ಶರತ್ ಚಂದ್ರ

ಕನ್ನಡ ಸಿನಿಮಾಗಳಲ್ಲಿ ನಾಯಕ ಫೋಟೋಗ್ರಾಫರ್ ವೃತ್ತಿಯಲ್ಲಿ ಕಾಣಿಸಿಕೊಂಡಿದ್ದು ತುಂಬಾ ಕಡಿಮೆ. ಸಪ್ತಪದಿ ಚಿತ್ರದಲ್ಲಿ ಅಂಬರೀಷ್ ಮದುವೆ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದರೆ, ‘ನೀ ಬರೆದ ಕಾದಂಬರಿ’ ಚಿತ್ರದಲ್ಲಿ ವಿಷ್ಣುವರ್ಧನ್ ಮಾಡಲಿಂಗ್ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದರು. ಇದೇ ರೀತಿ ಒಂದಷ್ಟು ಚಿತ್ರಗಳಲ್ಲಿ ನಾಯಕರು ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದರೂ ಕೂಡ, ಪೂರ್ಣ ಪ್ರಮಾಣದಲ್ಲಿ ಚಿತ್ರದುದ್ದಕ್ಕೂ ಯಾವ ಹೀರೋ ಕೂಡ ಕಾಣಿಸಿಕೊಂಡಿರಲಿಲ್ಲ.

ಇಷ್ಟೆಲ್ಲಾ ಪೀಠಿಕೆಯ ಉದ್ದೇಶ, ನವಂಬರ್ 21ರಂದು ಅಂದರೆ ಇಂದು ಬಿಡುಗಡೆಯಾಗಲಿರುವ ‘ಫುಲ್ ಮೀಲ್ಸ್ ‘ ಎಂಬ ಕನ್ನಡ ಚಿತ್ರದ ನಾಯಕ ಕೂಡ ಫೋಟೋಗ್ರಾಫರ್ ಎನ್ನುವುದು ವಿಶೇಷ.

1000768319

ಚಿತ್ರದ ನಾಯಕ ಪಾತ್ರವನ್ನು ನಿಭಾಯಿಸಿರುವ ಲಿಖಿತ್ ಶೆಟ್ಟಿ ಚಿತ್ರದ ನಿರ್ಮಾಪಕರೂ ಕೂಡ ಹೌದು.ಚಿತ್ರದ ನಾಯಕ ಲಕ್ಕಿ ಒಬ್ಬ passionate ಮತ್ತು ಪ್ರತಿಭಾವಂತ ಛಾಯಾಗ್ರಾಹಕ. ಸೋದರ ಮಾವನ ಕೃಪೆ ಯಿಂದ ಸ್ವಂತ ಸ್ಟುಡಿಯೋ ಇಟ್ಟುಕೊಂಡರೂ ಕೂಡ ಆರಂಭದಲ್ಲಿ ಅವಕಾಶವಂಚಿತನಾಗಿ, ದುಡ್ಡು ಮಾಡದೇ ಯಶಸ್ಸಿನಿಂದ ವಂಚಿತನಾಗಿ, ನಂತರ ಅತೀ ದೊಡ್ಡ ace photographer ಆಗುವ ಪಾತ್ರದಲ್ಲಿ ಲಿಖಿತ್ ಶೆಟ್ಟಿ ಅಭಿನಯಿಸಿದ್ದಾರೆ.

ಚಿತ್ರದ ಟ್ರೈಲರ್ ಬಿಡುಗಡೆಯಾದಾಗ ಚಿತ್ರದಲ್ಲಿ ಬರುವ ಒಂದು ಸನ್ನಿವೇಶದ ಡೈಲಾಗ್ ಬಗ್ಗೆ ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಚಿತ್ರದಲ್ಲಿ ಬರುವ ಸನ್ನಿವೇಶ ಒಂದರಲ್ಲಿ ಛಾಯಾಗ್ರಾಹಕರು flirt ಮಾಡುತ್ತಾರೆ ಅನ್ನುವ ಡೈಲಾಗ್ ಛಾಯಾಗ್ರಾಹಕರಿಗೆ ಭಾವನೆಗಳಿಗೆ ದಕ್ಕೆ ಯಾಗಿತ್ತು.

1000768329

ಬೆಂಗಳೂರಿನಲ್ಲಿ ಇದೇ ತಿಂಗಳು 19ನೇ ತಾರೀಕಿನಂದು ಮಾಧ್ಯಮದವರ ಜೊತೆಗೆ ವಿಶೇಷವಾಗಿ ಛಾಯಾಗ್ರಹಕರಿಗೋಸ್ಕರ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.ಬೆಂಗಳೂರಿನ ಒಂದಷ್ಟು ಛಾಯಾಗ್ರಾಹಕರು ಈ ಪ್ರದರ್ಶನದಲ್ಲಿ ಭಾಗವಹಿಸದ್ದು, ಸಿನಿಮಾ ನೋಡಿದ ನಂತರ ಫೋಟೋಗ್ರಾಫರ್ಸ್ ಸಾಕಷ್ಟು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.

ಚಿತ್ರಮಂದಿರದ ಆವರಣದಲ್ಲಿ ಪ್ರೇಕ್ಷಕಕರ ಫೋಟೋಗಳನ್ನು ತೆಗೆದು polaroid ಮಾದರಿಯಲ್ಲಿ ಆಲ್ಬಮ್ ಮಾಡಿ ಸ್ಥಳದಲ್ಲೇ ನೀಡಿದ್ದು ವಿಶೇಷ.

1000768321

ಚಿತ್ರದಲ್ಲಿ ನಾಯಕನನ್ನು ನಿಜ ಜೀವನದಲ್ಲಿ ಫೋಟೋಗ್ರಾಫರ್ ಗಳು ಹೇಗೆ ಇರುತ್ತಾರೋ ಹಾಗೆ ತೋರಿಸಲಾಗಿದೆ. ಪ್ರಿ ವೆಡ್ಡಿಂಗ್ ಶೂಟ್ ಆಗಿರಲಿ, ಮದುವೆ ಸಮಾರಂಭದ ಶೂಟ್ ಆಗಿರಲಿ ಅಥವಾ ಮಾಡಲಿಂಗ್ ಫೋಟೋಗ್ರಾಪಿ ಕ್ಷೇತ್ರದಲ್ಲಿ ಇವತ್ತಿನ ಕಾಲದಲ್ಲಿ ಅತ್ಯಂತ ಶ್ರಮ,ಕ್ರಿಯೇಟಿವಿಟಿ ಇದ್ದರೆ ಮಾತ್ರ ಒಬ್ಬ ಫೋಟೋಗ್ರಾಫರ್ ಗೆಲ್ಲಲು ಸಾಧ್ಯ ಎಂಬುದನ್ನು ನಿರ್ದೇಶಕರು ತೆರೆಯ ಮೇಲೆ ಚೆನ್ನಾಗಿ ವಿಭಿನ್ನ ಕಥೆಯ ಮೂಲಕ ನಿರೂಪಿದ್ದಾರೆ.

ಫೋಟೋಗ್ರಾಫರ್ ಒಬ್ಬನ ಪ್ರೇಮ ಕಥನ ಮತ್ತು ಅವನ ವೃತ್ತಿ ಬದುಕಿನ ನೋವು ನಲಿವನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ತೆರೆದಿಡುವ ಪ್ರಯತ್ನ ಕನ್ನಡದಲ್ಲಿ ಇದೇ ಮೊದಲು.

ಈ ನಿಟ್ಟಿನಲ್ಲಿ ನಿರ್ದೇಶಕ ವಿನಾಯಕ್ ಮತ್ತು ತಂಡದ ಪ್ರಯತ್ನ ಇಲ್ಲಿ ಗೆದ್ದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ