– ರಾಘವೇಂದ್ರ ಅಡಿಗ ಎಚ್ಚೆನ್.
“ನಾನು ಇವತ್ತು ಒಳ್ಳೆ ನಟಿ ಆಗಿದ್ದೀನಿ ಅಂದ್ರೆ ಅದಕ್ಕೆ ಸುದೀಪ್ ಅವರು ನನಗೆ ಅಭಿನಯದ ಬಗ್ಗೆ ಹೇಳಿಕೊಟ್ಟ ರೀತಿ. ಹಾಗಾಗಿ, ಒಳ್ಳೆಯ ನಟಿ ಆಗಿದ್ದೀನಿ.” ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ. ರಾಗಿಣಿ ದ್ವಿವೇದಿ ಚಿತ್ರರಂಗಕ್ಕೆ ಬಂದು ಈಗ 15 ವರ್ಷ ಕಳೆದಿದೆ. ಈ 15 ವರ್ಷದ ಜರ್ನಿಯಲ್ಲಿ ರಾಗಿಣಿ ಸಾಕಷ್ಟು ಏಳು-ಬೀಳುಗಳನ್ನು ಅನುಭವಿಸಿದ್ದಾರೆ. ಈ ಕುರಿತಂತೆ ಮಾದ್ಯಮದವರ ಜೊತೆ ಮಾತುಕತೆ ನಡೆಸಿದ ನಟಿ ಮೇಲಿನ ಮಾತು ಹೇಳಿದ್ದಾರೆ.
“ನಾನು ಅಂದುಕೊಂಡಿರಲಿಲ್ಲ ನಟಿ ಆಗುತ್ತೆನೆ ಎಂದು. ಬಾಸ್ಕಿ ಬಾಲ್ ಕ್ರಿಡೆ ಇಷ್ಟ ಪಟ್ಟು ಆಡತಾ ಇದ್ದೆ. ನಂತರ ಮಾಡೆಲಿಂಗ್ ಲೈಫ್ ಶೂರು ಆಯ್ತು. ಮೊದಲು ಕನ್ನಡ ಇಂಡಸ್ಟ್ರಿ ಇದೆ ಅಂತ ನಂಗೆ ಗೊತ್ತೆ ಇರಲಿಲ್ಲ. ಎಲ್ಲರು ನನ್ನ ಮೊದಲ ಸಿನಿಮಾ ‘ವೀರ ಮದಕರಿ’ ಎಂದುಕೊಂಡಿದ್ದಾರೆ. ಅದಕ್ಕೂ ಮೊದಲು ‘ಹೋಳಿ’ ಎಂಬ ಸಿನಿಮಾದಲ್ಲಿ ನಟಿಸಿದ್ದ. ಆ ಚಿತ್ರದ ಪ್ರೆಸ್ ಮಿಟ್ನಲ್ಲಿ ಹಿರಿಯ ಪತ್ರಕರ್ತರೊಂದಿಗೆ ಜಗಳ ಮಾಡಿಕೊಂಡು ಹೋಗಿದ್ದೆ. ಆಗ ನಂಗೆ ಮೊದಲು ಕನ್ನಡ ಕಲಿಬೇಕು ಅನಿಸಿತು. ‘ವೀರ ಮದಕರಿ’ ಸಿನಿಮಾ ಶೂಟ್ಗೂ ಮೊದಲು ಸುದೀಪ್ ಅವರನ್ನು ಬೇಟಿ ಆದೆ. ಅವರ ಬಗ್ಗೆ ನಂಗೆ ಗೊತ್ತೆ ಇರಲಿಲ್ಲ. ‘ವೀರ ಮದಕರಿ’ ಶೂಟಿಂಗ್ನಲ್ಲಿ ನಂಗೆ ಸುದೀಪ್ ಸರ್ ತುಂಬಾ ಸಪೋರ್ಟ್ ಮಾಡಿದರು. ಈ 15 ವರ್ಷದಲ್ಲಿ ಶಿವಣ್ಣ, ಉಪೇಂದ್ರ, ಸೇರಿದಂತೆ ಎಲ್ಲ ಸ್ಟಾರ್ ಹಾಗೂ ಹೊಸ ಕಲಾವಿದರೊಂದಿಗೆ ನಟಿಸಿದ್ದೇನೆ. ಈ ಜರ್ನಿ ನಂಗೆ ಈಜಿ ಇರಲಿಲ್ಲ. ಸಾಕಷ್ಟು ಕಷ್ಟ ಅನುಭವಿಸಿ ಬಂದೆ. ” ಎಂದು ನಟಿ ರಾಗಿಣಿ ಮನದಾಲವನ್ನು ತೆರೆದಿಟ್ಟಿದ್ದಾರೆ.
“ಈ 15 ವರ್ಷದಲ್ಲಿ ಇಂಡಸ್ಟ್ರಿ ತುಂಬಾ ಬದಲಾಗಿದೆ. ಅದಕ್ಕೆ ತಕ್ಕಂತೆ ನಾವು ಸಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ರಾಜಕೀಯಕ್ಕೆ ಹೋಗುತ್ತೇನೆ. ಜೊತೆಗೆ ನಾವು ತಂಡ ಕಟ್ಟಿಕೊಂಡಿದ್ದು, ಆ ಮೂಲಕ ಇಂಡಸ್ಟ್ರಿಗೆ ಒಳ್ಳೆಯ ನಟರು, ತಂತ್ರಜ್ಞರನ್ನು ಕೊಡುವ ಕೆಲಸ ನಡಿತಾ ಇದೆ” ಎಂದು ರಾಗಿಣಿ ಹೇಳಿಕೊಂಡರು.

ಕನ್ನಡ, ತೆಲುಗು, ತಮಿಳು, ಮಲಯಾಳಂ ಚಲನಚಿತ್ರಗಳಲ್ಲಿ ಆ್ಯಕ್ಟೀವ್ ಆಗಿರುವ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಮೂಲತಃ ಪಂಜಾಬಿಯಾಗಿದ್ದರೂ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯಾದವರು. ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಾಗಿಣಿ, ಇಂದಿಗೂ ಬೇಡಿಕೆಯಲ್ಲಿರುವ ನಟಿ. ಇನ್ನು ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ವೃಷಭ’ ವಿಶ್ವದಾದ್ಯಂತ ಡಿಸೆಂಬರ್ 25ರಂದು ಅದ್ದೂರಿಯಾಗಿ ತೆರೆ ಕಾಣಲು ಸಜ್ಜಾಗಿದೆ. ಕನ್ನಡ ನಿರ್ದೇಶಕ ನಂದ ಕಿಶೋರ್ ನಿರ್ದೇಶನದ ಮಲಯಾಳಂನ ‘ವೃಷಭ’ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿದ್ದಾರೆ. ಇದೇ ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಅವರು ಸೂಪರ್ ಸ್ಟಾರ್ ಮೋಹನ್ಲಾಲ್ ಪುತ್ರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.





