ಮಾನ್ ಸೂನ್ ನಲ್ಲಿ ನೀವು ಅನಿವಾರ್ಯ ಪ್ರಯಾಣ ಮಾಡಬೇಕಾದಾಗ, ನಿಮ್ಮ ಚರ್ಮದ ಆರೈಕೆ ಯಾವ ರೀತಿ ಇರಬೇಕು ಎಂದು ವಿವರವಾಗಿ ಗಮನಿಸೋಣವೇ….?
ಮಾನ್ ಸೂನ್ ಕಾಲವೆಂದರೇನೇ ಹಾಗೇ, ಗರಿಗರಿ ಪಕೋಡ….. ಬಿಸಿ ಬಿಸಿ ಕಾಫಿ ಇದ್ದರೆ, ವಾಹ್, ಎಂಥ ಮಜಾ! ತುಂತುರು ಮಳೆ ಹನಿ ನಮ್ಮ ಮೈ ಮೇಲೆ ಬೀಳುತ್ತಿದ್ದರೆ ಎಂಥ ಪುಳಕಿತ ಭಾವ ಅಲ್ಲವೇ? ಈ ಸಂದರ್ಭದಲ್ಲಿ ನಮ್ಮ ಚರ್ಮದ ಆರೈಕೆ ಎಷ್ಟು ಮುಖ್ಯ ಎಂಬುದನ್ನು ನಾವು ಮರೆತೇಬಿಡುತ್ತೇವೆ. ಈ ಸೀಸನ್ ನಲ್ಲಿ ಥಂಡಿ ವಾತಾವರಣ, ಶೀತಲ ಗಾಳಿ, ಮಡುಗಟ್ಟಿದ ನೀರಿನ ಜಾಗಗಳಿಂದ ಎಲ್ಲೆಡೆ ಸೋಂಕು ಹರಡುವ ಸಂಭವವಿದೆ. ಈ ಸಮಯದಲ್ಲಿ ಚರ್ಮ, ಕೂದಲಿನ ಆರೈಕೆಯನ್ನು ಖಂಡಿತಾ ನಿರ್ಲಕ್ಷಿಸಬಾರದು.
ಈ ಮಳೆಗಾಲದಲ್ಲಿ ಅನಿವಾರ್ಯ ಪ್ರಯಾಣ ಮಾಡಬೇಕಾಗಿ ಬಂದಾಗ, ಚರ್ಮದ ಆರೈಕೆ ಅತಿ ಮಹತ್ವಪೂರ್ಣವಾದುದರಿಂದ, ಅದರ ಕಡೆ ಗಮನಹರಿಸೋಣ. ಮಳೆಯಲ್ಲಿ ನೆನೆಯುತ್ತಾ, ಹಸಿರ ಸಿರಿಯನ್ನು ಕಣ್ತುಂಬಿಸಿಕೊಳ್ಳುವುದು ಹಿತ ಎನಿಸುತ್ತದೆ. ಹಾಗೆಂದು ಚರ್ಮದ ಆರೈಕೆಯನ್ನು ನಿರ್ಲಕ್ಷಿಸಬೇಡಿ. ನಿಮ್ಮೊಂದಿಗೆ ಸದಾ ಪರಿಣಾಮಕಾರಿಯಾದ ಫೇಸ್ ವಾಶ್, ಎಕ್ಸ್ ಫಾಲಿಯೇಟಿಂಗ್ ಸ್ಕ್ರಬ್, ಸನ್ ಸ್ಕ್ರೀನ್, ಫೇಸ್ ಪ್ಯಾಕ್, ಟೀ ಟ್ರೀ ಆಯಿಲ್, ವ್ಯಾಸಲೀನ್, ಕೊಬ್ಬರಿ ಎಣ್ಣೆ ಇತ್ಯಾದಿ ಇರಿಸಿಕೊಳ್ಳಿ. ಈ ಪ್ರಾಡಕ್ಟ್ಸ್ ನಿಮ್ಮ ಚರ್ಮವನ್ನು ಕ್ಲಿಯರ್, ಹೈಡ್ರೇಟೆಡ್, ಸೋಂಕುರಹಿತವಾಗಿ ಇರಿಸುತ್ತವೆ. ಇದರಿಂದ ನೀವು ಹಾಯಾಗಿ ಮಾನ್ ಸೂನ್ ನಲ್ಲಿ ಪ್ರಯಾಣ ಮುಂದುವರಿಸಬಹುದು.

ಚರ್ಮದ ಡೀಪ್ ಕ್ಲೀನಿಂಗ್
ನಿಮ್ಮ ಚರ್ಮವನ್ನು ಸದಾ ಶುಚಿಯಾಗಿ, ಕೊಳೆರಹಿತವಾಗಿ ಇರಿಸಿಕೊಳ್ಳುವುದು ಬಲು ಮುಖ್ಯ. ನೀವು ಆ್ಯರೋಮಾ ಮ್ಯಾಜಿಕ್ ಗ್ರೇಪ್ ಫ್ರೂಟ್ ಫೇಸ್ ವಾಶ್ ಹಾಗೂ ಆ್ಯರೋಮಾ ಮ್ಯಾಜಿಕ್ ಲೈಟ್ ಟೀ ಟ್ರೀ ಆಯಿಲ್ ಹಾಗೂ ಕ್ಯಾಮೋಮೈಲ್ ಫೇಸ್ ವಾಶ್ ಟ್ರೈ ಮಾಡಿದ್ದೀರಾ? ಈ ಮಳೆಗಾಲದಲ್ಲಿ ಇವು ಚರ್ಮಕ್ಕೆ ಉತ್ತಮ ಸಂಗಾತಿಗಳಾಗಿವೆ. ಇವು ನಿಮ್ಮ ಚರ್ಮ ಕ್ಲೀನ್ ಮಾಡುವುದಲ್ಲದೆ, ಅದನ್ನು ಹೈಡ್ರೇಟ್ ಮಾಡಿ, ಸೂಕ್ತವಾಗಿ ಪೋಷಿಸುತ್ತವೆ.
ಬ್ಲಾಸಮ್ ಕೋಚರ್ ಆ್ಯರೋಮಾ ಮ್ಯಾಜಿಕ್ ಎಸೆನ್ಶಿಯಲ್ ಆಯಿಲ್ಸ್ ಯುಕ್ತ ಫೇಸ್ ವಾಶ್, ನಿಮ್ಮ ಚರ್ಮವನ್ನು ಸ್ವಸ್ಥ ಹಾಗೂ ಶುಭ್ರವಾಗಿಡಲು ಸಹಕಾರಿ. ನೀವು ನಿಮ್ಮ ಚರ್ಮದ ವಿಧಕ್ಕೆ (ಆಯ್ಲಿ, ಡ್ರೈ, ನಾರ್ಮಲ್) ಅನುಸಾರ ಲಭ್ಯವಿರುವ ಉತ್ತಮ ಗುಣಮಟ್ಟದ ಫೇಸ್ ವಾಶ್ ಗಳಲ್ಲಿ ಆಯ್ಕೆ ಮಾಡಿಕೊಳ್ಳಿ. ಬೆಳಗ್ಗೆ ಸಂಜೆ ಇಂಥ ಆ್ಯರೋಮಾ ಮ್ಯಾಜಿಕ್ ನ ವಿಶೇಷ ಫೇಸ್ ವಾಶ್ ರೇಂಜಿನಿಂದ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಿ.
ನೈಸರ್ಗಿಕ ಹೂ, ತರಕಾರಿಗಳ ಅರ್ಕದಿಂದ ತಯಾರಿಸಿದ ಎಸೆನ್ಶಿಯಲ್ ಆಯಿಲ್ಸ್ ಇರುವಂಥ ಆ್ಯರೋಮಾ ಮ್ಯಾಜಿಕ್ ಫೇಸ್ ವಾಶ್ ನಿಮ್ಮ ಚರ್ಮವನ್ನು ಸುಸೂತ್ರವಾಗಿ ಉಸಿರಾಡಲಿಕ್ಕೆ ಅನುವು ಮಾಡಿಕೊಟ್ಟು, ನಿಮ್ಮನ್ನು ಸದಾ ತಾಜಾ ಆಗಿ ತೋರ್ಪಡಿಸುತ್ತಾ, ನಿಮಗೆ ಹೆಚ್ಚಿನ ಆತ್ಮವಿಶ್ವಾಸ ಒದಗಿಸುತ್ತದೆ.
ಚರ್ಮ ಸುಸೂತ್ರ ಉಸಿರಾಡಲಿ
ಬ್ಯೂಟಿ ರೊಟೀನ್ ನಲ್ಲಿ ಸ್ಕ್ರಬಿಂಗ್ ಗೆ ಮಹತ್ವಪೂರ್ಣ ಸ್ಥಾನವಿದೆ. ಇದು ನಿಮ್ಮ ಚರ್ಮವನ್ನು ಎಕ್ಸ್ ಫಾಲಿಯೇಟ್ ಮಾಡಲು ಸಹಕರಿಸುತ್ತದೆ, ಅದು ಚರ್ಮದ ಎಷ್ಟೋ ಸಮಸ್ಯೆಗಳನ್ನು ತಗ್ಗಿಸಬಲ್ಲದು. ಸ್ಕ್ರಬಿಂಗ್ ನಿಂದ ಚರ್ಮ ಹೆಚ್ಚೆಚ್ಚು ಸ್ವಚ್ಛ, ಶುಭ್ರವಾಗಿ ಕಂಗೊಳಿಸುತ್ತದೆ. ಏಕೆಂದರೆ ಇದು ಡೆಡ್ ಸ್ಕಿನ್ ಸೆಲ್ಸ್, ಕೊಳೆ, ಅಶುದ್ಧಿಗಳನ್ನು ಹೊರಹಾಕುತ್ತದೆ. ಆ್ಯರೋಮಾ ಮ್ಯಾಜಿಕ್ ನ ಸ್ಕ್ರಬ್ ಬಳಸಿ, ಇದು 100% ಎಸೆನ್ಶಿಯಲ್ ಆಯಿಲ್ಸ್ ಹಾಗೂ ನೈಸರ್ಗಿಕ ಉತ್ಪನ್ನಗಳನ್ನು ಮಾತ್ರ ಒಳಗೊಂಡಿರುತ್ತದೆ. ಇದು ನಿಮ್ಮ ಚರ್ಮದ ಕೋಮಲತೆಯಲ್ಲಿ ಹೆಚ್ಚಿನ ಗುಣಮಟ್ಟದ ಸುಧಾರಣೆ ತಂದು, ನಿಮ್ಮ ಸೌಂದರ್ಯ ಸಂವರ್ಧನೆಗೆ ಪೂರಕವಾಗಿದೆ.
ಎಕ್ಸ್ ಫಾಲಿಯೇಶನ್ ಚರ್ಮದಿಂದ ಡೆಡ್ ಸ್ಕಿನ್ ಸೆಲ್ಸ್ ನ್ನು ತೊಲಗಿಸಿ, ಕ್ಲೋಸ್ಡ್ ಪೋರ್ಸ್ ನ್ನು ತೆರೆಸಲು ಅತ್ಯುತ್ತಮ ಪ್ರಕ್ರಿಯೆ ಆಗಿದೆ. ಇದು ಚರ್ಮ ಸಲೀಸಾಗಿ ಉಸಿರಾಡಲು ಹಾಗೂ ದೀರ್ಘಕಾಲ ಅದು ಹೊಳೆ ಹೊಳೆಯುತ್ತಿರಲು ಸಹಕಾರಿ. ಆ್ಯರೋಮಾ ಮ್ಯಾಜಿಕ್ ಕಾಫಿ ಬೀನ್ ಸ್ಕ್ರಬ್ ನಿಮ್ಮ ಪ್ರಯಾಣದ ಸಂದರ್ಭದಲ್ಲಿ ಚರ್ಮವನ್ನು ಎಕ್ಸ್ ಫಾಲಿಯೇಟ್ ಮಾಡಲು ಹೆಚ್ಚು ನೆರವಾಗುತ್ತದೆ. ಇದು ಚರ್ಮದ ಆಳಕ್ಕಿಳಿದು ಅದನ್ನು ಶುಭ್ರಗೊಳಿಸುತ್ತದೆ, ಪರಿಸಂಚರಣೆಯಲ್ಲೂ ಸುಧಾರಣೆ ತರುತ್ತದೆ.
ಇದು ಚರ್ಮವನ್ನು ಬಲು ಫ್ರೆಶ್‌ಯೂಥ್ ಫುಲ್ ಆಗಿರಿಸಬಲ್ಲದು. ಈ ಸ್ಕ್ರಬ್ ಚರ್ಮದ ಟ್ಯಾನಿಂಗ್ ನ್ನು ತೊಲಗಿಸುವಲ್ಲಿಯೂ ಸಹಕಾರಿ. ಜೊತೆಗೆ ಬ್ಲಾಸಮ್ ಕೋಚರ್ ಆ್ಯರೋಮಾ ಮ್ಯಾಜಿಕ್ ಮಿನರಲ್ ಗ್ಲೋ ಸ್ಕ್ರಬ್‌ಪೆಪರ್ ಮಿಂಟ್ ಎಕ್ಸ್ ಪೇಲ್ ಜೆಲ್ ಸಹ 2 ಉತ್ಕೃಷ್ಟ ಎಕ್ಸ್ ಫಾಲಿಯೇಟರ್ಸ್ ಆಗಿವೆ.
ಸನ್ ಪ್ರೊಟೆಕ್ಷನ್ ನ್ನು ಮರೆಯದಿರಿ
ಬೇಸಿಗೆಯಲ್ಲಿ ನಾವು ಬಹಳ ಹೊತ್ತು ಹೊರಗೆ ಅಡ್ಡಾಡಬೇಕಾಗುತ್ತದೆ. ಸೂರ್ಯನ UV ಕಿರಣಗಳಿಂದ ಬಚಾವಾಗಲು ಒಂದು ಉತ್ತಮ ವಿಧಾನವೆಂದರೆ ಸನ್ ಸ್ಕ್ರೀನ್ ಬಳಕೆ ನಿಮ್ಮ ಚರ್ಮವನ್ನು ಇಂಥ UV ಕಿರಣಗಳಿಂದ ರಕ್ಷಿಸಲು ಉಚ್ಚತಮ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ (SPF) ಇರುವಂಥ ಸನ್ ಸ್ಕ್ರೀನ್ ಲೋಶನ್ ಆರಿಸಿ. ಇದು ನಿಮ್ಮ ಚರ್ಮವನ್ನು ಅತಿ ಮೃದು, ನುಣುಪಾದ, ದೃಢತೆ ಹೊಂದಿರುವಂತೆ ಮಾಡಬಲ್ಲದು.
ಆ್ಯರೋಮಾ ಮ್ಯಾಜಿಕ್ ನ ಸನ್ ಸ್ಕ್ರೀನ್ ರೇಂಜ್ ನಾನ್ ಗ್ರೀಸಿ, ಚರ್ಮದ ಅನುಕೂಲಕ್ಕೆ ತಕ್ಕಂತ, ಲೈಟ್ ನೇಚರ್ ಹೊಂದಿದೆ. ಹೊರಗೆ ಕಡು ಬಿಸಿಲು ಇಲ್ಲದೆ, ಮೋಡದ ವಾತಾವರಣ ಇದ್ದಾಗಲೂ ಸಹ SPF 35/40 ಹಚ್ಚಿಕೊಳ್ಳಲು ಮರೆಯದಿರಿ. ಏಕೆಂದರೆ ಸೂರ್ಯನ ಕಿರಣಗಳು ಮೋಡದ ಮರೆಯಿಂದಲೂ ಕಾಡಬಹುದು. ಆ್ಯರೋಮಾ ಮ್ಯಾಜಿಕ್ ಆ್ಯಲೋವೇರಾ ಸನ್ ಸ್ಕ್ರೀನ್ ಜೆಲ್‌ಸಹ ನಿಮಗೆ, ಸೂರ್ಯ ಕಿರಣಗಳ ವಿರುದ್ಧ ರಕ್ಷಾಕವಚದಂತೆ ಕೆಲಸ ಮಾಡುತ್ತದೆ. ಆ್ಯಲೋವೇರಾದ ಅರ್ಕ ಅತ್ಯುತ್ತಮ ಹೈಡ್ರೇಶನ್ ಒದಗಿಸಿ, ಚರ್ಮ ತಿಳಿಯಾಗಿಸಿ, ಶುದ್ಧತೆ ಜೊತೆ ಸ್ಮಾರ್ಟ್ ಸನ್ ಪ್ರೊಟೆಕ್ಷನ್ ಒದಗಿಸಬಲ್ಲದು.
ಚರ್ಮವನ್ನು ಡೀಟಾಕ್ಸಿಫೈ ಮಾಡಿ
ಮಳೆಗಾಲದಲ್ಲಿ ಪ್ರಯಾಣಿಸುವಾಗ ಸ್ಕಿನ್ ಡೀಟಾಕ್ಸಿಫಿಕೇಶನ್ ಸಹ ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ. ನೀವು ಆ್ಯರೋಮಾ ಮ್ಯಾಜಿಕ್ ಡೀಟಾಕ್ಸಿಫೈಯಿಂಗ್ ಮಿನರಲ್ ಪ್ಯಾಕ್ ಬಯಸಿದರೆ, ಹೆಚ್ಚಿನ ಲಾಭವಿದೆ. ಇದು ಚರ್ಮವನ್ನು ಸ್ವಚ, ಶುಭ್ರ ಹೆಲ್ದಿ ಆಗಿರಿಸಬಲ್ಲ ಯೋಗ್ಯ ಘಟಕಗಳು ಹಾಗೂ ಎಸೆನ್ಶಿಯಲ್ ಆಯಿಲ್ಸ್ ನ ನೈಸರ್ಗಿಕ ಸಂಯೋಜನೆ, ಅಶುದ್ಧಿಗಳನ್ನು ಅಶೋಷಿತಗೊಳಿಸಿ, ಸವೆದ ಚರ್ಮವನ್ನು ರಿಪೇರಿ ಮಾಡಬಲ್ಲದು. ಈ ಫೇಸ್ ಪ್ಯಾಕ್ ನಿಮ್ಮ ಚರ್ಮವನ್ನು ಡೀಪ್ ಕ್ಲೀನ್ ಮಾಡಿ, ರಿಜುವಿನೇಟ್ ಮಾಡುವಲ್ಲಿಯೂ ಪೂರಕ.
ಕೈಕಾಲುಗಳ ಕಡೆ ಗಮನವಿರಲಿ
ನಾವು ಮುಖದ ಸೌಂದರ್ಯಕ್ಕೆ ಮಹತ್ವ ಕೊಡುವಂತೆ ಕೈಕಾಲುಗಳ ಕಡೆ ಗಮನ ಹರಿಸುವುದಿಲ್ಲ. ಇನ್ನು ಎಂದೂ ನಿರ್ಲಕ್ಷಿಸದಿರಿ. ಅತಿ ಶ್ರಮಪಡುವ ಈ ಅಂಗಗಳನ್ನು ನಾವು ಸದಾ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು.
ನಿಮ್ಮ ಕಾಲುಗಳ ಸೌಂದರ್ಯ ಸಂರಕ್ಷಣೆಗೆಂದೇ ಮೊದಲು ಅದನ್ನು ಉತ್ತಮ ಹರ್ಬಲ್ ಸೋಪ್ ಬಳಸಿ ಶುಚಿಗೊಳಿಸಿ. ಇದಕ್ಕಾಗಿ ಬಳಸುವ ನೀರಿಗೆ ಕೆಲವು ಹನಿ ಟೀ ಟ್ರೀ ಆಯಿಲ್ ಬೆರೆಸಬೇಕು. ಇಂಥ ನೀರಲ್ಲಿ ಮೊದಲು ಅರ್ಧ ಗಂಟೆ ಕಾಲು ಇರಿಸಿಕೊಂಡು, ನಂತರ ಸೋಪ್ ಬಳಸಿ ತೊಳೆಯಬೇಕು. ಇದರಿಂದ ಕೈ ಕಾಲು ಎಷ್ಟೋ ಪಾಲು ಶುಚಿಯಾಗುತ್ತದೆ.
ಅದೇ ರೀತಿ ವಾಟರ್ ಪ್ರೂಫ್ ಸ್ಯಾಂಡಲ್ಸ್/ಶೂ ಧರಿಸಲು ಮರೆಯದಿರಿ. ಅದು ಸೋಂಕು ತಗುಲದಂತೆ ಕಾಪಾಡುತ್ತದೆ. ಬ್ಲಾಸಮ್ ಕೋಚರ್ ಆ್ಯರೋಮಾ ಮ್ಯಾಜಿಕ್ ಹ್ಯಾಂಡ್ ಕ್ರೀಂ ಫುಟ್ ಕ್ರೀಂ ನಿಮಗೆ ಉತ್ತಮ ಮಾಯಿಶ್ಚರೈಸರ್ ಒದಗಿಸಿ, ಬ್ಯೂಟಿ ಹೆಚ್ಚಿಸುವಲ್ಲಿಯೂ ಸಹಾಯಕ.
– ಪ್ರತಿನಿಧಿ





