ಚಿತ್ರದುರ್ಗ ರಸ್ತೆ ಅಪಘಾತದಲ್ಲಿ ಚನ್ನರಾಯಪಟ್ಟಣದ ಮಾನಸ ಮೃತಪಟ್ಟಿದ್ದಾಳೆ. ಆಕೆಯ ಕೊರಳಲ್ಲಿದ್ದ ಸರವನ್ನು ನೋಡಿದ ತಂದೆ, ಈಕೆಯೇ ನನ್ನ ಮಗಳು ಎಂದು ಚಿತ್ರದುರ್ಗದ ಶವಗಾರದಲ್ಲಿ ಹೇಳಿದ್ದಾರೆ.

ಹಿರಿಯೂರು ಪಟ್ಟಣದ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಬೆಂಕಿಯಲ್ಲಿ ಸುಟ್ಟವರ ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಜೊತೆಗೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಕಿಯಲ್ಲಿ ಬೆಂದು ಕರಕಲಾಗಿರುವ ಮೃತದೇಹಗಳ ಗುರುತು ಪತ್ತೆ ಮಾಡುವುದು ಸವಾಲಿನ ಕೆಲಸವಾಗಿದೆ. ಈ ಮಧ್ಯೆ ತಂದೆಯೊಬ್ಬರು ಮಗಳ ಮೃತದೇಹ ಪತ್ತೆಹಚ್ಚಿದ್ದಾರೆ. ಕೊರಳಲ್ಲಿದ್ದ ಸರ ನೋಡಿ ಇವಳೇ ನನ್ನ ಮಗಳು ಎಂದು ಗುರುತು ಹಿಡಿದಿದ್ದಾರೆ.

ಜೀವ ಕಳೆದುಕೊಂಡ ಮಗಳ ಹೆಸರು ಮಾನಸ ಎಂದು ತಂದೆ ಚಂದ್ರಗೌಡ ನೀಡಿದ ಮಾಹಿತಿ ನೀಡಿದ್ದಾರೆ. ಮಾನಸ ಮೂಲತಃ ಚನ್ನರಾಯಪಟ್ಟಣದವಳು. ನನ್ನ ಮಗಳು ಶನಿವಾರ ಅಥವಾ ಭಾನುವಾರ ಊರಿಗೆ ಬರುವುದಾಗಿ ಹೇಳಿದ್ದಳು. ಆಮೇಲೆ ಮದುವೆ ಡೇಟ್ ಫಿಕ್ಸ್ ಮಾಡೋಣ ಅಂತ ಹೇಳಿದ್ದಳು. ಆಕೆಗೆ ಮದುವೆ ಫಿಕ್ಸ್ ಆಗಿತ್ತು ಎಂದು ಕಣ್ಣೀರಿಟ್ಟಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ