಯಂತ ಖ್ಯಾತಿ ಗಳಿಸುವಂತೆ ಮುನ್ನಡೆಸುವಲ್ಲಿ ಎಷ್ಟು ಸಮರ್ಥರೆಂದು ನಿರೂಪಿಸಿದ್ದಾರೆ. ಹಾಗಾಗಿ ಗಂಡಸರಿಗಿಂತ ಹೆಂಗಸರೇ ಉತ್ತಮವಾಗಿ ಬಿಸ್ ನೆಸ್‌ ನಡೆಸಬಲ್ಲರು ಎಂದೇ ನಾನು ಹೇಳುತ್ತೇನೆ.

ಹೆಂಗಸರ ಕುರಿತಾಗಿ ಸಮಾಜದ ದೃಷ್ಟಿಕೋನದಲ್ಲಿ ಬದಲಾವಣೆ ಆಗಿದೆಯೋ ಇಲ್ಲವೋ? ಇಂದು ಸಮಾಜದಲ್ಲಿ ಹೆಣ್ಣಿನ ಸ್ಥಿತಿಗತಿ ಹೇಗಿದೆ?

ನನಗೆ ಅನಿಸುವುದೆಂದರೆ, ನಮ್ಮ ಸಮಾಜದಲ್ಲಿ 20-30% ಬದಲಾವಣೆ ಆಗಿದೆ. ಆದರೆ ಹೆಣ್ಣಿನ ಸ್ಥಿತಿ ಒಂದು ವಿಧದಲ್ಲಿ ಹಿಂದಿಗಿಂತ ಕೆಟ್ಟದಾಗಿದೆ. ನೌಕರಿಯ ಜೊತೆ ಜೊತೆಗೆ ಅವಳು ಮನೆಯನ್ನೂ ಸುಧಾರಿಸಬೇಕು, ಮಕ್ಕಳನ್ನೂ ನೋಡಿಕೊಳ್ಳಬೇಕು. ಅಂದ್ರೆ ಅವರ ಸ್ಥಿತಿ ಒಂದು ರೋಬೋಟ್‌ ತರಹ ಆಗಿದೆ. ಇವರ ಮನೆ ನಿರ್ವಹಣೆಯ ಅರ್ಧ ಭಾಗದ ಹೊರೆಯನ್ನು ಗಂಡಸರಿಗೂ ವರ್ಗಾಯಿಸಬೇಕು. ಗ್ಲೋಬಲ್ ಮಟ್ಟದಲ್ಲೂ ಹೆಣ್ಣು ಈ ವಿಷಯದಲ್ಲಿ ಒಗ್ಗಟ್ಟಾಗಬೇಕು. ಹೆಣ್ಣು ಆದಷ್ಟೂ ಉನ್ನತ ಶಿಕ್ಷಣ ಪಡೆಯಲೇಬೇಕು. ಆಗ ಮಾತ್ರ ಸಮಾಜದಲ್ಲಿ ಒಂದು ಐಡೆಂಟಿಟಿ ದೊರೆತು, ಈ ಸಮಾಜವನ್ನು ಸುಶಿಕ್ಷಿತ ಗೊಳಿಸಬಲ್ಲಳು. ಒಬ್ಬ ಹೆಣ್ಣು ಸುಶಿಕ್ಷಿತಳಾಗಿ, ಸಶಕ್ತಳಾಗಿದ್ದರೆ, ಮುಂದಿನ ತನ್ನ 10 ತಲೆಮಾರುಗಳನ್ನು ಸಂಭಾಳಿಸಬಲ್ಲಳು. ಗಂಡಿಗೆ ಈ ಮಾತು ಅನ್ವಯಿಸುವುದಿಲ್ಲ. ನಮ್ಮ ದೇಶದ ಎಲ್ಲಾ ಹೆಂಗಸರೂ ಸುಶಿಕ್ಷಿತರಾದರೆ, ಮುಂದಿನ 100 ವರ್ಷ ದೇಶಕ್ಕೆ ಉಜ್ವಲ ಭವಿಷ್ಯ ಗ್ಯಾರಂಟಿ. ಹಾಗೆಯೇ  ಪ್ರತಿ ಕಂಪನಿಯ ಹೆಡ್‌ ಹೆಂಗಸರೇ ಆದಾಗ, ಈ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯ.

ಮಹಿಳೆಯರ ಸ್ಥಿತಿಯ ಸುಧಾರಣೆಗಾಗಿ ಸಾಮಾಜಿಕ ದೃಷ್ಟಿಕೋನದಲ್ಲಿ ಎಂಥ ಬದಲಾವಣೆ ಆಗಬೇಕಿದೆ?

ಮಹಿಳೆಯರ ಜವಾಬ್ದಾರಿ ಹೆಚ್ಚಾಗಿದೆ. ಇವರ ಸ್ಥಿತಿಯಲ್ಲಿ ಯಾವ ಸುಧಾರಣೆಯೂ ಆಗಿಲ್ಲ. ಇಂದಿನ ಮಹಿಳೆ ವಿಶೇಷವಾಗಿ ಮಧ್ಯಮ ವರ್ಗದ ನಗರವಾಸಿ ಪರಿವಾರಗಳಲ್ಲಿ, ಮನೆಹೊರಗಿನ ಎರಡರ ಜವಾಬ್ದಾರಿ ಹೊರಲೇಬೇಕಿದೆ. ಆದರೆ ಇವೆಲ್ಲವನ್ನೂ ನಿಭಾಯಿಸುವಲ್ಲಿ ಏನೇನು ಕಷ್ಟಗಳು ಬರುತ್ತಲೇ, ಇವಳು ಅವೆಲ್ಲವನ್ನೂ ಎದುರಿಸಲೇಬೇಕು. ಇದನ್ನು ಯಾರೂ ಗುರುತಿಸಲು ಬಯಸುವುದಿಲ್ಲ ಅಥವಾ ಅವಳ ಹೆಚ್ಚಿನ ಜವಾಬ್ದಾರಿಗೆ ಹೆಗಲು ಕೊಡಲು ಮುಂದಾಗುವುದಿಲ್ಲ. ಕೇವಲ ಆರ್ಥಿಕ ರೂಪದಲ್ಲಿ ಸ್ವಾವಲಂಬಿ ಆಗದು ಸಶಕ್ತತೆಯ ಸಂಕೇತವಲ್ಲ. ಎಲ್ಲಿಯವರೆಗೆ ಹೆಣ್ಣು ಸಾಮಾಜಿಕ, ಭಾವನಾತ್ಮಕ ರೂಪದಲ್ಲಿ ಸಶಕ್ತಳಾಗುವುದಿಲ್ಲವೇ, ಅವಳು ಗಂಡಿನ ಅಡಿಯಾಳಾಗಬೇಕಾಗುತ್ತದೆ. ಹೆಣ್ಣುಮಕ್ಕಳಿಗೆ ಉತ್ತಮ ಮಟ್ಟದ ಶಿಕ್ಷಣ ದೊರೆತಾಗ ಮಾತ್ರ, ಈ ಸಮಾಜದ ಕುಟಿಲತೆ ಎದುರಿಸಲು ಅವಳು ಸಶಕ್ತಳಾಗಲು ಸಾಧ್ಯ. ಮಕ್ಕಳ ಪಾಲನೆಯಲ್ಲೂ ಸುಧಾರಣೆಯ ಅಗತ್ಯವಿದೆ. ಬಾಲ್ಯದಿಂದಲೇ ಮಗ ಮಗಳು ಎಂದು ಭೇದಭಾವ ಮಾಡುತ್ತಾರೆ. ಹೆಣ್ಣಾದ್ದರಿಂದ ಮಗಳು ಮನೆಗೆಲಸ ಕಲಿಯಬೇಕು, ಮುಂದೆ ಸಂಸಾರ ಸಾಗಿಸಲು ಸಲೀಸು ಅಂತಾರೆ. ಗಂಡಿಗೆ ಆ ಕಟ್ಟುಪಾಡಿಲ್ಲ. ಇಂಥ ಭೇದಭಾವ ಸಂಪೂರ್ಣ  ತೊಲಗಿದಾಗ ಮಾತ್ರ ಹೆಣ್ಣಿನ ಉದ್ಧಾರ ಸಾಧ್ಯ!

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ