ಶರತ್ ಚಂದ್ರ 

ಕನ್ನಡ ಚಿತ್ರಗಳಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ ತೆಲುಗು ಚಿತ್ರಗಳಲ್ಲಿ ಭದ್ರವಾಗಿ ನೆಲೆಯೂರಿರುವ ನಟಿಯರು ತುಂಬಾ ಕಡಿಮೆ.

ಸೌಂದರ್ಯ ರಶ್ಮಿಕಾ ಮಂದಣ್ಣ ಮುಂತಾದ ನಟಿಯರನ್ನು ಬಿಟ್ಟರೆ ಒಂದಷ್ಟು ನಟಿಯರು ಒಂದೆರಡು ಸಿನಿಮಾಗಳಲ್ಲಿ ನಟಿಸಿ ಕನ್ನಡಕ್ಕೆ ವಾಪಾಸಾಗಿರುವ ಉದಾಹರಣೆಯಿದೆ.

ಆದರೆ ಕೆಲವು ವರ್ಷಗಳ ಹಿಂದೆ ಟಾಲಿವುಡ್ ಪ್ರವೇಶಿಸಿದ್ದ ಕನ್ನಡದ ಪ್ರತಿಭೆ ಆಶಿಕಾ ರಂಗನಾಥ್ ತೆಲುಗಿನಲ್ಲಿ ಒಂದಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

1000782014

ಕಳೆದ ವರ್ಷ ಸಂಕ್ರಾಂತಿಗೆ ಬಿಡುಗಡೆಯಾದ ತೆಲುಗಿನ ಸೂಪರ್ ಸ್ಟಾರ್ ನಾಯಕ ನಟ ನಾಗಾರ್ಜುನ ಜೊತೆ’ ನಾ ಸಾಮಿ ರಂಗ ‘ಚಿತ್ರದಲ್ಲಿ ಮೊದಲ ಬಾರಿ ನಾಯಕಿಯಾಗಿ ನಟಿಸಿದ್ದು ಆ ಚಿತ್ರ ಹಿಟ್ ಆಗಿತ್ತು.

ಕನ್ನಡದ ನಂತರ ಒಂದೆರಡು ತಮಿಳು ಚಿತ್ರ ಗಳಲ್ಲಿ ನಟಿಸಿದ್ದರೂ ಕೂಡ ತೆಲುಗಿನಲ್ಲಿ ಆಕೆಗೆ ಒಳ್ಳೆಯ ಆದರಣೆ ಸಿಕ್ಕಿದೆ.

ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ‘ವಿಶ್ವಾಂಬರ ‘ಚಿತ್ರದಲ್ಲಿ ನಟಿಸುವ ದೊಡ್ಡ ಅವಕಾಶ ಆಶಿಕಾಗೆ ದೊರಕಿದೆ.ಮುಂದಿನ ವರ್ಷ ಸಂಕ್ರಾಂತಿ ದಿನದಂದು ಬಿಡುಗಡೆಯಾಗಲಿರುವ ಮಾಸ್ ಸ್ಟಾರ್ ರವಿತೇಜ ನಟಿಸಿರುವ ‘ಬರ್ತ ಮಹಾಶಯಲುಕು ವಿಜ್ಞಪ್ತಿ ‘ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು ಇತ್ತೀಚೆಗೆ ಬಿಡುಗಡೆಯಾದ ‘ಬೆಲ್ಲ ಬೆಲ್ಲ ‘ ಹಾಡು ಸಕ್ಕತ್ ಟ್ರೆಂಡಿಂಗ್ ನಲ್ಲಿದೆ.ರವಿತೇಜ ಜೊತೆ ಆಕೆ ಮಾಡಿರುವ ಡಾನ್ಸ್ ನೋಡಿ ತೆಲುಗು ಪ್ರೇಕ್ಷಕ ರು ಫಿದಾ ಆಗಿದ್ದಾರೆ.

ಇತ್ತೀಚಿಗೆ ಬಿಡುಗಡೆಯಾದ ‘ಗತ ವೈಭವ’ ಚಿತ್ರ ಕೂಡ ತೆಲುಗಿನಲ್ಲಿ ಬಿಡುಗಡೆಯಾಗತ್ತು. ಒಟ್ಟಿನಲ್ಲಿ ತೆಲುಗಿನಲ್ಲಿ ಬ್ಯುಸಿ ಆಗಿರುವ ಆಶಿಕಾ ಪರ್ಮನೆಂಟ್ ಆಗಿ ತೆಲುಗು ಚಿತ್ರರಂಗದಲ್ಲಿ ಸೆಟ್ಲ್ ಆಗುವ ಸಾಧ್ಯತೆ ಕಂಡು ಬರುತ್ತಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ