`ಆರೋಗ್ಯವೇ ಭಾಗ್ಯ’ ಎಂಬ ನಾಣ್ಣುಡಿ ಎಲ್ಲಾ ಕಾಲಕ್ಕೂ ಸಲ್ಲುತ್ತದೆ. ದೇಹವನ್ನು ಸದಾ ಚಟುವಟಿಕೆಗಳಿಂದ ಚೂಟಿಯಾಗಿ ಇಡಬೇಕೆಂದರೆ, ನಾವು ಬಾಲ್ಯದಿಂದಲೇ 3 ವಿಷಯಗಳತ್ತ ಹೆಚ್ಚಿನ ಗಮನ ಕೊಡಬೇಕು ಸೂಕ್ತ ಊಟ ತಿಂಡಿ, ಅಗತ್ಯ ವಿಶ್ರಾಂತಿ, ನಿಯಮಿತ ವ್ಯಾಯಮ.

ಈಗ ನಾವು ವ್ಯಾಯಾಮದತ್ತ ಗಮನಿಸೋಣ. ವ್ಯಾಯಾಮ ಇಲ್ಲದಿದ್ದರೆ ಏನೂ ಆಗಲಾರದು, ಆರೋಗ್ಯದ ಸುಧಾರಣೆಗೆ ಅದು ಅತಿ ಅಗತ್ಯ ಎನ್ನುತ್ತಾರೆ ವೈದ್ಯರು. ನಿಯಮಿತವಾಗಿ ವ್ಯಾಯಾಮ, ಕಸರತ್ತು ಮಾಡುವ ವ್ಯಕ್ತಿ ಯಾವಾಗಲೂ ನಿರೋಗಿ ಆಗಿರುತ್ತಾನೆ. ಜೊತೆಗೆ ಆತನ/ಆಕೆಯ ಕಾರ್ಯ ಸಾಮರ್ಥ್ಯ ಹೆಚ್ಚುತ್ತದೆ. ತಜ್ಞರ ಅಭಿಪ್ರಾಯದಲ್ಲಿ ಒಬ್ಬ ವಯಸ್ಕ ವ್ಯಕ್ತಿ ವಾರದಲ್ಲಿ ಕನಿಷ್ಠ 2-3 ಗಂಟೆಗಳ ಕಾಲ ಅಗತ್ಯ ವ್ಯಾಯಮ ಮಾಡಲೇಬೇಕು.

ನಮ್ಮನ್ನು ನಾವು ಫಿಟ್‌ಫೈನ್‌ ಆಗಿರಿಸಿಕೊಳ್ಳಲು ಹಲವಾರು ವಿಧಾನಗಳಿವೆ. ವ್ಯಾಯಾಮ, ರನ್ನಿಂಗ್‌, ಜಾಗಿಂಗ್‌, ಬ್ರಿಸ್ಕ್ ವಾಕಿಂಗ್, ಸ್ಕಿಪ್ಪಿಂಗ್‌, ಯೋಗಾಸನ, ಏರೋಬಿಕ್ಸ್, ಹೆಚ್ಚಿನ ಓಡಾಟಗಳಿರುವ ಆಟಗಳೂ ಸಹ. ಇವೆಲ್ಲಕ್ಕಿಂತ ವಿಭಿನ್ನವಾಗಿ ನೀವು ಟ್ರೈ ಮಾಡಬಯಸಿದರೆ, ಈಜು ಅತ್ಯುತ್ತಮ ಆಯ್ಕೆ ಆಗಿದೆ. ಮುಖ್ಯವಾಗಿ ಈ ಬೇಸಿಗೆಯಲ್ಲಿ ಈಜು ಎಲ್ಲರಿಗೂ ಬಹು ಪ್ರಿಯ! ವೈದ್ಯರ ಪ್ರಕಾರ ಫುಲ್ ಬಾಡಿ ವರ್ಕ್‌ ಔಟ್‌ ಗೆ ಈಜಾಟ ಅತ್ಯುತ್ತಮ.

ಒಂದು ಸಮೀಕ್ಷೆ ಪ್ರಕಾರ, 3 ತಿಂಗಳ ಕಾಲ, ಪ್ರತಿವಾರ ಒಟ್ಟಾರೆ 1 ಗಂಟೆ ಕಾಲ ಈಜಾಡುವ ವ್ಯಕ್ತಿಯ ಏರೋಬಿಕ್‌ ಫಿಟ್‌ ನೆಸ್‌ ನಲ್ಲಿ ಹೆಚ್ಚಿನ ಸುಧಾರಣೆ ಆಗುತ್ತದೆ. ಇದು ಮಾನವರ ದೈಹಿಕ, ಭಾವನಾತ್ಮಕ ಆರೋಗ್ಯ ಎರಡಕ್ಕೂ ಲಾಭಕಾರಿ. ಇದರಿಂದ ಕ್ಯಾನ್ಸರ್‌, ಮಧುಮೇಹ, ಡಿಪ್ರೆಶನ್‌, ಹೃದ್ರೋಗ, ಆಸ್ಟೂರೋಪೊರೋಸಿಸ್‌ ನಂಥ ಅನೇಕ ರೋಗಗಳಿಂದ ದೂರ ಉಳಿಯಬಹುದಾಗಿದೆ.

ಹೆಚ್ಚಿನ ಲಾಭಗಳು

ಈಜಾಟದಿಂದ ದೇಹದ ಅನೇಕ ಭಾಗಗಳ ಮಾಂಸಖಂಡಗಳು ಸಕ್ರಿಯಗೊಳ್ಳುತ್ತವೆ, ವಿಕಸಿತ ಆಗುತ್ತವೆ. ಬೇರೆ ಬೇರೆ ಸ್ಟ್ರೋಕ್ ಯಾ ಸ್ವಿಮ್ಮಿಂಗ್‌ ಟೆಕ್ನಿಕ್ಸ್, ವಿಭಿನ್ನ ಮಾಂಸಖಂಡಗಳನ್ನು ಪ್ರಭಾವಿತಗೊಳಿಸುತ್ತವೆ. ಏಕೆಂದರೆ ಇವುಗಳೆಲ್ಲದರಲ್ಲೂ ಈಜು ವಿಧಾನ, ಟೆಕ್ನಿಕ್ಸ್ ವಿಭಿನ್ನವೇ ಆಗಿರುತ್ತದೆ. ಇದರಲ್ಲಿ ಬಹುತೇಕ ಸ್ಟ್ರೋಕ್ಸ್ ನಲ್ಲಿ ದೇಹದ ಎಲ್ಲಾ ಪ್ರಮುಖ ಅಂಗಗಳು ಎದೆ, ತೋಳು, ಕೈಕಾಲು, ಬೆನ್ನು, ತಲೆಯ ಲಯಬದ್ಧ, ಸಮನ್ವಿತ ಚಟುವಟಿಕೆ ಶಾಮೀಲಾಗಿರುತ್ತದೆ. ಈಜುಗಾರರಲ್ಲಿ ದೇಹದ ಬಳಕೆ ಬೇರೆ ಬೇರೆ ವಿಧಾನಗಳಿಂದ ಆಗಿರುವುದರಿಂದ, ಇದರ ಲಾಭಗಳೂ ಬೇರೆಯೇ ಆಗಿರುತ್ತವೆ.

ಉದಾ : ಫ್ರೀ ಸ್ಟೈಲ್ ನಲ್ಲಿ ನೀವು ಯಾವ ವಿಧಾನದಲ್ಲಾದರೂ ಈಜಬಹುದು. ಬ್ರೆಸ್ಟ್ ಸ್ಟ್ರೋಕ್‌ ನಲ್ಲಿ ನೀವು ಎದೆಯಿಂದ ಹೆಚ್ಚು ಒತ್ತಡ ಹೇರುವಿರಿ, ಬಟರ್‌ ಫ್ಲೈನಲ್ಲಿ ಇಡೀ ದೇಹದ ಬಳಕೆ ಆಗುತ್ತದೆ, ಸೈಡ್‌ ಸ್ಟ್ರೋಕ್‌ ನಲ್ಲಿ ಈಜುಗಾರ, ತನ್ನ ಒಂದು ಕೈಯನ್ನು ಸದಾ ನೀರಲ್ಲಿ ಇಳಿಬಿಟ್ಟು, ಇನ್ನೊಂದು ಕೈಯಿಂದ ನೀರನ್ನು ಬಡಿಯುತ್ತಾ ಈಜುತ್ತಾನೆ.

ಫ್ರೀಸ್ಟೈಲ್ ‌ಈಜುಗಾರ ಬಹಳ ಹೊತ್ತಿನ ಸ್ಟ್ರೋಕ್‌ ಗಾಗಿ, ಎದೆಯ ಭಾಗವನ್ನು ತಿರುಗಿಸಲು ಕೋರ್‌ ಅಬ್ಡಾಮಿನ್‌ ಹಾಗೂ ಆಬ್ಲಿಕ್ ಮಹತ್ವಪೂರ್ಣ ಪಾತ್ರ ವಹಿಸುತ್ತವೆ. ಅದೇ ಸಂದರ್ಭದಲ್ಲಿ ಹಿಪ್‌ ಫ್ಲೆಕ್ಸರ್ಸ್‌ ನ ಬಳಕೆ ಕಾಂಪ್ಯಾಕ್ಟ್  ಸ್ಥಿರನಿಯಮಿತ ಕಿಕ್‌ ಗಾಗಿಯೇ ಇರುತ್ತದೆ. ಫ್ರೀಸ್ಟೈಲ್ ‌ಬ್ಯಾಕ್‌ ಸ್ಟ್ರೋಕ್‌ ಈಜುಗಾರ, ನೀರಿನಲ್ಲಿ ಅಂಗಾತ ಮಲಗಿ ಬೆನ್ನಿನ ಭಾಗದಿಂದಲೇ ಪುಶ್‌ ಮಾಡುತ್ತಾ ಈಜಬೇಕು. ನೀರಲ್ಲಿ ಹೀಗೆ ಅಂಗಾತ ಮಲಗಿದ ವ್ಯಕ್ತಿ, ತನ್ನ ಕೈ ಕಾಲು ಬಡಿಯುತ್ತಾ, ದೋಣಿಯಲ್ಲಿ ಹುಟ್ಟು ಹಾಕುವ ಹಾಗೆ, ಮುಂದುವರಿಯುತ್ತಾನೆ.

ಇಲ್ಲಿಯೂ ಸಹ ಕೈಕಾಲುಗಳ ಚಲನೆ, ಫ್ರೀಸ್ಟೈಲ್ ನ ತರಹವೇ ಇರುತ್ತದೆ. ಇದರಲ್ಲಿನ ಮುಖ್ಯ ವ್ಯತ್ಯಾಸ ಎಂದರೆ, ಅಂಗಾತ ಮಲಗಿಯೇ ಈಜಬೇಕು ಎಂಬುದು. ವೈದ್ಯರ ಪ್ರಕಾರ, ಅಧಿಕ ಬೆನ್ನು ನೋವು ಇರುವ ರೋಗಿಗಳಿಗೆ ಇಂಥ ಸ್ವಿಮ್ಮಿಂಗ್‌ ಹೆಚ್ಚು ಲಾಭಕಾರಿ.

ತೂಕ ಇಳಿಸಲು ಸಹಕಾರಿ

ಬಟರ್‌ ಫ್ಲೈ ಸ್ಟ್ರೋಕ್‌ ನ್ನು ತೂಕ ಇಳಿಸಲು ಇವರು ಉತ್ತಮ ಈಜಿನ ವಿಧ ಎಂದೇ ಪರಿಗಣಿಸಲಾಗಿದೆ. ಈ ಸ್ಟ್ರೋಕ್‌ ನ್ನು ಸರಿಯಾದ ವಿಧಾನದಲ್ಲಿ 10-12 ನಿಮಿಷ ಅಭ್ಯಾಸ ಮಾಡುವುದರಿಂದ, ಪ್ರತಿಸಲ 150 ಕ್ಯಾಲೋರಿ ಬರ್ನ್‌ ಆಗುತ್ತದೆ. ಕೋರ್ ಅಬ್ಡಾಮಿನ್‌ ಹಾಗೂ ಬೆನ್ನಿನ ಕೆಳಭಾಗದ ಮಾಂಸಖಂಡ, ಹಿತಕರವಾಗಿ ಉಸಿರಾಡಲು ಒಳಗಿನ ಕೊಬ್ಬಿನಂಶವನ್ನು ಚೆನ್ನಾಗಿ ಹೊರಗೆಳೆದು ಬಿಡುತ್ತವೆ. ತಜ್ಞರ ಪ್ರಕಾರ ನಮ್ಮ ಕಾಲನ್ನು ಡಾಲ್ಛಿನ್‌ ತರಹ ಇರಿಸಿಕೊಳ್ಳಬೇಕಂತೆ. ಗ್ಲೂಟ್ಸ್, ಪೆಕ್ಸ್, ಕ್ವಾಡ್ಸ್, ಕಾಮ್ಸ್, ಶೋಲ್ಡರ್ಸ್‌, ಬೈಸೆಪ್ಸ್, ಟ್ರೈಸೆಪ್ಸ್ ಇತ್ಯಾದಿಗಳೆಲ್ಲ ಈ ಸ್ಟ್ರೋಕ್‌ ಕಾರಣ ಚೆನ್ನಾಗಿ ಕೆಲಸ ಮಾಡಲಾರಂಭಿಸುತ್ತವೆ.

ಅದೇ ಬ್ರೆಸ್ಟ್ ಸ್ಟ್ರೋಕ್‌ ವಿಧಾನ ಗಮನಿಸಿದಾಗ, ಇಲ್ಲಿ ಈಜುವುದು ಬೋರಲು ಮಲಗಿ, ಎದೆಯಿಂದ ಹೆಚ್ಚಿನ ಒತ್ತಡ ಹೇರುತ್ತಾ, ಉಳಿದ ಭಾಗವನ್ನು ತುಸು ಕಡಿಮೆ ಬಳಸುತ್ತಾನೆ. ಇದರಲ್ಲಿ ತಲೆ ಬಹುತೇಕ ನೀರಿನಿಂದ ಹೊರಗೇ ಇರುತ್ತದೆ. ದೇಹ ಸೀದಾ ಇರುತ್ತದೆ. ಕಪ್ಪೆ ನೀರನ್ನು ಬಡಿಯುವ ಹಾಗೆ ಕೈಕಾಲನ್ನು ಬಡಿಯಬೇಕಾಗುತ್ತದೆ. ಪೆಕ್ಟೋರ್‌ಲ್ಯಾಟಿಸ್ಕಿಪ್‌ ಡಾರ್ಸಿ ಮಾಂಸಖಂಡಗಳನ್ನು ಬಲಪಡಿಸಲು, ನೀರಿನ ಹರಿವಿನ ವಿರುದ್ಧ ಒಳಗಿನ ಭಾಗದತ್ತ ಸೆಳೆದುಕೊಳ್ಳಲು ಬಳಸುತ್ತಾರೆ. ಮುಖ್ಯವಾಗಿ ಗ್ಲೂಟ್ಸ್ ಕ್ವಾಡ್ರಿಸಿಪ್ಸ್ ಮಸಲ್ಸ್, ಬ್ರೆಸ್ಟ್ ಸ್ಟ್ರೋಕ್‌ ಕಿಕ್‌ ನೀಡಲು ಹೆಚ್ಚು ನೆರವಾಗುತ್ತವೆ.

ಈಜಿನ ಇತರ ಲಾಭಗಳು

ಲಂಗ್ಸ್ ಗೆ ಹೆಚ್ಚು ಲಾಭಕಾರಿ : ತಜ್ಞರ ಅಭಿಪ್ರಾಯದಲ್ಲಿ ಈಜಿನಿಂದ ನಮ್ಮ ಲಂಗ್ಸ್ ಹೆಚ್ಚು ಸಶಕ್ತಗೊಳ್ಳುತ್ತವೆ. ಅದರಲ್ಲಿ ಆಮ್ಲಜನಕದ ಅಂಶವನ್ನು ಹೆಚ್ಚಿಸುವಲ್ಲಿಯೂ ನೆರವಾಗುತ್ತದೆ. ಈಜಾಡುವಾಗ ನಮ್ಮ ಶ್ವಾಸಕೋಶ ಹೆಚ್ಚು ಸಕ್ರಿಯವಾಗಿರುತ್ತದೆ. ಆಳವಾಗಿ ಉಸಿರೆಳೆದುಕೊಂಡು, ಅದನ್ನು ಬಹಳ ಹೊತ್ತು ಹಿಡಿದಿಡುವಲ್ಲಿಯೂ ಈಜಾಟದ ಅಭ್ಯಾಸ ಉತ್ತಮವಾದುದು.

ಇದರಿಂದ ಲಂಗ್ಸ್ ನ ಸಾಮರ್ಥ್ಯ ಹೆಚ್ಚುತ್ತದೆ, ಲಂಗ್ಸ್ ನ ಮಸಲ್ಸ್ ಮೇಲೆ ಸಕಾರಾತ್ಮಾಕ ಪರಿಣಾಮ ಮೂಡುತ್ತದೆ. ಈಜಾಟದಿಂದ ಲಂಗ್ಸ್, ಅತಿ ಚುರುಕಾಗುತ್ತವೆ (ಇದಕ್ಕಾಗಿ ಹೆಚ್ಚಿನ ಶಕ್ತಿ ಬೇಕಿದ್ದು, ಬೇಗ ಬೇಗ ಆಮ್ಲಜನಕದ ಪೂರೈಕೆ ಆಗಬೇಕು). ಜೊತೆಗೆ, ಮುಖ್ಯವಾಗಿ ಈಜಾಗಾರರು ತಮ್ಮ ಉಸಿರಾಟದ ಲಯವನ್ನು ತಮ್ಮ ಸ್ಟ್ರೋಕ್ಸ್ ಗೆ ತಕ್ಕಂತೆ ನಿಯಂತ್ರಿಸಬೇಕಾಗುತ್ತದೆ. ಅಭ್ಯಾಸ ಹೆಚ್ಚಿದಂತೆ ಇದು ತಂತಾನೇ ಪ್ರಾಕ್ಟೀಸ್‌ ಆಗುತ್ತದೆ.

ಇದರರ್ಥ, ದೇಹಕ್ಕೆ ತುಸು ಹೊತ್ತು ತಡೆದು ಸಕ್ರಿಯಗೊಳ್ಳುವ ತರಬೇತಿ ಸಿಗುತ್ತದೆ ಅಂತ. ಇದರಿಂದಾಗಿ ಉಸಿರಾಟದ ಸಹನಶಕ್ತಿ ವಿಕಾಸಗೊಳ್ಳುತ್ತದೆ. ಅದರಲ್ಲೂ ಆಸ್ತಮಾ ರೋಗಿಗಳಿಗೆ ಇದರಿಂದ ಹೆಚ್ಚಿನ ಲಾಭವಿದೆ.

ಶಕ್ತಿ ತುಂಬಲು ಸಹಕಾರಿ : ಈಜಾಡುವಾಗ ನಾವು ಸತತ ಕಾಲನ್ನು ಬಡಿಯುತ್ತಿರಬೇಕು. ಜೊತೆಗೆ ಕೈ, ಭುಜಗಳ ಚಲನೆ ಹೆಚ್ಚು. ಗಾಳಿಗಿಂತ ನೀರು ಹೆಚ್ಚು ತೂಕ, ಹೀಗಾಗಿ ನಮ್ಮ ದೇಹದ ಮೇಲೆ, ಗಾಳಿಯ (ನೆಲದ ಮೇಲಿನ ಓಡಾಟ) ಒತ್ತಡಕ್ಕಿಂತ ಈಜುವಾಗ, ನೀರಿನ ಒತ್ತಡ ಅಧಿಕ ಎಂದು ಸೂಕ್ಷ್ಮವಾಗಿ ತಿಳಿಯುತ್ತದೆ. ನೀರು ನಮ್ಮ ಚಲನೆಯಲ್ಲಿ ಸತತ ವಿರೋಧವನ್ನು ಒಡ್ಡುತ್ತಿರುತ್ತದೆ.

ಈ ವಿರೋಧವನ್ನು ಸೀಳಿಕೊಂಡು ನೀವು ಬಲವಂತವಾಗಿ ಮುಂದುವರಿಯ ಬೇಕಾಗುತ್ತದೆ, ಹೀಗಾಗಿ ಸಹಜವಾಗಿಯೇ ನೆಲದ ಮೇಲಿನ ನಡೆದಾಟಕ್ಕಿಂತ, ನೀರಿನಲ್ಲಿ ಈಜುವಾಗ ಹೆಚ್ಚು ಕಷ್ಟ ಪಡಬೇಕು. ಇದರಿಂದ ಮಾಂಸಖಂಡಗಳು ಸಹಜವಾಗಿಯೇ ಟೋನ್‌ ಆಗುತ್ತವೆ. ಆಗ ಸಹಜವಾಗಿಯೇ ನಮ್ಮ ದೈಹಿಕ ಶಕ್ತಿ ಹೆಚ್ಚುತ್ತದೆ. ವಯಸ್ಕರ ನಿತಂಬ, ಸೊಂಟದ ಮಾಂಸಖಂಡಗಳನ್ನು ಸಶಕ್ತಗೊಳಿಸಲು, ಆರ್ಥ್‌ ರೈಟಿಸ್‌ (ಸಂಧಿವಾತ) ರೋಗಿಗಳು ಹೀಗೆ ಗ್ರಿಪ್‌ ಸೆಲ್ ಟ್ರಂಥ್‌ ಹೆಚ್ಚಿಸಿಕೊಳ್ಳಲು ಈಜು ವರದಾನವೇ ಸರಿ.

ಹೆಚ್ಚಿನ ಮಾನಸಿಕ ಸ್ಥೈರ್ಯ : ಈಜಿನಂಥ ಸಕ್ರಿಯ ವ್ಯಾಯಾಯಮದಿಂದ `ಫೀಲ್ ಗುಡ್‌ ಹಾರ್ಮೋನ್ಸ್’ ಎಂಡಾರ್ಫಿಸ್‌ ತಂತಾನೇ ಹೆಚ್ಚುತ್ತವೆ. ಜೊತೆಗೆ ಸ್ಟ್ರೆಸ್‌ ಹಾರ್ಮೋನ್‌ ಅಡ್ರಿನಾಲಿನ್‌ಕಾರ್ಟಿಸೋಲ್ ‌ತಗ್ಗುತ್ತವೆ. ಲೋ ಮೂಡ್‌, ಆ್ಯಂಗ್ಸೈಟಿ, ಸ್ಟ್ರೆಸ್‌, ಡಿಪ್ರೆಶನ್ ಇತ್ಯಾದಿಗಳಿಂದ ಪಾರಾಗಲು ಅಥವಾ ಇದರಿಂದ ಬಾಧೆಗಳೊಳಗಾದವರಿಗೆ ಈಜು ತಂತಾನೇ ಲಾಭಕಾರಿ! ಇತರ ವ್ಯಾಯಾಮಗಳಿಗೆ ಹೋಲಿಸಿದಾಗ, ಈಜು ಹೆಚ್ಚಿನ ರಿಲಾಕ್ಸೇಶನ್‌ ಫೀಲ್ ನೀಡುತ್ತದೆ.

ಸಂದುಕೀಲುಗಳಿಗೂ ಸಹ ಉಪಕಾರಿ : ಸಂಧಿವಾತ, ಆರ್ಥ್‌ ರೈಟಿಸ್‌ ನ ಯಾವ ಬಗೆಯೇ ಇರಲಿ, ಮೂಳೆಗಳ ರಿಪೇರಿಗೂ ಸಹ ಇತರ ವ್ಯಾಯಾಮಗಳಿಗಿಂತ ಈಜು 100 ಪಟ್ಟು ಉತ್ತಮ. ರನ್ನಿಂಗ್‌, ಜಾಗಿಂಗ್‌, ಸೈಕ್ಲಿಂಗ್‌, ಜಿಮ್ ವರ್ಕ್‌ ಔಟ್ಸ್ ಇತ್ಯಾದಿ ಎಲ್ಲದರಲ್ಲೂ ದೊಡ್ಡ ರಿಸ್ಕ್ ಎಂದರೆ ಮೂಳೆ ಮುರಿತ. ಹೀಗಾಗಿ ಸಂಧಿವಾತದ ಆರೈಕೆಗೆ ವೈದ್ಯರು ಈಜಲು ಸಲಹೆ ನೀಡುತ್ತಾರೆ. ನಿಮ್ಮ ದೇಹ ನೀರಲ್ಲಿರುವಾಗ, ಸಹಜವಾಗಿಯೇ ನಿಮಗೆ ಹೆಚ್ಚಿನ ಚಲನೆಯ ಅರಿವಾಗಿ, ಸಲೀಸಾಗಿ ಅದನ್ನು ಮಾಡುವಿರಿ.

ಇದನ್ನು ಸಹಜವಾಗಿ ನೆಲದ ಮೇಲೆ ಮಾಡಿ ಎಂದರೆ ಯಾರಿಗೂ ಮೈ ಬಗ್ಗದು. ಈಜಾಡುವಾಗ ಸಂದು. ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಬೀಳದು. ಹೀಗಾಗಿ ನೋವಿನ ಬದಲು ಹಾಯೆನಿಸುತ್ತದೆ.

ಉತ್ತಮ ನಿದ್ದೆಗಾಗಿ : ಪ್ರೌಢ ವ್ಯಕ್ತಿಗಳ ಅನಿದ್ರೆಯ ಸಮಸ್ಯೆ ದೂರಾಗಲು ಈಜಾಟ ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಹೃದಯದ ಸ್ವಾಸ್ಥ್ಯ ಸುಧಾರಿಸಲು : ಸ್ವಿಮ್ಮಿಂಗ್‌ ಒಂದು ಬಗೆ ಏರೋಬಿಕ್ಸ್ ಆಗಿದ್ದು, ಹೃದಯದ ಮೃದು ಮಾಂಸಖಂಡಕ್ಕೆ ಹೆಚ್ಚಿನ ನೆರವು ಒದಗಿಸುತ್ತದೆ. ಇದರಿಂದ ರಕ್ತ ಸಂಚಾರ ಸುಲಭಗೊಂಡು, ಬಿ‌ಪಿ ಸದಾ ನಾರ್ಮಲ್ ಆಗಿರುತ್ತದೆ. ಹೆಂಗಸರು ಮುಖ್ಯವಾಗಿ ಪ್ರತಿದಿನ 30-40 ನಿಮಿಷಗಳ ಕಾಲವಾದರೂ ಈಜಾಡಬೇಕು, ಇದರಿಂದ ಅವರ ಹೃದ್ರೋಗದ ಸಮಸ್ಯೆ ಎಷ್ಟೋ ದೂರಾಗುತ್ತದೆ. ಈಜು ಗುಡ್‌ ಕೊಲೆಸ್ಟ್ರಾಲ್ ಲೆವೆಲ್ ‌ಹೆಚ್ಚಿಸುವಲ್ಲಿ ಉತ್ತಮ ಪಾತ್ರ ವಹಿಸುತ್ತದೆ.

ವಿ. ಚೇತನಾ

ಈಜಿಗೆ ಸಂಬಂಧಿಸಿದಂತೆ ಒಂದಿಷ್ಟು ಕಿವಿಮಾತು

ಹೊಸದಾಗಿ ಈಜು ಕಲಿಯುವವರು, ಉತ್ತಮ ಕೋಚ್‌ ರ ಮಾರ್ಗದರ್ಶನ ಪಡೆಯಿರಿ. ಮೊದಲು ಶವರ್‌ ನಲ್ಲಿ ಸ್ನಾನ ಮಾಡಿ, ನಂತರ ಉತ್ತಮ ಕ್ವಾಲಿಟಿಯ ಗಾಗಲ್ಸ್, ಕ್ಯಾಪ್‌ ಇತ್ಯಾದಿ ಅಗತ್ಯ ಧರಿಸಿರಿ. ಹಾಗೆಯೇ ಈಜಾಟದ ನಂತರ ಸಹ (ಆ ನೀರಲ್ಲಿ ಸೋಂಕು ತಗುಲಬಾರದೆಂದು ಹೆಚ್ಚಿನ ಪ್ರಮಾಣದ ಕ್ಲೋರಿನ್‌ ಬೆರೆಸಿರುತ್ತಾರೆ) ಶವರ್‌ ಕೆಳಗೆ ನಿಂತು ಸ್ನಾನ ಮಾಡಲು ಮರೆಯದಿರಿ. ಈಜಾಟದ ನಂತರ ದೇಹ ಬೇಗ ಡೀಹೈಡ್ರೇಟ್‌ ಆಗುತ್ತದೆ, ಧಾರಾಳ ಬೆವರು ಸಹ ಹೋಗಿರುತ್ತದೆ. ಆದ್ದರಿಂದ ಈಜಿನ ನಂತರ ಧಾರಾಳ ನೀರು ಕುಡಿಯಿರಿ.

ಚರ್ಮವನ್ನು ಸನ್‌ ಬರ್ನ್‌ಟ್ಯಾನಿಂಗ್‌ ನಿಂದ ಕಾಪಾಡಲು, (ಬೆಳಗಿನ) 11-4 (ಸಂಜೆ) ಗಂಟೆವರೆಗೆ ಈಜಾಟ ಬೇಡ. ಚರ್ಮ ಕೂದಲನ್ನು ಶುಷ್ಕತೆಯಿಂದ ರಕ್ಷಿಸಲು, ಅಗತ್ಯವಾಗಿ ವಾಟರ್‌ ಪ್ರೂಫ್‌ ಮಾಯಿಶ್ಟರೈಸರ್ಸ್‌ ಬಳಸಲೇಬೇಕು. ಮಾಂಸಖಂಡಗಳಲ್ಲಿ ಯಾವುದೇ ಬಗೆಯ ಜೋಮು, ಅನಾನುಕೂಲ ಎನಿಸಿದರೆ, ತಕ್ಷಣ ಕೋಚ್‌ ಗೆ ತಿಳಿಸಿ ಈಜು ನಿಲ್ಲಿಸಿ. ಆಗ ಸ್ಟ್ರೆಚ್‌ ನಿಂದ ಈ ತೊಂದರೆಗೆ ಪರಿಹಾರ ಪಡೆಯಬಹುದು. ಈಜಾಟಕ್ಕಾಗಿ ವ್ಯಕ್ತಿಗೆ ಧಾರಾಳ ಶಕ್ತಿ ಬೇಕು. ಹೀಗಾಗಿ ನಿಮ್ಮ ಆಹಾರದಲ್ಲಿ ಧಾರಾಳ ಪೌಷ್ಟಿಕಾಂಶಗಳು ತುಂಬಿರಬೇಕು. ಆರೋಗ್ಯಕಾರಿ ಆಹಾರ ಮಾತ್ರ ಸೇವಿಸಿ, ಜಂಕ್‌/ಫಾಸ್ಟ್ ಫುಡ್‌ ಬೇಡ. ಎಲ್ಲಕ್ಕೂ ಮುಖ್ಯವಾದುದು ಎಂದರೆ, ಶುಭ್ರ ಸ್ವಚ್ಛವಾಗಿರುವಂಥ ಪೂಲ್ ‌ಮಾತ್ರ ಆರಿಸಿ. ಯಾವುದೇ ಪೂಲ್ ‌ನ ಸದಸ್ಯರಾಗುವ ಮೊದಲು, ಅಲ್ಲಿ ಸ್ವಚ್ಛತೆ ಶುಭ್ರತೆಗೆ ಎಷ್ಟು ಆದ್ಯತೆ ನೀಡಲಾಗುತ್ತಿದೆ ಎಂದು ಪರೀಕ್ಷಿಸಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ